Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಜಂಕಿಸು
ಗದರಿಸು; ಹೀಯಾಳಿಸು
ಜಂಕೆ
ಗದರಿಕೆ
ಜಂಕೆ
(ಅರ್ಥಸಂದಿಗ್ಧತೆಯ ಶಬ್ದ)
ಜಕ್ಕ
ಯಕ್ಷ
ಜಕ್ಕಂಜಱಿ
ಬಹಳ ನಿಂದನೆಮಾಡು
ಜಕ್ಕಂದೊೞ
ಗುಂಡಗೆ ಸುತ್ತುವ ಉಯ್ಯಾಲೆ
ಜಕ್ಕಂದೊೞಲಿ
ಕೋಣ
ಜಕ್ಕವಕ್ಕಿ
ಚಕ್ರವಾಕ ಪಕ್ಷಿ
ಜಕ್ಕಿ
ಯಕ್ಷಿ
ಜಕ್ಕುಗೊಳ್
ಚಿವುಲು ಉಗುರಗುರುತು ಹೊಂದು
ಜಕ್ಕುಲಿ(ಳಿ)ಸು
ಮೋಹಗೊಳಿಸು; ಆವರಿಸು; ವ್ಯಾಪಿಸು; ಕಚಗುಳಿಯಿಡು
ಜಗ
ಜಗತ್ತು
ಜಗಚ್ಚಕ್ರ
ಭೂಮಂಡಲ
ಜಗಜ್ಜನ
ಜಗತ್ತಿನ ಜನ
ಜಗಜ್ಜನಕ
ಲೋಕದ ತಂದೆ
ಜಗಜ್ಜಯ
ಲೋಕವನ್ನು ಗೆಲ್ಲುವುದು
ಜಗಜ್ಜೀವನ
ಜಗತ್ತನ್ನು ಬದುಕಿಸುವ
ಜಗಜ್ಜೈತ್ರ
ಜಗತ್ತನ್ನು ಗೆಲ್ಲುವ
ಜಗತಿ
ಜಗಲಿ
ಜಗತೀತಲ