Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಓ
[ಕ್ರಿ] ಪ್ರೀತಿಸು (ಧರಾಭರಮನಶೇಷಮಂ ನಿಜತನೂಭವರ್ಗೆ ಓವದೆ ಪಚ್ಚುಕೊಟ್ಟು: ಆದಿಪು, ೯. ೭೫); [ಕ್ರಿ] ಸಲಹು (ಆವ ಅಲರುಂ ಪಣ್ಣುಂ ಬೀತು ಓವುವು ಗಡ ಬೀಯವಲ್ಲಿ ಮಲ್ಲಿಗೆಗಳುಂ ಇಮ್ಮಾವುಗಳುಂ ಎಂದೊಡೆ ಇಂ ಪೆಱತಾವುದು ಸಂಸಾರಸಾರಸರ್ವಸ್ವಫಲಂ: ಪಂಪಭಾ, ೧. ೫೫); [ಕ್ರಿ] ಗೌರವ (ಇವರೆಮ್ಮ ಆಚಾರ್ಯರೆಂದೋವದೆ ಏರ್ವೆಸನಂ ಮಾಣದೆ ಕೈದುಗೊಳ್: ಪಂಪಭಾ, ೧. ೭೮); [ಕ್ರಿ] ಕಾಮಿಸು (ಸನ್ನತದಿಂ ರತಕ್ಕೆಳಸಿ ನಲ್ಲಲೊಳೋತು ಒಡಗೂಡಿದೆನ್ನನಿಂತು ಅನ್ನೆಯಂ ಎಚ್ಚುದರ್ಕೆ ಪೆಱತಿಲ್ಲದು ದಂಡಂ: ಪಂಪಭಾ, ೧. ೧೧೨); [ಕ್ರಿ] ಕಾಪಾಡು (ಎರ್ದೆಯೊಳ್ ತಡಮಾಡೆ ಬೇಟದುದ್ದಾನಿಯನಾನೆ ಮನ್ಮಥಮಹೀಭುಜನೋವದೆ ತೋಱಿಕೊಟ್ಟುದೊಂದಾನೆಯೆ: ಪಂಪಭಾ, ೪. ೫೮); [ಕ್ರಿ] ಉಪಚರಿಸು (ಅೞಿಯೆ ನೊಂದ ತಮ್ಮ ಅಣುಗಾಳ್ಗಳ ಕೊಂಡಾಟದಾನೆಗಳ ನಚ್ಚಿನ ಕುದುರೆಗಳ ಪುಣ್ಗಳಂ ಉಡಿಯಲುಂ ಓವಲುಂ ಮರ್ದುಬೆಜ್ಜರುಮಂ ಅಟ್ಟುತ್ತುಂ: ಪಂಪಭಾ, ೧೧. ೨ ವ)
ಓ ಓ
[ಅ] ಕಾಪಾಡಿ ಕಾಪಾಡಿ (ಆವರಿಸಿತ್ತೊ ನಭೋಂತರ್ಭೂವಿವರಮಂ ಅಮರ್ದಿನೆಸಕಂ ಎನೆ ಬಿರಯಿಗಳ್ ಓ ಓ ಇದು ಮದನನ ಸೋದನದೀವಿಗೆಯೆನೆ ತೊಳಗಿ ಬೆಳಗಿದುದು ತುಹಿನಕರಂ: ಪಂಪಭಾ, ೪. ೫೨)
ಓಕುಳಿ
[ನಾ] ಬಣ್ಣದ ನೀರು (ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಿಯೊಳ್ ಒಂದಿ ಸಾಂದಿನೊಳ್ ಕತ್ತುರಿಯೊಂದು ಕೋೞ್ಗೆಸಱೊಳ್ ಓಕುಳಿ ಚಂದನ ಗಂಧವಾರಿಯೊಳ್ ಸುತ್ತಲುಂ ಅೞ್ಕಱಂ ಪಡೆವ ಗೇಯದ ಪೆಂಪಿನ ಅಲಂಪಂ ಆರ್ಗಂ ಆರ್ತಿತ್ತುದು ಪಟ್ಟಬಂಧ ಮಹೋತ್ಸವಂ ಆ ಪಡೆಮೆಚ್ಚೆ ಗಂಡನಾ: ಪಂಪಭಾ, ೧೪. ೨೦)
