भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಕಂಠಲುಂಠ

[ನಾ] ಕೊರಳ ಅಲುಗಾಟವುಳ್ಳವನು (ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜಕಂಠಿಕಾಪರಿಕಲಿತ ಕಂಠಲುಂಠನುಂ ಆಗಿ: ಪಂಪಭಾ, ೧. ೬೮ ವ)

ಕಂಠಿಕಾ

[ನಾ] ಹಾರ, ಸರ, ಏಕಾವಳಿ (ಲೋಕದ ಚೆಲ್ವೆಲ್ಲಮಂ ಒಳಕೊಂಡು ರೇಖೆಗೊಂಡ ಲಾಟೀಲಲಾಮನ ಪರಿಣದ್ಧ ಕಂಧರಂ ಯುವರಾಜ ಕಂಠಿಕಾಭರಣಮಂ ಕಟ್ಟುವುದರ್ಕೆ ನೋಂತು: ಪಂಪಭಾ, ೨. ೩೯ ವ)

ಕಂಠಿಕಾಪರಿಕಲಿತ

[ಗು] ಹಾರದಿಂದ ಕೂಡಿದ (ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜಕಂಠಿಕಾಪರಿಕಲಿತ ಕಂಠಲುಂಠನುಂ ಆಗಿ: ಪಂಪಭಾ, ೧. ೬೮ ವ)

ಕಂಠಿಕಾಬಂಧನ

[ನಾ] ಕೊರಳ ಆಭರಣವನ್ನು ತೊಡಿಸುವುದು (ಸಮ್ಯಗ್ದರ್ಶನಮೆಂಬ ಕಂಠಿಕೆಯಂ ಕಂಠಿಕಾಬಂಧನಮಂ ಮಾಡಿ : ಆದಿಪು, ೫. ೬೩ ವ)

ಕಂಠೀರವ

[ನಾ] ಒಂದು ವಾದ್ಯವಿಶೇಷ (ಭವನ ವನ ಜ್ಯೋತಿಃ ಕಲ್ಪವಾಸದೊಳ್ ಕ್ರಮದೆ ಶಂಖ ಭೇರಿ ಕಂಠೀರವ ಘಂಟಾಧ್ವನಿಗಳ್ ನೆಗೞ್ದುವು: ಆದಿಪು, ೭. ೪೦); [ನಾ] ಸಿಂಹ (ರಿಪುಕುರಂಗಕಂಠೀರವನ ಕೆಯ್ಯೊಳ್ ವೈಕರ್ತನಂ ಸಾಯಲೊಡಂ ಮೇಲುದಂ ಬೀಸಿ ಬೊಬ್ಬಿಱಿದಾರ್ವ ಪಾಂಡವಪತಾಕಿನಿಯೊಳ್: ಪಂಪಭಾ, ೧೨. ೨೧೮)

ಕಂಠೀರವಾಸಂದಿ

[ನಾ] [ಕಂಠೀರವ+ಆಸಂದಿ] ಸಿಂಹಾಸನ (ಸೌಂದರಾನೇಕಮಣಿ ರುಚಿಜಳಸ್ಯಂದಿಯಂ ಮಂದರೋತ್ತುಂಗ ಕಂಠೀರವಾಸಂದಿಯಂ: ಆದಿಪು, ೭. ೨೭ ರಗಳೆ)

ಕಠೋರ

[ಗು] ಬಿರುಸು, ಉಗ್ರ (ಕರಿಕಳಭ ಪ್ರಚಂಡ ಮೃಗರಾಜಕಿಶೋರ ಕಠೋರ ಘೋರ ಹೂಂಕರಣ: ಪಂಪಭಾ, ೯. ೪೨)

ಕಂಡ

[ನಾ] [ಖಂಡ] ಮಾಂಸಖಂಡ (ವಿನತಾಪುತ್ರನ ವಜ್ರ ತುಂಡ ಹತಿಗಂ ಮೆಯ್ಯಾಂತು ಕಂಡಂಗಳುಳ್ಳಿನಂ ಅಂಗಂಗಳಂ ಒಡ್ಡಿ ಒಡ್ಡಿ ತನುವಂ ಕೊಟ್ಟಂತು: ಪಂಪಭಾ, ೪. ೨೬)

ಕಡಕು

[ನಾ] ಚೂರು ಕಲ್ಲು (ಕಡಕುಂ ಪೆಟ್ಟೆಯುಂ ಒತ್ತೆ ಮೆಲ್ಲಡಿಗಳಂ ಬಳ್ಕುತ್ತುಂ ಅಳ್ಕುತ್ತುಂ ಓರಡಿಗೆ ಒರ್ಮೊರ್ಮೆ ಕುಳುತ್ತುಂ ಏೞುತಿರೆ: ಪಂಪಭಾ, ೩. ೯)

ಕಡಂಗಿಸು

[ಕ್ರಿ] ಉತ್ಸುಕಗೊಳಿಸು (ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಂ ಅಡಂಗಲುಂ ಅಡಂಗಿಸಲುಂ ಒಡ್ಡಲುಂ ಒಡ್ಡಿಸಲುಂ ಪುಗಿಸಲುಂ ಮಿಗಿಸಲುಂ: ಪಂಪಭಾ, ೫. ೪೩ ವ)

