Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಒಱಂಟು
[ನಾ] ಮೊಂಡುತನ (ನೀನೆ ಜೆಟ್ಟಿಗನೈ ಮುನ್ನಿನ ಒಱಂಟುವೇಡ ಮಗನೇ ಕೈಕೊಳ್ ಧರಾಭಾರಮಂ: ಪಂಪಭಾ, ೧. ೮೧)
ಒಱಂಟುತನ
[ನಾ] ಒರಟುತನ, ಬಿರುಸು (ನಿನ್ನ ಒರಂಟುತನಂ ಕೈಗೞಿವಾಯ್ತು ಅದಪ್ಪೊಡೆ ಮಹಾಭಾರಾವತಾರಂ ರಣೋದ್ಯತನಾಗು ಎಂಬುದಂ ಎಮ್ಮಂ ಅನ್ಯರವೊಲೇಂ ನೀಂ ಪ್ರಾರ್ಥಿಸಲ್ವೇೞ್ಪುದೇ: ಪಂಪಭಾ, ೧೦. ೧೦)
ಒಱದೞ್ಕರ್ತು
[ಗು] ಮುದ್ದಿನಿಂದ (ಬಾಲಾರ್ಕನಂ ಪೋಲ್ತು ಭಾಸುರತೇಜೋಧಿಕನಪ್ಪ ಬಾಳನಂ ಒಱಲ್ದೞ್ಕರ್ತು ನೋಡುತ್ತುಂ: ಆದಿಪು, ೭. ೪೪)
ಒಱಲ್
[ಕ್ರಿ] ಪ್ರೀತಿಸು (ಇಂದ್ರನರೇಂದ್ರವಂದ್ಯನಂ ಒಱಲ್ದು ಎತ್ತಾನುಮೋರೊರ್ಮೆ ಚಿಂತಿಸಿದೊಂಗಂ ಪವಣಿಲ್ಲ ಪುಣ್ಯಂ: ಆದಿಪು, ೧. ೩೭); [ಕ್ರಿ] ಆಸೆಪಡು (ಪುಸಿಯ ಪರಾಂಗನಾರತದ ಮದ್ಯದ ಮಾಂಸದ ಮೆಯ್ಗೆ ಒಱಲ್ದ ದುರ್ವ್ಯಸನಿಯ ಮಾಡಿದೋದೆ ನಿಮಗಾಗಮಮಾಗಿರೆ ಅಸತ್ಯವಾದಮಂ ಪೊಸಯಿಸಿ: ಆದಿಪು, ೨. ೧೧); [ನಾ] ಆಸಕ್ತಿ ಹೊಂದು (ನೀಲಾಂಜನೆ ತನ್ನಾಟಮನೊಱಲ್ದು ನೋಡುವ ನೋಟಕರಂ ತವದ ಮಾೞ್ಕೆಯಿಂ ಮೋಹಿಸಿದಳ್: ಆದಿಪು, ೯. ೩೮); [ಕ್ರಿ] ಕಾಮಿಸು (ಒಱಲ್ದು ನಲ್ಲಳೊಳ್ ನೀನ್ನಡೆ ನೋಡಿಯುಂ ಬಯಸಿ ಕೂಡಿಯುಮಾಗಡೆ ಸಾವೆಯಾಗಿ ಪೋಗಿನ್ನೆನೆ ರೌದ್ರಶಾಪಪರಿತಾಪವಿಳಾಪದೊಳಾ ಮಹೀಶ್ವರಂ: ಪಂಪಭಾ, ೧. ೧೧೨)
ಒಱಲ್
[ಕ್ರಿ] ಆಸೆಪಡು (ಪುಸಿಯ ಪರಾಂಗನಾರತದ ಮದ್ಯದ ಮಾಂಸದ ಮೆಯೊಱಲ್ದ ದುರ್ವ್ಯಸನಿಯ ಮಾಡಿದೋದೆ: ಆದಿಪು, ೨. ೧೧); [ಕ್ರಿ] ಪ್ರೀತಿಸು (ಲಲಿತವಧೂರಮ್ಯಸಂಗೀತದಿಂ ರಂಜಿಸೆ ಪೀರ್ದಂ ದಿವ್ಯಭೋಗಾಮೃತರಸಮಂ ಒಱಲ್ದು ಅೞ್ತಿಯಿಂದಚ್ಯುತೇಂದ್ರಂ: ಆದಿಪು, ೬. ೧೮)
ಒಱಲ್ಚು
[ಕ್ರಿ] ಧ್ವನಿಮಾಡು (ಮಣಿಕಂಠನಾದಂ ಒಱಲ್ಚೆ ಸೇಸೆಯಂ ತಳಿದರ್ ಅನಂಗಜಂಗಮಲತಾಲಲಿತಾಂಗಿಯರ್: ಪಂಪಭಾ, ೪. ೫೯
ಒಱವು