ಓಗಡಿಸು
[ಕ್ರಿ] [ಓಗಡ+ಇಸು; ಓಗಡ<(ಪ್ರಾ) ಓಕ್ಕಡ್ಢ< (ಸಂ) ಅಪಕೃಷ್ಟ] ಹಾಳಾಗು (ಮೂರ್ಖಜಡಜನಾರಣ್ಯದೊಳ್ ಇಂಪು ಓಗಡಿಸಿದ ಕವಿಶಬ್ದಮದು ಏಗೆಯ್ದುದು ಅರಣ್ಯರುದಿತಂ ಬಗೆವಾಗಳ್: ಆದಿಪು, ೧. ೨೩); [ಕ್ರಿ] ಬೇಸರ ತೋರು (ಪೂಮಾಲೆಯಂ ಓಗಡಿಸದೆ ಕುಡುವಮರಿ ಕಲ್ಪಲತೆಯಂ ಪೋಲ್ತಳ್: ಆದಿಪು, ೭. ೧೧); [ಕ್ರಿ] ತಡೆದುಕೊ (ಅಗಲ್ವೆಡೆಯೊಳ್ ಇನ್ನಿರೆನೆಂದೊಡೆ ಕಣ್ಣ ನೀರ್ಗಳಂ ಓಗಡಿಸದೆ ಸೂಸೆ ಗಗ್ಗರಿಕೆಗೊಂಡುದನಾಂ ನೆನೆವೆಂ ಲತಾಂಗಿಯಾ: ಆದಿಪು, ೧೨. ೩೨); [ಕ್ರಿ] ಅಸಹ್ಯಪಡು (ಕಣ್ಣೀರ ಪೂರಂ ಆ ಪ್ರೇತಮಂ ಓಗಡಿಸದೆ ಸುಡುವುದು ಗಡಂ ಇನ್ನುಡುಗುವುದೀ ಶೋಕಮಂ: ಪಂಪಭಾ, ೨. ೨೮); [ಕ್ರಿ] ಹಿಂಜರಿದು ಹೋಗು (ಮುಗಿಲ್ಗಳ ಕರ್ಪು ಪೀನಂ ಓಗಡಿಸಿದುದು ಇಂದುಮಂಡಲದ ಕರ್ಪೆಸೆದತ್ತು: ಪಂಪಭಾ, ೭. ೬೯); [ಕ್ರಿ] ಹೋಗಲಾಡಿಸು, ಕೆಡಿಸು (ನಡೆದುದು ಬಾಳಕಾಲದೊಳೆ ತೊಟ್ಟು ಎನಗೆ ಅಂಕದ ಶೌಚವೀಗಳ್ ಓಗಡಿಪುದೆ: ಪಂಪಭಾ, ೧೧. ೪೬)
ಓಗಂಬಾಡು
[ನಾ] ಸುಪ್ರಭಾತ ಹಾಡು (ನಿನಗೆ ಓಗಂಬಾಡುವ ಯುವತಿನಿಕಾಯದ ದನಿಗೆ ಸೆಣಸುವಂತೆವೊಲ್ .. .. ಮೊರೆವುವಳಿಗಳ ಬಳಗಂ: ಆದಿಪು, ೧೨. ೫೦)
ಓಗರಗಂಪು
[ನಾ] ಬೆರಕೆ ಗಂಧ, ಸಮ್ಮಿಶ್ರಗಂಧ (ಜೊಂಪದಲರ್ವಾಸುಗಳೊಳ್ ನೆಲಸಿತ್ತು ಪೂತ ಗೊಜ್ಜಗೆಗಳ ಸಿಂದುರಂಗಳೊಳಗೆ ಓಗರಗಂಪನೆ ಬೀಱುತಿರ್ಪ: ಪಂಪಭಾ, ೫. ೩೦)
