भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಕಡುವಿನ್ನವಾಗು

[ಕ್ರಿ] ನಿಶ್ಚೇಷ್ಟಿತವಾಗು (ಆ ಸರಸಿಜಬಾಂಧವನ ಪಿಂಬಡಿನೊಳ್ ಕಡುವಿನ್ನನಾದುವಿಂತೀ ಸರಸೀರುಹಂಗಳ್ ಅವನೀಪದದೊಳ್: ಪಂಪಭಾ, ೪. ೪೭); [ಕ್ರಿ] ಬಾಡು, ಖಿನ್ನಗೊಳ್ಳು (ನಾರದಂ ಮನದೊಳೆ ಪೇಸುಗುಂ ಸುರಪಂ ನಗುಗುಂ ಕಡುವಿನ್ನನಕ್ಕುಂ ಅಯ್ಯನ ಮುಖಂ: ಪಂಪಭಾ, ೬. ೨೪ ವ)

ಕಡುವಿಲ್ಲ

[ನಾ] ಗಟ್ಟಿಗನಾದ ಬಿಲ್ಲುಗಾರ (ಎರಡುಂ ಬಲದ ಕಡುವಿಲ್ಲರ್ ಭೋರ್ಗರೆದು ಇಸೆ ಕೂರ್ಗಣೆಯೊಳ್ ಪಂದರ್ ಇಕ್ಕಿದಂತಾಯ್ತು ಗಗನಮಂಡಲಮೆಲ್ಲಂ: ಪಂಪಭಾ, ೧ . ೭೨)

ಕಡುವೆಂಕೆ

[ನಾ] [ಕಡು+ಬೆಂಕೆ] ತೀವ್ರವಾದ ಶಾಖ (ಕಡುವೆಂಕೆಯಿಂ ಕಟಾಕ್ಷಂ ಬಿಡದಿೞಿವ ಲಲಾಟಕುಂಕುಮಸ್ವೇದಜಳಂ ಕಿಡಿಸಿದುದು ಕದಪಿನೊಳ್ ಪೊೞ್ತಡೆ ಬರೆದರಸಿಯರ ಪತ್ರಲೇಖಾವಳಿಯಂ: ಆದಿಪು, ೧೧. ೫೪)

ಕಡುವೆರ್ಚು

[ನಾ] [ಕಡು+ಪೆರ್ಚು] ಅತಿಶಯ ಹೆಚ್ಚಳ, ಪರಾಕ್ರಮ (ಬಗೆಯದೆ ಮೆಯ್ಸೊಕಮಂ ಬಗೆ ಪಗೆವರ ಕಡುವೆರ್ಚಂ ಎನ್ನ ಪೂಣ್ಕೆಯಂ ಎರ್ದೆಯೊಳ್ ಬಗೆ ಮುನಿಯ ಮಂತ್ರಪದಮಂ: ಪಂಪಭಾ, ೭. ೬೭)

ಕಡುವೆಳ್ಪು

[ನಾ] [ಕಡು+ಬೆಳ್ಪು] ಅತಿಶಯವಾದ ಬಿಳಿ (ಆನನೇಂದುವ ಕಡುವೆಳ್ಪು ಕೂಸಿನ ನೆಗೞ್ತೆಯ ಬೆಳ್ಪುವೊಲಾಯ್ತು ಮುನ್ನೆ ಬಳ್ಕುವ ನಡು ತೋರ್ಪ ಮೆಯ್ಯನೊಳಕೊಂಡುದು: ಪಂಪಭಾ, ೧. ೧೨೫)

ಕಡುವೇಟಕಾಱ

[ನಾ] ಪ್ರಣಯಾತುರನಾದವನು (ನಲ್ಲಳಗಲ್ಕೆಯಿಂದಂ ಆದ ಅದವೞಲಚ್ಚಿಗಂ ಮಱುಕಮೆಂಬಿವಱಿಂದೆ ಕನಲ್ದು ಮುನ್ನೆ ಬೇಟದ ಸವಿಗಂಡನಲ್ಲದಱಿಯಂ ಶ್ರಮಮಂ ಕಡುವೇಟಕಾಱರಾ: ಆದಿಪು, ೧೨. ೨೨)

ಕಡುಸಿಗ್ಗುಮಾಡು

[ಕ್ರಿ] ತುಂಬ ಅವಮಾನಿಸು (ಕುಂಭಸಂಭವನಂ ಆ ದ್ರುಪದಂ ಕಡುಸಿಗ್ಗು ಮಾಡಿದಂ: ಪಂಪಭಾ, ೨. ೪೮)

ಕಂಡೂಯ

[ನಾ] ನವೆ, ತುರಿಕೆ (ದೋರ್ದಂಡಕಂಡೂಯ ದುರ್ದಮವೈರಿದ್ವಿರದೇಂದ್ರಕೇಸರಿರವಂ: ಆದಿಪು, ೧೧. ೧೦)

