भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಓದು

[ಕ್ರಿ] ಲೆಕ್ಕಹಾಕು (ಕರಣಂ ರೇಚಕಂ ಅಂಗಹಾರಂ ಇನಿತೆಂದು ಓದುತ್ತುಂ ಇರ್ಪ ಓದು ಅದತ್ತಿರಲಿ ಈ ನಾಟ್ಯರಸಂ ಸಮಸ್ತ ಸುರವೃಂದಾಧೀಶನಿಂದಂ ಪೊನಲ್ವರಿದತ್ತು: ಆದಿಪು, ೭. ೧೨೦); [ಕ್ರಿ] ಪಠಿಸು, ಹೇಳು (ಅಂತು ಕಂಡು ಮುನಿಕುಮಾರರೋದುವ ವೇದನಿನಾದದಿಂ ವಿಗತನಿದ್ರೆಯಾಗಿ ಪಾಂಡುರಾಜಂಗಂ ಅಲ್ಲಿಯ ಮುನಿಜನಂಗಳ್ಗಂ ಅಱಿಪಿದೊಡೆ ಅವರಾ ಕನಸುಗಳ್ಗೆ ಸಂತೋಷಂಬಟ್ಟು: ಪಂಪಭಾ, ೧. ೧೪೦ ವ); [ನಾ] ವಿದ್ಯೆ (ಉಳ್ಳ ಓದುಗಳೊಳಗೆ ಎನಿತಱಿವುಳ್ಳರ್ಗಂ ತಿಳಿಪಲರಿಯದೆನಿಪ ಎಡೆಗಳುಮಂ ತೆಳ್ಳಿಗಿರೆ ತಿಳಿಪುಗುಂ ಬೆಸಗೊಳ್ಳ ಗುಣಾರ್ಣವನ ಲೆಕ್ಕಮಂ ಪೊಕ್ಕಮುಮಂ: ಪಂಪಭಾ, ೨. ೩೫); [ಕ್ರಿ] ವಿದ್ಯೆ ಕಲಿ (ನಾಮೆಲ್ಲಂ ಒಂದೆ ಗರಡಿಯೊಳ್ ಓದಿದ ಮಾನಸರೆವು: ಪಂಪಭಾ, ೯. ೪೮ ವ)

ಓಪ

[ನಾ] ಪ್ರಿಯಕರ, ಪ್ರಣಯಿ (ನಲ್ಮೆಯೊಳೞ್ತ ಕಣ್ಣ ನೀರ್ಗಳ ಪೊನಲಿಂದೆ ಕರ್ಚಿ ಕಳೆದಂತಿರೆ ಪೋದುದು ಕೋಪಮೋಪನಾ: ಆದಿಪು,

ಓಪರ್

ಪ್ರಿಯ ಪ್ರೇಯಸಿಯರು (ಬಿಡದೆ ಪೊಗೆ ಸುತ್ತೆ ತೋಳಂ ಸಡಿಲಿಸದೆ ಆ ಪ್ರಾಣವಲ್ಲಭರ್ ಪ್ರಾಣಮಂ ಅಂದು ಒಡಗಳೆದರ್ ಓಪರ್ ಓಪರೊಳ್ ಒಡಸಾಯಲ್ ಪಡೆದರ್ ಇನ್ನವೇಂ ಸೈಪು ಒಳವೇ: ಆದಿಪು, ೫. ೨೪)

ಓಪಳ್

[ನಾ] ನಲ್ಲೆ (ಅದಂ ಒಂದು ಕದಳೀಪತ್ರದೊಳ್ ಪುದಿದು ತನ್ನ ನಡಪಿದ ಗಿಳಿಯ ಕೈಯೊಳ್ ಓಪಳಲ್ಲಿಗೆ ಅಟ್ಟಿದೊಡೆ: ಪಂಪಭಾ, ೧. ೬೮ ವ)

ಓರಡಿ

[ನಾ] ಒಂದು ಹೆಜ್ಜೆ (ಕಡಕುಂ ಪೆಟ್ಟೆಯುಂ ಒತ್ತೆ ಮೆಲ್ಲಡಿಗಳಂ ಬಳ್ಕುತ್ತುಂ ಅಳ್ಕುತ್ತುಂ ಓರಡಿಗೆ ಒರ್ಮೊರ್ಮೆ ಕುಳುತ್ತುಂ ಏೞುತಿರೆ: ಪಂಪಭಾ, ೩. ೯)

