भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅೞಿವಡೆಮಾತು

[ನಾ] ಹೀನ ಮಾತು (ಉೞಿದ ಅೞಿವಡೆಮಾತಂ ಮಾಡಿ ನೀನೆ ಕೆಮ್ಮನೆ ನುಡಿವೈ: ಪಂಪಭಾ, ೧೨. ೧೮೧) [ಈ ಶಬ್ದವನ್ನು ಅೞಿವ+ಅಡೆಮಾತು ಎಂದು ಬಿಡಿಸಬಹುದೇ? ನಾಶವಾಗುವ ಅಂದರೆ ಉಳಿಯಲಾರದ

ಅಡೆಮಾತು

ಅಡ್ಡಮಾತು, ಕೆಟ್ಟಮಾತು ಎಂದು ಅರ್ಥವಿಸಬಹುದೇ!]

ಅೞಿವಾಡ

[ನಾ] ಕುಗ್ರಾಮ (ಅಯ್ದು ಅೞಿವಾಡದೊಳ್ ಅಯ್ವರುಮಂ ನೀಂ ಕೂರ್ತಿರಿಸೆಂದೊಡಂ ಏಗೆಯ್ದುಂ ಒಲ್ಲದ ಕಾರಣದಿಂದಂ: ಪಂಪಭಾ, ೧೩. ೮೬)

ಅೞಿವು

[ನಾ] ವಿನಾಶ, ಸಾವು (ತನೂಜನಾಳ್ವ ಸಾಮಿಗಂ ಅೞಿವಾಗೆ ಶೋಕರಸಮಿರ್ಮಡಿಸಿತ್ತು: ಪಂಪಭಾ, ೧೩. ೧೦೬)

ಅೞಿವೆಯ್ದೆವರ್

[ಕ್ರಿ] ಸಾವು ಸಮೀಪಿಸು, ಸಾವಿಗೆ ನಿಗದಿಯಾದ ಕ್ಷಣ (ದಿವಿಜಾಧೀಶನ ಕೊಟ್ಟ ಶಕ್ತಿಯನದಂ ಕರ್ಣಂ ನರಂಗೆಂದು ಬಯ್ತು ಅವಂ ಇಂದೆ ಅೞಿವೆಯ್ದೆ ವಂದೊಡೆ ಅದಱಿಂದಾತನಂ ಕೊಂದಂ: ಪಂಪಭಾ, ೧೨. ೧೬)

ಅೞಿವೆಸನ

[ನಾ] ಹೀನ ಆಸೆ (ಪೆಸರೊಳ್ ಸೈರಂಧ್ರಿಯೆಂ ಅೞಿವೆಸನದ ದೆಸೆಯಱಿಯೆಂ ಎನಗೆ ಗಂಧರ್ವರ ಕಾಪು ಅಸದಳಂ ಉಂಟು: ಪಂಪಭಾ, ೮. ೫೭)

ಅೞಿವೊಡಲ್

[ನಾ] ನಶ್ವರವಾದ ಶರೀರ (ಮಿಡಿದನಿತು ಬೇಗದಿಂದೆ ಅೞಿವೊಡಲನಿದಂ ಪೋಗೆ ನೂಂಕಿ: ಆದಿಪು, ೨೨. ೫೮)

ಅೞು

[ಕ್ರಿ] ಕಣ್ಣೀರು ಹಾಕು (ಒಡನಿರಲಿತ್ತುದಿಲ್ಲ ವಿಧಿ ನಮ್ಮನೞಲ್ದೞವೇಡ ನೀಂ ಮನಂಬಿಡೆ ನಡೆಯೆಂದು ಪೇೞ್ದು: ಆದಿಪು, ೧೨. ೨೪)

ಅೞ್ಕಜ

[ನಾ] ಅಕ್ಕಜ, ಆಶ್ಚರ್ಯ (ತನ್ನ ತೊಡಂಕದೆಯ್ದೆ ನೂರ್ಮಡಿ ಮನದೊಳ್ ಪಳಂಚಲೆಯೆ ಡಕ್ಕೆಯೊಳ್ ಅೞ್ಕಜವಾಗೆಯಾಡಿದಳ್: ಪಂಪಭಾ, ೪. ೯೦)

ಅೞ್ಕಮೆ

[ನಾ] ಅಜೀರ್ಣ (ಗೞ್ಕನೆ ಕೊಳೆ ಕಡುಗಂಪಿನೊಳ್ ಅೞ್ಕಮೆಗೊಳಗಪ್ಪೆವೆಂದು ಮಧುಪಂಗಳ್: ಆದಿಪು, ೧೧. ೧೧೯)

ಅೞ್ಕಮೆವಡು

[ಕ್ರಿ] ಸಾಕು ಎನ್ನಿಸು (ಒದವಿದ ಅಲಂಪು ಕಣ್ಣೆವೆ ಕರುಳ್ ತನಗೆಂಬುದನುಂಟುಮಾಡೆ ನೋಡಿದುದಱೆ ಕಣ್ಗಳ್ ಅೞ್ಕಮೆವಡುತ್ತಿರೆ: ಪಂಪಭಾ, ೧೨. ೨೧೯)

ಅೞ್ಕಱ್

[ಕ್ರಿ] ಮನಸೋಲು (ರಾಜತಾಂದ್ರೀಂದ್ರಶೋಭಾವಿಭವಕ್ಕೆ ಅೞ್ಕರ್ತು ತತ್ಪರ್ವತನಿಕಟವನೋಪಾಂತದೊಳ್ ಬೀಡುವಿಟ್ಟಂ: ಆದಿಪು, ೧೩. ೭೮); [ಕ್ರಿ] ಪ್ರೀತಿಸು (ಏಱಿಸಿ ನಡೆಯಿಸುವಲ್ಲಿ ದಿವ್ಯಕನ್ಯೆಯನೞ್ಕರ್ತು ನೋಡಿ: ಪಂಪಭಾ, ೧. ೬೮ ವ)