[ನಾ] ಊಟೆ, ಒರತೆ (ಮೇರುವ ಪೊಂ ಕಲ್ಪಾಂಘ್ರಿಪದ ಆರವೆ ರಸದ ಒಱವು ಪರುಸವೇದಿಯ ಕಣಿ ಭಂಡಾರದೊಳ್ ಉಂಟೆನೆ ಕುಡುವ ಅನಿವಾರಿತ ದಾನಕ್ಕೆ ಪೋಲ್ವರಾರ್ ಬದ್ದೆಗನಂ: ಪಂಪಭಾ, ೧. ೨೮)
ಒಱೆ
[ಕ್ರಿ] ಸ್ರವಿಸು (ಸೋಂಕಿನೊಳ್ ಒಱೆವ ಇಂದುಕಾಂತ ಮಣಿಪುತ್ರಿಕೆಯಂದದಿಂ ಒಪ್ಪಿ ತೋಱಿದಳ್: ಆದಿಪು, ೪. ೪೯); [ಕ್ರಿ] ಸುರಿ, ಜಿನುಗು (ಅತಿವಿಶದವಿಶಾಲ ಊರುಕ್ಷತದಿಂದೊಱೆದನಿತು ಜಡೆಯುಮಂ ನಾಂದಿ ಮನಃಕ್ಷತದೊಡನೆ ಎೞ್ಚರಿಸಿದುದು ಉತ್ಥಿತಮಾ ವಂದಸ್ರಮಿಶ್ರಗಂಧಂ ಮುನಿಯಂ: ಪಂಪಭಾ, ೧. ೧೦೫); [ನಾ] ಕತ್ತಿಯ ಕವಚ (ಪಿಡಿಕೆಯ್ ತೀವಿದ ಕೂರ್ಗಣೆ ಮಡಕಾಲ್ವರಂ ಅಲೆವ ಕಚ್ಚೆ ನಿಡಿಯಸಿಯ ಒಱೆ ಕರ್ಪಿಡಿದ ಪಣೆಕಟ್ಟು ಕೆಯ್ಪಡೆ ಬೆಡಂಗನೊಳಕೊಳೆ ಧನುರ್ಧರರ್ ಪೆಣೆದೆಚ್ಚರ್: ಪಂಪಭಾ, ೧೦. ೭೧)
ಒಱೆದುರ್ಚು
[ಕ್ರಿ] ಒಱೆ, ಸ್ರವಿಸು (ಮಹೋರಗನೆಯ್ದೆ ಪಲ್ಗಳರ್ದೊಡೆ ಕಿಡಿವೀೞೆ ನೆತ್ತರ್ ಒಱೆದುರ್ಚುಗೆ ಕೊಂಡುದು ತತ್ಪಪಸ್ವಿಯಂ: ಆದಿಪು, ೨. ೪೦)
ಒಲವರ
[ನಾ] ಪ್ರವೃತ್ತಿ, ಒಲವು (ಮೃಗದ ಒಲವರಮುಮಂ ಅರಸನ ಬಗೆಯುಮಂ ಅಱಿದು ಅಲಸದೆ ಎಳಸಿ ಓಲಗಿಸಲ್ ನೆಟ್ಟನೆ ಬಲ್ಲನುಳ್ಳೊಡೆ ಅವನಲ್ತೆ ಗುಣಾರ್ಣವ ಬೇಂಟೆಕಾಱಂ ಓಲಗಕಾಱಂ: ಪಂಪಭಾ, ೫. ೪೨); [ನಾ] ಪ್ರೀತಿ, ಗೌರವ (ಮನದೆ ಒಲವರಂ ಉಳ್ಳೊಡೆ ಕುಡು ಮನೆಯೊಳ್ ಹರಿಗೆ ಅಗ್ರಪೂಜೆಯಂ: ಪಂಪಭಾ, ೬. ೪೫)
ಒಲವು
[ನಾ] ಗಂಡುಹೆಣ್ಣಿನ ಪ್ರೇಮ (ಒರ್ಮೆಯುಂ ಅವಚಱದ ಒಲವಿನ ಕೂರ್ಮೆಯ ತತ್ಪತಿಗಂ ಆಕೆಗಂ ನಿಜವಂಶಕ್ಕಾರ್ಮಮೆನೆ ಪುಟ್ಟಿದರ್ ಜಯವರ್ಮ ಶ್ರೀವರ್ಮರೆಮಬರಿರ್ವರ್ ತನಯರ್: ಆದಿಪು, ೨. ೩೭)
ಒಲಿ
[ಕ್ರಿ] ಒಲ್, ಆಸೆಪಡು (ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ ನೀಂ ಒಲಿದಲ್ಲಿ ಪುಟ್ಟಿ ಬಳೆದಿರೊ ಕುಲಮಿರ್ದುದೆ ಕೊಡದೊಳಂ ಶರಸ್ತಂಬದೊಳಂ: ಪಂಪಭಾ, ೨. ೮೩)
ಒಲಿಸು
