Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಏಕಭುಕ್ತ
ಒಂದೇ ಹೊತ್ತು ಊಟಮಾಡುವುದು
ಏಕಮತ
ಒಂದೇ ಅಭಿಪ್ರಾಯ
ಏಕರಸ
ಒಂದೇ ರಸ; ಸಮರಸ
ಏಕರೂಪ
ಒಂದೇ ರೂಪ
ಏಕರೂಪಾಧೀನ
ಒಂದೇ ರೂಪಕ್ಕೆ ಒಳಪಟ್ಟ
ಏಕವಣ್
ಒಂದೇ ಬಣ್ಣ
ಏಕವಾಕ್ಯ
ಒಂದೇ ಮಾತಾಡುವವನು, ಸತ್ಯವಂತ
ಏಕವಿಹಾರಿ
ಒಬ್ಬನೇ ಸಂಚರಿಸುವವನು
ಏಕವಿಹಾರಿ
(ಜೈನ) ಒಂಟಿಯಾಗಿ ಸಂಚರಿಸುವ ಸಾಧು
ಏಕಶೇಷ
ಒಂಟಿ ಉಳಿದ
ಏಕಸಂಧಿ
ಒಂದು ಬಾರಿ ಕೇಳಿ ನೆನಪಿನಲ್ಲಿರಿಸಿಕೊಳ್ಳಬಲ್ಲವನು
ಏಕಸಱಿ
ಅಖಂಡಶಿಲೆ
ಏಕಸಿಕ್ಥ
ಒಂದೇ ಅಗುಳು ಆಹಾರ
ಏಕಸ್ಥ
ಒಂದೇ ಆಗಿರುವ
ಏಕಾಕಿನಿ
ಒಬ್ಬಂಟಿ ಹೆಂಗಸು
ಏಕಾಕೃತಿ
ಒಂದೇ ಆಕಾರ
ಏಕಾಂಗ
ಒಬ್ಬನೇ
ಏಕಾಂಗವಿಜಯ
ಒಬ್ಬನೇ ಯುದ್ಧಮಾಡಿ ಪಡೆಯುವ ಗೆಲವು
ಏಕಾಂಗವೀರ
ಒಬ್ಬನೇ ಯುದ್ಧಮಾಡುವವನು
ಏಕಾಗ್ರ