भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಕ್ಷಭಿತ

[ಗು] ಕಲಕಿದ (ಬಧಿರಿತ ಸಮಸ್ತ ದಿಕ್ತಟಂ ಅಧಿರಿತ ಸರ್ವ ಇಭ್ಯಗರ್ವಿತಂ ಕ್ಷಭಿತಾಂಭೋಸಲಿಲಂ ಪರೆದುದು ಧುರವಿಧಾನ ಪಟುಪಟಹ ಕಹಳ ಭೇರೀರಭಸಂ: ಪಂಪಭಾ, ೧೨. ೧೭೧)

ಕ್ಷಭಿತಯಾ

ಕದಡಲ್ಪಟ್ಟಿದೆಯೋ (ಪ್ರಚಂಡಲಯತಾಂಡವ ಕ್ಷಭಿತಯಾ ಯಸ್ಯಾನಯಾ: ಪಂಪಭಾ, ೪. ೨೭)

ಕ್ಷಮ

[ನಾ] ಸಮರ್ಥವಾದ (ನಿಜಪರಿರಕ್ಷಣಕ್ಷಮ ಕ್ಷಮಾವಲ್ಲಭ ಲಾಭಪ್ರಮುದಿತ ಮೇದಿನೀಹೃದಯದಂತೆ: ಆದಿಪು, ೭. ೩೬ ವ)

ಕ್ಷಮಾತಳ

[ನಾ] ಭೂಮಂಡಲ (ಬಳೆದುವು ತೋಳ್ಗಳ್ ಎಕ್ಕೆಯಿಂ ಅಮಳ್ ಬಳೆವಂತಿರೆ ಮುಯ್ವುಗಳ್ ಕುಳಾಚಳಶಿಖರಂಗಳಂ ಮಸುಳೆವಂದುವು ಪರ್ವಿದ ವಕ್ಷಮೀ ಕ್ಷಮಾತಳ ಕುಳಲಕ್ಷ್ಮಿಗಾಯ್ತು ಕುಳಮಂದಿರಂ: ಪಂಪಭಾ, ೨. ೩೭)

ಕ್ಷಮಾಭರ

[ನಾ] ಭೂಭಾರ (ಹಿಮಾದ್ರಿವಾರಿಧಿನಿರುದ್ಧೈಕ ಆತಪತ್ರಕ್ಷಮಾಭರಮಂ ಭೂರಿಭುಜಾಗ್ರದೊಳ್ ನಿಱಿಸಿ: ಆದಿಪು, ೯. ೬೪)

ಕ್ಷಮಾವಲ್ಲಭ

[ನಾ] ಕ್ಷಮಾಪ, ರಾಜ (ನಿಜಪರಿರಕ್ಷಣಕ್ಷಮ ಕ್ಷಮಾವಲ್ಲಭಲಾಭ ಪ್ರಮುದಿತ ಮೇದಿನೀಹೃದಯದಂತೆ: ಆದಿಪು, ೭. ೩೬ ವ)

ಕ್ಷಯ

[ನಾ] ನಾಶ (ಕ್ಷಯಮಣಮಿಲ್ಲ ಕೇಳ್ದು ಕಡೆಗಂಡವಂ ಆವನುಮಿಲ್ಲ ಎನಲ್: ಪಂಪಭಾ, ೧.೫)

ಕ್ಷರಣೆ

[ನಾ] ಸೋರುವಿಕೆ (ಅಂತು ಕಂತುಶರಪರವಶನಾಗಿ ಧೈರ್ಯಕ್ಷರಣೆಯುಂ ಇಂದ್ರಿಯಕ್ಷರಣೆಯುಂ ಒಡನೊಡನಾಗೆ: ಪಂಪಭಾ, ೨. ೪೨ ವ)

ಕ್ಷಾಯಿಕಸಮ್ಯಗ್ದೃಷ್ಟಿ

[ನಾ] [ಜೈನ] ಕ್ಷಾಯಿಕಸಮ್ಯಕ್ತ್ವ, ದರ್ಶನಮೋಹನೀಯಕರ್ಮವು ಕ್ಷೀಣವಾದ ಮೇಲೆ ಉಂಟಾಗುವ ನಿರ್ಮಲಶ್ರದ್ಧೆ (ಮಿಥ್ಯಾತ್ವ ಸಮ್ಯಙ್ಮಿಥ್ಯಾತ್ವ ಸಮ್ಯಕ್ತ್ವಪ್ರಕೃತಿಯೆಂಬ ದರ್ಶನಮೋಹನೀಯತ್ರಿಕದ ನಿರ್ಮೂಲನದಿಂ ಕ್ಷಾಯಿಕಸಮ್ಯಗ್ದೃಷ್ಟಿಯಾಗಿ: ಆದಿಪು, ೧೦. ೧೪ ವ)

ಕ್ಷಾರವಾರಿ

[ನಾ] ಉಪ್ಪು ನೀರು (ಒಳ್ಳನುರಿವ ಪುಣ್ಗಳೊಳ್ ಕ್ಷಾರವಾರಿಗಳಂ ಎಱೆದೊರಸಿ ಕರ್ಚುವರುಂ: ಆದಿಪು, ೫. ೮೫ ವ)