[ಕ್ರಿ] ಪ್ರೀತಿಸುವಂತೆ ಮಾಡು (ಒಲಿಸುವ ರೂಪು ಗಾಡಿಯೊಳೊಡಂಬಡೆ ಗಾಡಿ ವಿಳಾಸದೇೞ್ಗೆಯೊಳ್ ನೆಲಸೆ: ಆದಿಪು, ೧. ೭೨)
ಒಲೆ
[ಕ್ರಿ] ಓಲಾಡು, ತೂಗಾಡು (ಆಂತು ಒಲೆಯದಿರ್ ಉರ್ಕಿನೊಳ್ ನುಡಿವೆ ಈ ಕರಿ ಸೂಕರಿಯಲ್ತೆ: ಪಂಪಭಾ, ೧೧. ೭೩)
ಒಲೆಗಲ್
[ನಾ] ಒಲೆಯ ಕಲ್ಲು (ಬೀಡಿಂಗೆ ಬೀಡುವಿಡಲ್ ನೆಲನುಂ ಆನೆಗಂಬಕ್ಕೆ ಒಲೆಗಲ್ಗಳ್ಗೆ ಬೆಟ್ಟುಗಳುಂ ಗುಡಿಯ ಗೂಂಟಕ್ಕೆ ಬಲ್ಲಡವಿಗಳುಂ: ಪಂಪಭಾ, ೯. ೧೦೪ ವ)
ಒಲ್
[ಕ್ರಿ] ಸಂಭ್ರಮದಿಂದ ಕೂಡು (ತಳಿರ್ಗಳಸಂ ಮುಕುಂದ ರವಂ ಎತ್ತಿದ ಮುತ್ತಿನ ಮಂಟಪಂ ಮನಂಗೊಳಿಪ ವಿತಾನಪಙ್ಕ್ತಿ ಪಸುರ್ವಂದಲೊಳ್ ಒಲ್ದು ಎಡೆಯಾಡುವ ಎಯ್ದೆಯರ್: ಪಂಪಭಾ, ೧. ೧೦೭); [ಕ್ರಿ] ಬಯಸು (ನೀನಾರ್ಗೆ ಏಕೆ ಬಂದೆಯೆಂದೊಡೆ ಎರಡೞಿಯದೊಲ್ದು ನಿನ್ನೊಳೆರಡಂ ನುಡಿಯಲಾಗದೆನಗೆ ಬನಂ ಹಿಡಿಂಬವನಂ ಎಂಬುದು: ಪಂಪಭಾ, ೩. ೧೪ ವ); [ಕ್ರಿ] ಇಷ್ಟಪಡು (ಈ ಕೂಸುಗಳ್ ಯೋಗ್ಯರಪ್ಪುದಂ ಇನ್ನು ಒಲ್ವೊಡೆ ಶಸ್ತ್ರವಿದ್ಯೆಗೊವಜಂ ನೀನಾಗು ಕುಂಭೋದ್ಭವಾ: ಪಂಪಭಾ, ೨. ೫೩); [ಕ್ರಿ] ಮೋಹಗೊಳ್ಳು, ಪ್ರೀತಿಸು (ಸುಯೋಧನನ ರಾಜ್ಯಮಂ ಒಲ್ವೊಡಂ ಶಲ್ಯನನೆ ಸಾರಥಿಮಾಡಿ ಕಾದುವುದು ಎಂದು ಪರಸಿ ಪೋಗೆಂಬುದುಂ: ಪಂಪಭಾ, ೧೨. ೫೯ ವ)
ಒಲ್ದನಿಲ್ಲ
[ನಾ] ಇಷ್ಟಪಟ್ಟವನಾಗಲಿಲ್ಲ, ಇಷ್ಟಪಡಲಿಲ್ಲ (ನಲ್ಲಳ ರತಿಶ್ರಮವಿಶ್ಲಥಕೇಶಪಾಶದೊಳ್ ಸವಸವನಾಗಿ ತೋಱಿದಪುದು ಎಂಬುದೆ ಕಾರಣದಿಂದಂ ಗುಣಾರ್ಣವಂ ಇಡಲ್ ಒಲ್ದನಿಲ್ಲ: ಪಂಪಭಾ, ೫. ೫೧)
ಒಲ್ಲಂ
[ಕ್ರಿ] (√ಒಲ್) ಪ್ರೀತಿಸನು (ಅಸಿಯಳಂ ಒಲ್ಗುಂ ಒಲ್ಲಂ ಅಣಂ ಎನ್ನದೆ ರೂಪನೆ ನೋಡಿ ಕೂಡಲಾಟಿಸಿ ಪರಿದೆಯ್ದಿ: ಪಂಪಭಾ, ೫. ೧೩)
ಒಲ್ಲಣಿಗೆ
[ನಾ] ಒದ್ದೆಯಾದ ಬಟ್ಟೆ, ಸ್ನಾನವಸ್ತ್ರ (ಧರಾತಳಮಂ ಒಲ್ಲಣಿಗೆಯಂ ಪಿೞಿವಂತೆ ತಳಂ ಎಯ್ದೆ ಸುರುಳ್ವಿನಂ ಮುಯ್ಯೇೞು ಸೂೞ್ ಪಿೞಿದ ಸಾಹಸಮುಂ: ಪಂಪಭಾ, ೧೨. ೪೮ ವ)
ಒಲ್ಲದೆ