भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒಲ್ಲನುಲಿ

[ಕ್ರಿ] [ಒಲ್ಲನೆ+ಉಲಿ] ಕಿರಿಚಿಕೊ (ನೆಲನದಿರೆ ಬರ್ಪ ವಿಕ್ರಮಾರ್ಜುನನ ಬರವಿಂಗೆ ಕುರುಬಲಮೆಲ್ಲಂ ಮೆಲ್ಲನುಲಿದೋಡಿ ಸುರಾಪಗಾನಂದನನ ಮಱೆಯಂ ಪೊಕ್ಕಾಗಳ್: ಪಂಪಭಾ, ೧೧. ೧೨ ವ)

ಒಲ್ಲನೆ

[ಅ] ಒಪ್ಪನೆ, ಇಷ್ಟಪಡದೆ (ಒಂದೆ ಸರಲಿಂದಂ ಅವನೆರ್ದೆಯಂ ದೊಕ್ಕನೆ ತಿಣ್ಣಂ ಎಚ್ಚು ಕೊಲಲೊಲ್ಲನೆ: ಪಂಪಭಾ, ೧೧. ೯೬)

ಒವಜ

[ನಾ] [ಉಪಾಧ್ಯಾಯ] ಗುರು (ಈ ಕೂಸುಗಳ್ ಯೋಗ್ಯರಪ್ಪುದಂ ಇನ್ನೊಲ್ವೊಡೆ ಶಸ್ತ್ರವಿದ್ಯೆಗೆ ಒವಜಂ ನೀನಾಗು ಕುಂಭೋದ್ಭವಾ: ಪಂಪಭಾ, ೨. ೫೩)

ಒವಜುಗೆಯ್

[ಕ್ರಿ] ಪಾಠ ಹೇಳಿಕೊಡು (ಬವರದೊಳೇಂ ಬಲ್ಲಂ ಕರಂ ಒವಜುಗೆಯಲ್ ಪೆಱರ್ಗೆ ಕರಮೆ ತನಗೆ ಅಱೆಯಂ ಅದೆಂತುವೊ ನುಡಿ ತಪ್ಪದು ಕಮ್ಮರಿಯೊವಜಂ ಬಿಲ್ಲೊವಜಂ ಎಂಬುದು ಮಾಡುವೆನೇ: ಪಂಪಭಾ, ೧೨. ೩)

ಒಸಗೆ

[ನಾ] ಉತ್ಸವ (ನಿಶಾವಸಾನಸಮಯದೊಳ್ ತತ್ಪುರ ಬಹಿರ್ಭಾಗಸ್ಥಿತ ಮನೋಹರೋದ್ಯಾನಾಸೀನ ಯಶೋಧರ ಗುರುಗಳ ಕೇವಳಜ್ಞಾನೋತ್ಪತ್ತಿಯೊಸಗೆಗೆ: ಆದಿಪು, ೩. ೨೧ ವ); [ನಾ] ಶುಭ, ಮಂಗಳಕಾರ್ಯ (ಖರಕರಸಮಪ್ರಭಂ ಚಕ್ರರತ್ನಮೊಡವುಟ್ಟೆ ಪುಟ್ಟಿದೆರಡು ಒಸಗೆಯೋಳಂ: ಆದಿಪು, ೩. ೨೭); [ನಾ] ಸತ್ಕಾರ ಸಮಾರಂಭ (ಆರಾಧ್ಯ ಗೃಹಸ್ಥರಾದರೊಳಮಿನ್ನಾರ್ ತಕ್ಕರ್ ಆರೈವೆನೊಯ್ಯನೆ ಉಪಾಯಾಂತರದಿಂದಂ ಎಂದು ಒಸಗೆಯಂ ತದ್ವ್ಯಾಜದಿಂ ಮಾಡಿದಂ: ಆದಿಪು, ೧೫. ೬); [ನಾ] ಸಮಾರಂಭ, ಉತ್ಸವ (ಪಾಂಡುರಾಜಂಗೆ ಧೃತರಾಷ್ಟ್ರನಂಗಹೀನನೆಂದು ವಿವಾಹದೊಸಗೆಯೊಡನೆ ಪಟ್ಟಬಂಧದೊಸಗೆಯಂ ಮಾಡಿ ನೆಲನನಾಳಿಸೆ: ಪಂಪಭಾ, ೧. ೧೦೭ ವ); [ನಾ] ಸಂತೋಷ (ಮಕ್ಕಳ್ ಒಸಗೆಯಂ ಈವುದು ನಿನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ: ಪಂಪಭಾ, ೧. ೧೩೯); [ನಾ] ಕಾಣಿಕೆ (ನಿನಗೆ ಒಸಗೆ ಇದೇನಂ ಕುಡುವುದೆಂದೊಡೆ ಎಂದಳ್ ಮಕ್ಕಳೊಸಗೆಯನೆನಗೀವುದು: ಪಂಪಭಾ, ೧. ೧೩೯); [ನಾ] ಶುಭ ಸಂದೇಶ (ಧನಂಜಯನ ಬರವಿನ ಸಂತಸದೊಸಗೆ ಪಡೆಮಾತಂ ಮುಂದುವರಿದಱಿಪುವಂತೆ: ಪಂಪಭಾ, ೪. ೩೨ ವ); [ನಾ] ಪ್ರೀತಿ (ದ್ರುಪದನಂದನಂಗೆ ಬೞಿಯನಟ್ಟಿ ಬರಿಸಿ ಪಿರಿದುಂ ಒಸಗೆವೆರಸು ತಾನೆ ವೀರಪಟ್ಟಮಂ ಕಟ್ಟಿ: ಪಂಪಭಾ, ೧೧. ೫ ವ)

