भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಎಸಕ

[ನಾ] ಕೆಲಸ (ಧರ್ಮಮ್ ಅಮರೇಂದ್ರಗತಿಯಂ ಅಧರ್ಮಂ ಅಧೋಗತಿಯಂ ಎಸಗುವ ಎಸಕದೊಳೀಗುಂ ಧರ್ಮಾಧರ್ಮ ಕ್ರಿಯೆಗಳಂ: ಆದಿಪು, ೫. ೭೮); ಪರಿಣಾಮ (ಪುರಜನಮಂತಃಪುರಜನಮುಂ ಪರಿಜನಮುಂ ಅಳ್ಕೆ ತದ್ರಾಜನಿಕೇತನದಲ್ಲಿ ಬಿರ್ದು ಪಡೆದುದು ಮನಕ್ಕೆ ಕಡುಮುಳಿಸಿನೆಸಕಮಂ ಮಾಗಧನಾ: ಆದಿಪು, ೧೨. ೯೨); [ನಾ] ಅಭಿಪ್ರಾಯ (ಈ ಕನ್ನೆಯಂ ಪಸುರ್ವಂದರ್ ಪಸೆಯೆಂಬಿವಂ ಸಮೆದು ನೀಂ ಕೈಕೊಳ್ ಕೊಳಲ್ಕಾಗದೆಂಬ ಎಸಕಂ ಚಿತ್ತದೊಳುಳ್ಳೊಡೆ: ಪಂಪಭಾ, ೧. ೭೮); [ನಾ] ವೈಭವ (ಅಂತು ವಸುಷೇಣನಾ ಲೋಕಾಂತಂಬರಂ ಅಳವಿ ಬಳೆಯೆ ಬಳೆದ ಎಸಕಂ ಅದು ಓರಂತೆ ಜನಂಗಳ ಕರ್ಣ ಉಪಾಂತದೊಳ್ ಒಗೆದೆಸೆಯೆ ಕರ್ಣನೆಂಬನುಂ ಆದಂ: ಪಂಪಭಾ, ೧. ೯೮); [ನಾ] ಪ್ರತಾಪ (ಮಕ್ಕಳ್ ಒಸಗೆಯಂ ಈವುದು ನಿನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ: ಪಂಪಭಾ, ೧. ೧೩೯); [ನಾ] [ಕವಿತಾ] ಕಾರ್ಯ (ಪುಲಿಗೆಱೆಯ ತಿರುಳ ಕನ್ನಡದೊಳ್ ನಿರ್ವ್ಯಾಜದ ಎಸಕದೊಳೆ ಪುದಿದೊಂದೋಜೆಯ ಬಲದಿನಿಯ ಕವಿತೆ ಪಂಪನ ಕವಿತೆ: ಪಂಪಭಾ, ೧೪. ೫೮)

ಎಸಕಂಗಾಯ್

[ಕ್ರಿ] ಕರ್ತವ್ಯಪಾಲಿಸು (ಹರಿಯುಂ ತಾನುಂ ಭರಂಗೆಯ್ದು ತನ್ನ ಎಸಕಂ ಕಾಯದೆ ಅಧರ್ಮಯುದ್ಧದೆ ನರಂ ಕೊಲ್ವಲ್ಲಿ: ಪಂಪಭಾ, ೧೧. ೮೩)

ಎಸಕಂಗಿಡು

[ಕ್ರಿ] ಪ್ರತಾಪಹೀನವಾಗು (ಬೆಸಸಿದೊಡೆ ಅದು ಮಾರ್ಕೊಳ್ಳದೆ ಬೆಸನಂ ಬಲವಂದು ಬಾಹುಬಲಿಯಂ ಅಣಂ ಭೇದಿಸಲಾಱದುದಱಿಂ ಇರ್ದುದು ಮಸುಳ್ದೆಸಕಂಗೆಟ್ಟು ಬಲದ ಮುಯ್ಪಿನ ಕೆಲದೊಳ್: ಆದಿಪು, ೧೪. ೧೧೭)

