Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಕಃ ಕೇನಾರ್ಥಿ ಕೋ ದರಿದ್ರಃ
ಯಾರು ಏನನ್ನು ಬೇಡುತ್ತಾನೆ, ಯಾರು ಬಡವ (ಆ ದೀನಾನಾಥರ್ಗೆ ವೃದ್ಧದ್ವಿಜಮುನಿನಿಕರಕ್ಕೆ ಅಂದು ಎಡಱು ಪೋಪಿನಂ ಕಃ ಕೇನಾರ್ಥೀ ಕೋ ದರಿದ್ರಃ ಎನುತುಂ ಅನಿತುಮಂ ಧರ್ಮಜಂ ಸೂಱೆಗೊಟ್ಟಂ: ಪಂಪಭಾ, ೬. ೪೦)
ಕಂಕಣವಾರ
[ನಾ] ಬಳೆಗಳ ಸಾಲು [ಕಂಕಣ+ಆರ=ಕಂಕಣ ಮತ್ತು ಹಾರ] (ಮೆಲ್ಲನೆ ವಕುಲ ಆಳವಾಳತಳದೊಳ್ ಸುರಿದ ಅಂಬುಜಸೂತ್ರದಿಂದೆ ಮತ್ತನಿತಱೊಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂದು ಬೇೞ್ಪನಿತನೆ ಮಾಡಿ: ಪಂಪಭಾ, ೨. ೧೬)
ಕಕುದ
[ನಾ] ರಾಜಚಿಹ್ನ (ಸ್ನೇಹನಿಗಳದಿಂದಮೆ ತೊಡರ್ದು ಆ ಧವಳಾತಪವಾರಣ ಕಕುದವಿಭೂತಿಯನುೞಿದು ನೆಗೞ್ದು ಉಪಾಸಕನಾದಂ: ಆದಿಪು, ೬. ೬)
ಕಕುದ್ದೇಶ
[ನಾ] ಪರ್ವತಪ್ರದೇಶ (ತದ್ಗಿರೀಂದ್ರೋತ್ತರ ಕಕುದ್ದೇಶದ ಸ್ಫಟಿಕ ಅಂಜನ ಕಾಂಚನ ರಜತ ರುಚಕ ಕುಂಡಳ ರುಚಿರ ಸುದರ್ಶನಂಗಳೆಂಬ ಎಂಟು ಕೂಟಂಗಳೊಳ್: ಆದಿಪು, ೭. ೩ ವ)
ಕಕುಭ
[ನಾ] ಮತ್ತಿಯ ಗಿಡ (ಕಕುಭ ಅಶೋಕ ಕದಂಬ ಲುಂಗ ಲವಲೀಭೂಜ ಆರ್ಜುನ ಅನೋಕಹ ಪ್ರಕರಂ: ಪಂಪಭಾ, ೫. ೮೦)
ಕಂಕೇಲಿ
[ನಾ] ಕಂಕೆಲ್ಲಿ, ಅಶೋಕವೃಕ್ಷ (ಪುಣ್ಯಾಂಬು ಪೂರ್ಣಕುಂಭಾಗ್ರಮುಚಿತ ಕಂಕೇಲಿಪಲ್ಲವೋಲ್ಲಾಸರಚಿತ: ಆದಿಪು, ೪. ೩೦ ರಗಳೆ)
ಕಕ್ಕಡೆ
[ನಾ] ಗರಗಸದಂತೆ ಬಾಯುಳ್ಳ ಒಂದು ಬಗೆಯ ಆಯುಧ (ನಡುವ ಸರಲ್ಗೆ ಮೆಯ್ಯೊಳ್ ಅಡಂಗುವ ಸಂಕುಗೆ ದಿಂಕುಗೊಳ್ವ ಕಕ್ಕಡೆಗೆ ಇದಿರ್ ಉರ್ಚುವ .. .. ಪಂಪಭಾ, ೧೦. ೯೪)
ಕಕ್ಕಂಬು
[ನಾ] ಒಂದು ಬಗೆಯ ಬಾಣ, ಮುಳ್ಳಿನ ಬಾಣ (ನೆಱನರಿವ ಕಣೆ ಗೆಲೆಯಂಬು ಕಕ್ಕಂಬು ಕೆಲ್ಲಂಬು ಮೊನೆಯಂಬು ತೀವೆ ಕಣ್ಣಂ: ಪಂಪಭಾ, ೧೩. ೩೯)
ಕಕ್ಕರ
[ನಾ] ಒಂದು ಬಗೆಯ ಮದ್ಯ (ಈ ಕಕ್ಕರಕ್ಕಿಂತುಟಪ್ಪುದು ಕಳ್ಳಪ್ಪುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್: ಪಂಪಭಾ, ೪. ೮೮)
ಕಕ್ಕರಗೆಯ್ತ
