भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಕ್ಷೀರೋದವಾರಿ

[ನಾ] ಹಾಲುಗಡಲ ನೀರು (ಕ್ಷೀರೋದವಾರಿ ಧಾರಾಪೂರದ ಚೆಲ್ವಿಂಗೆ ಸೆಣಸುವಂತೆ: ಆದಿಪು, ೭. ೭೪)

ಕ್ಷುತ

ಸೀನು (ಫಳಾಪಾಕಾಂತದೊಳ್ ಕ್ಷುತವಿಜೃಂಭಣವ್ಯಾಜದಿಂ ಲೋಕಾಂತರಿತರಾಗಿ: ಆದಿಪು, ೫. ೬೯ ವ)

ಕ್ಷುತ್

[ನಾ] ಹಸಿವು (ಕ್ಷುತ್ಪಿಪಾಸಾಶೀತಾತಪಪ್ರಮುಖ ಪರೀಷಹಂಗಳಂ ಸೈರಿಸಲಾಱದೆ: ಆದಿಪು, ೯. ೮೮ ವ)

ಕ್ಷುದ್ರವಿದ್ಯಾ

[ನಾ] ಕುವಿದ್ಯೆ, ಕೆಟ್ಟ ವಿದ್ಯೆ (ವಾಸವದುರ್ದಂತರೆಂಬರ್ ಅನೇಕಕ್ಷುದ್ರವಿದ್ಯಾಗರ್ವ ದುರ್ವಿದಗ್ಧರುಂ ಅಳೀಕವಿಚಕ್ಷಣರುಂ ಅಪ್ಪುದಱಿಂದಂ: ಆದಿಪು, ೩. ೮೭ ವ)

ಕ್ಷೇತ್ರ

[ನಾ] ಜಾಗ, ಭೂಮಿ (ಸಮಸ್ತಭವ್ಯಜನನಿರ್ವರ್ತ್ಯಮಾನ ಅಷ್ಟಾಹ್ನಿಕಮುಂ ಚೈತ್ಯಾಲಯನಿರ್ಮಾಣನಿರ್ಮಾಪಣ ಶಾಸನಾರೋಪಿತ ಗ್ರಾಮಕ್ಷೇತ್ರವಿತರಣಮುಂ: : ಆದಿಪು, ೧೫. ೧೩ ವ); [ನಾ] ಮಕ್ಕಳನ್ನು ಪಡೆಯುವ ಗರ್ಭ, ಹೆಂಡತಿ (ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳ್ ಅಂಬಿಕೆಗಮಂಬಾಲಿಕೆಗಂ ಪುತ್ರರಪ್ಪಂತು ವರಪ್ರಸಾದಮಂ ದಯೆಗೆಯ್ವುದೆನೆ ಅಂತೆಗೆಯ್ವೆನೆಂದು: ಪಂಪಭಾ, ೧. ೮೪ ವ)

ಕ್ಷೊಣಿ

[ನಾ] ನೆಲ, ಭೂಮಿ (ಬೞಿಕ್ಕಾಹವರಾಗೋತ್ಸಾಹ ಚಂಚದ್ಭಟಚಯಚರಣಾಸ್ಫಾಲಿತಂ ಕ್ಷೋಣಿಘೋಷಂ: ಆದಿಪು, ೧೪. ೯೩ ವ)

ಕ್ಷೊಣೀದ್ರ

[ನಾ] ಪರ್ವತ, ಬೆಟ್ಟ (ಧ್ವನತ್ತೂರ್ಯಸಂತತಿ ನಾದಪ್ರತಿಪೂರಿತ ಅಖಿಳಕುಳಕ್ಷೋಣೀಧ್ರಕುಂಜಂ: ಆದಿಪು, ೭. ೩೮)

ಕ್ಷೋದ

[ನಾ] ಪುಡಿ, ಚೂರ್ಣ (ಕಾಳಾಗರುಕಾಶ್ಮೀರ ಕಸ್ತೂರಿ ಕರ್ಪೂರ ಯಕ್ಷಕರ್ದಮಕ್ಷೋದದೊಳಂ ನದೀತರಂಗಂಗಳಂ ವಿಚಿತ್ರವರ್ಣಂ ಮಾಡಿ: ಆದಿಪು, ೧೧. ೧೩೯ ವ); ತಿಕ್ಕಾಟ, ಉಜ್ಜುವಿಕೆ (ಪಾಠೀನಚಕ್ರಕ್ಷೋದಪ್ರಕ್ಷೋಭಿತಂ ವಾರಿಧಿಯೆ ಗಗನಮಂ ಮುಟ್ಟಿ ನಿಂದಂತೆ: ಆದಿಪು, ೧೪. ೯೭)

