Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಖಂಡ
[ನಾ] ಗುಂಪು, ಸಮೂಹ (ನಾಗರ ಖಂಡಂಗಳಂ ಆ ನಾಗರ ಖಂಡದೊಳೆ ತೊಡರೆ ನರಂ ಇಸುವುದುಂ ನಾಗರ ಖಂಡಂಗಳುಮಂ ನಾಗರ ಖಂಡಮುಮಂ ಅಳುರ್ದುಕೊಂಡಂ ದಹನಂ: ಪಂಪಭಾ, ೮೯); [ನಾ] ಮಾಂಸಖಂಡ (ನಾಟಕಶಾಲೆಯೊಳ್ ಎಯ್ದೆ ರಕ್ತಪುಷ್ಪಾಂಜಳಿಗೆಯ್ದ ಮಾೞ್ಕೆಯವೊಲಿರ್ದುದು ಸೂಸಿದ ಖಂಡದಿಂಡೆಗಳ್: ಪಂಪಭಾ, ೮. ೭೮)
ಖಂಡನೀಯ
[ಗು] ಮುರಿಯುವ (ಅಲ್ಪದಶನಮಾತ್ರ ಖಂಡನೀಯ ಮಂಡಕಮುಮಂ: ಆದಿಪು, ೧೧. ೨೬ ವ)
ಖಂಡಾತ್
[ಭರತ] ಖಂಡದಿಂದ (ಆಸೇತೋ ರಾಮಚಾಪ ಅಟನಿತಟಯುಗ ಟಂಕ ಅಂಕಿತ ಆಖಂಡಖಂಡಾತ್: ಪಂಪಭಾ, ೧೪. ೨೭)
ಖಡ್ಗಧೇನುಕ
[ನಾ] ಕಿರುಗತ್ತಿ, ಸುರಗಿ (ಗುಪ್ತಗುಲ್ಮಾಂತರಪ್ರಾಪ್ತ ಖಡ್ಗಧೇನುಕಮಾಂಧ್ರದಾನುಷ್ಕಬಳಂ: ಆದಿಪು, ೧೩. ೪೫ ವ)
ಖಡ್ಗರತ್ನ
[ನಾ] [ಜೈನ] ಭರತ ಚಕ್ರವರ್ತಿಯ ಏಳು ಅಜೀವರತ್ನಗಳಲ್ಲಿ ಒಂದು (ಆ ನೆಗೞ್ದ ಸಮರಕಳಕಳಮಂ ಕೇಳ್ದಿದೇನೆಂದು ಭರತೇಶ್ವರಚಕ್ರವರ್ತಿ ಖಡ್ಗರತ್ನಕ್ಕೆ ಕೈಯಂ ನೀಡಿದಾಗಳ್: ಆದಿಪು, ೧೩. ೬೬ ವ)
ಖಡ್ಗಿ
[ನಾ] ಖಡ್ಗಧಾರಿ (ತುರಂಗಸೈನ್ಯಂ ಉರ್ಕುಡುಗದೆ ಬರ್ಪ ನಾಯಕಬಲಂ ರಥಸಂತತಿ ಖಡ್ಗಿವೃಂದಂ: ಆದಿಪು, ೪. ೯೨); [ನಾ] ಖಡ್ಗಮೃಗ (ಇಭಖಡ್ಗಿವ್ರಾತ ನಾನಾ ಹರಿಮಯ ಕಟಕಭ್ರಾಂಜಿತ ತುಂಗವಂಶಪ್ರಭವಂ: ಆದಿಪು, ೧೩. ೪೬)
ಖದಿರಗುಳಿಕಾ
[ನಾ] ಕಾಚಿನ ಗುಳಿಗೆ (ಮೃಗಮದಖದಿರಗುಳಿಕಾ ಬಹಳಕರ್ಪೂರಪಾಳೀಸಂಮಿಶ್ರ ತಾಂಬೂಲದ್ವಿಗುಣಿತ ವದನಾರವಿಂದಾಮೋದನುಮಾಗಿ: ಆದಿಪು, ೧೧. ೨೭ ವ)
ಖದ್ಯೋತ
[ನಾ] ಮಿಣುಕು ಹುಳು (ಸಮಸ್ತ ಉರ್ವೀಧರ ಅಶೇಷ ಶೇಷ ಮಹಾನಾಗಫಣಾಮಣಿ ದ್ಯುತಿಯನೇಂ ಖದ್ಯೋತದೊಳ್ ಕಾಣ್ಬರೇ: ಪಂಪಭಾ, ೫. ೭೬)
ಖರ
[ನಾ] ಕತ್ತೆ (ವಾನರ ವಾರಣ ಉಷ್ಟ್ರ ಖರ ಮತ್ಸ್ಯ ಕಳೇವರ ಪೂತಿಗಂಧಮೇನೇನೊಳವುಳ್ಳುವೊಂದೆಡೆಗೆ ಬಂದುಂ ಅವಂದಿರ ಮೆಯ್ಯ ಗಂಧದುದ್ದಾನಿಗೆ ವಾರದು: ಆದಿಪು, ೫. ೯೦); [ಗು] ತೀಕ್ಷ್ಣವಾದ (ಭರತನ ಮುಖದೊಳ್ ಪರ್ವಿದ ಖರಕೋಪಾನಳನನೆಯ್ದೆ ನಂದಿಸುವವೊಲ್: ಆದಿಪು, ೧೪. ೧೦೭); [ಗು] ಬಲವಾದ (ಸುಭಟಾರೂಢತುರಂಗಮ ವೇಗಬಲಪತಿತ ಖರಖುರಟಂಕ ಪರಿಸ್ಖಲನಕಳಿತ ವಿಷಮಸಮರಭೆರೀನಿಸ್ವನಮುಂ: ಪಂಪಭಾ, ೧೩. ೫೧ ವ)