ಕಡಂಗು

[ಕ್ರಿ] ಉತ್ಸುಕಗೊಳ್ಳು (ಪಗಲಿರುಳೆನ್ನದೆನ್ನೊಳೆ ಕಡಂಗುವನೆನ್ನೊಳೆ ಬಲ್ಪುದೋರ್ಪಂ: ಆದಿಪು, ೧೨. ೩೩); [ಕ್ರಿ] ಆವೇಶಗೊಳ್ಳು (ಪಿಂದೆ ಕಡಂಗಿ ತೇರಂ ಎಸಗು ಎಂಬವಂ ಅಂಬಿಗಂ ಆಜಿರಂಗದೊಳ್: ಪಂಪಭಾ, ೧೨. ೯೪)

ಕಂಡರಿಸು

[ಕ್ರಿ] ಕೆತ್ತು, ಕಂಡರಣೆಗೆಯ್ (ಎಸಳ್ಗಳನೆಯ್ದೆ ಕಂಡರಿಸಿ ಮುತ್ತಿನೊಳಲ್ಲಿ ಸುವರ್ಣಚೂರ್ಣಮಂ ಪಸರಿಸಿ: ಆದಿಪು, ೧೧. ೧೧೬)

ಕಂಡಱಿ

[ಕ್ರಿ] [ಕಂಡು+ಅಱಿ] ನೋಡಿ ತಿಳಿ (ಸ್ಯಂದನಬಂಧನವೆಂಬುದನಿದಂ ಇಂದೀ ವೃಷಸೇನನಿಂದಮಱಿದೆಂ ಇದಂ ಮುನ್ನೆಂದುಂ ಕಂಡಱಿಯೆಂ: ಪಂಪಭಾ, ೧೨. ೧೬೬)

ಕಡಲುರಿ

[ನಾ] ಸಮುದ್ರದ ಬೆಂಕಿ, ಬಡಬಾಗ್ನಿ (ಕಡಲುರಿಯಂತೆ ಅಕಾಲಘನಗರ್ಜನೆಯಂತೆ ಸಮಸ್ತದಿಕ್ತಟಂ ಪಿಡುಗುವಿನಂ ರಣಾನಕರವಂಗಳಸುಂಗೊಳೆ: ಪಂಪಭಾ, ೧೩. ೩೩)

ಕಡಲ್

[ನಾ] ಸಮುದ್ರ (ಕಡಲ ತಡಿಯೆಯ್ದೆ ನೆಲನಂ ಪಡೆದರ್ ಭವದೀಯ ಪುತ್ರರ್: ಆದಿಪು, ೯. ೯೮)

ಕಂಡವಡ

[ನಾ] [ಕಾಂಡಪಟ] ತೆರೆ (ತಳಿರ್ಗಳ ಕಂಡವಡಂಗಳೆ ತಳಿರ್ಗಳ ಪಾಸುಗಳೆ ತಳಿರ್ಗಳೋವರಿಗಳೆ: ಆದಿಪು, ೧೧. ೭೯)

ಕಡವು

[ನಾ] [ಕದಂಬ] ಕಡವಾಲದ ಮರ (ಕಡವಿನ ಕಂಪು ಅಡಂಗಿದುದು ಜಾದಿಯ ಕಂಪು ಒದವಿತ್ತು ಸೋಗೆಯ ಉರ್ಕು ಉಡುಗಿದುದು ಅಂಚೆಯುರ್ಕು ಪೊಸತಾಯ್ತು: ಪಂಪಭಾ, ೭. ೬೯); [ನಾ] ಒಂದು ಬಗೆಯ ಜಿಂಕೆ, ಸಾರಂಗ (ಅಡಂಗಿ ಪರಿವ ಪುಲಿಗಳುಮಂ ಸೋಂಕಿ ಪರಿವ ಎಯ್ಗಳುಮಂ ತಡಂಮೆಟ್ಟಿ ಪರಿವ ಕಡವಿನ ಕಾಡೆಮ್ಮೆಯ ಮರೆಯ ಪಿಂಡುಗಳುಮಂ: ಪಂಪಭಾ, ೫. ೪೮ ವ)

ಕಂಡಿ

[ನಾ] ನುಸುಳುವ ರಂಧ್ರ, ಜಾಗ (ಮೃಗಮಂ ಗಾಳಿಯನಿರ್ಕೆಯಂ ಪಕ್ಕೆಯಂ ಗಣಿದಮಂ ಕಂಡಿಯಂ ಮಾರ್ಕಂಡಿಯಂ ಪುಗಿಲಂ ಪೋಗಂ: ಪಂಪಭಾ, ೫. ೪೩)

ಕಡಿ

[ಕ್ರಿ] ಕತ್ತರಿಸು (ಶರಮನಿದಂ ಕಡಿದುಡಿದು ಎರಡೆರಡಪ್ಪಂತು ತಱಿದು ರಿಪುಬಲಗಹನಾಂತರಮಂ ಸುಡಲೊಗೆವುದು ದುರ್ಧರ ಕೋಪಾಗ್ನಿ: ಆದಿಪು, ೧೨, ೧೦೨)

ಕಡಿತಮಿಕ್ಕು

[ಕ್ರಿ] ಕಡತದಲ್ಲಿ ಬರೆ (ಕಡಿತಮಿಕ್ಕಿದಂತಿರ್ದ ಸಮಚತುರಶ್ರಂ ನಾಲ್ವತ್ತೆಣ್ಗಾವುದು ಪರಿಪ್ರಮಾಣಮೆನಿಪ ಕುರುಕ್ಷೇತ್ರಮಂ ಎಯ್ದೆವಂದು: ಪಂಪಭಾ, ೯. ೧೦೪ ವ)

Search Dictionaries

Loading Results

Follow Us :   
  Download Bharatavani App
  Bharatavani Windows App