भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒಡವರ್

[ಕ್ರಿ] ಜೊತೆಯಲ್ಲಿ ಬರು (ಒಡವಂದಂಕದ ಕೌರವರ್ ದ್ರುಪದನ ಅಂಬ ಏಱಿಂಗೆ ಮೆಯ್ಯೊಡ್ಡದೆ ಒಡ್ಡುತಿರೆ ಸೂಸೆ ಬೀೞ್ವ ತಲೆಗಳ್ ಸೂೞ್ಪಟ್ಟಂ: ಪಂಪಭಾ, ೨. ೬೨)

ಒಡವಳೆ

[ಕ್ರಿ] ಜೊತೆಯಾಗಿ ಬೆಳೆ (ಒಡನಾಡಿಯುಂ ಒಡನೋದಿಯುಂ ಒಡವಳೆದುಂ ಗುಳ್ಳೆಗೊಟ್ಟಿ ಬಟ್ಟು ಉಳಿಸೆಂಡುಂ ಪೊಡೆಸೆಂಡು ಇವಂ ಆಡುತ್ತ ಒಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ್: ಪಂಪಭಾ, ೨. ೩೦)

ಒಡವುಟ್ಟಿದಳ್

[ನಾ] ಜೊತೆಗೆ ಹುಟ್ಟಿದವಳು (ಅಗಲ್ಕೆ ಮುಳಿಸೆಂಬೆರಡುಂ ಗಡ ಕಾಳಕೂಟಂ ಅಮರ್ದಿನ ಕಾಳಕೂಟದೊಡವುಟ್ಟಿದಳೆಂದೆಪನೆನ್ನ ನಲ್ಲಳಂ: ಆದಿಪು, ೧೨. ೨೭); ಸೋದರಿ (ಮದುವೆಯಂ ಮಾಡಲೆಂದು ಧೃತರಾಷ್ಟ್ರಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯೊಡವುಟ್ಟಿದಳಂ ತಂದುಕೊಟ್ಟು: ಪಂಪಭಾ, ೧, ೮೭, ವ)

ಒಡವುಟ್ಟು

[ಕ್ರಿ] ಜೊತೆಯಲ್ಲೇ ಹುಟ್ಟು (ಒಡವುಟ್ಟಿದ ಮಣಿಕುಂಡಲಂ ಒಡವುಟ್ಟಿದ ಸಹಜಕವಚಂ ಅಮರ್ದಿರೆ ತನ್ನೊಳ್ ತೊಡರ್ದಿರೆಯುಂ: ಪಂಪಭಾ, ೧. ೯೫)

ಒಡಸಾಯ್

[ಕ್ರಿ] ಜೊತೆಯಲ್ಲಿ ಮರಣಹೊಂದು (ಆ ಪ್ರಾಣವಲ್ಲಭರ್ ಪ್ರಾಣಮಂ ಅಂದು ಒಡಗಳೆದರ್ ಓಪರ್ ಓಪರೊಳ್ ಒಡಸಾಯಲ್ ಪಡೆದರ್ ಇನ್ನವೇಂ ಸೈಪು ಒಳವೇ: ಆದಿಪು, ೫. ೨೪)

ಒಡೆ

[ಕ್ರಿ] ಭೇದಿಸಿಕೊಂಡು ಬಾ (ಕೆನ್ನೆಯಿಂದೆ ಒಡೆದು ಓರೊಂದೊಗೆತಂದುವಂದು ನರೆಗಳ್ ವಿದ್ಯಾಧರಾಧೀಶನಾ: ಆದಿಪು, ೧. ೭೯)