[ನಾ] ಕಕ್ಕರವೆಂಬ ಮದ್ಯದ ಪ್ರಭಾವ, ಅಮಲಿನಿಂದ ಮಾಡುವ ಚೇಷ್ಟೆ (ಅಂತು ಕುಡಿಯೆ ಕಕ್ಕರಗೆಯ್ತದಿಂ ತುದಿನಾಲಗೆಯೊಳ್ ತೊದಳ್ವೆರಸು ನುಡಿದ ನುಡಿಗಳುಂ: ಪಂಪಭಾ, ೪. ೮೮ ವ)
ಕಕ್ಕರವೞಯಿಗೆ
[ನಾ] [ಕಕ್ಕರ+ಪೞಯಿಗೆ] ಮಾಸಲು ಬಣ್ಣದ ಬಟ್ಟೆ (ಕಾರೋಹಣದ ಕಕ್ಕರವೞಯಿಗೆಯ ಚಿತ್ರಾವಳಿಯ ಪರಿವೆಡೆಯ ತುಳಿವೆಡೆಯ ನೆಳಲಪಾಣಿಯ: ಆದಿಪು, ೪. ೩೪ ವ)
ಕಕ್ಕಸ
[ನಾ] [ಕರ್ಕಶ] ಕಠಿಣನಾದವನು (ಆಗಳೆ ಪೂಣಿಸಿ ಪೋಗವೇೞ್ದು ಮಚ್ಚರದೊಳೆ ಮಾಣದೆ ಒಡ್ಡಿದಂ ಅಸುಂಗೊಳೆ ಕಕ್ಕಸರ್ ಅಂಜೆ ಸಂಜೆಯೊಳ್: ಪಂಪಭಾ, ೧೧. ೮೫)
ಕಕ್ಕುಂಬ
[ನಾ] ? ಈ ಶಬ್ದವನ್ನು ಮುಳಿಯ ತಿಮ್ಮಪ್ಪಯ್ಯನವರು ‘ಕುಕ್ಕಂಬ’ ಎಂದು ತಿದ್ದಿ ಅದಕ್ಕೆ ಡೇರೆಯ ಕಿರುಗಂಬಗಳೆಂಬ ಅರ್ಥ ಹೇಳುತ್ತಾರೆ (ಮೂಡಿಗೆ ಕಕ್ಕುಂಬ ಸುೞಿಸಿ ಜೊಂಪಂ ಬೀಡುಬಿಡುವಿಂಬು: ಪಂಪಭಾ, ೫. ೪೧)
ಕಕ್ಷ
[ನಾ] ಪಾರ್ಶ್ವ, ಕಡೆ (ಆಗಳ್ ಮದಗಜಕಕ್ಷಧ್ವಜವಿರಾಜಿತಮಪ್ಪ ತನ್ನ ಪೊನ್ನ ರಥಮಂ ಮದ್ರರಾಜನಂ ಏಱಲ್ವೇೞ್ದು: ಪಂಪಭಾ, ೧೨. ೧೦೯)
ಕಕ್ಷಾ
[ನಾ] ಅಂತಸ್ತು (ಧೃತದೇವೇಂದ್ರವಿಮಾನ ರುಂದ್ರಮಹಿಮಂ ಶ್ರೀಸಪ್ತಕಕ್ಷಾಸಮನ್ವಿತಂ: ಆದಿಪು, ೬. ೧೦೭)
ಕಂಗನೆ
[ಕ್ರಿವಿ] ಬಹಳವಾಗಿ (ಮುನಿಸಿನೊಳ್ ಆದಂ ಏವಯಿಸಿ ಸೈರಿಸದೆ ಅದವೞಲೊಳ್ ಕನಲ್ದು ಕಂಗನೆ ಕನಲುತ್ತುಂ ಉಮ್ಮಳಿಸಿ: ಪಂಪಭಾ, ೪. ೧೦೬)
ಕಂಗು
[ನಾ] ನವಣೆ (ಕಳಮ ಷಷ್ಟಿಕಾ ವ್ರೀಹಿ ಯುವ ಯಾವನಾಳ ಗೋಧೂಮ ಕಂಗು .. .. ವಿವಿಧ ಧಾನ್ಯಭೇದಂಗಳುಂ: ಆದಿಪು, ೬. ೭೨ ವ)
ಕಚಗ್ರಹ
[ನಾ] ಕೂದಲನ್ನು ಹಿಡಿಯುವಿಕೆ (ಸಂಗ್ರಾಮಭೂಮಿಯ ನಡುವೆ ಧೃಷ್ಟದ್ಯುಮ್ನ ಕಚಗ್ರಹವಿಲುಳಿತಮೌಳಿಯುಂ ತದೀಯ ಕೌಕ್ಷೇಯಕ ಧಾರಾವಿದಾರಿತಶರೀರನುಂ ಆಗಿ ಬಿೞ್ದಿರ್ದ ಶರಾಚಾರ್ಯರಂ ಕಂಡು: ಪಂಪಭಾ, ೧೩. ೫೫ ವ)
ಕಂಚುಕಿ
[ನಾ] ಅಂತಃಪುರದ ಪಾರುಪತ್ತೇದಾರ (ಭರತರಾಜಂ ಅಯೋಧ್ಯೆಯೊಳ್ ಆಸ್ಥಾನಮಂಟಪದೊಳಿರೆ ತತ್ಪುರೋಹಿತ ಆಯುಧಾಧ್ಯಕ್ಷ ಅಂತಃಪುರವೃದ್ಧಕಂಚುಕಿಗಳ್ ಬಂದು: ಆದಿಪು, ೧೦. ೪೮ ವ)
ಕಂಚುಕಿತ