भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಿನ್ನಪೂ

[ನಾ] ಹೂವಿನಾಕಾರದ ಚಿನ್ನದ ಆಭರಣ (ಕೆನ್ನೆಗಳನೊಯ್ಯನೆ ನೀವುವ ಚಿನ್ನಪೂವನೋಸರಿಸುವ ಹಾರಮಂ ಪಿಡಿದು ನೋಡುವ: ಪಂಪಭಾ, ೩. ೭೭)

ಚಿರಂ

[ಅ] ಸ್ಥಿರ (ಪೊಸನನೆಯೊಳ್ ಪಸುರ್ಪು ಅಲರೊಳಂ ಚಿರಮಲ್ಲದ ಬೆಳ್ಪು ಪಲ್ಲವಪ್ರಸರದೊಳೆಯ್ದೆ ಕಣ್ಗೆ ಪಸರಂಬಡೆದೊಪ್ಪುವ ಕೆಂಪು: ಆದಿಪು, ೧. ೬೬)

ಚಿರಾತ್

ಬಹುಕಾಲಾನಂತರ (ಮಹಾಕ್ಷಮಾಶೌರ್ಯಯೋಃ ಚಿರಾತ್ ಪ್ರಥಮಸಂಗಮೋ ಹರಿಗಭೂಪತೌ ದೃಶ್ಯತೇ: ಪಂಪಭಾ, ೧೪. ೩೦)

ಚಿವುಳಿದುೞಿ

[ಕ್ರಿ] ಚಿಗುಳಿಯನ್ನು ತುಳಿ (ಸುಪ್ರತೀಕಂ ಕೆಯ್ಯ ಕಾಲ ಕೋಡ ಏಱಿನೊಳ್ ಬಲಮನೆಲ್ಲಂ ಜವನೆ ಚಿವುಳಿದುೞಿವಂತೆ ತೊೞ್ತುೞಿದುೞಿದು: ಪಂಪಭಾ, ೧೧. ೭೨ ವ)

ಚಿಹ್ನಿತ

[ಗು] ಗುರುತುಳ್ಳ (ಅರಿನೃಪಾಲಮೌಳಿಮಣಿಯೊಳ್ ನೆಲೆಗೊಂಡುದು ಶಂಖಚಕ್ರಚಾಮರಹಳಚಿಹ್ನಿತಪದಾಕೃತಿ: ಪಂಪಭಾ, ೬. ೨೯)

ಚೀತ್ಕಾರ

[ನಾ] ಕಿರುಗುಟ್ಟುವಿಕೆ (ಮಾರುತಘಾತ ಸಂಚಳಿತ ಕೇತುಸಮೂಹಂ ಉದಗ್ರ ಚಕ್ರಚೀತ್ಕಾರಂ ಉದಾರ ವೀರಭಟಸಿಂಹನಾದವಿಮಿಶ್ರಿತ ಉತ್ಕಟಜ್ಯಾರವಂ: ಪಂಪಭಾ, ೧೦. ೮೫)

ಚೀನ

[ನಾ] ರೇಷ್ಮೆಯ ಬಟ್ಟೆ (ಸಾಹಿಯಾಣದ ಚೀಣದ ಧವಳವಟ್ಟದ ಧರ್ಮದ ಜೊಂಗದ ದೇವಾಂಗದ ಸಕಳವಟ್ಟೆಗಳುಮಂ: ಆದಿಪು, ೪. ೩೪ ವ)

ಚೀನಾಂಶುಕ

[ನಾ] ಚೀನಾಂಬರ (ಚೀನಾಂಶುಕ ರುಚಿರಂಗಳಂ .. .. ಉತ್ಕಳಖೇಟಮಂ ಪುಗುವಾಗಳ್: ಆದಿಪು, ೪. ೫೮ ವ)

ಚುನ್ನಕ

[ನಾ] ನಿಂದಕ (ನಿನ್ನ ಸಂಪದ ನೋಡಲಾಱದೆ ಚಿನ್ನಭಿನ್ನವ ಮಾಡಿ ಕೆಡಿಸುವ ಚುನ್ನಕರ ನುಡಿವಿಡಿಯದೆ: ಆದಿಪು, ೧೦. ೫)

