भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಾರಿ

[ನಾ] ನಾಟ್ಯದಲ್ಲಿನ ಹೆಜ್ಜೆಯ ಒಂದು ಗತಿ (ಚರಣದ ಚಾರಿಯ ಚಲ್ಲಿಯ ಪರಿಕ್ರಮಕ್ರಮದ ಭಂಗಿಗಳ್ ನೆಗೞ್ವೆಡೆಯೊಳ್: ಆದಿಪು, ೯. ೩೯); ಸಂಕೋಲೆ (ವಿಟಜನಕ್ಕೆ ತೊಡರ್ವ ಚಾರಿಯೆನಿಪ ಸೂಳೆಗೇರಿಯಿಂ ವಿದಗ್ಧಹೃದಯಹಾರಿಯಿಂ: ಪಂಪಭಾ, ೧. ೫೮)

ಚಾರಿತ್ರ

[ನಾ] ನಡವಳಿಕೆ (ಮಣಿಕುಂಡಲಂ ಕವಚಂ ಮಣಿಯದ ಚಾರಿತ್ರಂ ಉಗ್ರತೇಜಮುಂ ಈ ಒಳ್ಗುಣಮುಂ ಕಲಿತನಮುಂ: ಪಂಪಭಾ, ೧೨. ೯೮)

ಚಾರಿತ್ರಶುದ್ಧ

[ನಾ] ಪರಿಶುದ್ಧ ನಡತೆಯುಳ್ಳವನು (ಪರಮಬ್ರಹ್ಮ ತನೂಭವರ್ ದ್ವಿಜವರರ್ ವರ್ಣೋತ್ತಮರ್ ಲೋಕಪೂಜ್ಯರ್ ಇಳಾವಲ್ಲಭಮಾನ್ಯರ್ ಉನ್ನತಗುಣರ್ ಚಾರಿತ್ರಶುದ್ಧರ್ ಧರಾಮರರ್ ಈ ಬ್ರಾಹ್ಮಣರ್: ಆದಿಪು, ೧೫. ೨೦)

ಚಾರಿಸು

[ಕ್ರಿ] [ಕತ್ತಿಯನ್ನು] ಝಳಪಿಸು, ಬಳಸಿಕೊ (ಚಾರಿಸಿ ಬಾಳಾಗಮಮಂ ಅವತಾರಂಗೆಯ್ದಂತೆ ಕಾಲದಂತಕನನೆ ಪೋಲ್ತು ಆರುತ್ತುಂ ಕವಿವ ಅದಟರಂ ಓರೊಂದೋರೊಂದೆ ಪೊಯ್ದು ಕೊಂದರ್ ಪಲರಂ: ಪಂಪಭಾ, ೧೦. ೮೩); [ಕ್ರಿ] ಚತುರತೆಯಿಂದ ನಡೆಸು (ಚಾರಿಸಿ ಬಾಳಾಗಮಮವತಾರಂಗೆಯ್ದ ಅಂತಕಾಲದಂತಕನನೆ ಪೋಲ್ತಾರುತ್ತುಂ ಕವಿವದಟರನೋರೊಂದೋರಂದೆ ಪೊಯ್ದು ಕೊಂದರ್ ಪಲರಂ: ಪಂಪಭಾ, ೧೦. ೮೩)

ಚಾರು

[ನಾ] ಸುಂದರವಾದ (ಚಾರು ವಿವಿಧಾಗ್ನಿಕಾರ್ಯ ಮಹಾದ್ವಿಜನ್ಮಘೋಷದಿಂ ಅಂಹೋದೂರಮುಮಂ ಅವನಿತಳಾಳಂಕಾರಂ ಸಂಸಾರಸಾರಂ ಗಂಗಾದ್ವಾರಂ: ಪಂಪಭಾ, ೪. ೧೫)

ಚಾರುತರ

[ಗು] ರಮಣೀಯವಾದ (ಚಾರುತರ ಯಜ್ಞವಿದ್ಯಾ ಪಾರಗರ ರವಂಗಳಿಂ ಸ್ವಧಾಕಾರ ವಷಟ್ಕಾರ ಸ್ವಾಹಾಕಾರ ಓಂಕಾರಧ್ವನಿ ನೆಗೞೆ ನೆಗೞ್ದುದಾಹುತಿಧೂಮಂ: ಪಂಪಭಾ, ೬. ೩೪)

