भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಘವಿಘಾತ

[ನಾ] ಪಾಪವಿನಾಶ (ಅಘವಿಘಾತಾರ್ಥಂ ಉದ್ಧತಾಭಿನಯಪ್ರಾಯಮುಂ ಆರಭಟೀ ವೃತ್ತಿಯುಂ: ಆದಿಪು, ೭. ೧೧೫ ವ)

ಅಘಸಮಿತಿ

[ನಾ] ಪಾಪಸಮೂಹ (ಕರ್ಶನವಘಸಮಿತಿಗೆ ಸದ್ದರ್ಶನದಿಂದಪ್ಪುದಕ್ಕೆ ನಿಮಗಕ್ಕೆ ಪುನರ್ದರ್ಶನಂ: ಆದಿಪು, ೫. ೬೪)

ಅಘಾಟ

[ನಾ] ಅತಿಶಯ, ಅದ್ಭುತ (ಮಹೀಭುಜನೆಯ್ದಿದಂ ಫಳವಿನಮ್ರಮಹೀಜಸಹಸ್ರ ಅಘಾಟಮನುತ್ಪಳಖೇಟಮಂ: ಆದಿಪು, ೪. ೫೮)

ಅಘಾಟಶುದ್ಧಿ

[ನಾ] ಸೀಮೆಯ ಪರಿಷ್ಕಾರ (ಮರ್ಯಾದಾ ವಿಪ್ರಪತ್ತಿಯಿಂದಮೂಳ್ವಾರ್ಯಜನಕ್ಕೆ ಅಘಾಟಶುದ್ಧಿಯಂ ಮಾಡಿ: ಆದಿಪು, ೬. ೫೭ ವ)

ಅಘಾತಿಚತುಷ್ಕ

[ನಾ] [ಜೈನ] ನಾಮ, ಗೋತ್ರ. ಆಯು, ವೇದನೀಯ ಎಂಬ ಕರ್ಮಗಳು (ಖಂಡಿತಾಘಾತಿಚತುಷ್ಕಸ್ಥಿತ್ಯನುಭಾಗಂ ಅಪಗತ ಮೂಲಶರೀರಪ್ರಮಾಣಾತ್ಮಪ್ರದೇಶಂ: ಆದಿಪು, ೧೬. ೪೯ ವ)

ಅಂಘ್ರಿಪ

[ನಾ] ಮರ (ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಘ್ರಿಪದ ಫಳಂ ಅದರ್ಕೆ ರಸಮದು ಕಾಮಂ: ಆದಿಪು, ೧೦. ೫೦)

ಅಚಲ

[ನಾ] ಬೆಟ್ಟ (ವಿಶ್ವ ಅಚಲ ಚಕ್ರೇಶತ್ವಮಂ ತಾಳ್ದಿದುದು ಅಖಿಳ ಧರಾರಮ್ಯ ಹೈಮಾಚಳಂ: ಪಂಪಭಾ, ೪. ೧೪)

ಅಚಲಿತ

[ಗು] ಚಲಿಸಲಾರದ, ಬದಲಿಸಲಾರದ (ಅಂತು ಅಚಲಿತಪ್ರತಿಜ್ಞಾರೂಢನಾದ ಗಾಂಗೇಯನಂ ಏಗೆಯ್ದುಮೊಡಂಬಡಿಸಲಾಱದೆ: ಪಂಪಭಾ, ೧. ೮೪ ವ)

ಅಚಾಮ್ಲವರ್ಧನತಪ

[ನಾ] [ಜೈನ] ಒಂದು ಉಪವಾಸವ್ರತ: ಒಂದು ದಿನ ಅಚಾಮ್ಲ [ಗಂಜಿ] ಸೇವನೆ ಒಂದು ಪಾರಣೆ, ಎರಡು ಅಚಾಮ್ಲ ಸೇವನೆ ಒಂದು ಪಾರಣೆ, ಮೂರು ಅಚಾಮ್ಲ ಸೇವನೆ ಒಂದು ಪಾರಣೆ ಈ ಕ್ರಮದಲ್ಲಿ ಹತ್ತು ಅಚಾಮ್ಲಗಳವರೆಗೆ ಸಾಗಿ ಆನಂತರ ಒಂಬತ್ತು ಅಚಾಮ್ಲ, ಎಂಟು ಅಚಾಮ್ಲ ಹೀಗೆ ಒಂದರವರೆಗೆ ಇಳಿಸುತ್ತ ಬರುವ ವ್ರತ; ಇದರಲ್ಲಿ ಒಟ್ಟು ನೂರು ಅಚಾಮ್ಲಗಳೂ ಹತ್ತೊಂಬತ್ತು ಪಾರಣೆಗಳೂ ಆಗುತ್ತವೆ (ನಂದನಗುರುಗಳಂ ಸಾರ್ದು ಶಾಶ್ವತಸೌಖ್ಯವರ್ಧನಕರಮಪ್ಪ ಅಚಾಮ್ಲವರ್ಧನತಪದೊಳ್ ನೆಗೞ್ದು: ಆದಿಪು, ೩. ೬೫ ವ)

ಅಂಚಿತ

[ಗು] ಸುತ್ತಲ್ಪಟ್ಟ (ಕಳಧೌತಘಟಂ ಮುಕ್ತಾಫಳಾಂಚಿತಗ್ರೀವಂ ಎೞೆದುಕೊಂಡುದು ತಾರಾವಳಿಪರಿವೃತನವಸಂಧ್ಯಾಜಳದದ ಗಾಡಿಯಂ: ಆದಿಪು, ೭. ೮೪); [ಗು] ಪೂಜಿತ (ಸಕಳಕ್ಷ್ಮಾಚರಖೇಚರಾಂಚಿತ ಮಹಾಮಾಣಿಕ್ಯ ಗಾಣಿಕ್ಯ ಹಾಸ್ತಿಕ ರತ್ನೋರ್ಜಿತ ಚಕ್ರವರ್ತಿವಿಭವಂ: ಆದಿಪು, ೧೬. ೮)

