भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒಂದು

[ಕ್ರಿ] ಲೇಪಿತವಾಗು (ಈ ಜಗನಮಿದೇಕೆ ಹೇಮರಶನಾಧ್ವನಿಯಿಲ್ಲದೆ ಮೂಗುವಟ್ಟುದು ಈ ಬಗೆಯೋಲ್ ಅಲಕ್ತಕದ್ರವದೊಳೊಂದದೆ ನಿಂದುವು ಪಾದಪಂಕಜಂ: ಪಂಪಭಾ, ೪. ೬೨); [ನಾ] ಒಂದು ಎಂಬ ಸಂಖ್ಯೆ (ಒಂದುಂ ಎಡಂಬಡುಂ ಪೊರೆಯುಂ ಇಲ್ಲ ಅವರ್ಗೆ ಎಂಬುದಂ ಎಯ್ದೆ ನಂಬಿ ನಾಡಂ ದಯೆಗೆಯ್ದು ನೀಂ ಕುಡುವಿನಂ: ಪಂಪಭಾ, ೯. ೪೩); [ಕ್ರಿ] ಕೂಡು, ಸೇರು (ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಿಯೊಳ್ ಒಂದಿ ಸಾಂದಿನೊಳ್ ಕತ್ತುರಿಯೊಂದು ಕೋೞ್ಗೆಸಱೊಳ್: ಪಂಪಭಾ, ೧೪. ೨೦); [ನಾ] ಬುದ್ಧಿ (ಪರಿಕಿಪುದು ಒಂದಱಿಂದೆ ಎರಡಂ ಓತುಕೊಳ್ವುದು ಮೂಱಱಿಂದೆ ನಾಲ್ಕರಿದಱಿದು ಅಯ್ದಱಿಂದೆ ನೆಱೆ ಕಲ್ವುದು ನಿರ್ಣಯಂ ಆಱಱೊಳ್ ಪರಿಣತನಪ್ಪುದು ಏೞಱೊಳಂ ಒಂದದೆ ನಿಲ್ವುದು: ಪಂಪಭಾ, ೧೩. ೬೬)

ಒಂದು ತಲೆಯಾಗೋಡು

[ಕ್ರಿ] ಒಂದೆ ದಿಕ್ಕಿಗೆ ತಲೆತಿರುಗಿಸಿಕೊಂಡು ಓಡು (ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮಂ ಒಂದು ತಲೆಯಾಗೋಡುವ ಕೌರವ್ಯಧ್ವಜಿನಿಯುಮಂ ಬೇಱೊಂದು ಮೊನೆಯೊಳ್ ಕಾದುತಿರ್ದ ಅಶ್ವತ್ಥಾಮಂ ಕಂಡು: ಪಂಪಭಾ, ೧೨. ೩೦ ವ)

ಒಂದು ಪತ್ತೆಂಟು ಪಲಗೆ

[ನಾ] ಒಂದು ಹತ್ತೆಂಟು ಆಟ, ಅಂದರೆ ಕೆಲವು ಆಟಗಳು (ಮಡಿಮಡಿಗುಱುವುದುಂ ಒಂದು ಪತ್ತೆಂಟು ಪಲಗೆಯಂ ಮೆೞ್ಪಡಿಸಲೆಂದು ಸೋಲ್ತು ಸೋಲದೊಳ್ ಏವಯಿಸಿಯಿನ್ನೊಡ್ಡಂ ಕೊಳ್ಳಿಂ ಎಂದು: ಪಂಪಭಾ, ೬. ೭೧ ವ)

ಒಂದುಗುಂದು

[ಕ್ರಿವಿ] ಒಂದೂ [ಸ್ವಲ್ಪವೂ] ಕಡಿಮೆಯಾಗದೆ (ಪ್ರಯತ್ನದೆ ಬಿಗಿದಿರ್ದ ಎರೞ್ದೊಣೆ ಮಿಸುಪ್ಪ ಅಸಿ ಖೇಟಕಂ ಇಂತಿವು ಒಂದುಗುಂದದೆ ನಿಲೆ ನೋೞ್ಪ ನೋಟಕರ್ಗೆ ಸೌಮ್ಯಭಯಂಕರನಾದಂ ಅರ್ಜುನಂ: ಪಂಪಭಾ, ೭. ೭೯)

ಒಂದುತ್ತರಂ

[ನಾ] ಒಂದಿಷ್ಟು ಅಧಿಕವಾಗಿ (ರಥಮಂ ಬಂದೇಱಿ ಮಗನ ಮನಕತಂ ಒಂದುತ್ತರಮೆರ್ದೆಯನಲೆಯೆ ನರನಿಂತೆಂದಂ: ಪಂಪಭಾ, ೧೧. ೧೧೪)