ಓರಣ

[ನಾ] ಕ್ರಮ (ತೆಗೆನೆಱೆದು ಎಚ್ಚೆಚ್ಚು ಓರಣದೊಳ್ ಚೇಕಿತ್ಸನಂ ಆರುಂ ಅಗರ್ವಿಸೆ ಘಟೋಧ್ಭವಂ ತಱಿದಾರ್ದಂ: ಪಂಪಭಾ, ೧೧. ೬೦)

ಓರಂತೆ

[ಅ] ತಕ್ಕನಾಗುವಂತೆ (ಕಾಮದೇವನಾಸ್ಥಾನಮೆನಿಸಲಿದು ಓರಂತೆ ನೆರೆದುದೆನೆ ಜನಸಮೂಹಂ: ಆದಿಪು, ೪. ೩೦ ವ); [ಅ] ಒಂದೇ ಸಮನಾಗಿ (ಚಿಂತಾಶೋಕವಿಷಾದ ಭ್ರಾಂತಿಸಮುದ್ಭೂತ ದುಃಖದಿಂ ನರಕದೊಳ್ ಓರಂತೆ ವಲಂ ಮಾನಸಗತಿ: ಆದಿಪು, ೯. ೪೯)

ಓರನ್ನರ್

[ನಾ] ಒಂದೇ ಬಗೆಯವರು, ಸಮಾನರು (ಎನ್ನನೆ ನಚ್ಚಿದಂ ಅನುವರಕೆ ಎನ್ನನೆ ಪೂಣಿಸಿದಂ ಎನಗೆ ಎರೞ್ತಂಡಮುಂ ಓರನ್ನರೆ: ಪಂಪಭಾ, ೧೦. ೧೨)

ಓರನ್ನವು

[ನಾ] ಒಂದೇ ಪ್ರಮಾಣದವು (ವಾರಾಶಿಯೊಳಿನ್ನವು ಮುತ್ತೋರನ್ನವು ಪಡೆಯಲಾಗವತಿತರಳತರತ್ತಾರಾಹಾರಂ: ಆದಿಪು, ೧೨. ೧೧೮)

ಓರೊಂದು

[ನಾ] ಒಂದೊಂದು (ಪದಿನಾಲ್ಕುಮಂ ಓರೊಂದನೆ ತೋಱೆ ನಿಜಾದರದಿಂ ಭರತೇಶ್ವರಂಗೆ ದಿವಿಜಂ ಕೊಟ್ಟಂ; ಆದಿಪು, ೧೩. ೩೧)

ಓರೊರ್ಮೆ

[ಅ] ಒಂದೊಂದು ಬಾರಿ (ಪೆಸರ್ಗೊಂಡು ಇಂದ್ರನರೇಂದ್ರವಂದ್ಯನನೊಱಲ್ದೆತ್ತಾನುಂ ಓರೊರ್ಮೆ ಚಿಂತಿಸಿದೊಂಗಂ ಪವಣಿಲ್ಲ ಪುಣ್ಯಂ: ಆದಿಪು, ೧. ೩೭)

ಓಲಗ

[ನಾ] [ಅವಲೋಕ] ರಾಜಸೇವೆ (ಈ ಭವಗೆಡಿಸುವ ಓಲಗಕ್ಕೆ ಅಭವ ಬೇಸಱೆಂ ಪೋಕೆ ಪೋ ಭವಂ ಭವದುಪಾಂತದಲ್ಲಿಯೆ ಮನೋಭವಧ್ವಂಸಕಾ: ಆದಿಪು, ೧೩. ೮೭); [ನಾ] ರಾಜಸಭೆ (ಅಂತು ಪಸೆದು ಅನ್ನವಾಸದ ಓಲಗದೊಳಿರ್ದನಾಗಳ್ ಹರಿಗಂ: ಪಂಪಭಾ, ೩. ೮೦)

ಓಲಗಕಾಱ

[ನಾ] ಸೇವಕ (ಮೃಗದ ಒಲವರಮುಮಂ ಅರಸನ ಬಗೆಯುಮಂ ಅಱಿದು ಅಲಸದೆ ಎಳಸಿ ಓಲಗಿಸಲ್ ನೆಟ್ಟನೆ ಬಲ್ಲನುಳ್ಳೊಡೆ ಅವನಲ್ತೆ ಗುಣಾರ್ಣವ ಬೇಂಟೆಕಾಱಂ ಓಲಗಕಾಱಂ: ಪಂಪಭಾ, ೫. ೪೨)

ಓಲಗಂಗುಡು

[ಕ್ರಿ] ಸಮಾಲೋಚನೆ ನಡೆಸು (ವಿದ್ವಿಷ್ಟವಿದ್ರಾವಣನುಂ ಭೀಮ ಯುಧಿಷ್ಠಿರ ನಕುಳ ಸಹದೇವರುಮಯ್ವರುಂ ಬೆರಸು ಒಂದು ದಿವಸಂ ಓಲಗಂಗೊಟ್ಟಿರೆ: ಪಂಪಭಾ, ೬. ೨ ವ)