ಓಗರವೂ
[ನಾ] ಬೆರಕೆ ಹೂ (ಓಗರವೂಗಳ ಬಂಡಂ ಎಯ್ದೆ ಪೀರುತ್ತ ಒಡವಂದುವು ಇಂದ್ರವನದಿಂ ಮಱಿದುಂಬಿಗಳ್; ಪಂಪಭಾ, ೧೧. ೮೧)
ಓಘ
[ನಾ] ಚಲಿಸುವ ಸಮೂಹ (ಪೌರಾಂಗನಾ ವಶೀಕರಣ ಚೂರ್ಣಮಾದುದು ಬಳೌಘಧೂಳೀಚಯಂ: ಆದಿಪು, ೧೧. ೧೫)
ಓಘಪ್ರತೀತ
[ನಾ] ಪರಂಪರೆಯಲ್ಲಿ ಪ್ರಸಿದ್ಧವಾದ (ಅತನುರಸೋಪೇತ ವಿಳಂಬಿತ ಮಧ್ಯ ದ್ರುತಲಯಂಗಳೊಳ್ ಲಕ್ಷಣಸಂಯುತ ತತ್ತ್ವಾನುಗತೌಘಪ್ರತೀತವಾದ್ಯಂಗಳೆಸೆದುವು: ಆದಿಪು, ೯. ೨೩)
ಓಘಮೇಘಮಾಗು
[ಕ್ರಿ] ಧಾರಾಕಾರ ಸುರಿ (ಮೇಘಮುಖರೆನಿಸಿ ಸಂದುರಗೌಘದಿನಂದು ಓಘಮೇಘಮಾದೊಡೆ ಮೞೆ: ಆದಿಪು, ೧೪. ೭೧)
ಓಜ
[ನಾ] ಒವಜ [ಉಪಾಧ್ಯಾಯ] ಗುರು (ಮತ್ತುೞಿದ ವಿದ್ಯೆಗಳ್ ಓಜರೆ ಚಟ್ಟರ್ ಎಂಬಿನಂ ನೆರೆದುವು ಗಳ ತನ್ನೊಳಾರ್ ದೊರೆ ಗುಣಾರ್ಣವನಂತು ಕುಶಾಗ್ರಬುದ್ಧಿಗಳ್: ಪಂಪಭಾ, ೨. ೩೪)
ಓಜನ ಸಾಲೆ
[ನಾ] ವಾಜರಶಾಲೆ, ಕಮ್ಮಾರನ ಸಾಲೆ (ಆಗಳ್ ಆಱುಂ ಋತುಗಳ ಪೂಗಳಂ ಒಂದುಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದ ಓಜನ ಸಾಲೆಯಿರ್ಪಂತಿರ್ಪ ಪೂವಿನ ಸಂತೆಯೊಳ್: ಪಂಪಭಾ, ೪. ೮೦ ವ)
ಓಜೆ
[ನಾ] ಧಾಟಿ (ತಂದೆಯ ಚೆಲ್ವೆ ತಂದೆಯೊಂದಂದಮೆ ತಂದೆಯೊಂದು ನಿಡಿಯ ಓಜೆಯೆ ತನ್ನೊಳಮರ್ಕೆವೆತ್ತುದು: ಆದಿಪು, ೮. ೪೩); [ನಾ] ಕ್ರಮ (ಯಥಾ ರಾಜಾ ತಥಾ ಪ್ರಜಾ ಎಂಬವೊಲ್ ಓಜೆಗೊಂಡು ಧರ್ಮಪ್ರಿಯರಾದರ್ ಪ್ರಜೆಗಳುಂ: ಆದಿಪು, ೧೬. ೪೦); [ನಾ] ರೀತಿ (ಒದವಿದ ನೂಲ ತೊಂಗಲುಲಿ ದೇಸೆಯನಾಂತು ವಿಳಾಸದಿಂದಿಱುಂಕಿದ ನಿಱಿ ಗಂಡರಳ್ಳೆರ್ದೆಗಳಂ ತುೞಿವೋಜೆಯನುಂಟುಮಾಡುವಂದದೆ: ಪಂಪಭಾ, ೪. ೩೫)