ಎಸಗು

[ಕ್ರಿ] ಗಾಳಿ ಬೀಸು (ಪೊಸಪೂವಿನ ಸರಿ ಪರಿದಾಯ್ತಸದಳಂ ಎಸಪ ಎಲರದೊಂದು ಮೇಲ್ವಾಯ್ದಾಗಳ್: ಆದಿಪು, ೧೦. ೨); [ಕ್ರಿ] ಮಾಡು (ಲೋಕದ ಪೞಿ ಪೊರ್ದದೆ ಮಾಣೆ ಧರ್ಮಯುದ್ಧದೊಳ್ ಎಸಗಿಂ: ಆದಿಪು ೧೪. ೧೦೨); [ಕ್ರಿ] ನಡೆದುಕೊ (ಶ್ರೀಗೆ ಫಳಂ ಚಾಗಂ ವಾಕ್‌ಶ್ರೀಗೆ ಫಳಂ ಸರ್ವಶಾಸ್ತ್ರಪರಿಣತಿ ವೀರಶ್ರೀಗೆ ಫಳಂ ಆಯಂ ಎಂದಿಂತಾಗಳುಂ ಅಱಿದೆಸೆಗಿದಂ ಪರಾಕ್ರಮಧವಳಂ: ಪಂಪಭಾ, ೬. ೧); [ಕ್ರಿ] [ರಥ] ನಡೆಸು (ಪಿಂದೆ ಕಡಂಗಿ ತೇರಂ ಎಸಗು ಎಂಬವಂ ಅಂಬಿಗಂ ಆಜಿರಂಗದೊಳ್ ಮುಂದೆ ಸಮಾನನಾಗಿ ಬೆಸದೆ ಇರ್ಪವನುಂ ತುಱುಕಾಱನಾಗೆ: ಪಂಪಭಾ, ೧೨. ೯೪); [ಕ್ರಿ] ನಡೆದುಕೊ (ಒಂದೆ ಗಡ ಹರಿಯ ಪೇೞ್ದೊಂದಂದದೆ ನರನೆಸಗುವಂತೆ ಕರ್ಣನುಂ ಎನ್ನೆಂದ ಒಂದೋಜೆಯೊಳ್ ಎಸಗದೊಡೆ: ಪಂಪಭಾ, ೧೨. ೧೦೧)

ಎಸಳ್

[ನಾ] ಎಸಳು, ಹೂವಿನ ಪಕಳೆ (ತಾವರೆಯ ನೀಳ್ದೆಸಳೊಳ್ ಮಱಿದುಂಬಿ ಪಾಯ್ದು ಒಡಂಬಡನೊಳಕೊಂಡು: ಪಂಪಭಾ, ೪. ೭೮)

ಎಸೆ

[ಕ್ರಿ] ಶೋಭಿಸು (ಮಂಗಳತೂರ್ಯನಾದಂ ಎಸೆಯುತ್ತಿರ್ಪನ್ನೆಗಂ ಚಕ್ರಿ ರಾಗಿಸಿ ಕೆಯ್ನೀರ್ ಎಱೆದಂ ಗುಣಾರ್ಣವ ಮಹೀಪಾಲಂಗಂ ಆ ಕನ್ನೆಯಂ: ಪಂಪಭಾ, ೫. ೨೫); [ಕ್ರಿ] ಹಾಡು (ಮಿಡಿವಂ ಬೀಣೆಯನಿವಂ ಇವಳ್ ಒಡನೆ ಎಸೆವಳ್ ಬೆರಲ ಕೊರಲ ಕೂಟಂ ಬೆರಲಂ ಮಿಡಿಯಿಸಿದುದೆನಿಸಿ: ಆದಿಪು, ೯. ೧೧೭); [ಕ್ರಿ] ಹೊರಹೊಮ್ಮು (ಕೋಟಿ ತೆಱದಿಂದಂ ಎಸೆವ ಈ ನಾಟಕಮಂ ತೋಱಿ ಮಾಣ್ದಳಿಲ್ಲಳ್: ಆದಿಪು, ೯. ೪೫); [ಕ್ರಿ] ಮೊಳಗು (ಆನಂದದುಂದುಭಿಧ್ವನಿ ತಾನೊಡನೊಡನೆಸೆಯೆ ನಭದೊಳ್ ಒಡನೆಸೆದುದು ಅಹೋ ದಾನಿ ಅಹೋ ಪಾತ್ರಂ ಅಹೋ ದಾನಂ ಅಹೋ ದೇಯಮೆಂಬ ದಿವ್ಯಧ್ವನಿಗಳ್: ಆದಿಪು, ೧೦. ೪); [ಕ್ರಿ] ಮಧುರ ಧ್ವನಿಮಾಡು (ಫಳಾಮೃತಾಸ್ವಾದದೆ ತಣ್ಣನೆ ತಣಿದು ಕಿವಿಯೊಳ್ ಅಮರ್ದಿನ ಪನಿ ಪನಿವಿನಂ ಎಸೆದರ್ ಅರೆಬರ್ ಅಳಿಕುಳರುತಿಯಿಂ: ಆದಿಪು, ೧೧. ೮೦)