ಚಾಳಿಸು

[ಕ್ರಿ] ನಡುಗಿಸು, ಸೋಲಿಸು (ಅರಿನೃಪರಂ ಛೇದಿಸಿ ಪಾಂಚಾಳರಂ ಚಾಳಿಸಿ ಗಾಂಧರ್ವರಂ ವಿರಥರ್ಮಾಡಿ ಕೌಳಾಧೀಶರಂ ಸಾಧಿಸಿ ಕಿಂಪುರುಷರಂ ಕಾಪುರುಷರ್ಮಾಡಿ: ಪಂಪಭಾ, ೬. ೨೯ ವ)

ಚಿಃ

[ಅ] ಥೂ ಎಂಬ ತಿರಸ್ಕಾರಸೂಚಕ ಉದ್ಗಾರ (ಬಗೆಗೊಂಡ ಕುಲಧನಂ ಸಮದಗಜಂ ಜಾತ್ಯಶ್ವಮೆಂಬಿವಂ ಮತ್ತೊರ್ಬಂ ಪಗೆವಂಗೆ ಕೊಟ್ಟು ಚಿಃ ಕೆಮ್ಮಗೆ ಬೆಸೆವವಂ ಅರಸದೆಂತೊ ಪಗರಣದರಸಂ: ಆದಿಪು, ೧೨. ೯೮)

ಚಿಚ್ಚೆ

[ನಾ] ದಟ್ಟಣೆ (ಈ ಧರಾಭರಮನಶೇಷಮಂ ನಿಜತನೂಭವರ್ಗೋವದೆ ಪಚ್ಚುಕೊಟ್ಟು ಭೋಂಕರಿಸುವ ದೇವಕೋಟಿಗಳ ಚಿಚ್ಚೆಗಳೊಳ್ ತೊಡರ್ದೇಕೆ ಪೋಪಂ: ಆದಿಪು, ೯. ೭೫) (ಟಿವಿವೆಂ ಅವರ ಆವೃತ್ತಿಯಲ್ಲಿ ‘ಚಿಚ್ಚೆಗಳೊಳ್‌’ ಬದಲು ‘ಬಿಜ್ಜೆಗಳೊಳ್‌’ ಎಂಬ ರೂಪ]

ಚಿಟ್ಟೆ

[ನಾ] ಮಿಡಿತೆ (ಕೊಳ್ ಕೊಳ್ಳೆಂದು ಎಚ್ಚೊಡೆ ವಿಳಯ ಉಳ್ಕದ ತೆಱದಿಂದೆ ಮುಸುಱೆ ದಿವ್ಯಾಸ್ತ್ರಚಯಂಗಳ್ ಕೊಳೆ ಗಾಂಧರ್ವಬಲಂಗಳ್ ಕೆಡೆದುವು ನಿಟ್ಟೆಗೊಂಡ ಚಿಟ್ಟೆಯ ತೆಱದಿಂ: ಪಂಪಭಾ, ೭. ೩೮)

ಚಿಂತಾಕ್ರಾಂತೆ

[ನಾ] ಚಿಂತೆಗೆ ವಶವಾಗಿದ್ದವಳು (ಎಂದು ಚಿಂತಾಕ್ರಾಂತೆಯಾಗಿದ್ದ ಕುಂತಿಯಂ ಕಂಡು ಪಾಂಡುರಾಜಂ ಏಕಾಂತದೊಳಿಂತೆಂದಂ: ಪಂಪಭಾ, ೧. ೧೧೭ ವ)

ಚಿಂತಾಜನನಿ

[ನಾ] [ಜೈನ] ಭರತ ಚಕ್ರವರ್ತಿಯ ಏಳು ಅಜೀವರತ್ನಗಳಲ್ಲೊಂದಾದ ಕಾಕಿಣೀರತ್ನದ ಹೆಸರು (ಮಹಾಗುಹಾಗಹ್ವರಾಂತರ ಸೂಚೀನಿರ್ಭೇದ್ಯ ತಮಸ್ತಮೋ ನಿರಸನ ಪ್ರಭಾಭೂತ ಗುಣೋಪೇತಮಪ್ಪ ಚಿಂತಾಜನನಿ ಎಂಬ ಕಾಕಿಣೀರತ್ನಮುಂ: ಆದಿಪು, ೧೧. ೩ ವ)

ಚಿಂತಾಂತರ

[ನಾ] [ಚಿಂತಾ+ಅಂತರ] ಬೇರೆ ಚಿಂತೆ (ಶೋಕಾಗ್ನಿ ಪೊಂಪುೞಿವೋಗುತ್ತಿರೆ ಕರ್ಣನೆಂದಂ ಅನಿತೇಂ ಪೇೞಬ್ಬೆ ಚಿಂತಾಂತರಂ: ಪಂಪಭಾ, ೯. ೮೬)

