Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಚಕಚಕಿತ
ಹೊಳೆಯುವ
ಚಕಚಕಿಸು
ಹೊಳಪಿನಿಂದ ಕೂಡಿರು
ಚಂಕನತ್
ಹೊಳೆಯುವ
ಚಕಿತ
ಸ್ಥಿರವಲ್ಲದ; ಆಶ್ಚರ್ಯಗೊಂಡ
ಚಕಿತಲೋಚನೆ
ಚಂಚಲವಾದ ಕಣ್ಣುಳ್ಳವಳು
ಚಕಿತಾಕ್ಷಿ
ಚಕಿತಲೋಚನೆ
ಚಕೋರ
ಬೇಳುದಿಂಗಳನ್ನೇ ಕುಡಿಯುವುದೆಂದು ಹೇಳಲಾಗುವ ಒಂದು ಕಲ್ಪಿ ಪಕ್ಷಿ
ಚಕೋರಾಕ್ಷಿ
ಹೊಳಪುಗಣ್ಣುಳ್ಳವಳು
ಚಕೋರಿ(ಕೆ)
ಹೆಣ್ಣು ಚಕೋರ
ಚಕೋರೇಕ್ಷಣ
ಚಕೋರದ ಕಣ್ಣು; ಹೊಳಪುಗಣ್ಣು
ಚಕ್ಕಣ
ಚಾಕಣ, ಮದ್ಯಪಾನದಲ್ಲಿ ನಂಜಿಕೊಳ್ಳುವ (ಖಾರವಾದ) ತಿಂಡಿ
ಚಕ್ಕವಕ್ಕಿ
ಚಕ್ರವಾಕ
ಚಕ್ಕಳ
ಚಾಪೆ
ಚಕ್ಕೞಿ
ಚಪ್ಪಟೆಯಾದುದು
ಚಕ್ಕುಮೊಕ್ಕು
ಒಂದು ಅನುರಣ ಶಬ್ದ
ಚಕ್ರ
ಗಾಲಿ; ಸುದರ್ಶನಚಕ್ರ; ಭೂಮಿ; ಒಂದು ವ್ಯೂಹ; ಚಕ್ರವಾಕ
ಚಕ್ರಂಗೊಳ್
ಚಕ್ರಾಯುಧವನ್ನು ಕೈಗೆತ್ತಿಕೊ
ಚಕ್ರಧರ
ಚಕ್ರವನ್ನು ಧರಿಸಿದವನು; ಚಕ್ರವರ್ತಿ
ಚಕ್ರಧರತ್ವ
ಚಕ್ರವನ್ನು ಧರಿಸಿರುವುದು
ಚಕ್ರನಾಥ