ಒಡ್ಡ

[ನಾ] ರಾಶಿ, ಸಮೂಹ (ವಿಳಾಸದ ಒಡ್ಡವಿನಿತುಂ ದಿವದಿಂದ ಒಡವಂದುವೆಂಬನಿತ್ತಾದುದು ರೂಪು ಜವ್ವನಮನೊತ್ತರಿಸುತ್ತಿರೆ ವಜ್ರಜಂಘನಾ: ಆದಿಪು, ೩. ೧೦); [ನಾ] ಜೂಜಿನ ಪಣದ್ರವ್ಯ (ನಾೞವಾಸಗೆಗಳಂ ಅರಸಾಳಂತೆ ಕಣ್ಣಱಿದು ಮೆಟ್ಟಿ ಮಟ್ಟಮಱಿದು ಇಕ್ಕುವಾಗಳ್ ಒಡ್ಡಮಂ ಪೇೞಿಮೆನೆ: ಪಂಪಭಾ, ೬. ೭೧ ವ)

ಒಡ್ಡಣ

[ನಾ] ಸೈನ್ಯ (ಶ್ವೇತನ ಗಂಗಾಜಾತನ ಮಾತನೆ ಪಾರ್ದು ಎರಡು ಒಡ್ಡಣಂ ಕಾದಲ್ಕೆಂದೀ ತೆಱದಿನೊಡ್ಡಿ ನಿಂದುವು: ಪಂಪಭಾ, ೧೦. ೫೩); [ನಾ] ಯುದ್ಧರಂಗ (ವಿರೋಧಿರುಧಿರಜಲನಿಧಿವೊಲ್ ಸಂಧ್ಯಾಸಮಯಮೆಸೆಯೆ ತೞತೞ ನೇಸಱ್ ಮೂಡುವುದುಂ ಒಡ್ಡಣಕೆಳ್ತಂದರ್: ಪಂಪಭಾ, ೧೧. ೬)

ಒಡ್ಡಯಿಸು

[ಕ್ರಿ] ಒಟ್ಟಾಗು, ಜೊತೆಯಲ್ಲಿ (ಅರಣ್ಯದೊಳ್ ತಿರಿತರುತಿರ್ದ ಕಣ್ಬಡಿಗರಂ ಮಗುೞ್ದುಂ ಬಿಱುತು ಓಡಿ ಬೇಡರೊಳ್ ನೆರೆದಿರಲ್ ಒಡ್ಡಯಿಸಿ ರಾಜ್ಯದೊಳೇಂ ನೆರೆಯಲ್ಕೆ ತೀರ್ಗುಮೋ: ಪಂಪಭಾ, ೮. ೮೫)

ಒಡ್ಡೞಿ

[ಕ್ರಿ] ಸತ್ವಗುಂದು (ನಿನಗಪ್ಪುದು ಈ ಅೞಿನುಡಿ ಬರ್ಕೆ ನಿನ್ನ ಪಿರಿಯಣ್ಣನೆ ಪಣ್ಣನೆ ನೋೞ್ಪಂ ಆತನ ಒಡ್ಡೞಿಯದ ಗಂಡವಾತಂ: ಪಂಪಭಾ, ೩. ೧೬); [ನಾ] ರಾಶಿರಾಶಿ (ಅನಿತು ಅೞ್ಕಱಿಂ ಇೞ್ಕುಳಿಗೊಂಡು ಅಲಂಪಿನತ್ತೆಱಗಿದ ನಲ್ಲಳೆರ್ದೆಯೊಳ್ ಒಡ್ಡೞಿಯದೆ ಒಡ್ಡಿಸೆ ಸೈರಿಸುವಂತುಟಾದುದೇ: ಪಂಪಭಾ, ೪. ೧೦೫)

ಒಡ್ಡಿಱಿ

[ಕ್ರಿ] ಮುತ್ತಿಕೊ (ನಿನ್ನ ಮೆಯ್ ದೊಂಬದಡ್ಡಿಸಕ್ಕೆ ಗುಱಿಯಪ್ಪುದು ಒಡ್ಡಿಱಿದು ತಿಂಬರ್ ಅನ್ಯರ್: ಆದಿಪು, ೩. ೬೦)

