भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಕತ್ತಿಗೆ

[ನಾ] [ಕರ್ತ್ರಿಕಾ] ಕೈ ಮಚ್ಚು, ಕತ್ತಿ (ಕೃತಾಂತನಂತಾಕಾರಮಾಗಿ ತೞತೞಿಸಿ ಪೊಳೆವ ಕತ್ತಿಗೆಯಂ ಬೆರಸು ಪೊಱಮಟ್ಟು ಕೀರ್ತಿಗೆಯೆಂಬ ಉಗ್ರದೇವತೆ: ಪಂಪಭಾ, ೮. ೪೨ ವ)

ಕತ್ತುರಿ

[ನಾ] ಕಸ್ತೂರಿಮಲ್ಲಿಗೆ (ಎಸಳಂ ಮುಟ್ಟಲೊಡಂ ತನ್ನ ಸೌರಂಭಂಗೆಟ್ಟು ನೆಗೞ್ದ ಕತ್ತುರಿ ಮಣ್ಗಂ ಮಸಿಗಂ ಎಣೆಯಪ್ಪುದೆನೆ: ಆದಿಪು, ೧೧. ೧೨೧) [‘ಕತ್ತುರಿವಣ್ಗಂ’ ಎಂಬ ಬದಲು ‘ಕತ್ತುರಿ ಮಣ್ಗಂ” ಎಂಬ ಪಾಠವನ್ನು ಬಸವರಾಜು ಹಾಗೂ ನರಸಿಂಹಶಾಸ್ತ್ರಿಗಳು ಸ್ವೀಕರಿಸುತ್ತಾರೆ], [ನಾ] ಒಂದು ಸುಗಂಧ ದ್ರವ್ಯ (ಕತ್ತುರಿಬಿಯಮಂ ಮೆಱೆದು ಕತ್ತುರಿಯೊಳ್ ಪೂೞ್ದು ಕತ್ತುರಿಮಿಗದಂತಿರ್ಪ ಕತ್ತುರಿಬೊಜಂಗರುಂ: ಪಂಪಭಾ, ೪. ೮೭ ವ)

ಕತ್ತುರಿಬಿಯ

[ನಾ] ಕಸ್ತೂರಿಯ ವೆಚ್ಚ (ಚಿಕ್ಕ ಪೋರ್ಕುಳಿ ಬೊಜಂಗರುಂ ಕತ್ತುರಿಬಿಯಮಂ ಮೆಱೆದು ಕತ್ತುರಿಯೊಳ್ ಪೂೞ್ದು ಕತ್ತುರಿಮಿಗದಂತಿರ್ಪ ಕತ್ತುರಿಬೊಜಂಗರುಮಂ: ಪಂಪಭಾ, ೪. ೮೭ ವ)

ಕತ್ತುರಿಬೊಜಂಗ

[ನಾ] ಗಾಢವಾಗಿ ಕಸ್ತೂರಿ ಲೇಪಿಸಿಕೊಂಡ ವಿಟ (ಚಿಕ್ಕ ಪೋರ್ಕುಳಿ ಬೊಜಂಗರುಂ ಕತ್ತುರಿಬಿಯಮಂ ಮೆಱೆದು ಕತ್ತುರಿಯೊಳ್ ಪೂೞ್ದು ಕತ್ತುರಿಮಿಗದಂತಿರ್ಪ ಕತ್ತುರಿಬೊಜಂಗರುಮಂ: ಪಂಪಭಾ, ೪. ೮೭ ವ)

ಕತ್ತುರಿಮಿಗ

ಕಸ್ತೂರಿ ಮೃಗ (ಚಿಕ್ಕ ಪೋರ್ಕುಳಿ ಬೊಜಂಗರುಂ ಕತ್ತುರಿಬಿಯಮಂ ಮೆಱೆದು ಕತ್ತುರಿಯೊಳ್ ಪೂೞ್ದು ಕತ್ತುರಿಮಿಗದಂತಿರ್ಪ ಕತ್ತುರಿಬೊಜಂಗರುಮಂ: ಪಂಪಭಾ, ೪. ೮೭ ವ)