ಒಸಗೆಮರುಳ್ಗೊಳ್

[ಕ್ರಿ] ಸಂತೋಷದಿಂದ ಹುಚ್ಚೇರು (ಪರಿಜನಮುಂ ಪುರಜನಮುಂ ಒಸಗೆಮರುಳ್ಗೊಂಡು ನಿರ್ಭರಕ್ರೀಡಾ ರಸಪರವಶರಾದಾಗಳ್: ಆದಿಪು, ೭. ೧೧೨ ವ)

ಒಸಗೆವರ್

[ಕ್ರಿ] ಮಂಗಳವುಂಟಾಗು (ಭುವನಕ್ಕೆಲ್ಲಂ ಒಸಗೆವರ್ಪಂತೆ: ಬಂದ ವಸಂತದೊಳ್: ಪಂಪಭಾ, ೫. ೩೫ ವ)

ಒಸಗೆವಾತು

[ನಾ] ಸಂತೋಷ ಸಮಾಚಾರ (ಪಾಂಡವರಂ ಇಕ್ಕಿದ ಒಸಗೆವಾತುಗಳಂ ಈಗಳೆ ಕೇಳಿಸುವೆಂ: ಪಂಪಭಾ, ೧೩. ೧೦೫ ವ)

ಒಸರ್

[ಕ್ರಿ] ಜಿನುಗು (ಒಸರ್ದಪುದು ಅಮರ್ದೆನೆ ಪಾಲ್ಮೞೆ ಪಸರಿಸಿತೆನೆ ಜಗಮನೊಡನೆ ಕಪ್ಪುರದ ರಜಂ ಮುಸುಕಿದುದೆನೆ: ಆದಿಪು, ೧೨. ೧೧)

ಒಸೆ

[ಕ್ರಿ] ಹಿಗ್ಗು (ಸಹಜಭಕ್ತಿಯ ಭರದಿಂ ಸುರಪತಿಯ ಬೆಸೆದಿಂ ಒಸೆದಂ ಧನದಂ: ಆದಿಪು, ೭. ೩); [ಕ್ರಿ] ಸಂತೋಷಿಸು (ಕರಂ ಮೇಳಿಸಿದಪ್ಪುದೆನ್ನೆರ್ದೆಯಂ ಎಂದು ಬೊದಿಲ್ಲನೆ ಪಾಯ್ದು ನೀರೊಳಾ ಬಾಳನನಾದಮಾದರದೆ ಕಂಡೊಸೆದು ನಿಧಿಗಂಡನಂತೆವೋಲ್: ಪಂಪಭಾ, ೧. ೯೬); [ಕ್ರಿ] ಪ್ರೀತಿಯಿಂದ (ಪುಟ್ಟುವುದುಂ ಧರ್ಮಮೊಡವುಟ್ಟಿದುದು ಈತನೊಳೆ ಧರ್ಮನಂಶದೊಳ್ ಈತಂ ಪುಟ್ಟಿದನೆಂದಾ ಶಿಶುಗೊಸೆದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಪೆಸರಂ: ಪಂಪಭಾ, ೧. ೧೨೨); [ಕ್ರಿ] ಪ್ರೀತಿಸು (ಬೆಸನೇಂ ಏಗೆಯ್ವುದೊ ನಿನಗೊಸೆದೇನಂ ಕುಡುವುದು ಎಂದೊಡೆ ಅವಳ್ ಮಕ್ಕಳ ಒಸಗೆಯನೆನಗೀವುದು ನಿನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ: ಪಂಪಭಾ, ೧. ೧೩೯); [ಕ್ರಿ] ಇಷ್ಟಪಡು (ತುಂಬಿದ ರಕ್ತತೆಯಿಂ ನಿಜಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಗೆಟ್ಟಂಬೋಲ್ ತೇಜಂ ಮಸುಳ್ವಿನಂ ಅಂಬರಮಂ ಬಿಸುಟಂ ಆಗಳಂಬುಜಮಿತ್ರಂ: ಪಂಪಭಾ, ೩. ೨೩); [ಕ್ರಿ] ಅನುಗ್ರಹಿಸು (ಬೀರವಟ್ಟಮಂ ಆನಿರೆ ನೀಂ ಈ ಸೂತಸುತಂಗೆ ಎಡೆಗೊಂಡು ಕೈವಾರದಿಂದ ಒಸೆದು ಇತ್ತೊಡಂ ಏನಾಯ್ತು: ಪಂಪಭಾ, ೧೨. ೪೩); [ನಾ] ಅನುರಾಗ ತೋರು (ಜಯವಧು ಕೂರ್ತು ಒಸೆದಿರ್ಕುಂ ಮಾವ ನಿಮ್ಮ ದಯೆಯಿಂದೆಮ್ಮಂ: ಪಂಪಭಾ, ೧೨. ೯೦)