ಒಡ್ಡಿಸು

[ಕ್ರಿ] ಮೀರಿಸು (ವನಧಿಧ್ವಾನಮನೊಡ್ಡಿಸುತ್ತಿರೆ ನದದ್ಗಂಭೀರಭೇರೀಬೃಹದ್ಧ್ವನಿ ನಾನಾವಿಧಮಂಗಳಾನಕರವಂ ಕೈಗಣ್ಮೆ: ಆದಿಪು, ೧೪. ೧೪೯); [ಕ್ರಿ] ಒಡ್ಡಯಿಸು, ಒಡ್ಡವಿಸು, ಒಡ್ಡುವಂತೆ ಮಾಡು (ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಂ ಅಡಂಗಲುಂ ಅಡಂಗಿಸಲುಂ ಒಡ್ಡಲುಂ ಒಡ್ಡಿಸಲುಂ .. .. ಆನೆ ಬಲ್ಲೆಂ: ಪಂಪಭಾ, ೫. ೪೩ ವ); [ಕ್ರಿ] ಪ್ರತಿಭಟಿಸು, ಎದುರಿಸು (ಒಡ್ಡಿಸೆ ಕಾದಂ ಆಗಳ್ ಅರ್ವಿಸೆ ತೆಗೆದೆಚ್ಚ ವೈಷ್ಣವಮಂ ಒಡ್ಡಿಸಿ ವೈಷ್ಣವದಿಂ ಮುರಾಂತಕಂ; ಪಂಪಭಾ, ೧೨. ೩೨); [ಕ್ರಿ] ಹೊಂಚು ಹಾಕು (ನಿನಗಪ್ಪಪಾಯಮಂ ನೆನೆದು ಮದೇಭರೂಪಮನೆ ತೋಱಿ ನಿಜಾಶ್ರಮದಿಂದಗಲ್ಚಿ ನಿನ್ನನುಜರಂ ಈ ಉಪಾಯದೊಳೆ ಕೀರ್ತಿಗೆಯೊಡ್ಡಿಸೆ ಕಾದೆನಾಂ: ಪಂಪಭಾ, ೮. ೪೮); [ಕ್ರಿ] ಒದಗಿಸು (ಬಿಸುಟಾ ಧರಾಧಿಪತಿಯಂ ನಾರಾಯಣಾದೇಶಂ ಒಡ್ಡಿಸೆ ಪಾಂಡುಪ್ರಿಯಪುತ್ರರೊಳ್ ನೆರೆಯಲೆಂದಿಂತೀಗಳಾಂ ಪೋದಪೆಂ: ಪಂಪಭಾ, ೧೩. ೧೦೦)