ಎಳಗಂಪು

[ನಾ] ನವಿರು ವಾಸನೆ (ನನೆಯ ಎಳಗಂಪನೆತ್ತಿಯುಂ ಅಣಂ ನನೆನಾಱದೆ ಅರಲ್ದ ಅನೇಕ ಕೋಕನದವನಂಗಳೊಳ್ ಸುೞಿದು ತಣ್ಣಸಮಾಗದೆ: ಪಂಪಭಾ, ೫. ೩೪)

ಎಳಗಾವು

[ನಾ] [ಎಳ+ಕಾವು] ಎಳೆಯ ದಂಟು (ಬಿಳಿಯ ತಾವರೆಯ ಎಳಗಾವಿನ ಅಸಿಯ ನೂಲೊಳ್ ಕೋದ ತೋರಮಲ್ಲಿಗೆಯ ಬಿರಿಮುಗುಳ ಸರಿಗೆಯುಮಂ: ಪಂಪಭಾ, ೫. ೬ ವ)

ಎಳಗೊಂಬು

[ನಾ] ಎಳೆಯ ಕೊಂಬೆ (ಮಾಮರಂಗಳಂ ಅಡರ್ದು ತೊಡರ್ದು ಎಳಗೊಂಬುಗಳ್ವಿಡಿದು ದಾಂಗುಡಿವಿಡುವ ಮಾಧವೀಲತೆ: ಪಂಪಭಾ, ೨. ೧೨ ವ)

ಎಳದಳಿಸು

[ಕ್ರಿ] ಎಳವೆಯಿಂದ ಹೊಳೆ, ನಳನಳಿಸು (ಪೊಳೆವೆಳೆದರಿಳೊಳೆ ಪುದಿದು ಎಳದಳಿಸಿ ಕುಳಿರ್ಕೋೞ್ದ ಸೋನೆಯ ಸೊನೆಯನೆ ಪುದುಂಗೊಳಿಸಿದುದು: ಆದಿಪು, ೧೧. ೮೦)

ಎಳನೀರ್

[ನಾ] ಸೀಯಾಳ (ಎಳನೀರೊಳೊತ್ತಿನೊಳೊತ್ತಿ ಬರ್ಪ ಪೊನಲೊಳ್: ಆದಿಪು, ೧. ೬೪)

ಎಳವಾಳೆ

[ನಾ] ಬಾಳೆಯ ಮೀನು (ಮಿಳಿರ್ವ ಜಳದೊಳಗೆ ಪೊಳೆವೆರಡು ಎಳವಾಳೆಯಂ: ಆದಿಪು, ೭. ೨೭ ರಗಳೆ)

ಎಳವಿದಿರ್

[ನಾ] [ಎಳತು ಬಿದಿರ್] ಎಳೆಯ ಬಿದಿರು (ಎಳವಿದಿರ ಬಣ್ಣಮೊಳ್ನಡು ಕಳಶಮನವ್ವಳಿಪ ಮೊಲೆ: ಆದಿಪು, ೪. ೪೪)