ಅೞ್ಕಱಳುರ್ಕೆ

[ನಾ] ಪ್ರೀತಿಯ ಅತಿಶಯ (ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ ಬಗೆಯದೆ ಮಿೞ್ತುದೇವತೆಯಂ ಅೞ್ಕಱಳುರ್ಕೆಯಿನಪ್ಪುವಂತೆವೋಲ್: ಪಂಪಭಾ, ೨. ೧೮)

ಅೞ್ಕಱು

[ನಾ] ಅಕ್ಕರೆ (ದಿಗಂಗನಾಸಮಿತಿಗೆ ಅೞ್ಕಱಿನೊಳ್ ಕುಡುವಲ್ಲಿ ಕೇಸರಂಬೆರಸಿದ ಪೊನ್ನ ಬಾಯಿನದ ಬಟ್ಟಲಿವೆಂಬಿನಂ: ಆದಿಪು, ೧೧. ೧೧೭)

ಅೞ್ಕಾಡು

[ಕ್ರಿ] ನಾಶವಾಗು (ವಿರೋಧಿ ಕ್ಷ್ಮಾಪರ್ ಎನ್ನೀ ಗದಾಪರಿಘಾತದಿಂ ಅೞ್ಗಿ ತೞ್ಗಿ ಮಡಿದಿನ್ನು ಅೞ್ಕಾಡದೇಂ ಪೋಪರೇ: ಪಂಪಭಾ, ೧೩. ೯೦); [ಕ್ರಿ] ಹಾಳಾಗಿ ಹೋಗು (ಏೞ್ಕಟ್ಟಿನೆೞೆದು ನಿಮ್ಮಂ ನಾೞ್ಕಡೆಗೞಿದೊಡೆ ಮದೀಯ ನಾಥಂ ಬೇರಂ ಬಿೞ್ಕೆಯನೆ ತಿಂದ ದೆವಸದೊಳ್ ಅೞ್ಕಾಡಿದ ಬೀರಮೀಗಳೇಂ ಪೊಸತಾಯ್ತೇ: ಪಂಪಭಾ, ೧೨. ೧೭೮)

ಅೞ್ಕು

[ಕ್ರಿ] ನಾಶವಾಗು (ಭವಲಲಾಟವಿಲೋಚನಾಗ್ನಿಶಿಖೆಯಿಂ ಬೆಂದು ಅೞ್ಕಿ ಮತ್ತಂ ಮನೋಭವಂ ಎೞ್ಚತ್ತೊಡೆ: ಪಂಪಭಾ, ೭. ೨೪)

ಅೞ್ಕಿ ಮೆೞ್ಕು

[ಕ್ರಿ] [ನಾಶಮಾಡಿ ಸಾರಿಸು] ಸಂಪೂರ್ಣವಾಗಿ ನಾಶವಾಗು (ತನ್ನ ಬಲಮೆಲ್ಲಂ ಅೞ್ಕಿ ಮೆೞ್ಕಿದಂತಾದುದೆಂಬುದಂ ಕೇಳ್ದು: ಪಂಪಭಾ, ೫. ೧೦೦ ವ) [ಪರಿಷತ್ ಮುದ್ರಣದಲ್ಲಿ ‘ಅಳ್ಕಿಮುೞಿ’್ಕ ಎಂಬ ಪಾಠವಿದೆ]

ಅೞ್ಕೆ

[ನಾ] ರೋದನ (ತನುಗೆ ಪೊಱೆ ತುಡುಗೆ ನವಲೇಪನಮೆ ಮಳಂ ಗೀತಮೞ್ಕೆ ನೃತ್ಯಂ ಬಗೆಯಲ್ಕೆನಗೆ ದಲ್ ಉನ್ಮತ್ತವಿಳಾಸಂ ಇಂತಿನಿತಱೊಳಮೊಂದಱೊಳ್ ಪುರುಳುಂಟೇ: ಆದಿಪು, ೯. ೫೫)

ಅೞ್ಗಿತೞ್ಗು

[ಕ್ರಿ] ನಾಶವಾಗಿ ತಗ್ಗು (ಎಡವಱದೊಳ್ ಎಱಗಿ ಬಱಸಿಡಿಲ್ ಇಡುಮುಡುಕನೆ ಪೊಡೆದುದೆನಿಸಿ ಪಾಂಡ್ಯನ ರಥದ ಅಚ್ಚು ಉಡಿದು ಅೞ್ಗಿತೞ್ಗೆ ಕೊಂಡುವು ಕಡುಗೂರಿದುವೆನಿಪ ಗುರುತನೂಜನ ಕಣೆಗಳ್: ಪಂಪಭಾ, ೧೨. ೮೨)

ಅೞ್ಗಿ ಮೞ್ಗು

[ಕ್ರಿ] ನಾಶವಾಗಿ ನೆಲಸಮವಾಗು (ಹಿರಣ್ಯ ಕಾಳನೇಮಿಗಳ್ ಮೊದಲಾಗಿ ನೆಗೞ್ತೆಯ ದೈತ್ಯರೆಲ್ಲಂ ಚಕ್ರಘಾತದೊಳ್ ಅೞ್ಗಿ ಮೞ್ಗಿದಂತಾದರ್: ಪಂಪಭಾ, ೬. ೨೪ ವ)

Search Dictionaries

Loading Results

Follow Us :   
  Download Bharatavani App
  Bharatavani Windows App