Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಒಳ್ವೊಕ್ಕು ನಿಲ್
[ನಾ] ಬಲವಾದ ಆಶ್ರಯ ಪಡೆದಿರು (ಇದಿರೊಳ್ ನಿಂದೊಡೆ ವಜ್ರಿ ಸೈರಿಸಂ ಇರಲ್ವೇಡ ಎಮ್ಮ ಒಳ್ವೊಕ್ಕು ನಿಲ್ ನೀನೆಂದು ಕಡಂಗಿ ಕಾಲ್ವಿಡಿವವೊಲ್: ಪಂಪಭಾ, ೪. ೨೪)
ಒಳ್ಳನುರಿ
[ಕ್ರಿ] [ಗಾಯ] ಭಗಭಗ ಉರಿ (ಒಳ್ಳನುರಿವ ಪುಣ್ಗಳೊಳ್ ಕ್ಷಾರವಾರಿಗಳನೆಱೆದೊರಸಿ ಕರ್ಚುವರುಂ: ಆದಿಪು, ೫. ೮೫ ವ)
ಒಳ್ಳನೆ
[ಅ] ತಣ್ಣಗೆ, ಸುಮ್ಮನೆ (ಒಳ್ಳನುರಿವ ಪುಣ್ಗಳೊಳ್ ಕ್ಷಾರವಾರಿಗಳಂ ಎಱೆದೊರಸಿ ಕರ್ಚುವರುಂ: ಆದಿಪು, ೫. ೮೫ ವ)
ಒಳ್ಳಲಗು
[ನಾ] ಹರಿತವಾದ ತುದಿ (ಅಣ್ಮು ಅಣ್ಮು ಎಂದು ಒಳ್ಳಲಗಿನ ಶರತತಿಯಿಂ ಕೊಳ್ಳ ಕೊಳ ಎಂದು ಅಂಗರಾಜಂ ಅಸುರನಂ ಎಚ್ಚಂ: ಪಂಪಭಾ, ೧೨. ೧೨)
ಒಳ್ಳಾನೆ
[ನಾ] ಶ್ರೇಷ್ಠವಾದ ಆನೆ (ಪಟ್ಟಂಗಟ್ಟಿದ ಇಳಾಧಿನಾಥರೆ ಪಯಿಂಛಾಸಿರ್ವರ್ ಒಳ್ಳಾನೆಗಳ್ ಪಟ್ಟಂಗಟ್ಟಿದುವು ಒಂದು ಲಕ್ಕ ತುರಗಂ ಪತ್ತೆಂಟು ಲಕ್ಕಂ: ಪಂಪಭಾ, ೧೦. ೧೧೭)
ಒಳ್ಳಾಳ್
[ನಾ] ಶ್ರೇಷ್ಠ ಯೋಧ (ಬೆಳ್ಳಾಳ್ಗೆ ಪೊಳೆಪುದೋಱುವುದು ಒಳ್ಳಾಳ್ಗೆ ಪೊಡರ್ಪುದೋರ್ಪುದು ಇರದೆ ಅಣ್ಮು ಅಣ್ಮು ಎಂದು: ಪಂಪಭಾ, ೧೨. ೧೨)
ಒಳ್ಳಿಕೆಯ್
[ಕ್ರಿ] ಒಳಿತನ್ನು ಮಾಡು (ಘೋರವೀರ ತಪಮೆಂಬಿನಂ ನೆಗೞ್ದು ತತ್ಸಚಿವೋತ್ತಮಂ ಒಳ್ಳಿಕೆಯ್ದಂ: ಆದಿಪು, ೨. ೬೧)
ಒಳ್ಳೆ
[ನಾ] ವಿಷವಿಲ್ಲದ ಹಾವು, ನೀರು ಹಾವು (ಪಡೆವಳ್ಳಂ ಗಡಂ ಆ ಬಲಕ್ಕೆ ದಲೆ ದೃಷ್ಟದ್ಯುಮ್ನನೆಂಬ ಒಳ್ಳೆ ಆ ಪಡೆಯೊಳ್ ಗಂಡನುಂ ಆ ಮೊಲಂ ದ್ರುಪದನುಂ ಪೇರೊಟ್ಟೆ ಆ ಮತ್ಸ್ಯನುಂ ಗಡಂ: ಪಂಪಭಾ, ೧೦. ೪)
ಒೞ್ಕು
[ಕ್ರಿ] ಪ್ರವಹಿಸು, ಹರಿದು ಹೋಗು (ಜಲಜಲನೆ ಒೞ್ಕುತಿರ್ಪ ಪರಿಕಾಲ್ ಪರಿಕಾಲೊಳ್ ಅಳುರ್ಕೆಗೊಂಡ ನೈದಿಲ ಪೂ .. .. ಸಿರಿ ನೋಡುಗುಮಾ ವನಾಂತರಾಳದೊಳ್: ಪಂಪಭಾ, ೧. ೫೨)
ಒೞ್ಕುಡಿ
[ಕ್ರಿ] ತುಂಬಿ ಹರಿ (ಕೊಡಗೂಸುತನದ ಭಯದಿಂ ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲೊೞ್ಕುಡಿಯಲೊಡಗೂಡೆ ಗಂಗೆಯ ಮಡು ಕರೆಗಣ್ಮಿದುದು: ಪಂಪಭಾ, ೧. ೯೨);
ಒೞ್ಕುಡಿಯದ
[ಗು] ನಿಲ್ಲದ (ಬಿಡದೆ ಅೞಲ್ವ ಬಂಧುಜನದ ಒೞ್ಕುಡಿಯದ ಕಣ್ಣೀರ ಪೂರಂ ಆ ಪ್ರೇತಮಂ ಓಗಡಿಸದೆ ಸುಡುವುದು ಗಡಂ ಇನ್ನುಡುಗುವುದೀ ಶೋಕಮಂ ಸರೋಜದಳಾಯತಾಕ್ಷೀ: ಪಂಪಭಾ, ೨. ೨೮)
ಒೞ್ಕುಡಿವೋಗು