Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಒಡಂಬಿ
ಶರೀರ
ಒಡಮೆ
ಧನ; ಒಡವೆ
ಒಡಮೆವಡೆ
ಆಸ್ತಿಯನ್ನು ಪಡೆ
ಒಡರಿಸು
ಮಾಡು; ನೆರವೇರಿಸು; ಒಟ್ಟುಗೂಡಿಸು
ಒಡರ್ಚು
ತೊಡಗು; ಆರಂಭಿಸು; ನೆರವೇರಿಸು
ಒಡಱಿಸು
ಒಡರ್ಚು
ಒಡಲ್
ಶರೀರ; ಹೊಟ್ಟೆ
ಒಡವರಿ
ಜೊತೆಯಾಗಿ ಹರಿ
ಒಡವರೆಯ
ಒಂದೇ ಪ್ರಾಯ, ಸಮ ವಯಸ್ಸು
ಒಡವಳೆ
ಜೊತೆಯಾಗಿ ಬೆಳೆ
ಒಡವಾರ
ಒಂದು ಮರ
ಒಡವಾಱು
ಜೊತೆಗೆ ಹಾರು
ಒಡವಾೞ್
ಕೂಡಿ ಬಾಳು
ಒಡವುಗು
ಕೂಡಿ ಹೊಗು
ಒಡವುಟ್ಟಿದರ್
ಸೋದರರು
ಒಡವುಟ್ಟು
ಒಂದೇ ತಾಯ ಹೊಟ್ಟೆಯಲ್ಲಿ ಹುಟ್ಟು
ಒಡವೆರ್ಚು
ಜೊತೆಯಲ್ಲಿ ಹೆಚ್ಚಾಗು
ಒಡವೆಳಸು
ಜೊತೆಯಲ್ಲಿ ಬೆಳೆಸು
ಒಡವೆಳೆ
ಜೊತೆಯಲ್ಲಿ ಬೆಳೆ
ಒಡವೇಱು