ಒಡ್ಡು

[ನಾ] ಗುಂಪು, ಸಮೂಹ (ಬಳೆದ ತಮೋಮದೇಭಘಟೆಯ ಒಡ್ಡೊಡೆವನ್ನೆಗಂ ಉನ್ನತೋದಯಾಚಳಗುಹೆಯಿಂ ಲಸತ್ಕಿರಣಕೇಸರಮಂ ಪರಪುತ್ತುಂ: ಆದಿಪು, ೧೨. ೫); [ಕ್ರಿ] ಮುಂಚಾಚು (ಒಡ್ಡಿದ ಪೆರ್ಮೊಲೆ ತೆಳ್ವಸಿಱ್ ಕರಂ ನೆಱೆದ ನಿತಂಬ ಇಂಬುವಡೆದ ಒಳ್ದೊಡೆ ನೆಕ್ಕರವದ್ದೆ ತಾನೆ ಪೋ ಕಿಱುದೊಡೆ ಎಂದು ಧಾತ್ರಿ ಪೊಗೞ್ಗುಂ ಪೊಗೞ್ವನ್ನರೆ ಕುಂತಿ ಮಾದ್ರಿಗಳ್: ಪಂಪಭಾ, ೧. ೧೦೮); [ಕ್ರಿ] ಇರಿಸು (ಛಾಯಾಲಕ್ಷ್ಯಮನೊಡ್ಡಿಯುಂ ಆಯದ ನೀರೊಳಗೆ ತನ್ನನಡಸಿದ ನೆಗೞಂ ಬಾಯೞಿವಿನಂ ಇಸಿಸಿಯುಂ: ಪಂಪಭಾ, ೨. ೬೦); [ಕ್ರಿ] ಪಣವಾಗಿ ಮುಂದಿಡು (ಪಲಗೆಗೆ ಪತ್ತು ಸಾಯಿರಮೆ ಗದ್ಯಣಂ ಎಂದಿರದೆ ಒಡ್ಡಿ ತಾಮ್ ಎರೞ್ವಲಗೆಯಂ ಆಡಿ ಸೋಲ್ತೊಡೆ: ಪಂಪಭಾ, ೬. ೭೨); [ಕ್ರಿ] ಸೈನ್ಯವನ್ನು ಯುದ್ಧಕ್ಕೆ ನಿಲ್ಲಿಸು (ಅದಿರದಿದಿರ್ಚಿ ತಳ್ತಿಱಯಲ್ ಈ ಮಲೆದೊಡ್ಡಿದ ಚಾತುರಂಗಬಲಮೆಂಬುದು ನಿನಗೊಡ್ಡಿ ನಿಂದುದು: ಪಂಪಭಾ, ೧೦. ೬೪); [ಕ್ರಿ] ಉಂಟಾಗು (ಅಳವು ಅಮರ್ದು ಒಡವುಟ್ಟಿತ್ತು ಪೂಣ್ದೀವ ಚಾಗಂ ಕರ್ಣಂಗೆ ಒಡ್ಡಿತ್ತು ದಲ್: ಪಂಪಭಾ, ೧೨. ೧೦೪); [ಕ್ರಿ] ಏರ್ಪಡು (ನಿನಗೆ ಎನ್ನೊಳಂ ಪಿರಿದು ಕಲುಷಂ ಕರ್ಣಂಗೊಡ್ಡಿತ್ತು ಭಾರತಂ: ಪಂಪಭಾ, ೧೨. ೧೭೩)

ಒಡ್ಡೋಲಗ

[ನಾ] [ವೃದ್ಧ>ವಡ್ಡ>ಒಡ್ಡ ಮತ್ತು ಅವಲೋಕನ>ಓಲಗ = ದೊಡ್ಡ ದರ್ಶನ ಎಂಬ ಮೂಲಾರ್ಥ] ರಾಜನ ಆಸ್ಥಾನ, ಸಭೆ (ಸುಯೋಧನನ ಒಡ್ಡೋಲಗಂ ಇಂದ್ರನ ಓಲಗಮುಮಂ ಕೀೞ್ಮಾಡಿ ಕಣ್ಗೊಪ್ಪುಗುಂ: ಪಂಪಭಾ, ೯. ೨೯)

ಒಡ್ಡೋಲಗಂಗುಡು

[ಕ್ರಿ] ರಾಜಸಭೆ ನಡೆಸು (ಸಿಂಹಾಸನಮಸ್ತಕ ಸ್ಥಿತನುಂ ವಿರಾಜಮಾನಧವಳಚ್ಛತ್ರಚಾಮರ ಸಹಸ್ರ ಸಂಛಾದಿತನುಂ ಆಗಿ ವಿಕ್ರಾಂತತುಂಗಂ ಒಡ್ಡೋಲಗಂಗೊಟ್ಟಿರೆ: ಪಂಪಭಾ, ೧೪. ೨೧ ವ)

ಒಣರ್

[ಕ್ರಿ] ಗಮನಿಸು, ತಿಳಿ (ಸಂತತ ವ್ಯಸನೋದ್ರೇಕದ ಕುಂದಂ ಒಣರನೋ ಶಕ್ತಿಕ್ಷಯಂಗಾಣನೋ: ಆದಿಪು, ೨. ೪೫)