ಅಂಚಿರ

[ಗು] ಅಸ್ಥಿರ, ಹೆಚ್ಚು ಕಾಲ ಉಳಿಯದ (ಪೊಸನನೆಯೊಳ್ ಪಸುರ್ಪಲರೊಳಂಚಿರಮಲ್ಲದ ಬೆಳ್ಪು: ಆದಿಪು, ೧. ೬೬)

ಅಚಿರ

[ಗು] ಅತಿಶೀಘ್ರ (ದಕ್ಷಿಣಭುಜಂ ಅಚಿರಪ್ರತಿಪಕ್ಷ ಮಹೀಪಾಲ ವಿಜಯಲಕ್ಷ್ಮೀಲಲನಾ ವಕ್ಷೋಜಸ್ಪರ್ಶನಮಂ ಅನಕ್ಷರಮಱಿಪಿದುದು ಪತಿಗೆ ಅಮಂದಸ್ಪಂದಂ: ಆದಿಪು, ೧೧. ೧೧)

ಅಚಿರರುಚಿಸಂಚಳ

[ಗು] ಮಿಂಚಿನ ಕಾಂತಿಯಂತೆ ಚಂಚಲವಾದ (ಭೂತಳರಾಜ್ಯವಿಮೋಹಂ ಅಚಿರರುಚಿಸಂಚಳಂ ಇಂತಳವುಗಿಡಿಸಿದುದು ಮನುಕುಳತಿಳಕನುಮಂ: ಆದಿಪು, ೧೪. ೧೨೧)

ಅಂಚೆ

ಹಂಸ (ಕಡವಿನ ಕಂಪು ಅಡಂಗಿದುದು ಜಾದಿಯ ಕಂಪು ಒದವಿತ್ತು ಸೋಗೆಯ ಉರ್ಕು ಉಡುಗಿದುದು ಅಂಚೆಯುರ್ಕು ಪೊಸತಾಯ್ತು: ಪಂಪಭಾ, ೭. ೬೯); ಬಟ್ಟೆ (ಒಂದು ಅಂಚೆಯಂ ಪೊದೆದು ಒಂದು ಅಂಚೆಯಂ ಉಟ್ಟ ನಿನ್ನಿರವು ಇದೇಂ ಅಂಭೋಜಪತ್ರೇಕ್ಷಣೇ: ಪಂಪಭಾ, ೮. ೬೬)

ಅಚೇತನನಾಗು

[ಕ್ರಿ] ಮೂರ್ಚೆ ಹೋಗು (ದುರ್ಯೋಧನ ಗದಾಪ್ರಹರಣದಿಂದ ಅಚೇನನಾಗಿರ್ದೊಡೆ ಬಿೞ್ದನಂ ಇಱಿಯೆನೆಂದು: ಪಂಪಭಾ, ೧೩. ೯೫ ವ)

ಅಚೇತನರ್

[ನಾ] ಪ್ರಾಣರಹಿತರು (ಅಂತೆ ಗೆಯ್ವೆನೆಂದು ಬಂದು ಕೊಳನ ತಡಿಯೊಳ್ ಅಚೇತನರಾಗಿ ಬಿೞ್ದಿರ್ದ ತಮ್ಮಂದಿರಿರ್ವರುಮಂ ಕಂಡು: ಪಂಪಭಾ, ೮. ೪೦ ವ)

ಅಚ್ಚ

[ಗು] ಶುದ್ಧ (ಮಹೀಶಂ ತೆಗೆದೆಚ್ಚನಚ್ಚ ಬಿಸುನೆತ್ತರ ಸುಟ್ಟುರೆ ಸೂಸುವನ್ನೆಗಂ: ಪಂಪಭಾ, ೧೦. ೯೮)

ಅಚ್ಚಬೆಳ್ದಿಂಗಳ್

[ನಾ] ಶುಭ್ರವಾದ ಬೇಳುದಿಂಗಳು (ಅಂತು ಸೊಗಯಿಸುವ ಅಚ್ಚಬೆಳ್ದಿಂಗಳೊಳ್ ಸುಧಾಧವಳಿತ ಉತ್ತುಂಗ ರಮ್ಯಹರ್ಮ್ಯದೆರಡನೆಯ ನೆಲೆಯ: ಪಂಪಭಾ, ೪. ೫೨ ವ)

ಅಚ್ಚರಸಿ

[ನಾ] [ಅಪ್ಸರಸ್ತ್ರೀ] ಅಪ್ಸರೆ (ಪೂತ ಜಂಗಮಲತೆಗಳಂತೆಱಗಿ ತನ್ನ ಮುಂದೆ ಬಂದಾಡುವಚ್ಚರಸಿಯರುಮಂ: ಆದಿಪು, ೨. ೬೫ ವ)

ಅಚ್ಚರಸೆ

[ನಾ] ಅಪ್ಸರೆ (ಉಗ್ರಗ್ರಾಹಸ್ವರೂಪದೊಳಿರ್ದ ಅಚ್ಚರಸೆಯರಂ ವಿಶಾಪೆಯರ್ಮಾಡಿ: ಪಂಪಭಾ, ೪, ೨೦ ವ)

Search Dictionaries

Loading Results

Follow Us :   
  Download Bharatavani App
  Bharatavani Windows App