Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಐಕಿಲ್
[ನಾ] ಚಳಿ (ಬಿಸಿಲ್ ಐಕಿಲ್ ಪಸಿವು ಉಗ್ರದಂಶಮಶಕವ್ಯಾಬಾಧೆ ನೀರೞ್ಕೆ ಪೊಯ್ವ ಸಿಡಿಲ್ ತಿಂಬರವಾವು ಪಾಯ್ವ ಪುಲಿ: ಆದಿಪು, ೬. ೩೪)
ಐಂದ್ರ
[ನಾ] ಇಂದ್ರಪದವಿ (ಸಕಳಕ್ಷ್ಮಾಚರಖೇಚರಾಂಚಿತ ಮಹಾಮಾಣಿಕ್ಯ ಗಾಣಿಕ್ಯ ಹಾಸ್ತಿಕ ರತ್ನೋರ್ಜಿತ ಚಕ್ರವರ್ತಿವಿಭವಂ ಮುನ್ನಂ ಬೞಿಕ್ಕೆ ಐಂದ್ರಂ: ಆದಿಪು, ೧೬. ೮); [ನಾ] ಇಂದ್ರಾಸ್ತ್ರ (ಕಳವೇೞ್ದು ಇರ್ವರುಂ ಐಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರಸಂಕುಳದಿಂದ ಒರ್ವರಂ ಒರ್ವರ್ ಎಚ್ಚು: ಪಂಪಭಾ, ೧. ೭೯)
ಐಂದ್ರಬಾಣ
[ನಾ] ಇಂದ್ರಾಸ್ತ್ರ (ಜ್ವಳನಪತತ್ರಿಯಂ ಕಡಿದು ವಾರುಣಪತ್ರಿಯಿಂ ಐಂದ್ರಬಾಣಮಂ ಕಳೆದು ಸಮೀರಣಾಸ್ತ್ರದಿಂ ಭೂಭುಜರೆಲ್ಲರಂ ಭಯಂಗೊಳಿಸಿ: ಪಂಪಭಾ, ೧೧. ೪೩)
ಐರಾವಣಾನ್ವಯ
[ನಾ] [ಐರಾವಣ+ಅನ್ವಯ] ಐರಾವತವೆಂಬ ಆನೆಯ ವಂಶ (ಮತ್ತಂ ಐರಾವಣಾನ್ವಯನುಂ ಸುರಭಿನಿಶ್ವಾಸನುಂ ಸೂಕ್ಷ್ಮಬಿಂದುರುಚಿರನುಂ: ಪಂಪಭಾ, ೧೪. ೨೦ ವ)
ಐಸರ
[ನಾ] ಐದೆಳೆಯ ಹಾರ (ಮೃಗಮದದಣ್ಪು ಜಾದಿಯ ಬೞಲ್ಮುಡಿ ನೆಯ್ದಿಲ ಕರ್ಣಪೂರಂ ಉತ್ತು ಅಗಲದೆ ಕಟ್ಟಿದ ಐಸರಂ: ಆದಿಪು, ೧೨. ೧೨)
ಐಸಾಸಿರ್ವರ್
[ನಾ] ಐದು ಸಾವಿರ ಮಂದಿ (ನಿಜತನೂಭವರೈಸಾಸಿರ್ವರ್ ಪದಿನಾಱುಸಾಸಿರ್ಬರ್ ಮಕುಟಬದ್ಧರ್ ನಿಜಲತಾಂಗಿಯರ್ ಅಯ್ವತ್ತು ಸಾಸಿರ್ವರ್: ಆದಿಪು, ೬. ೨೭)
ಐಹಿಕ
[ಗು] ಇಹಲೋಕಕ್ಕೆ ಸಂಬಂಧಿಸಿದ, ಇಹಲೋಕದ (ನಿನ್ನೆಂದಂತುಟೆ ಮೋಕ್ಷಕ್ಕೆನ್ನಿರ್ಪಿರವು ಅಘಟಮಾನವೈಹಿಕದ ತೊಡರ್ಪು ಎನ್ನಿರವಿನೊಳುಂಟು: ಪಂಪಭಾ. ೮. ೪)
ಐಳಾವನ