Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಘಟ
[ನಾ] ಗಡಿಗೆ (ಕಾಮಂಗೆ ಮಜ್ಜನಕೆ ಎಂದೆತ್ತಿದ ಚಂದ್ರಕಾಂತ ಘಟದೊಳ್ ತಂದು ಅೞ್ತಿಯಿಂ ಪುಷ್ಪವಾಸನೆಗೆಂದಿಕ್ಕಿದ ನೀಳನೀರರುಹಮಂ ಪೋಲ್ದತ್ತು ಕೞ್ಪಿಂದುವಾ: ಪಂಪಭಾ, ೪. ೫೧)
ಘಟಚೇಟಿಕೆ
[ನಾ] ನೀರು ತರುವ ದಾಸಿ (ಕಮಳೆಯಂ ಅಶ್ವತ್ಥಾಮಂ ಮುಂದಿಟ್ಟು ಕುರುಕುಟುಂಬ ಘಟಚೇಟಿಕೆಯಂ ತರ್ಪಂತೆ ತಂದು: ಪಂಪಭಾ, ೧೩. ೧೦೨ ವ)
ಘಟಪ್ರೋದ್ಭೂತ
[ನಾ] ದ್ರೋಣ (ಶರಶಯ್ಯಾಗ್ರದೊಳ್ ಇಂತು ನೀಮಿರೆ ಘಟಪ್ರೋದ್ಭೂತಂ ಅಂತಾಗೆ ವಾಸರನಾಥಾತ್ಮಜಂ ಅಂತು ಸಾಯೆ: ಪಂಪಭಾ, ೧೩. ೬೯)
ಘಟಸಂಭವ
[ನಾ] ದ್ರೋಣ (ಈ ಅೞಿವು ಇನ್ನೆನಗೆ ಆಜಿರಂಗದೊಳ್ ಗೞಿಯಿಸುಗೆ ಎಂಬಿದಂ ನುಡಿಯುತುಂ ಘಟಸಂಭವನೊಳ್ ಸುಯೋಧನಂ: ಪಂಪಭಾ, ೧೧. ೧೦೯)
ಘಟಸಂಭೂತ
[ನಾ] ದ್ರೋಣ ಘಟಸಂಭೂತಂಗೆ ಕರ್ಣಂಗೆ ಅಸಾಧ್ಯನೊಳ್ ಆ ಗಾಂಡಿವಿಯೊಳ್ ಕಱುತ್ತಿಱಿವರಾರ್: ಪಂಪಭಾ, ೧೩. ೯)
ಘಟಾಘಟಿತ
[ಗು] ಆನೆಯ ಸಮೂಹದಿಂದ ಕೂಡಿದ, ಉಂಟಾಗುವ (ನಾಳೆ ವಿರೋಧಿಸಾಧನ ಘಟಾಘಟಿತ ಆಹವದಲ್ಲಿ ನಿನ್ನ ಕಟ್ಟಾಳಿರೆ ಮುಂಚಿ ತಾಗದೊಡಂ ಅಳ್ಕುಱೆ ತಾಗಿ ವಿರೋಧಿಸೈನ್ಯಭೂಪಾಳರಂ ಒಂದೆ ಪೊಯ್ಯದೊಡಂ: ಪಂಪಭಾ, ೧೦. ೩೯)
ಘಟಾಳಿ
[ನಾ] ಆನೆಯ ದಂಡು (ಬಾಯ್ಬಿಡೆ ಘಟಾಳಿ ಗುಣಾರ್ಣವನಂಬು ಲಕ್ಕಲೆಕ್ಕದೆ ಕೊಳೆ: ಪಂಪಭಾ, ೮. ೨೧)
ಘಟಿತ
[ಗು] ಕೂಡಿದ, ಸೇರಿಸಿದ (ಜಟಮಟಿಸಿಕೊಂಡು ನಿಮ್ಮೀ ಘಟಿಯಿಸುವ ಈ ಸಂಧಿ ಕೌರವರ್ಕಳೊಳ್ ಎನ್ನಿಂ ಘಟಿತ ಜರಾಸಂಧ ಉರಸ್ತಟ ಸಂಧಿವೊಲ್ ಒಂದೆ ಪೊೞ್ತಱೊಳ್ ವಿಘಟಿಸದೇ: ಪಂಪಭಾ, ೯. ೨೩)