ಕಂಡೂಳ

[ನಾ] ನವೆ, ಕಜ್ಜಿ (ಮದಪಯಃಕಂಡೂಳಗಂಡಸ್ಥಳ ದ್ವಿರದೋದ್ಧೃಷ್ಟ ಘನಸ್ರವತ್ಸರಳಸಾರಾಮೋದಂ: ಆದಿಪು, ೧೩. ೯)

ಕಡೆ

[ನಾ] ಕಾಲಾನಂತರ (ಆತನ ಕಡೆಯೊಳ್ ಉಚಿತ ಮನ್ವಂತರವ್ಯತಿಕ್ರಮದೊಳ್: ಆದಿಪು, ೬. ೬೩ ವ); [ನಾ] ರಂಗೋಲಿ (ಕಡೆಯೊಳ್ ತಗುಳ್ದ ರತ್ನದ ಬೆಡಂಗುವೆತ್ತೆಸೆವ ದೀಪ್ತಿವಳಯದ ಚೆಲ್ವಂ ಪಡೆದು: ಆದಿಪು, ೭. ೭೫); [ಕ್ರಿ] ಕಡೆಗೋಲಿಂದ ಮಥಿಸು (ಶ್ರೀರಮಣಿಯಂ ದ್ವಿಷದ್ಬಳ ಪಾರಾವಾರದೊಳುದಗ್ರ ಭುಜವಿಜಯ ಮಹಾಮೇರುವಿನೆ ಕಡೆದು ಪಡೆದಳವಾರುಮನಿೞಿಸಿದುದು ಉದಾತ್ತನಾರಾಯಣನಾ: ಪಂಪಭಾ, ೪. ೧); [ಕ್ರಿ] ತಿದ್ದು, ರೂಪಿಸು (ಅಮರ್ದಿಂದೆ ತೊಯ್ದು ಕಪ್ಪುರವಳುಕಿಂದಜಂ ಕಡೆದು ಕಂಡರಿಪಂ ವಲಂ ಎನ್ನ ನಲ್ಲಳಂ: ಪಂಪಭಾ, ೫. ೧೬); [ನಾ] ಅಂತ್ಯ, ಕೊನೆ (ಪರಪಿನ ನೀಳದ ಕಡೆಯಂ ಮರುಳಂ ತವೆ ನೋಡಲಾಱದೆ ಅಂಬರತಳಮಂ ಕರಿದೆಂಬಂತಿರೆ ನಿನ್ನಂ ನರನೆಂಬುದೆ: ಪಂಪಭಾ, ೬. ೨೦)

ಕಡೆಗಣಿಸು

[ಕ್ರಿ] ಅಲಕ್ಷ್ಯಮಾಡು (ನಿಮ್ಮಯ ಧರ್ಮದ ಮಕ್ಕಳೆವು ಎಮ್ಮಂ ಕಡೆಗಣಿಸಿ ನಿಮಗೆ ನೆಗೞ್ವುದು ದೊರೆಯೇ: ಪಂಪಭಾ, ೧೧. ೧೨೮)

ಕಡೆಗಣ್

[ನಾ] ಕಟಾಕ್ಷ, ಕುಡಿನೋಟ (ಅಂತು ನೋಡಿ ಕಡೆಗಣ್ಣ ಚೆಲ್ಲಂಬೆರಸು ಸೂಸುವ ವಾಸವಸ್ತ್ರೀಯರ ಮುಖಾಬ್ಜಾಸವ ಸಂಬಂಧಿಗಳಪ್ಪ ಶೇಷಾಕ್ಷತಂಗಳಂ ಈಶ್ವರನಂ ಗೆಲ್ದ ಗೆಲ್ಲಕ್ಕೆ ಸೇಸೆಗೊಳ್ವಂತೆ ಸೇಸೆಗೊಳ್ಳುತ್ತುಂ: ಪಂಪಭಾ, ೮. ೨೭ ವ)

ಕಡೆಗಣ್ಚು

[ಕ್ರಿ] ಕಡೆಗಣಿಸು (ಸೀತೆ ಕಡಂಗಿ ಕಾಯ್ದು ಕಡೆಗಣ್ಚಿದಳಪ್ಪೊಡೆ ಧಾತ್ರನಿಂ ತೊದಳ್ವಾತಿನೊಳೇನೊ ಪಾಂಡವರ ಕೈಯೊಳೆ ನಿನ್ನ ನಿಸೇಕಮಾಗದೇ: ಪಂಪಭಾ, ೯. ೪೯)

ಕಡೆಗಾಣ್

[ಕ್ರಿ] ಕೊನೆಯನ್ನು ಅಥವಾ ಪಾರವನ್ನು ಕಾಣು (ಕ್ಷಯಮಣಮಿಲ್ಲ ಕೇಳ್ದು ಕಡೆಗಂಡವಂ ಆವನುಮಿಲ್ಲ ಎನಲ್: ಪಂಪಭಾ, ೧.೫)