ಒಣರ್ಚು

[ಕ್ರಿ] ಸೇರಿಸು, ಒಂದುಗೂಡಿಸು (ದೊಣೆಗಳಿಂ ಉರ್ಚುವ ತಿರುವಾಯ್ ಒಣರ್ಚಿ ತೆಗೆನೆಱೆವ ಬೇಗಮಂ ಕಾಣದೆ: ಪಂಪಭಾ, ೧೨. ೧೮೪)

ಒತ್ತಂಬ

[ನಾ] ಒತ್ತರಿಸುವಿಕೆ, ಒತ್ತಡ (ಪುಳಕಪ್ರೋದ್ಭೇದ ಘರ್ಮೋದಕವಿಸರಮಂ ಒತ್ತಂಬದಿಂ ತಾಗೆಯುಂ: ಆದಿಪು, ೪. ೫೧); [ನಾ] ಒತ್ತಾಯ, ಬಲಾತ್ಕಾರ (ನುಡಿದುದಂ ಪಡಿಯಱಂ ಬಂದು ಆ ಮಾೞ್ಕೆಯೊಳ್ ಅಱಿಪೆ ದ್ರೋಣಂ ಒತ್ತಂಬದಿಂದೆ ಒಳಗಂ ಪೊಕ್ಕು ದ್ರುಪದನಂ ಕಂಡು: ಪಂಪಭಾ, ೨. ೪೭ ವ); [ನಾ] ಪ್ರಯತ್ನಪೂರ್ವಕವಾಗಿ (ಯೋಗಾಭ್ಯಾಸದೊಳ್ ಅರೆಮುಗುಳ್ದ ರಕ್ತಾಂಭೋಜದಳ ವಿಳಾಸ ಉಪಹಾಸಿಗಳಪ್ಪ ಕಣ್ಗಳಂ ಒತ್ತಂಬದಿಂ ತೆಱೆದು: ಪಂಪಭಾ, ೧೩. ೬೩ ವ)

ಒತ್ತರಂ

[ನಾ] ಒಂದೇ ಸಲ (ಆಗಳದಂ ಕಂಡು ಉತ್ತರಂ ಒತ್ತರಂ ಒತ್ತಿದಂತೆ ಬೆರ್ಚಿ ಬೆಗಡುಗೊಂಡು: ಪಂಪಭಾ, ೮. ೯೯ ವ)

ಒತ್ತರಿಸು

[ಕ್ರಿ] ಗಾಢವಾಗು (ಕತ್ತುರಿಯ ಕಂಪುಮಂ ಬೆಮರೊತ್ತರಿಸಿ ಪೊದಳ್ದ ಕಂಪನೀಯುತ್ತಿರೆ ವೃತ್ತೋತ್ತುಂಗಸ್ತನೆಯರ್ ಶ್ರಮಮುತ್ತುಂ ಅದೇಂ ಸುರಭಿಗಂಧಮಂ ಬೀಱಿದರೋ: ಆದಿಪು, ೧೧. ೭೩); [ಕ್ರಿ] ದಟ್ಟವಾಗು (ಕುಳಿರ್ವ ಆಲಿನೀರ್ಗಳಿಂ ತುರಿಪದೆ ಸೂಸುತುಂ ಕೆಳದಿಯರ್ ನದಿಪುತ್ತುಮಿರೆ ನೋಡೆ ದಾಹಂ ಒತ್ತರಿಸಿದುದು: ಪಂಪಭಾ, ೫. ೮); [ಕ್ರಿ] ಒಂದೆಡೆಗೆ ತಳ್ಳು (ಘೂರ್ಣಿತ ಅರ್ಣವಮಂ ಒತ್ತರಿಸಿತ್ತು ಚತುರ್ಬಲ ಆರ್ಣವಂ: ಪಂಪಭಾ, ೧೦. ೨೮)

Search Dictionaries

Loading Results

Follow Us :   
  Download Bharatavani App
  Bharatavani Windows App