ಖರಕರ
[ನಾ] ತೀಕ್ಷ್ಣಕಿರಣ[ಗಳುಳ್ಳವನು] ಸೂರ್ಯ (ಖರಕರಸಮಪ್ರಭಂ ಚಕ್ರರತ್ನಂ ಒಡವುಟ್ಟೆ ಪುಟ್ಟಿದೆರಡೊಸಗೆಯೊಳಂ: ಆದಿಪು, ೩. ೨೭)
ಖರಕರಬಿಂಬ
[ನಾ] ಸೂರ್ಯಮಂಡಲ (ಖರಕರಬಿಂಬದಿಂ ಕಿರಣಸಂತತಿಗಳ್ ಪೊಱಪೊಣ್ಮಿದಪ್ಪುವು ಎಂಬರ ನುಡಿ ಪೋಲ್ವೆವೆತ್ತುದು ಎನೆ: ಪಂಪಭಾ, ೧೨. ೭೩)
ಖರಕಿರಣ
[ನಾ] ಸೂರ್ಯ (ಖರಕಿರಣಸ್ಫುರಿತಕ್ಕಿದಿರುರಿವಂತಿರೆ ಸಾಮದಿಂದಳವಡಿಸಿ ನೋಡುವೆಂ: ಆದಿಪು, ೧೪. ೪೨)
ಖರತನ
[ನಾ] ತೀಕ್ಷ್ಣತೆ, ಉಗ್ರತೆ (ಖರಕಿರಣಂಗಳ ಕಾಯ್ಪಿನ ಖರತನದಿಂ ಚಂದ್ರಕಿರಣದುಜ್ಜಳಿಕೆಯಿಂ: ಆದಿಪು, ೧೧. ೭)
ಖರಪರುಷ
[ನಾ] ಕತ್ತೆಯ ದನಿಯಂತೆ ಕರ್ಕಶವಾದ (ಖರಪರುಷನಿನಾದರ್ ನಾರಕರ್ ಬರ್ದುತಿರ್ಪರ್: ಆದಿಪು, ೫. ೮೯)
ಖರಸಾಣೆಗಾಣಿಸು
[ನಾ] ಸಾಣೆ ಹಿಡಿ (ಮದನಾಸ್ತ್ರಂ ಖರಸಾಣೆಗಾಣಿಸಿದುದು ಎಂಬಂತಾಗೆ ನಿನ್ನೊಂದು ಕಂದಿದ ಮೆಯ್ ಎನ್ನಯ ತೋಳೊಳೊಂದೆ ಸಿರಿಯಂ ನೀನುಯ್ದು ತೊೞ್ತಾಳ್ದು ರಾಗದಿಂ ಎನ್ನೊಳ್ ಸುಕಮಿರ್ಪುದು: ಪಂಪಭಾ, ೮. ೬೬)
ಖರಾಂಶು
[ನಾ] ಖರಕರ (ಬೇಸಱೆ ಲೋಕಮಂ ತಗುಳ್ದು ಸುಟ್ಟ ಅೞಲಿಂದೆ ಖರಾಂಶು ನಾರಕಾವಾಸದೊಳ್ ಆೞ್ವವೋಲ್ ಅಪರವಾರ್ಧಿಯೊಳ್ ಆೞ್ವುದುಂ: ಪಂಪಭಾ, ೩. ೮೧)
ಖರ್ವಡ
[ನಾ] ಖರ್ವಟ, ನಗರ ಹಳ್ಳಿಗಳ ನಡುವಣ ಸ್ಥಿತಿಯ ಮತ್ತು ಬೆಟ್ಟಗಳ ನಡುವಿರುವ ಊರು (ಉರ್ವೀಧರನಿರುದ್ಧಂಗಳಪ್ಪ ಖರ್ವಡಂಗಳುಮಂ: ಆದಿಪು, ೮. ೬೩ ವ)
ಖರ್ವಡನಿವಾಸಿ
[ನಾ] ಬೆಟ್ಟದೂರುಗಳಲ್ಲಿ ವಾಸಿಸುವವರು (ಸರ್ವಸ್ವಮುಮಂ ಕುಡದಿರಲುರ್ವೀಪತಿ ಬಂದೊಡೆ ಆಗದು ಎಂದು ಅತಿಭಕ್ತರ್ ಖರ್ವಡನಿವಾಸಿಗಳ್: ಆದಿಪು, ೯. ೧೨೮);
ಖರ್ವಿತ
[ಗು] ನೆಗ್ಗಿದ, ಅಗೆದ (ಮತ್ತ ಮಾತಂಗ ಪದನಖ ಖರ್ವಿತ ಉರ್ವೀತಳಮುಂ ಪ್ರಚಂಡ ಮಾರ್ತಂಡ ಮರೀಚಿ ತೀವ್ರ ಜ್ವಳನ ಆಸ್ಫಾರ ಕರಾಳ ಕರವಾಳ ಭಾಮಂಡಳ ಪರೀತ ಉದ್ಯತ ದೋರ್ದಂಡ ಚಂಡಪ್ರಚಂಡ ಸುಭಟ: ಪಂಪಭಾ, ೧೩. ೫೧)
ಖಲೀನ