भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಿತ್ತಭೂ

[ನಾ] ಮನ್ಮಥ (ಚಿತ್ತಭೂವಶೆಯೊರ್ಬಳ್ ಮನುವಂಶಚಂದ್ರ ಮುಖಚಂದ್ರಾಲೋಕದಿಂ ಚಂದ್ರಕಾಂತಾಶಿಲಾಪುತ್ರಿಕೆಯಂತೆ ಒಸರ್ತು: ಆದಿಪು, ೧೧. ೧೮)

ಚಿತ್ತವಿಕಾರಕಾರಿ

[ನಾ] ಮನಸ್ಸನ್ನು ವಿಕಾರಗೊಳಿಸುವಂತಹ (ವನಿತಾಚಿತ್ತವಿಕಾರಕಾರಿ ನೆಱೆದತ್ತೀಗಳ್ ಕುಮಾರಂಗೆ ಯೌವನಂ: ಆದಿಪು, ೮. ೭)

ಚಿತ್ತವೃತ್ತಿ

[ನಾ] ಮನೋಭಾವ (ಆದಿಭಟ್ಟಾರಕನ ಚಿತ್ತವೃತ್ತಿಯಂ ಆ ಮಹಾತ್ಮನಾವ ಮಾೞ್ಕೆಯೊಳ್ ಅಱಿದನೆಂದು: ಆದಿಪು, ೧೦. ೭ ವ)

ಚಿತ್ತಶಯಾಕ್ರೀಡ

[ನಾ] ರತಿಕ್ರೀಡೆ (ಕೊಳಗೊಂಡಾ ನೀರೊಳರ್ದಿರ್ದು ಚಿತ್ತಶಯಾಕ್ರೀಡಸರೋವತೀರ್ಣ ರತಿಯೊಂದಾಕಾರಮಂ ತಾಳ್ದಿದಳ್: ಆದಿಪು, ೧೧. ೧೮)

ಚಿತ್ತಸ್ಖಲನೆ

[ನಾ] ಮನಸ್ಸಿನ ಸ್ಥಿರತೆ ಸಡಿಲಗೊಳ್ಳುವುದು (ರಾಜರಾಜಂ ಸೈರಿಸದೆ ಚಿತ್ತಸ್ಖಲನೆಯಾಗೆ ಜಳಸ್ತಂಭಮಂತ್ರಮೆಲ್ಲಂ ಮಾಯಾಮಂತ್ರಮಾಗೆ: ಪಂಪಭಾ, ೧೩. ೮೦ ವ)

ಚಿತ್ತಾರಿ

[ನಾ] [ಚಿತ್ರಕಾರಿ] ಚಿತ್ರಕಾರ (ಸೊಗಯಿಸುವ ಸಾಮಂತ ಚೂಡಾಮಣಿಯ ಮೆಯ್ಯ ಬಣ್ಣಂ ವಿಧಾತ್ರನೆಂಬ ಚಿತ್ತಾರಿಯ ವರ್ಣಕ್ರಮಂಗೆಯ್ದ ಕದಳೀಗರ್ಭಶ್ಯಾಮಮೆಂಬ ಬಣ್ಣದಂತಾದುದು: ಪಂಪಭಾ, ೨. ೩೯ ವ)

ಚಿತ್ತೆಯ ಸರಿ

[ನಾ] ಚಿತ್ರಾ ನಕ್ಷತ್ರದಲ್ಲಿ ಬರುವ ಮಳೆ (ಪುಷ್ಪವರ್ಷಮೊರ್ಮೆಯೆ ಸಕಲೋರ್ವಿಯನೆಯ್ದೆ ಪರ್ವುತಿರೆ ಚಿತ್ತೆಯ ಸರಿಯಂತೆರಗಿ ಪೋದುದಮರಸಮಾಜಂ: ಆದಿಪು, ೧೪. ೧೪೭)

ಚಿತ್ರ

[ನಾ] ಆಕರ್ಷಕವಾದ (ಅದೇನಚ್ಚರಿಯೋ ಚಿತ್ರದ ರೂಪು ರೂಪವಿಭವಂ ಮುಕ್ತ್ಯಾಂಗನಾಕಾಂತನಾ: ಆದಿಪು, ೮. ೫)

ಚಿತ್ರಕ

[ನಾ] ವರ್ಣಚಿತ್ರಗಾರ (ಉತ್ತುಂಗ ಸುಸೂಕ್ಷ್ಮ ಪಾರ್ಶ್ವ ಕೃಶ ಕೋಮಳ ನಿಮ್ನ ಘನ ಉನ್ನತ ಪ್ರದೇಶಂಗಳಂ ಆ ಸಮಾನತಳದಲ್ಲಿಯೆ ಚಿತ್ರಕಂ ಎಯ್ದೆ ತೋರ್ಪವೋಲ್: ಪಂಪಭಾ, ೧೩. ೨೧)

ಚಿತ್ರಕರ್ಮ

[ನಾ] ಚಿತ್ರಕಲೆ (ಚಿತ್ರಕರ್ಮ ಪತ್ರಚ್ಛೇದ ಗ್ರಹಗಣಿತ ರತ್ನಪರೀಕ್ಷೆಗಳೊಳಂ: ಪಂಪಭಾ, ೨. ೩೪ ವ)

ಚಿತ್ರಕಳಾಪ

[ನಾ] ಚಿತ್ರರಚನೆ (ಹಸ್ತಕೌಶಲಕಳಿತಮಪ್ಪ ಚಿತ್ರಕಳಾಪ ಪರಿಚ್ಛೇದ್ಯಾದಿ ಸಮನ್ವಿತಮಪ್ಪ ಶಿಲ್ಪಮುಮಂ: ಆದಿಪು, ೮. ೬೪ ವ)