ಓಲಗವುರುಡು

[ನಾ] ರಾಜಸಭೆಯಲ್ಲಿ ನಡೆಯುವ ಸ್ಪರ್ಧೆ (ಚಲದಿನೆನ್ನೊಳೆ ಪೊಂಗಿ ಪೊಡರ್ಪುದೋರ್ಪಂ ಓಲಗವುರುಡಿಲ್ಲ ಮೆಚ್ಚವಣಿಗಿಲ್ಲ ಕರಂ ಮುಳಿಸಿಲ್ಲ ಕಾಯ್ದು ಕೆಮ್ಮಗೆ ಬೞಿಸಂದು ಕೊಂದಪಂ: ಆದಿಪು, ೧೨. ೩೩)

ಓಲಗಶಾಲೆ

[ನಾ] ರಾಜಸಭಾಂಗಣ (ಬಳ್ವಳಬಳೆದೆಳದಳಿಸುವ ಪೊಸಗೆಂದಳಿರ ಗೊಂದಳದೊಳೆ ಸಂದಣಿಸಿದಶೋಕಲತೆಯ ಓಲಗಶಾಲೆಯೊಳಗಣ ಕಪ್ಪುರವಳುಕಿನ ಜಗುಲಿಯ: ಆದಿಪು, ೧೧. ೭೩ ವ)

ಓಲಗಿಸು

[ಕ್ರಿ] ಸೇವೆಮಾಡು (ಮಗಮಗಿಪ ಜಾದಿ ಪೊಂಗೇದಗೆ ಮಲ್ಲಿಗೆಯೆಂಬ ಪಲವು ಪೂಮಾಲೆಗಂ ಬಗೆಯಱಿದು ಓಲಗಿಪುದು: ಆದಿಪು, ೫. ೩೬); [ಕ್ರಿ] ಓಲೈಸು, ವಿನಯ ವ್ಯಕ್ತಪಡಿಸು (ತನ್ನ ಪವಡಿಸುವ ಮಾಡಕ್ಕೆ ಒಡನೊಡನೋಲಗಿಸುತ್ತುಂ ಬಂದ ಪಂಡಿತರ್ಕಳುಮಂ ಉಚಿತ ಪ್ರತಿಪತ್ತಿಗಳಿಂ ವಿಸರ್ಜಿಸಿ: ಪಂಪಭಾ, ೪. ೬೯ ವ)

ಓಲಾಡು

[ಕ್ರಿ] ದೇಹವನ್ನು ಬಳುಕಾಡಿಸು (ನಂದೆ ಅಪರನಂದೆ ಅಶ್ವಿನಿ ಮಹಾನಂದೆ ಎಂಬ ತೀರ್ಥಜಲಂಗಳೊಳ್ ಓಲಾಡುತ್ತುಂ ಉದ್ವೃತ್ತ ರಿಪು ನೃಪತಿಗಳಂ ಏಸಾಡುತ್ತುಂ ಅಲ್ಲಿಂ ತಳರ್ದು: ಪಂಪಭಾ, ೪. ೧೮ ವ)

ಓಲೆ

[ನಾ] ಸಂದೇಶ (ನಿನತೊಂದೋಲೆಗೆ ತೀರ್ವುದೊಂದು ಮನೆವಾರ್ತೆಗಿದೇನೆಂದರಸ ಬಳೆಯೆ ನುಡಿದಪೆ: ಆದಿಪು, ೧೪. ೩೦); ಕಿವಿಯ ಆಭರಣ (ನೀನೆನ್ನೋಲೆಯ ಕಡಗದೞಿವನೇಂ ನೋಡಿದಪಾ: ಪಂಪಭಾ, ೧೦೧ ೧೨೩)

ಓಲೆಯ ಕಡಗದ ಅೞಿವು

ಓಲೆ ಬಳೆಗಳ ನಾಶ, ಮುತ್ತೈದೆತನದ ನಾಶ (ಅೞಿಯಲ್ ನಿನ್ನಯ ಮಯ್ದುನನಂ ಅರ್ಜುನಂ ಪೂಣ್ದಂ .. .. ಎನ್ನ ಓಲೆಯ ಕಡಗದ ಅೞಿವನೇಂ ನೋಡಿದಪಾ: ಪಂಪಭಾ, ೧೧. ೧೨೩)

Search Dictionaries

Loading Results

Follow Us :   
  Download Bharatavani App
  Bharatavani Windows App