Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಖ
ಆಕಾಶ; ವಿಷ್ಣು; ದೇವಲೋಕ; ಅರಿವು
ಖಗ
ಆಗಸದಲ್ಲಿ ಚರಿಸುವುದು, ಪಕ್ಷಿ; ಬಾಣ; ದೇವತೆ; ಸೂರ್ಯ
ಖಗಕುಳ
ಪಕ್ಷಿಸಮೂಹ
ಖಗಜ
ಸೂರ್ಯನ ಮಗ, ಶನಿ
ಖಗನಗ
(ಜೈನ) ಖೇಚರರು ವಾಸಿಸುವ ಪರ್ವತ, ವಿಜಯಾರ್ಧಪರ್ವತ
ಖಗಪ
ವಿದ್ಯಾಧರ ರಾಜ
ಖಗಪತಿ
ಗರುಡ
ಖಗಪತಿಖಗ
ಗರುಡಾಸ್ತ್ರ
ಖಗಬಂಧ
ಹಕ್ಕಿಗಳನ್ನು ಹಿಡಿಯುವ ಬಲೆ
ಖಗರಾಜಾಸ್ತ್ರ
ಗರುಡಾಸ್ತ್ರ
ಖಗರಾಜೇಂದ್ರ
ಖೇಚರರ ಒಡೆಯ
ಖಗವಂಶ
ಸೂರ್ಯವಂಶ; ಖೇಚರವಂಶ
ಖಗಾದ್ರಿ
ಖಗನಗ
ಖಗಾಧೀಶ್ವರ
ಖೇಚರರ ಒಡೆಯ
ಖಗೇಂದ್ರ
ಖೇಚರ ರಾಜ; ಗರುಡ
ಖಗೇಂದ್ರಕನ್ನಿಕೆ
ಖೇಚರ ಕನ್ನಿಕೆ
ಖಗೇಂದ್ರವಾಹನ
ಗರುಡನನ್ನು ವಾಹನವನ್ನಾಗಿ ಉಳ್ಳವನು, ವಿಷ್ಣು
ಖಗೇಶ
ಖಗೇಂದ್ರ
ಖಗೇಶ್ವರ
ಖಗೇಂದ್ರ
ಖಚರ