ಒಂದುಮಾಡಿಕೊ

[ಕ್ರಿ] ಒಟ್ಟಾಗು (ತಂತಮ್ಮ ಚತುರ್ವಲಂಗಳಂ ಒಂದುಮಾಡಿಕೊಂಡು ಕಾಲಾಗ್ನಿಯಂ ಕೀಡಿ ಸುತ್ತುವಂತೆ ಕರ್ಣನಂ ಸುತ್ತಿ ಮುತ್ತಿಕೊಂಡು: ಪಂಪಭಾ, ೧೨. ೧೧೮ ವ)

ಒಂದೆ ಗಡ

[ಅ] ಒಂದೆ ಅಲ್ಲವೆ, ಒಂದು ವಿಷಯ (ಒಂದೆ ಗಡ ಹರಿಯ ಪೇೞ್ದೊಂದಂದದೆ ನರನೆಸಗುವಂತೆ ಕರ್ಣನುಂ ಎನ್ನೆಂದ ಒಂದೋಜೆಯೊಳ್ ಎಸಗದೊಡೆ: ಪಂಪಭಾ, ೧೨. ೧೦೧)

ಒಂದೆ ಪಸೆಯೊಳಿರಿಸು

[ಕ್ರಿ] ಒಂದೇ ಹಸೆಯ ಮೇಲೆ ಕುಳ್ಳಿರಿಸು, ಒಟ್ಟಿಗೆ (ಅಂತು ಸ್ವಯಂಬರದೊಳ್ ನೆಱೆದರಸುಮಕ್ಕಳೊಳ್ ಅಪ್ಪುಕೆಯ್ದ ಕುಂತಿಯೊಡನೆ ಮದ್ರರಾಜನ ಮಗಳ್ ಶಲ್ಯನನೊಡವುಟ್ಟಿದ ಮಾದ್ರಿಯುಮನೊಂದೆ ಪಸೆಯೊಳಿರಿಸಿ: ಪಂಪಭಾ, ೧. ೧೦೬ ವ)

ಒಂದೆ ಮೆಯ್

[ನಾ] ಏಕಾಕಿ (ಅತ್ತ ವಿಜಯಕಟಕಜನಂ ಅಂಬುಧಿತಟದೊಳಿರ್ದ ಅರಸನೊಂದೆ ಮೆಯ್ಯೊಳ್ ಪೋಗಿ ಬಾರದೆ ತಡೆದುದರ್ಕೆ ಕಟ್ಟುಕಡೆದು: ಆದಿಪು, ೧೨. ೧೨೪ ವ)

ಒಂದೆವಿಂದೆ

[ಗು] ಒಂದು ಗುಂಪಾಗಿ ಅಲ್ಲದೆ, ಬೇರೆ ಬೇರೆಯಾಗಿ (ಅತಿರಥ ಸಮರಥ ಮಹಾರಥ ಅರ್ಧರಥರ್ ಒಂದೆವಿಂದೆಯಲ್ಲದೆ ಒಂದೊರ್ವರೊಳ್ ಸಂಧಿಸಿ ಗೊಂದಣಿಸಿ ನಿಂದಾಗಳ್: ಪಂಪಭಾ, ೧೧. ೧೪೬ ವ)

ಒಂದೊಡಲ್

[ನಾ] [ಒಂದು+ಒಡಲ್] ಒಂದೇ ದೇಹ, ಏಕಾಂಗಿ (ಉದಗ್ರ ಮೃಗರಾಜನುಮಂ ಮದವದ್ವಿರೋಧಿ ಭೇದನಕರಮಪ್ಪ ಶೌರ್ಯಮದಮದೆನ್ನುಮಂ ಒಂದೊಡಲ್ ಎಂಬ ಸಂಜಯಾ: ಪಂಪಭಾ, ೧೩. ೫೧)

ಒಂದೊರ್ವರ್

[ನಾ] ಒಬ್ಬರೊಬ್ಬರು (ಒಂದೊರ್ವರಂ ಅಗಲ್ದಿಂ ಬೞಿಯಮಾದ ಸುಖದುಃಖಗಳಂ ಅನ್ಯೋನ್ಯನಿವೇದನಂ ಗೆಯ್ದು: ಪಂಪಭಾ, ೯. ೮ ವ)