ಎಳವಿಸಿಲ್

[ನಾ] ಎಳೆಯ ಬಿಸಿಲು (ರಸೆಯಿಂದಮೊಗೆದು ಪೆಡೆಗಳ್ ಪೊಸಮಾಣಿಕದ ಎಳವಿಸಿಲ್ಗಳೊಳ್ ಪೊಸದಳಿರೊಳ್ ಮುಸುಕಿದ ತೆಱದಿಂದೆಸೆದಿರೆ ಪೊಸತೆನೆ ನಡೆ ನೋಡಲ್ ಉರಗರಾಜಂ ಬಂದಂ: ಪಂಪಭಾ, ೧೨. ೧೪೧)

ಎಳವೆಱೆ

[ನಾ] [ಎಳತು ಪೆಱೆ] ಬಾಲ ಚಂದ್ರ (ಬ್ರಹ್ಮಾಂಡಮಂ ತಾಗಿದ ವಿಕಟಾಂಗಮುಂ ಎಳವೆಱೆಯನಡಸಿದಂತಪ್ಪ ದಾಡೆಯುಂ ಅಗುರ್ವಾಗೆ: ಪಂಪಭಾ, ೧೨. ೭ ವ)

ಎಳಸು

[ಕ್ರಿ] ಆಸೆಪಡು (ಎಳಸಿ ಸುರಸಮಿತಿ ಕಲ್ಪಂಗಳ ದೆಸೆಯನೆ ಬಿಸುಟು ರಮಿಯಿಸುತ್ತುಂ: ಆದಿಪು, ೭. ೬೩)

ಎಳೆ

[ನಾ] ಇಳಾ, ಭೂಮಿ (ಎಳೆಯೊಳ್ ತೋಱಿದ ರೂಪನಾಗಳೆ ನಭೋಭಾಗಾಗ್ರದೊಳ್ ತೋರ್ಪಂ ಆಗಳೆ ಗೆಂಟು ಆಗಳೆ ಸಾರೆಯಾಗಿ ಪೊಳೆವಂ: ಆದಿಪು, ೭. ೧೨೨)

ಎಳ್ಳನಿತುಂ

[ಅ] ಎಳ್ಳಿನಷ್ಟು, ಸ್ವಲ್ಪವೂ (ನಿನ್ನೊಳೆಳ್ಳನಿತುಂ ದೋಷಮನುಂಟುಮಾಡದಿರೆಯುಂ: ಪಂಪಭಾ, ೪. ೯೩)

ಎೞಲಿಕ್ಕು

[ಕ್ರಿ] ತೂಗು ಹಾಕು (ಎೞಲಿಕ್ಕಿದ ಮುಕ್ತಾದಾಮಶೋಭೆ ಲಕ್ಷ್ಮೀಲಲನಾ ದರಹಾಸ ಶೋಭೆ: ಆದಿಪು, ೪. ೩೦ ರಗಳೆ)

ಎೞಲ್

[ಕ್ರಿ] ಜೋಲಾಡು (ಸ್ನಾನಾರ್ಥಂ ಒಂದು ಕಳಶಮಂ ನಿಯಮನಿಧಾನಂ ಎೞಲೆ ಪಿಡಿದು ಅಮಳಿನ ಗಂಗಾನದಿಗೆ ವಂದು ಸುರತನಿಧಾನಿ ಅಮರೇಂದ್ರಗಣಿಕೆಯಂ ಮುನಿ ಕಂಡಂ: ಪಂಪಭಾ, ೨. ೪೧); [ಕ್ರಿ] ಬಳಲು (ಪೆಸರಱಿಯದಮರತೂರ್ಯಪ್ರಸರಂಗಳ ಜತಿಗೆ ತೊಡರದೆ ಇನಿಸು ಎೞಲದೆ: ಆದಿಪು, ೯. ೩೧); [ಕ್ರಿ] ಸಡಿಲಗೊಳ್ಳು (ಆದಿಮಧ್ಯ ಅವಸಾನದೊಳೆಲ್ಲಿಯುಂ ಎೞಲದ ಕಲಿತನದಳವಿಂಗೆ ಮನಂಗೊಂಡು: ಪಂಪಭಾ, ೧೩. ೬೫ ವ)

Search Dictionaries

Loading Results

Follow Us :   
  Download Bharatavani App
  Bharatavani Windows App