ಕಡೆಯಿಕ್ಕು

[ಕ್ರಿ] ರಂಗೋಲೆ ಹಾಕು, ಅಲಂಕರಿಸು (ಕಡೆಯಿಕ್ಕಿದ ಬಿಡುಮುತ್ತಿನ ಪೊಡರ್ದುಣ್ಮುವ ಬೆಳಗು: ಆದಿಪು, ೮. ೧೬)

ಕಡೆಯೆಯ್ದು

ಮುಗಿ, ಕೊನೆಗೊಳ್ಳು (ಇಂತಿರ್ವರುಂ ಪೂಣ್ದು ಅಲಂಪಿನೊಳುಂಡರ್ ಕಡೆಯೆಯ್ದೆ ಷೋಡಶ ನದೀನಾಥೋಪಮ ಆಯುಷ್ಯಮಂ: ಆದಿಪು, ೩. ೭೬)

ಕಡ್ಡ

ಮಾತ್ಸರ್ಯ, ದ್ವೇಷ (ಒರ್ವರೊರ್ವರೊಳ್ ಮೂಗುದುಱಿಸಲಾಗದ ಕಡ್ಡಂ ಅವರ್ಗೆಂತುಂ ಒಡಂಬಡಾಗದು: ಪಂಪಭಾ, ೧೨. ೧೦೩ ವ)

ಕಡ್ಡವಣೆ

[ನಾ] ಬರಸೆಳೆಯುವಿಕೆ (ಪುರುಡುವೆರೆಸಿದ ಕೊಂಕಿಂಗಂ ಕಡ್ಡವಣೆವೆರಸಿದ ಸೋಂಕಿಗಂ ಗಾಢಿವೆರಸಿದ ಹಾವಕ್ಕಂ ನಾಣ್ವೆರಸಿದ ಭಾವಕ್ಕಂ: ಪಂಪಭಾ, ೪. ೧೭ ವ)

ಕಡ್ಡುವರ್

[ಕ್ರಿ] ಅಡ್ಡ ಬರು (ಅಂತು ಪೊಱಮಡುವ ಅರಾತಿ ಕಾಲಾನಲನಂ ಕಂಡು ಕಡ್ಡುವಂದ ದೊಡ್ಡರೆಲ್ಲಂ ಮುಸುಱೆ: ಪಂಪಭಾ, ೩. ೬೧ ವ); [ಕ್ರಿ] ಕಠಿಣವಾಗು (ಚಕ್ರೇಶ ಸಿಗ್ಗನುೞಿ ಮುಳಿಸಂ ನೀನೆಂದಿಗಂ ಬಿಸುಡು ಈ ತಮ್ಮಂದಿರೊಳಿಂತಿಂತು ಕಡ್ಡುವರ್ಪುದು ಪೆಂಪೇ: ಆದಿಪು, ೧೪. ೧೨೮) [ಎಲ್. ಬಸವರಾಜು ‘ಕಡ್ಡುವರ್ಪುದು’ ಎಂಬ ರೂಪದ ಬದಲು ‘ಕಡ್ಡುದರ್ಪುದು’ ಎಂಬ ಪಾಠವನ್ನು ಸ್ವೀಕರಿಸಿ, ‘ಕಡ್ಡು’ ಎಂಬುದಕ್ಕೆ ವೈಷಮ್ಯ, ವಿರಸ ಎಂಬರ್ಥ ನೀಡಿ, ‘ಕಡ್ಡುದರ್‌’ ಎಂದರೆ ವೈಮನಸ್ಯವುಂಟುಮಾಡು ಎಂದು ವಿವರಿಸುತ್ತಾರೆ; ನರಸಿಂಹಶಾಸ್ತ್ರಿಗಳು ‘ಕಟ್ಟುವರ್ಪುದು’ ಎಂಬ ಪಾಠ ಇಟ್ಟುಕೊಂಡು ನಿಗ್ರಹಬುದ್ಧಿಯನ್ನಿರಿಸುವುದು ಎಂದು ಆರ್ಥೈಸುತ್ತಾರೆ]

ಕಣ

[ನಾ] ಬಟ್ಟೆ (ಪರಿವೆಡೆಯ ತುಳಿವೆಡೆಯ ನೆಳಲಪಾಣಿಯ ಬಣ್ಣದ ಕಣದ ಬಣ್ಣವಣ್ಣಿಗೆಯ ಜವಳಿಗಳನೆ ಮೊಗಂ ನೋಡದೆ ಸೂಸಿದಾಗಳ್: ಆದಿಪು, ೪. ೩೪ ವ)

Search Dictionaries

Loading Results

Follow Us :   
  Download Bharatavani App
  Bharatavani Windows App