ಕತ್ತುರಿಮೃಗಮದ

[ನಾ] ಕಸ್ತೂರಿ ಮೃಗದ ಮದ, ಪರಿಮಳ (ಉತ್ತಮಮದಕರಿಕಟಭಿತ್ತಿಗಳಿಂ ಸುರಿವ ಮದದ ಬಂಧುರಗಂಧಂ ಕತ್ತುರಿಮೃಗಮದದೊಳ್ ಪುದಿದು: ಆದಿಪು, ೯. ೧೨೦)

ಕತ್ತುರಿಯಲ್

ಕಸ್ತೂರಿಯಲ್ಲಿ (ಕತ್ತುರಿಯಲ್ ಬರೆದಂತಪ್ಪ ವಿಕ್ರಾಂತತುಂಗನ ಮೀಸೆಗಳ್ ಆಥನ ತೀವ್ರಪ್ರತಾಪಾನಳ ಧೂಮಲೇಖೆಯಂತಾದುವು: ಪಂಪಭಾ, ೨. ೩೯ ವ)

ಕತ್ತುರಿವಣ್

[ನಾ] ಕಸ್ತೂರಿ ಪರಿಮಳದಂತಹ ಮಣ್ಣು, ಕಪ್ಪು ಮಣ್ಣು? (ಎಸಳಂ ಮುಟ್ಟಲೊಡಂ ತನ್ನ ಸೌರಂಭಂಗೆಟ್ಟು ನೆಗೞ್ದ ಕತ್ತುರಿವಣ್ಗಂ ಮಸಿಗಂ ಎಣೆಯಪ್ಪುದೆನೆ ಬಣ್ಣಿಸುವ ಕೇದಗೆಯ ಕಂಪನೇವಣ್ಣಿಸುವೆಂ: ಆದಿಪು, ೧೧. ೧೨೧)

ಕಥಕ

[ನಾ] ಕತೆ ಹೇಳುವವನು (ಸೂತ ನಟ ವಂದಿಮಾಗಧ ವೈತಾಳಿಕ ಕಥಕ ಪುಣ್ಯಪಾಠಕ ವಿಪ್ರ ಉದ್ಭೂತರವಂ ಎಸೆಯೆ: ಪಂಪಭಾ, ೧೨. ೧೦೬)

ಕಥಾನಾಯಕ

[ನಾ] ಕತೆಯ ಮುಖ್ಯ ಪಾತ್ರ (ವೈರಿನರೇಂದ್ರೋದ್ದಾಮ ದರ್ಪೋದ್ದಳನನೆ ಕಥಾನಾಯಕಂ ಮಾಡಿ ಸಂದ ಅರ್ಜುನನೊಳ್ ಪೋಲ್ವೀ ಕಥಾಭಿತ್ತಿಯಂ ಅನುನಯದಿಂ ಪೇೞಲೆಂದೆತ್ತಿಕೊಂಡೆಂ: ಪಂಪಭಾ, ೧. ೫೧)

ಕಥಾಭಿತ್ತಿ

[ನಾ] ಕತೆಯ ಹಿನ್ನೆಲೆ, ಕತೆಯ ವಸ್ತು [ಭಿತ್ತಿ=ಗೋಡೆ, ಚಿತ್ರಕ್ಕೆ ಗೋಡೆ ಹಿನ್ನೆಲೆಯಾದಂತೆ] (ವೈರಿನರೇಂದ್ರೋದ್ದಾಮ ದರ್ಪೋದ್ದಳನನೆ ಕಥಾನಾಯಕಂ ಮಾಡಿ ಸಂದ ಅರ್ಜುನನೊಳ್ ಪೋಲ್ವೀ ಕಥಾಭಿತ್ತಿಯಂ ಅನುನಯದಿಂ ಪೇೞಲೆಂದೆತ್ತಿಕೊಂಡೆಂ: ಪಂಪಭಾ, ೧. ೫೧)

ಕಥಾಸಂಬಂಧ

[ನಾ] ಕಥಾಪ್ರಬಂಧ, ಕಾವ್ಯ (ಕರಮೞ್ಕರ್ತು ಸಮಸ್ತಭಾರತಕಥಾಸಂಬಂಧಮಂ ಬಾಜಿಸಲ್ ಬರೆಯಲ್ ಕೇಳಲ್ ಒಡರ್ಚುವಂಗಂ: ಪಂಪಭಾ, ೧೪. ೬೫)