ಚಿತ್ರಕಳೆ

[ನಾ] ಚಿತ್ರಗಳನ್ನು ರಚಿಸುವ ವಿದ್ಯೆ (ವೃಷಭಸೇನಂಗೆ ಗೀತವಾದ್ಯಾರ್ಥಸಂಗ್ರಹಮಪ್ಪ ಗಾಂಧರ್ವಶಾಸ್ತ್ರಮುಮಂ ಅನಂತವೀರ್ಯಂಗೆ ವಿಚಿತ್ರ ಚಿತ್ರಕಳೆಯುಮಂ ವಾಸ್ತುವಿದ್ಯೆಯುಮಂ: ಆದಿಪು, ೮. ೬೦ ವ)

ಚಿತ್ರಕೇತುವೃಂದ

[ನಾ] ಬಣ್ಣ ಬಣ್ಣದ ಧ್ವಜಗಳ ಸಮೂಹ (ಕುದುರೆಯ ಬಣ್ಣದಿಂ ರಥದ ತೋರ್ಕೆಯಿಂ ಎತ್ತಿದ ಚಿತ್ರಕೇತುವೃಂದದ ಕುಱುಪಿಂದ ಉದಗ್ರ ರಥಚೋದಕಚಿಹ್ನದಿಂ ಈತನೆಂಬುದಂ ಅಱಿದು: ಪಂಪಭಾ, ೧೦. ೮೭)

ಚಿತ್ರಭಿತ್ತಿ

[ನಾ] ಚಿತ್ರಗಳಿರುವ ಗೋಡೆ (ಇಂದ್ರನೀಲದ ಭದ್ರದೊಳಂ ಕರ್ಕೇತನದ ಜಾಳರಿಗೆಯೊಳಂ ಪಳುಕಿನ ಚಿತ್ರಭಿತ್ತಿಯೊಳಂ ವಿವಾಹಗೇಹಮಂ ಸಮೆಯಿಸಿ: ಪಂಪಭಾ, ೩. ೩೪ ವ)

ಚಿತ್ರರತ

[ನಾ] ಅಸಹಜ ರತಿ (ಕಣ್ಗೊಳೆ ಸವಿಯಂ ಪುದುಂಗೊಳಿಪ ಚಿತ್ರರತಂಗಳ ಭಂಗಿಗಳ್: ಆದಿಪು, ೨. ೭೧)

ಚಿತ್ರವೇತ್ರ

[ನಾ] ಬಣ್ಣಬಣ್ಣದ ಕೋಲು (ಎಡೆಗೋದಿರದಿರಿಂ ಉದ್ದಂ ನುಡಿಯದಿರಿಂ ನೃಪತಿ ನುಡಿಯೆ ನುಡಿಯಿಂ ನೀಮಿರ್ಪೆಡೆಯೊಳಿರಿಂ ನೀಮಱಿವಿರ್ ಮಿಡುಕಿದೊಡೆ ಎನೆ ಚಿತ್ರವೇತ್ರದಂಡಧರರ್ಕಳ್: ಆದಿಪು, ೯. ೬)

ಚಿತ್ರಾವಳಿ

೨ ಬಣ್ಣಬಣ್ಣದ ಬಟ್ಟೆ (ಪೞಿ ಚಿತ್ರಾವಳಿ ಜೋನೆಗವೞಿಯಂ ದೇವಾಂಗಮೆಂಬ ವಸನಂಗಳನೇಂ: ಆದಿಪು, ೫. ೩೪)

ಚಿತ್ರಿಸು

[ಕ್ರಿ] ಚಿತ್ರವನ್ನು ರಚಿಸು (ಕಾೞ್ತುಱು ಮಸಗಿದಂತೆ ಮಸಗಿದ ದುರ್ಧರ ಧನುರ್ಧರಬಲಮುಮಂ ಶ್ವೇತ ಭೀಷ್ಮರ ಪೇೞ್ದ ಓಜೆಯೊಳೆರಡುಂ ಪಡೆಗಳ ಪಡೆವಳರ್ಕಳ್ ಕುರುಕ್ಷೇತ್ರದೊಳ್ ಚಿತ್ರಿಸಿದಂತೆ ಒಡ್ಡಿ ನಿಂದಾಗಳ್: ಪಂಪಭಾ, ೧೦. ೫೧ ವ)

ಚಿತ್ರೆ

[ನಾ] [ಜೈನ] ಒಬ್ಬ ದೇವತಾಸ್ತ್ರೀ (ಸುಪ್ರತಿಷ್ಠಿತ ಸುಪ್ತಣಿಧಿ ಸುಪ್ರಬುದ್ಧೆ ಯಶೋಧರೆ ಲಕ್ಷ್ಮೀಮತಿ ಕೀರ್ತಿಮತಿ ವಸುಂಧರೆ ಚಿತ್ರೆಯೆಂಬೆಣ್ಬರುಂ ದಿಗಂಗನೆಯರಂ: ಆದಿಪು, ೭. ೩ ವ)

ಚಿನ್ನ

[ನಾ] ಹೊನ್ನು (ಚಿನ್ನದ ಸವಂಗಂ ಅಪೂರ್ವದ ಮೊಚ್ಚೆಯಂ .. .. ಒಪ್ಪೆ: ಪಂಪಭಾ, ೯. ೧೦೩)

Search Dictionaries

Loading Results

Follow Us :   
  Download Bharatavani App
  Bharatavani Windows App