Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಆಗ್ನಿಶರೀರೆ
[ನಾ] ಅಗ್ನಿಪ್ರವೇಶ ಮಾಡಿ ಕಿಚ್ಚಿಗರ್ಪಿಸಿದ ದೇಹವುಳ್ಳವಳು (ಅಂಬೆಯೆಂಬ ದಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಂ ಅಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ: ಪಂಪಭಾ, ೧. ೮೦ ವ)
ಆಧ್ಯಯನ
[ನಾ] [ಜೈನ] ವಿದ್ಯಾಭ್ಯಾಸ, ಧಾರ್ಮಿಕ ಅಧ್ಯಯನ (ಉಪಾಸಕಾಧ್ಯಯನ ಅಧ್ಯಾಪನಾನಂತರಂ ಸಕಳಶಾಸ್ತ್ರಂಗಳನೋದುವ ಓದಿಸುವ ನೆನೆವ ಬರೆವ ಪರಮಸ್ವಾಧ್ಯಾಯಮುಂ: ಆದಿಪು, ೧೫. ೧೩ ವ); [ನಾ] ಬ್ರಾಹ್ಮಣನ ಷಟ್ಕರ್ಮಗಳಲ್ಲಿ ಒಂದಾದ ವೇದಾಧ್ಯಯನ (ಭವಿಷ್ಯದ್ವಿಜನ್ಮವರ್ಣಕ್ಕೆ ಅಧ್ಯಯನ ಅಧ್ಯಾಪನ ದಾನ ಪ್ರತಿಗ್ರಹ ಯಜನ ಯಾಜನ ವಿಶಿಷ್ಟವೃತ್ತಿಯುಮಂ: ಆದಿಪು, ೪. ೭೬ ವ)
ಆಸ್ಫಾಲಿತ
[ಗು] ಅಪ್ಪಳಿಸಿದ (ಮದಸ್ತಂಬೇರಮಬೃಂಹಿತಂಗಳಿಂದಂ ಅಸಕೃತ್ ಆಸ್ಫಾಲಿತ ಅನೇಕದುಂದುಭಿಧ್ವನಿ ಮಧುರಗಂಭೀರಂಗಳಪ್ಪ ಹಯಹೇಷಿತಂಗಳಿಂದಂ: ಆದಿಪು, ೧೩. ೪೨ ವ)
ಆಸ್ಫಾಲಿತ