ಕಥಿತ

[ಗು] ಹೇಳಲಾದ (ಅಶ್ವತ್ಥಾಮಂ ಕಂಡು ಮುಟ್ಟೆವರ್ಪನ್ನೆಗಂ ಶೋಣಾಶ್ವೋಪಲಕ್ಷಿತ ನಿಜಪಿತೃಸೂತಕೇತನ ಕಥಿತಮಾಗಿರ್ದ ರಥಮಂ ಉಪಲಕ್ಷಿಸಿ: ಪಂಪಭಾ, ೧೨. ೩೦ ವ)

ಕಥೆವೇೞ್

[ಕ್ರಿ] ನಿರೂಪಣೆ ಮಾಡು (ನನ್ನಿಯಾದುದು ಸುತಂಗೆ ಕಥೆವೇೞ್ವರೆಂಬ ನಾಣ್ಣುಡಿ ಜಗದೊಳ್: ಆದಿಪು, ೮. ೧೪)

ಕದಕ್ಕದಿಸು

[ಕ್ರಿ] ಅಲುಗಾಡು (ತುಂಗಸ್ತನಂ ಕದಕ್ಕದಿಸೆ ಕಣ್ಮಲರ್ ಪೊಳೆಯೆ: ಆದಿಪು, ೧೨. ೧೩)

ಕದಡು

[ಕ್ರಿ] ಕಲಕು (ಭೋಂಕನೆ ಮನಮಂ ಕದಡಿ ಕಲಂಕಿದಪುದು ಬಿಡದೆ ಮನಮನೊಲಿಸಿದಪುದು ಆದಂ ಕೆಳದಿ ಪಾಣ್ಬರಂಕುಸನ ಅಂಕುಸದಾ ಪೊಳಪುಂ ಅವನ ಕಣ್ಗಳ ಬೆಳ್ಪುಂ: ಪಂಪಭಾ, ೪. ೬೭); [ನಾ] ಮಿಶ್ರಣ (ರಮಣೀಯ ರಮಣೀಜನಂ ಬೆರಸು ಪಂಚರತ್ನಂಗಳಿಂ ಕೆದಱಿಸಿ ಸಾಂದಿನ ಸೌಸವದ ಕುಂಕುಮದ ಕತ್ತುರಿಯ ಕದಡಂ ಕದಡಿ: ಪಂಪಭಾ, ೫. ೬೦ ವ)

ಕದಡೇೞ್

[ಕ್ರಿ] ಬಗ್ಗಡವಾಗು (ಜಾತ್ಯಶ್ವ ರಥ ಆಶ್ವಸಂಕುಳಖಲೀನ ಉದ್ಭೂತ ಲಾಲಾಜಲಂ ಕದಡೆೞ್ದು: ಪಂಪಭಾ, ೧೦. ೩೧)

ಕದನತ್ರಿಣೇತ್ರ

[ನಾ] ಯುದ್ಧದಲ್ಲಿ ರುದ್ರನಂತೆ ಪ್ರಚಂಡ (ತ್ರಿಣೇತ್ರನುಮಂ ಅಸುಂಗೊಳಿಸಿದ ಸಾಹಸದೊಳ್ ಕದನತ್ರಿಣೇತ್ರನುಂ: ಪಂಪಭಾ, ೧೪. ೩೭ ವ)

ಕದನಪ್ರಾರಂಭಶೌಂಡ

[ನಾ] ಯುದ್ಧೋದ್ಯೋಗದಲ್ಲಿ ಆಸಕ್ತ (ಕದನಪ್ರಾರಂಭಶೌಂಡಂ ರಿಪುನೃಪಬಲದಾವಾನಲಂ ವೈರಿಭೂಭೃತ್ ಮದವತ್ ಮಾತಂಗಕುಂಭಸ್ಥಳ ದಳನಖರೋಗ್ರಾಸಿಪಂಚಾಸ್ಯಧೈರ್ಯಂ: ಪಂಪಭಾ, ೬. ೭೭)

ಕದನಾನಕ

[ನಾ] ರಣಭೇರಿ (ದಿಗ್ಭಿತ್ತಿವಿಭೇದಿ ಪೆರ್ಚೆ ಕದನಾನಕ ರಾವಂ: ಪಂಪಭಾ, ೮. ೯೨)

Search Dictionaries

Loading Results

Follow Us :   
  Download Bharatavani App
  Bharatavani Windows App