ಕ್ಷಿತಿ

[ನಾ] ಭೂಮಿ (ದಿವ್ಯಾಪ್ಸರೋವೃಂದಂ ಈ ಕ್ಷಿತಿಗೇಂ ಇಂದ್ರನ ಶಾಪದಿಂದ ಇೞಿದುವೋ ಪೇೞೆಂಬ ಶಂಕಾಂತರಂ ಮತಿಗಂ ಪುಟ್ಟುವಿನೆಗಂ: ಪಂಪಭಾ, ೪. ೩೯); [ನಾ] [ಕನ್ನಡ] ಜಗತ್ತು (ಕ್ಷಿತಿಗೆ ಸಮಸ್ತಭಾರತಮುಂ ಆದಿಪುರಾಣಮುಂ ಈಗಳ್ ಒಂದು ಅಳಂಕೃತಿಯವೊಲಿರ್ದುವು: ಪಂಪಭಾ, ೧೪. ೬೧)

ಕ್ಷಿತಿಚಕ್ರ

[ನಾ] ಭೂಮಂಡಲ (ಹತವೈರಿಕ್ಷತ್ರಚಕ್ರಂ .. .. ವಿನಮ್ರಕ್ಷಿತಿಚಕ್ರಂ: ಆದಿಪು, ೧೪. ೩)

ಕ್ಷಿತಿಧರ

[ನಾ] ಭೂಮಿಗೆ ಆಧಾರವಾದದ್ದು, ಬೆಟ್ಟ (ತಮಿಸ್ರಗುಹೆಯ ವಜ್ರದ ಪಡಿ ತತ್ ಕ್ಷಿತಿಧರದೆರ್ದೆಯಂತೆ ಚಮೂಪತಿಯಿಂ ತೆಱೆದತ್ತು: ಆದಿಪು, ೧೪. ೫೭)

ಕ್ಷಿತಿಪ

[ನಾ] ಭೂಮಿಯ ಒಡೆಯ, ರಾಜ (ವೀರವೈರಿಕ್ಷಿತಿಪ ಗಜಘಟಾಟೋಪ ಕುಂಭಸ್ಥಳೀಭೇದನಂ ಉದಗ್ರ ಉದ್ಘ ಅಸಿ ಭಾಸ್ವತ್ ಭುಜಪರಿಘನಂ ಆರೂಢಸರ್ವಜ್ಞನಂ: ಪಂಪಭಾ, ೧. ೫೧)

ಕ್ಷಿತಿಪತಿ

[ನಾ] ರಾಜ (ಕ್ಷಿತಿಪತಿ ಬೇಱಿರಿಸಿ ಮಾನ್ಯರಂ ಮನ್ನಿಸೆ ತದ್ವ್ರತಹೀನರುಂ ಅಂದು ಅಖಿಳಬ್ರತಮಂ ಕೈಕೊಳ್ವ ಬಗೆಗೆ ಬಗೆಯಂ ತಂದರ್; ಆದಿಪು, ೧೫. ೧೩)

ಕ್ಷಿತಿರುಹ

[ನಾ] ಮರ, ವೃಕ್ಷ (ಕಲ್ಪವ್ರತತೀಸಂಯುಕ್ತ ಕಲ್ಪಕ್ಷಿತಿರುಹಮನೆ ಪೋಲ್ತಿರ್ದಂ ಆ ಕಾಂತೆಯರ್ ತಮ್ಮತಿರಾಗಂ ಪೆರ್ಚಿ ತನ್ನಿರ್ಕೆಲದೊಳಿರೆ: ಆದಿಪು, ೮. ೨೩)

ಕ್ಷಿತಿವಲಯ

[ನಾ] ಭೂಮಂಡಲ (ಶೈಲೇಳಾಕಲ್ಪಕಾಳಂ ಕ್ಷಿತಿವಲಯಮಿದಂ ಪಾತು ವಿಕ್ರಾಂತತುಂಗಃ: ಪಂಪಭಾ, ೧೪. ೨೭)

ಕ್ಷೀರ

[ನಾ] ಹಾಲು (ಘೃತ ಲವಣ ತೈಲ ಕ್ಷೀರ ದಧಿ ವ್ಯಂಜನಂಗಳೊಳ್ ಸಂಸ್ಕಾರಂ ಮಾಡುವ: ಆದಿಪು, ೬, ೭೭ ವ)

ಕ್ಷೀರಗೌರಕ್ಷತಜ

[ನಾ] [ಜೈನ] ಹಾಲಿನಂತೆ ಬಿಳುಪಾದ ರಕ್ತವುಳ್ಳವನು (ಅಂತು ನಿಸ್ವೇದ ನಿರ್ಮಲ ಕ್ಷೀರಗೌರಕ್ತತಜ ಸಮಚತುರಸ್ರ ಸಂಸ್ಥಾನ ವಜ್ರವೃಷಭನಾರಾಚಸಂಹನನುಂ: ಆದಿಪು, ೮. ೪ ವ) [ನರಸಿಂಹಶಾಸ್ತ್ರಿ ಮತ್ತು ಬಸವರಾಜು ಅವರ ಆವೃತ್ತಿಗಳಲ್ಲಿ]

ಕ್ಷೀರನೀರನ್ಯಾಯ

[ನಾ] ಹಾಲು ಮತ್ತು ನೀರು ಬೆರೆಯುವ ರೀತಿ (ಕರ್ಮದ ಜೀವನ ಕ್ಷೀರನೀರನ್ಯಾಯಸಂಬಂಧಂ ಬಂಧಮೆಂಬುದು: ಆದಿಪು, ೧೦. ೬೩ ವ)

Search Dictionaries

Loading Results

Follow Us :   
  Download Bharatavani App
  Bharatavani Windows App