भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂತರ್ಗತಸ್ವನ

ಒಳಗೇ ಹುದುಗಿದ ಧ್ವನಿ

ಅಂತರ್ಜ್ಯೋತಿ

ಒಳಗಿನ ಬೆಳಕು

ಅಂತರ್ದೃಷ್ಟಿ

ತನ್ನ ಒಳಗನ್ನು ಪರಿಶೀಲಿಸಿಕೊಳ್ಳುವ ದೃಷ್ಟಿ

ಅಂತರ್ದ್ವೀಪ

ದ್ವೀಪದ ಒಳಭಾಗ

ಅಂತರ್ಧಿ

ಅಡಗಿಕೊಳ್ಳುವುದು, ಅಂತರ್ಧಾನ

ಅಂತರ್ಬಹಿರೂಪ

ಒಳಗಿನ ಮತ್ತು ಹೊರಗಿನ ಆಕಾರ

ಅಂತರ್ಭೇದ

ಒಳಗಿನ ಭೇದ; ಭಿನ್ನಾಭಿಪ್ರಾಯ; ಅಂತಃಕಲಹ

ಅಂತರ್ಭ್ರಮ

ತೊಳಲಾಟ

ಅಂತರ್ಮಂಡಲಸಾಧನ

ಒಳದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ

ಅಂತರ್ಮಲ

ಒಳಗಿನ ಕೊಳೆ

ಅಂತರ್ಮಲಿನ

ಒಳಗೆ ಕಲ್ಮಶವುಳ್ಳ

ಅಂತರ್ಮುಖ

ಒಳಮುಖವಾದ ಮನಸ್ಸು

ಅಂತರ್ಮುಖತೆ

ಆತ್ಮಚಿಂತನೆ ಮಾಡುವುದು

ಅಂತರ್ಮುಹೂರ್ತ

(ಜೈನ) ಒಂದು ಮುಹೂರ್ತಕ್ಕಿಂತ ಕಡಿಮೆಯಾದ ಕಾಲ

ಅಂತರ್ಲೀನ

ಒಳಗೆ ಲೀನವಾದ

ಅತರ್ಲೇಪ

ಅಂತರಂಗಕ್ಕೆ ಅಂಟಿಕೊಂಡಿರುವುದು

ಅಂತರ್ವಂಶಿಕ

ಬಂಧುಜನ; ರಾಣಿವಾಸದ ಮೇಲ್ವಿಚಾರಕ

ಅಂತರ್ವಣ

ಕಾಡಿನ ಮಧ್ಯದಲ್ಲಿರುವ

ಅಂತರ್ವತ್ನಿ

ಬಸುರಿ ಹೆಂಗಸು

ಅಂತರ್ವರ್ತಿ

ಒಳಗೆ ನೆಲಸಿರುವ

Search Dictionaries

Loading Results

Follow Us :   
  Download Bharatavani App
  Bharatavani Windows App