ಕ್ಷೋದನೀಯ

[ಗು] ನುರಿಯುವ (ಅತ್ಯಂತಕೋಮಳತಾಳುತಳ ಸಂಘಟ್ಟಮಾತ್ರ ಕ್ಷೋಧನೀಯ ಮೋದಕಮುಂ: ಆದಿಪು, ೧೧. ೨೬ ವ)

ಕ್ಷೋಭ

[ನಾ] ಅಲ್ಲಾಡುವಿಕೆ (ನಿಮಿರ್ದಲ್ಲಾಡುವ ಕಾಂತಾಕುಂತಳಂ ತುಂಗಸ್ತನಕ್ಷೋಭವಿಭ್ರಮಂ ಉತ್ಕಂಪ ದರಿದ್ರಮಧ್ಯಂ: ಆದಿಪು, ೮. ೭೦); ಕದಡುವಿಕೆ (ಅಂತು ಸಮುದ್ರಕ್ಷೋಭಮುಂ ತ್ರೈಲೋಕ್ಯಕ್ಷೋಭಮುಂ ಒಡನೊಡನಾಗೆ: ಪಂಪಭಾ, ೧೧. ೧೫೩ ವ)

ಕ್ಷೌಮದುಕೂಲ

[ನಾ] ನಾರುವಸ್ತ್ರ (ಅನೇಕಧಾನ್ಯಸದನಂಗಳುಂ ಕ್ಷೌಮದುಕೂಲಾದಿ ದಿವ್ಯವಸನ ವಿವಿಧ ಪ್ರಾವರಣ ವಿಶೇಷಂಗಳುಂ: ಆದಿಪು, ೧೫. ೩ ವ)

ಕ್ಷ್ಮಾಜ

[ನಾ] ಮರ (ಏಂ ಮತಮಱಿದು ಓಲಗಿಪುದೊ ದಂಪತಿಗೆಂದುಮವಾರ್ಯವೀರ್ಯತೂರ್ಯಕ್ಷ್ಮಾಜಂ: ಆದಿಪು, ೫. ೩೫)

ಕ್ಷ್ಮಾಪ

[ನಾ] ದೊರೆ (ಸಕಳಕ್ಷ್ಮಾಪಶಿರೋರತ್ನಾಂಶುವ್ಯಾಪಿತ ಚರಣಂ ಸರಸ್ವತೀಮಣಿಹಾರಂ: ಆದಿಪು, ೧೧. ೧)

ಕ್ಷ್ಮಾಪಾಲ

[ನಾ] ರಾಜ (ಶ್ರೀಪತಿಗೆ ಯುದ್ಧಮಲ್ಲ ಮಹೀಪತಿಗೆ ನೆಗೞ್ತೆ ಪುಟ್ಟೆ ಪುಟ್ಟಿದಂ ಅಖಿಳ ಕ್ಷ್ಮಾಪಾಲಮೌಳಿಮಣಿಕಿರಣ ಆಪಾಳಿತ ನಖಮಯೂಖ ರಂಜಿತಚರಣಂ: ಪಂಪಭಾ, ೧. ೧೮)

ಕ್ಷ್ಮಾಭೃತ್

[ನಾ] ರಾಜ (ಕರಕಮಳಾಂಶುಚಯಾಂಜನಗಳೊಳ್ ಅರಿಕ್ಷ್ಮಾಭೃತ್ ಜಯಶ್ರೀವಶೀಕರಣಂ ಮಾಡಿ: ಆದಿಪು, ೬೪)

ಕ್ಷ್ವೇಡಿತ

[ನಾ] ಕೂಗಾಟ (ಉದಗ್ರಕುಂಜg ಕುಂಭಜರ್ಜರಣ ಜನಿತೋತ್ಕಂಠ ಕಂಠೀರವರವೋದ್ಭಟಭೂರವಂಗಳಪ್ಪ ಸುಭಟ ಪಟುಕ್ಷ್ವೇಡಿತಂಗಳಿಂದಂ ಸಂದಣಿಸಿ: ಆದಿಪು, ೧೩. ೪೨ ವ)

Search Dictionaries

Loading Results

Follow Us :   
  Download Bharatavani App
  Bharatavani Windows App