ಒಳಂ

ಇದೆ (ಪ್ರಿಯಸತಿಯಾನನೇಂದುವೊಳಂ ಇಂದುವೊಳಂ ಬಿದಿ ಮುನ್ನಂ ಆವುದಂ ನಯದೊಳೆ ನೋಡಿ ಮಾಡಿದಂ: ಪಂಪಭಾ, ೪. ೭೦)

ಒಳಕೊಂಡಿರ್

[ಕ್ರಿ] ತನ್ನ ಪಾಡಿಗೆ ತಾನಿರು (ಏನನೆಂಬೆಂ ಅಂದೊಳಕೊಂಡಿರ್ಪುದಱಿಂದಂ ಆದುದೆನಗೀ ವಾಚಂಯಮಂ ಸಂಯಮಂ: ಆದಿಪು, ೩. ೪೧)

ಒಳಕೊಳ್

[ಕ್ರಿ] ಸಹಿಸಿಕೊ (ಬಂದು ನಲ್ಲಂ ಮುನಿಸನೊಳಕೊಂಡು ಮುಖಮಂ ಮುಗುಳ್ನಗೆವೆರಸು ನುಡಿದು ಗೆಂಟಾದಂ: ಆದಿಪು, ೧೨. ೨೯ ವ); [ಕ್ರಿ] ಸೇರಿಸಿಕೊ (ಪತಾಕೆಯೊಂದು ವಿಭ್ರಮಮನೆ ಪೋಲೆ ಪುರ್ವಿನ ಪೊಡರ್ಪು ಒಳಕೊಂಡುದವಳ್ಗೆ ಗರ್ಭಚಿಹ್ನಮೆ ಗಳ ಗರ್ಭದರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ: ಪಂಪಭಾ, ೧. ೧೨೦); [ಕ್ರಿ] ಒಗ್ಗೂಡು, ಸೇರು (ಪೊನಲ್ಗಳ ಕೆಂಪು ಪಸುರ್ಪು ಕರ್ಪು ಬೆಳ್ಪು ಒಳಕೊಳೆ ಶಕ್ರಕಾರ್ಮುಕವಿಳಾಸಮಂ ಏನೆರ್ದೆಗೊಂಡು ಬೇಟದತ್ತಳಗಮಂ ಉಂಟುಮಾಡಿದುದೋ ಕಾಮನ ಕಾರ್ಮುಕದಂತೆ ಕಾರ್ಮುಕಂ: ಪಂಪಭಾ, ೭. ೨೫); [ಕ್ರಿ] ಸ್ವೀಕರಿಸು (ನೀಂ ತಲೆವೀಸದೆ ಉರ್ವರಾಶ್ರೀಯನಿದಾಗದೆನ್ನದೆ ಒಳಕೊಳ್: ಪಂಪಭಾ, ೧೪. ೧೭)

ಒಳಗಾಗು

[ಕ್ರಿ] ಪಕ್ಕಾಗು (ವಿತ್ರಸ್ತಕರ್ಮರಿಪುವ ಜಗತ್ತ್ರಯದೀಪನ ಕಾಣ್ಕೆಗೊಳಗಾದುದು ಲೋಕತ್ರಯಂ: ಆದಿಪು, ೧. ೪೭); [ಕ್ರಿ] ಸಿಕ್ಕಿಹಾಕಿಕೊ (ಅವಚಱದೊಂದೆ ಪದ್ಮದೊಳೆ ನೇಲ್ದು ಒಳಗಾದ ಅಳಿಗೆ ಎಮ್ಮ ವೃತ್ತಿ ಸಂಭವಿಸದು: ಆದಿಪು, ೧೧. ೧೩೦)