ಒದ್ದೆ

[ನಾ] ನೆನೆದಿರುವುದು, ಮಳೆ (ದೇವದುಂದುಭಿ ರವದೊಂದುದ್ದಾನಿ ನೆಗೞೆ ಮುಗುಳಲರೊದ್ದೆ ಕರಂ ಸಿದ್ಧಮಾದುದು ಅಂಬರತಲದೊಳ್: ಪಂಪಭಾ, ೧೨. ೨೧೮) [‘ಒದ್ದೆ’ಗೆ ಡಿಎಲ್‌ಎನ್ ‘ರಾಶಿ’ ಎಂಬ ಅರ್ಥ ಕೊಡುತ್ತಾರೆ

ಒನಲಿಸಿತಿಲ್ಲಾ

ಕೆರಳಿಸಲಿಲ್ಲವೇ? (ಆವಡವಿಗಳೊಳ್ ಪಣ್ಪಲಂ ಆವಗಂ ಒಳವು ಅಲ್ಲಿಗಱಸಿ ಪರಿಪರಿದು ಕರಂ ತಾವಡಿಗೊಳ್ವ ಈ ಭೀಮನ ಬೇವಸಮಿದು ನಿನ್ನ ಮನಮಂ ಒನಲಿಸಿತಿಲ್ಲಾ: ಪಂಪಭಾ, ೭. ೪೬)

ಒನಲ್

[ಕ್ರಿ] ಕ್ರೋಧಗೊಳ್ಳು (ಬಿರಿಯಿಸೆ ಬೇಟದೊಳ್ ಬಿರಿದ ನಲ್ಲರಗಲ್ದು ಕನಲ್ದು ಒನಲ್ದು ನಲ್ಲರ ದೆಸೆಯಿಂದಂ ಅೞ್ತಿವರೆ: ಆದಿಪು, ೩, ೮೬)

ಒಪ್ಪಂ

[ನಾ] ಒಪ್ಪಿಗೆ (ನಿನಗೆ ಅಹಿತರ್ ಎಯ್ದೆ ತಪ್ಪಿರ್ದರ್ ಅವರ್ ತಪ್ಪಿದ ಬೞಿಕ್ಕೆ ತಪ್ಪಿದ ತಪ್ಪೇಂ ಗಳ ನನ್ನಿಗೊಪ್ಪಮಲ್ಲದೆ ತಪ್ಪೇ: ಪಂಪಭಾ, ೭. ೫೨)

ಒಪ್ಪಿಸು

[ಕ್ರಿ] [ಮರಳಿ] ವಶಕ್ಕೆ ಕೊಟ್ಟುಬಿಡು (ಮಗನ ಕರೆದು ಒಪ್ಪಿಸವೇೞ ಯುಧಿಷ್ಠಿರಂಗೆ ಮುನ್ ಗೆಲ್ದ ವಸ್ತುವಾಹನಚಯಮಂ: ಪಂಪಭಾ, ೬. ೭೬)

ಒಪ್ಪು

[ಕ್ರಿ] ಅಂದವಾಗು (ಕಳಹಂಸನಾದರಮಣೀಯತರಂ ಮದದಂತಿದಾನಗಂಧೋತ್ಕಟಂ ಒಪ್ಪುಗುಂ .. .. ಆ ವಿಜಯಾರ್ಧಪರ್ವತಂ: ಆದಿಪು, ೧. ೬೩)

ಒಪ್ಪುಗೊಳ್

[ಕ್ರಿ] ವಹಿಸಿಕೊ (ತನುವನಿನ್ನೊಪ್ಪುಗೊಳ್ ಮುನ್ನಮಿನ್ನುಂ ಕರಣೀಯಂ ನಿನ್ನ ವಾಕ್ಯಂ ನಿಜಮತಮೆ ಮತಂ: ಆದಿಪು, ೨. ೪೯); [ಕ್ರಿ] ಒಪ್ಪಿಸಿಕೊ (ಒಪ್ಪುಗೊಳ್ಗೆ ತನ್ನಳಿಯನಂ ಎಯ್ದೆ ಪಾಲಿಸುಗೆ ಬಂದಿದಂ ಈಗಳ್ ಅನಾಥಯೂಥಮಂ: ಆದಿಪು, ೪. ೮೪)

ಒಂಬೈಸಾಸಿರ

[ನಾ] ಒಂಬತ್ತು ಸಾವಿರ (ನಾಲ್ಸಾಸಿರದೈನೂಱಯ್ವದಿಂಬರ್ ಶಿಕ್ಷಕರುಂ ಒಂಬೈಸಾಸಿರರವಧಿಜ್ಞಾನಿಗಳುಂ: ಆದಿಪು, ೧೬. ೪೦ ವ)

Search Dictionaries

Loading Results

Follow Us :   
  Download Bharatavani App
  Bharatavani Windows App