ಓಜೆಗೊಳ್
[ಕ್ರಿ] ಕ್ರಮ ಅನುಸರಿಸು (ಯಥಾ ರಾಜಾ ತಥಾ ಪ್ರಜಾ ಎಂಬವೊಲ್ ಓಜೆಗೊಂಡು ಧರ್ಮಪ್ರಿಯರಾದರ್ ಪ್ರಜೆಗಳುಂ ಸಮಸ್ತಾವನಿಯೊಳ್: ಆದಿಪು, ೧೬. ೪೦)
ಓಡ
[ನಾ] ತೆಪ್ಪ, ದೋಣಿ (ಸಾಸಿರ್ವರ್ ಏಱಿದೊಡಲ್ಲದೆ ಈ ಓಡಂ ನಡೆಯದು ಎಂಬುದುಂ ಆಂ ಅನಿಬರ ಬಿಣ್ಪುಮಪ್ಪೆಂ ಏಱಿಸೆಂದೊಡೆ ಗೆಯ್ವೆಂ ಎಂದೊಡಂ ಏಱಿಸಿ ನಡೆಯಿಸುವಲ್ಲಿ: ಪಂಪಭಾ, ೧. ೬೮ ವ)
ಓಡು
[ಕ್ರಿ] ಪರಿಹಾರವಾಗು (ಚಾಗಂ ಎಡಱೋಡುವಿನಂ ಪೊರೆದೊಳ್ನೆಗೞ್ತೆಯೊಳ್ ತೊಡರ್ದಿರೆ ವೃದ್ಧರಾಜ್ಯಮುಂ ಅದೇನೆಸೆದತ್ತೊ ನಭಶ್ಚರೇಂದ್ರನಾ: ಆದಿಪು, ೨. ೨೪); [ನಾ] ತಲೆಯ ಚಿಪ್ಪು (ವಜ್ರಮುಷ್ಟಿಯ ಪೊಯ್ಗೊಳಂ ಬಾಳ ಕೋಳೊಳಮ್ ಉಚ್ಚಳಿಸಿದ ಕಪಾಲದ ಓಡುಗಳಂ ಗಂಗೆಗಟ್ಟುತ್ತುಂ: ಪಂಪಭಾ, ೧೧. ೨ ವ)
ಓದಱಿವರ್
[ನಾ] ವಿದ್ಯಾವಂತರು, ಶಾಸ್ತ್ರಪಾರಂಗತರು (ನೋಂತುಂ ಓದಱಿವರ ಪೇೞ್ದ ನೋಂಪಿಗಳಂ ಒರ್ಮೆ ಪಲರ್ಮೆಯುಮಿಂತು ತಮ್ಮ ಮೆಯ್ಮಱೆವಿನಂ ಇರ್ವರುಂ ನಮೆದರ್ ಏನವರ್ಗಾದುದೊ ಪುತ್ರದೋಹಳಂ: ಪಂಪಭಾ, ೧. ೧೩೫)
ಓದಿ ಓದಿ
[ಕ್ರಿ] ಮತ್ತೆ ಮತ್ತೆ ಉಚ್ಚರಿಸಿ (ಜ್ಞಾನದಿನಿರ್ದು ನಿಟ್ಟಿಪೊಡೆ ದಿವ್ಯಮುನೀಂದ್ರಂ ಕೊಟ್ಟ ಮಂತ್ರಸಂತಾನಮನೋದಿಯೋದಿ ಯಮರಾಜನನದ್ಭುತತೇಜನಂ ಸರೋಜಾನನೆ ಜಾನದಿಂ ಬರಿಸೆ: ಪಂಪಭಾ, ೧. ೧೧೯)
ಓದಿದರ್
[ನಾ] ಓದಿದವರು (ಪೊಸವೇಟದ ಅಲಂಪುಗಳೆಲ್ಲ ಓದಿದರ್ಗೆ ಇದಱ ಅನುಯಾಯಿಗಳ್ಗೆ ಎಸೆವ ಉದಾರಗುಣಂ: ಪಂಪಭಾ, ೧೪. ೬೩)
ಓದಿಸು