ಒಳಗು

[ನಾ] ಒಳಗಿನದು, ತಿರುಳು (ಪೊಱಗಣ್ಗೆ ಸಯ್ದರೆನೆ ತಾವೊಳಗಂ ತವೆ ತೋಡಿ ತಿಂದು ರಕ್ಕಸಿಯರ ಕಂಡ ಕುಂಬಳದವೊಲಾಗಿರೆ: ಪಂಪಭಾ, ೯. ೪೮); [ನಾ] ಮರ್ಮ, ಮನಸ್ಸು (ಒಗೆದ ಸುತಶೋಕದಿಂದ ಆವಗೆಯಂತೆ ಒಳಗು ಉರಿಯೆ ಭೋಂಕನೆ ಎರ್ದೆ ತೆಱೆಯಲ್: ಪಂಪಭಾ, ೧೨. ೨೮); [ನಾ] ರಹಸ್ಯ (ಒಳಗಱಿಯದೆ ಕೌರವಬಳಜಳನಿಧಿ ಬೊಬ್ಬಿಱಿದು ಮೇಲುದಂ ಬೀಸಿದೊಡೆ: ಪಂಪಭಾ, ೧೨. ೨೦೧)

ಒಳಗುಮಾಡು

[ಕ್ರಿ] ಸೇರಿಸಿಕೊ (ಸಲೆ ಪೂತ ಚೂತಲತೆಯಂ ಒಳಗುಮಾಡಿ ಬಳಸಿದ ಮಾಧವೀಲತೆಯ ಬಳ್ಳಿವಳ್ಳಿಯ ಬಳ್ಳಿಗಾವಣದ ಮುಂದೆ: ಆದಿಪು, ೧೧. ೭೩ ವ)

ಒಳನ್

ಇದ್ದಾನೆ (ಕುಳಗಿರಿಯಂ ಸರೋಜನಿಲಯಂ ಮನುಜಾಕೃತಿಯಾಗೆ ಮಾಡಿದಂತು ಒಳನ್ ಎನಿಪಂತುಟಪ್ಪ ಪೊಸಬಣ್ಣದೊಳ್: ಪಂಪಭಾ, ೨. ೩೮)

ಒಳಪೊಯ್

[ಕ್ರಿ] ವಶಪಡಿಸಿಕೊ, ಒಳಗೆ ಹಾಕಿಕೊ (ಒಳಪೊಯ್ಯಲ್ ನಿನ್ನನಾ ಕನ್ನೆಯ ತುಱುಗೆಮೆಗಳ್ ಸುತ್ತಲುಂ ನಿನ್ನನಾ ಕೋಮಳೆಯಂದಂಬೆತ್ತ ಸುತ್ತುಂಗುರುಳ್ ಅಳವಡಿಸಲ್: ಆದಿಪು, ೪. ೨೧)

ಒಳರೆನಿಸೆಂ

ಇದ್ದಾರೆ ಎನ್ನಿಸೆನು, ಎಂದರೆ ಉಳಿಸುವುದಿಲ್ಲ (ಮುಳಿದಿಂತು ಬೆಸಸೆ ನಿಮ್ಮಡಿಯೊಳೆ ಮಾರ್ಕೊಂಡು ಎಂತು ನುಡಿವೆಂ ಉಸಿರೆಂ ನಿಮ್ಮಂ ಮುಳಿಯಿಸಿದ ಸುರಾಸುರರುಮಂ ಒಳರೆನಿಸೆಂ: ಪಂಪಭಾ, ೧೨. ೧೩೧)

ಒಳರೇ

ಇದ್ದಾರೆಯೇ, ಇಲ್ಲ (ದಿವಿಜರ್ ವಾಯುಪಥದೊಳ್ ಶಿತಾಸ್ತ್ರಂಗಳಂ ಪೊಂಕಂಗಿಡಿಸೆ ಸುಗಿದಂ ಭಾರ್ಗವಂ ಇದೇಂ ಪ್ರತಿಜ್ಞಾಗಾಂಗೇಯಂಗೆ ಅದಿರದೆ ಇದಿರ್ ನಿಲ್ವನ್ನರೊಳರೇ: ಪಂಪಭಾ, ೧. ೮೦)

Search Dictionaries

Loading Results

Follow Us :   
  Download Bharatavani App
  Bharatavani Windows App