भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಏಕಾಗ್ರಗಮನ

ಒಂದೇ ವಿಷಯದ ಮೇಲೆ ಗಮನವಿರಿಸಿರುವುದು

ಏಕಾಗ್ರಚಿತ್ತ

ಒಂದೇ ವಿಷಯದ ಮೇಲೆ ಕೇಂದ್ರೀಕರಿಸಿರುವ ಮನಸ್ಸು (ಉಳ್ಳವನು)

ಏಕಾಂತ

ಗುಟ್ಟು

ಏಕಾಂತನಿಕೇತನ

ಗುಟ್ಟಿನ ಮನೆ; ಮಂತ್ರಾಲೋಚನೆ ಮಾಡುವ ಮನೆ

ಏಕಾತಪತ್ರ

ಒಂದೇ ಕೊಡೆ

ಏಕಾತ್ಮಜ

ಒಂದೇ ಆತ್ಮದಲ್ಲಿ ಹುಟ್ಟಿದ

ಏಕಾದಶಧಾರಿ

(ಜೈನ) ದ್ವಾದಶಾಂಗಗಳಲ್ಲಿ ಹನ್ನೊಂದನ್ನು ಮಾತ್ರ ತಿಳಿದವನು

ಏಕಾದಶನಿಳಯ

(ಜೈನ) ಶ್ರಾವಕರು ಆಚರಿಸಬೇಕಾದ ಹನ್ನೊಂದು ವಿಧಿಗಳು : ದರ್ಶನ, ವ್ರತ, ಸಾಮಯಿಕ, ಪ್ರೋಷದೋಪವಾಸ, ಸಚಿತ್ತವಿರತಿ, ರಾತ್ರಿಭುಕ್ತಿತ್ಯಾಗ, ಬ್ರಹ್ಮಚರ್ಯೆ, ಆರಂಭತ್ಯಾಗ, ಪರಿಗ್ರಹತ್ಯಾಗ, ಅನುಮತಿತ್ಯಾಗ, ಉದಿಷ್ಟತ್ಯಾಗ

ಏಕಾದಶರುದ್ರ

ಹನ್ನೊಂದು ಬಾರು ರುದ್ರಜಪ ಮಾಡಿ ಅಭಿಷೇಕ ಮಾಡುವ ಕ್ರಮ

ಏಕಾದಶಸ್ಥಾನ

ಏಕಾದಶನಿಳಯ

ಏಕಾಯತಮಾನಸ

ಏಕಾಗ್ರಚಿತ್ತ

ಏಕಾಯತ್ತ

ಒಂದಕ್ಕೆ ವಶವಾದ

ಏಕಾರಣ

ಯಾವ ಕಾರಣ

ಏಕಾರ್ಣವ

ಒಂದು ಸಮುದ್ರದಂತೆ ನೀರು ತುಂಬಿರುವ

ಏಕಾವಲಿ(ಳಿ)

ಒಂದೆಳೆಯ ಸರ

ಏಕಾಶ್ರಯ

ಒಂದೇ ಆಶ್ರಯ; ಸಮಾನ ಆಶ್ರಯ

ಏಕೀಕತ

ಒಂದಾದ

ಏಕೀಭೂತ

ಒಂದರಲ್ಲಿ ಸೇರಿದ

ಏಕೈಕ

ಒಂದೇ ಒಂದು

ಏಕೋಕ್ತಿ

ಒಂದೇ ಪದ

Search Dictionaries

Loading Results

Follow Us :   
  Download Bharatavani App
  Bharatavani Windows App