ಘಟಿಯಿಸು
[ಕ್ರಿ] ಆಗು, ಸಂಭವಿಸು (ದಿಟ್ಟಿ ಮನಮೆಂಬಿವು ತೊಟ್ಟನೆ ನಟ್ಟು ನಟ್ಟವೊಲ್ ಘಟಿಯಿಸೆ ಸೋಲ್ತೊಱಲ್ದು: ಆದಿಪು, ೩. ೯೦); [ಗು] ಉಂಟಾಗಲಿರುವ (ಜಟಮಟಿಸಿಕೊಂಡು ನಿಮ್ಮೀ ಘಟಿಯಿಸುವ ಈ ಸಂಧಿ ಕೌರವರ್ಕಳೊಳ್ ಎನ್ನಿಂ ಘಟಿತ ಜರಾಸಂಧ ಉರಸ್ತಟ ಸಂಧಿವೊಲ್ ಒಂದೆ ಪೊೞ್ತಱೊಳ್ ವಿಘಟಿಸದೇ: ಪಂಪಭಾ, ೯. ೨೩)
ಘಂಟೆಯಲುಗು
[ಕ್ರಿ] [ಸೂಳೆಯ] ಮನೆಯ ಮುಂದಿನ ಗಂಟೆಯನ್ನು ಶಬ್ದಮಾಡು (ಮತ್ತಮಲ್ಲಿ ಕೋಟಿ ಪೊಂಗೆ ಘಂಟೆಯಲುಗುವ ಕಿಱುಕುಳಬೊಜಂಗರುಮಂ: ಪಂಪಭಾ, ೪. ೮೭ ವ)
ಘಟೋದ್ಭವ
[ನಾ] ದ್ರೋಣ (ಯಾದವವಂಶಜರುಂ ನಾನಾದೇಶ ನರೇಂದ್ರರುಂ ಘಟೋದ್ಭವನ ಧನುರ್ವೇದಮನೆ ಕಲಲ್ ಬಂದಾಳಾದರ್: ಪಂಪಭಾ, ೨. ೫೬)
ಘಟ್ಟಣೆ
[ನಾ] ತಾಗುವಿಕೆ, ಘರ್ಷಣೆ (ಬಾಳ್ವಾಳ್ಗಳ ಘಟ್ಟಣೆಯೊಳ್ ಬಳ್ವಳ ಬಳೆದೊಗೆದು ನೆಗೆದ ಕಿಡಿಗಳ ಬಂಬಲ್ಗಳ್ವೆರಸು ಪೊಳೆದು ನೆಗೆದುದು ಬಾಳ್ವೊಗೆ: ಪಂಪಭಾ, ೧೦. ೮೪)
ಘಟ್ಟನ
[ನಾ] ಹೊಡೆತ (ಚಟುಳಿತ ಚಕ್ರನೇಮಿ ಪರಿವರ್ತನ ಘಟ್ಟನಘಾತನಿರ್ಭರ ಸ್ಫುಟಿತ ಧರಾತಳಂ: ಪಂಪಭಾ, ೧೧. ೧೪೭)
ಘಟ್ಟಿಮಗುೞ್ಚು
[ಕ್ರಿ] ಅರೆಯುವಾಗ ಅದನ್ನು ತಿರುಗಿಸು (ಮನಂಬುಗೆ ನಳಿತೋಳ ಕೋಳೆಸೆಯೆ ಘಟ್ಟಿಮಗುೞ್ಚುವ ಘಟ್ಟಿವೞ್ತಿಯಂ ಭೋಂಕನೆ ಕಂಡು ಕೀಚಕಂ: ಪಂಪಭಾ, ೮. ೫೯ ಮತ್ತು ೫೯ ವ)
ಘಟ್ಟಿವಳ್ತಿ
[ನಾ] ಗಂಧ ತೇಯುವವಳು (ವಿವಿಧಗಂಧಂಗಳಂ ಆಂ ಅವಯವದೊಳ್ ಮಾಡುವ ಘಟ್ಟಿವಳ್ತಿಯೆಂ ದೇವಿ ಗಂಡವಳ್ತಿಯೆಂ ಅಲ್ಲೆಂ: ಪಂಪಭಾ, ೮. ೫೬)