ಚಿಂತಾಂತರಾಯ

[ನಾ] [ಚಿಂತಾ+ಅಂತರಾಯ] ಚಿಂತೆಯೆಂಬ ವಿಘ್ನ (ತಂತ್ರವಾಪ ಚಿಂತಾಂತರಾಯಪ್ರಾಯ ಸುಖಲವದೊಳೀ ಮಹೀತಳರಾಜ್ಯದೊಳ್ ನಿಱಿಸುವುದುಂ: ಆದಿಪು, ೮. ೮ ವ)

ಚಿತಾನಳ

[ನಾ] ಚಿತೆಯ ಬೆಂಕಿ (ಆ ಜಯದ್ರಥನ ಚಿತಾನಳನಿಂದಂ ಒಗೆದ ಪೊಗೆಗಳ್ ಕೊಳೆ ಸುರಿವೊಡೆ ಸುರಿವುವು ಎನ್ನ ನಯನಜಲಂಗಳ್: ಪಂಪಭಾ, ೧೧. ೧೧೯)

ಚಿಂತಾಮಣಿ

[ನಾ] ಕೇಳಿದ್ದನ್ನು ಕೊಡುವ ದೇವಲೋಕದ ಮಣಿ (ಚಂದ್ರನಂತೆ ಸರ್ವಸತ್ತ್ವಸೌಮ್ಯರುಂ ಅನಿಲನಂತೆ ನಿಸ್ಸಂಗರುಂ ಚಿಂತಾಮಣಿಯಂತೆ ಭವ್ಯಜನಮನೋಭಿಲಷಿತ ಫಲಪ್ರದರುಂ: ಆದಿಪು, ೪. ೯೫ ವ); [ನಾ] ಒಂದು ಮದ್ಯದ ಹೆಸರು (ಮಾರೀಚಿ ತೊಡರ್ಪುಳಿಂದೆ ಸರದಿಂ ಕಂಪಿಲ್ಲ ಚಿಂತಾಮಣಿಗೇವುದಕ್ಕ ದಳಮಿಲ್ಲ ಈ ಕಕ್ಕರಕ್ಕಿಂತುಟಪ್ಪುದು ಕಳ್ಳಪ್ಪುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್: ಪಂಪಭಾ, ೪. ೮೮)

ಚಿಂತಿಸುತ್ತುಂ

ಆಲೋಚನೆ ಮಾಡುತ್ತ (ಎಂದು ಚಿಂತಿಸುತ್ತುಂ ಪೊೞಲ್ಗೆ ಮಗುೞ್ದು ವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ವೃತ್ತಾಂತಮೆಲ್ಲಮಂ ಪೇೞ್ದು: ಪಂಪಭಾ, ೧. ೧೧೩ ವ)

ಚಿತ್ತಂಗೊಳ್

[ಕ್ರಿ] ಮನಸ್ಸಿಡು (ಕೇಳೀವನಪಾದಪಂಗಳಿರ ಚಿತ್ತಂಗೊಂಡು ಬೀೞ್ಕೊಂಡು ರಾಗದೆ ನಿಮ್ಮಂ ಬಲಗೊಂಡು ಪೋಪ ಗುಣಮಮಂ ಕೊಳ್ಳಿಂ ಮನಃಪ್ರೀತಿಯಿಂ: ಆದಿಪು, ೧೧. ೧೩೪)

ಚಿತ್ತಜ

[ನಾ] [ಜೈನ] ಬಾಹುಬಲಿಯ ಅನೇಕ ಹೆಸರುಗಳಲ್ಲಿ ಒಂದು (ಚಿತ್ತಜಂ ಚಿತ್ತಭವಂ .. .. ನೆಗೞ್ದುವು ಬಾಹುಬಲಿಗೆ ಪಲವುಂ ಪೆಸರ್ಗಳ್: ಆದಿಪು, ೮. ೫೩)

ಚಿತ್ತಭವ

[ನಾ] ಬಾಹುಬಲಿಯ ಒಂದು ಹೆಸರು (ಚಿತ್ತಭವಂ .. .. ಅಂಗಜನೆನೆ ನೆಗೞ್ದುವು ಬಾಹುಬಲಿಗೆ ಪಲವುಂ ಪೆಸರ್ಗಳ್: ಆದಿಪು, ೮. ೫೩)

Search Dictionaries

Loading Results

Follow Us :   
  Download Bharatavani App
  Bharatavani Windows App