Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಯಕ್ಷ
ಸುಗಂಧ; (ಜೈನ) ವ್ಯಂತರ ದೇವತೆಗಳ ಒಂದು ವರ್ಗ; ಪ್ರತಿಯೊಬ್ಬ ತೀರ್ಥಂಕರನ ಬಳಿ ಇರುವ ಶಾಸನ ದೇವತೆ
ಯಕ್ಷಕರ್ದಮ
ಪರಿಮಳ, ಲೇಪನ ದ್ರವ್ಯ
ಯಕ್ಷಾಂದೋಳ
ಒಂದು ಬಗೆಯ ನೃತ್ಯ
ಯಕ್ಷಿ
(ಜೈನ) ಪ್ರತಿಯೊಬ್ಬ ತೀರ್ಥಂಕರನ ಬಳಿ ಇರುವ ಶಾಸನ ದೇವತೆ
ಯಕ್ಷೆಂದ್ರ
ಯಕ್ಷರ ಒಡೆಯ, ಕುಬೇರ
ಯಕ್ಷೇಶ್ವರ
ಯಕ್ಷೆಂದ್ರ
ಯಜನ
ಯಾಗ ಮಾಡುವಿಕೆ
ಯಜಮಾನ
ಯಾಗಕರ್ತ
ಯಜ್ಞ
ಯಾಗ
ಯಜ್ಞದ್ರವ್ಯ
ಯಜ್ಞ ಮಾಡಲು ಬೇಕಾದ ಸಾಮಗ್ರಿ
ಯಜ್ಞವಿದ್ಯೆ
ಯಜ್ಞದ ಬಗೆಗಿನ ತಿಳಿವಳಿಕೆ
ಯಜ್ಞವೇದಿ
ಯಜ್ಞಕ್ಕಾಗಿ ಸಿದ್ಧಪಡಿಸಿದ ವೇದಿಕೆ
ಯಜ್ಞವೇದೀಸಂಭವೆ
ಯಜ್ಞದ ವೇದಿಕೆಯಲ್ಲಿ ಹುಟ್ಟಿದವಳು, ದ್ರೌಪದಿ
ಯಜ್ಞೋಪವೀತ
ದ್ವಿಜರು ಧರಿಸುವ ಜನಿವಾರ
ಯತಯಾತಪ್ರೌಢಿ
ಅಂಕುಶದಿಂದ ಆನೆಯನ್ನು ನಿಯಂತ್ರಿಸುವ ಕೌಶಲ
ಯತಿಗಣ
ಮುನಿಸಂದೋಹ
ಯತಿರಾಜ
ಮುನಿಶ್ರೇಷ್ಠ
ಯಥಾಕಾಲ
ಸೂಕ್ತವಾದ ಸಮಯ
ಯಥಾಕ್ರಮ
ಸಮರ್ಪಕವಾದ ರೀತಿ; ಸೂಕ್ತವಾಗಿ
ಯಥಾಖ್ಯಾತಚರಿತ