ಘಟ್ಟಿಸು
[ನಾ] ಧಮ್ಮಸ್ಸು ಮಾಡು (ರತ್ನದಿಂ ಬೆರಸಿದ ಬಣ್ಣದೊಳ್ ಮೆಱೆಯೆ ಕಟ್ಟಿಸಿ ಘಟ್ಟಿಸಿ ರಂಗಭೂಮಿಯಂ: ಪಂಪಭಾ, ೩. ೪೦); ಅಪ್ಪಳಿಸು (ಚಾತುರ್ವಲಂಗಳ್ ಮೊದಲ ಸಮಕಟ್ಟುಗೆಟ್ಟು ತಡವರಿಸಿ ತಟ್ಟುಪೊಟ್ಟೆಂದು ಎಚ್ಚು ಮಿಟ್ಟುಂ ಇಱಿದು ತಱಿದು ಘಟ್ಟಿಸೆಯುಂ: ಪಂಪಭಾ, ೧೦. ೭೦ ವ)
ಘನ
[ನಾ] ಮೋಡ (ಘನದ ಕರಗಿದುದುನರಱಿದು ಅಪಘನದ ವಿಳಾಸಮನದೆಂತು ನಂಬುವುದೊ: ಆದಿಪು, ೪. ೬೫); ಘನವಾದುದು, ದೃಢವಾದುದು (ಘನಾಘನದಿಂದಂ ಅಱಿಯಲಾದುದು ಘನಾಘನಂ ಜವನ ದಾೞಿಗಿಲ್ಲೆಂಬಿನಿತಂ: ಆದಿಪು, ೪. ೬೫); [ನಾ] ತಾಳ, ಗಂಟೆ, ಗೆಜ್ಜೆ ಮುಂತಾದ ತಾಳವಾದ್ಯ (ಅತಿಮೃದುರವದಾಯಿಗಳಂ ತತ ಘನ ಸುಷಿರ ಅವನದ್ಧವಾದ್ಯಂಗಳನೇಂ ಮತಮಱಿದು ಓಲಗಿಪುದೊ ದಂಪತಿಗೆಂದುಂ ಅವಾರ್ಯತೂರ್ಯಕ್ಷ್ಮಾಜಂ: ಆದಿಪು, ೫. ೩೫); [ನಾ] ದಪ್ಪನಾದ (ಉತ್ತುಂಗ ಸುಸೂಕ್ಷ್ಮ ಪಾರ್ಶ್ವ ಕೃಶ ಕೋಮಳ ನಿಮ್ನ ಘನ ಉನ್ನತ ಪ್ರದೇಶಂಗಳಂ ಆ ಸಮಾನತಳದಲ್ಲಿಯೆ ಚಿತ್ರಕಂ ಎಯ್ದೆ ತೋರ್ಪವೋಲ್: ಪಂಪಭಾ, ೧೩. ೨೧)
ಘನಗರ್ಜನೆ
[ನಾ] ಮೋಡದ ಗರ್ಜನೆ, ಗುಡುಗು (ಕಡಲುರಿಯಂತೆ ಅಕಾಲಘನಗರ್ಜನೆಯಂತೆ ಸಮಸ್ತದಿಕ್ತಟಂ ಪಿಡುಗುವಿನಂ ರಣಾನಕರವಂಗಳಸುಂಗೊಳೆ: ಪಂಪಭಾ, ೧೩. ೩೩)
ಘನಘಟಾಟೋಪ
[ನಾ] [ಘನಘಟಾ+ಆಟೋಪ] ಮೋಡದ ರಾಸಿಯ ಅಬ್ಬರ, ಗುಡುಗು (ಸಮುದ್ಯತ್ ರಜತಗಿರಿ ತಟ ಸ್ಪಷ್ಟ ಸಂಶ್ಲಿಷ್ಟ ಮೌರ್ವೀನಿನದಂ ಪರ್ವಿತ್ತು ಅಕಾಂಡಪ್ರಳಯ ಘನಘಟಾಟೋಪ ಗಂಭೀರನಾದಂ: ಪಂಪಭಾ, ೧೨. ೧೩೭)
ಘನಘಟೆ