ಚುಂಬಿಸು

[ಕ್ರಿ] ಮುತ್ತಿಡು (ತಾವರೆಯೆ ಗೆತ್ತು ಮುಖಾಬ್ಜಮನೊಂದು ತುಂಬಿ ಚುಂಬಿಸೆ: ಪಂಪಭಾ, ೫. ೬೩)

ಚುರ್ಚು

[ಕ್ರಿ] ತಿವಿ (ಉರಿವ ಕೈದೀವಿಗೆಗಳೊಳ್ ಮೊಗಮಂ ಚುರ್ಚುವರುಂ: ಆದಿಪು, ೫. ೮೫ ವ)

ಚುಳುಕಪಾನ

[ನಾ] ಆಪೋಶನ (ಸಂತಪ್ತಜಲ ಪ್ರತ್ಯೇಕ ಚುಳುಕಪಾನಮಾತ್ರ ಜಾನುದಘ್ನ ಜಲದುರ್ಗನುಮಾಗಿ ನಡೆದು: ಆದಿಪು, ೧೪. ೫೨. ವ)

ಚೂಚುಕ

[ನಾ] ಮೊಲೆತೊಟ್ಟು (ಪೊಂಗೊಡನಂ ತಮಾಳಪಲ್ಲವದೊಳೆ ಮುಚ್ಚಿದಂದದೊಳೆ ಚೂಚುಕಮಾಂತುದು ಕರ್ಪನಾಕೆಯಾ: ಪಂಪಭಾ, ೧. ೧೨೫)

ಚೂಡಾಮಣಿ

[ನಾ] [ಜೈನ] ಭರತ ಚಕ್ರವರ್ತಿಯ ಏಳು ಅಜೀವರತ್ನಗಳಲ್ಲೊಂದಾದ ಮಣಿರತ್ನದ ಹೆಸರು (ಚಕ್ರವರ್ತಿಯ ಮಣಿಮಕುಟಶಿಖರಾಯಮಾನಮಪ್ಪ ಚೂಡಾಮಣಿಯೆಂಬ ಮಣಿರತ್ನಮುಂ: ಆದಿಪು, ೧೧. ೩ ವ)

ಚೂತಕುಜಾತ

[ನಾ] ಮಾವಿನ ಮರ (ಎಳೆವಿಸಿಲೀಗಳೀಗಳೆ ಮುದಿರ್ದುದು ಚೂತಕುಜಾತಮೀಗಳೀಗಳೆ ನನೆದೋಱಿತು: ಆದಿಪು, ೧೩. ೫)

ಚೂತಪಲ್ಲವ

[ನಾ] ಮಾವಿನ ಚಿಗುರು (ಮಲಯಾನಿಲನೂದೆ ತೆರಳ್ವ ಚೂತಪಲ್ಲವದ ತೆರಳ್ಕೆ ತದ್ವನವಿಲಾಸಿನಿಯುಟ್ಟ ದುಕೂಲದೊಂದು ಪಲ್ಲವದ ತೆರಳ್ಕೆ: ಪಂಪಭಾ, ೨. ೧೪)

ಚೂತಭೂಜಾರಾಮ

[ನಾ] [ಚೂತಭೂಜ+ಆರಾಮ] ಮಾವಿನ ತೋಪು (ಸಕಲದಿಕ್ಪ್ರಚಳಿತ ರಾಜಪುತ್ರಮಯೂರಾತಪತ್ರ ನಿಚಯಮೆ ಸಂಚಾರೀಭೂತ ಚೂತಭೂಜಾರಾಮಮಾಗೆ: ಆದಿಪು, ೧೩. ೬ ವ)

ಚೂತಲತಿಕೆ

[ನಾ] ಮಾವಿನ ಎಳಗೊಂಬೆ (ಅಂಕುರ ಪಲ್ಲವ ಕುಸುಮಾಳಂಕಾರದ ಚೂತಲತಿಕೆ ನರ್ತಕಿವೋಲ್ ತನ್ನಂಕುರದಿಂ ಶಾಖೆಯಿಂ ಏನಂಕುರಶಾಖಾಭಿನಯಮಂ ಅಭಿನಯಿಸಿದುದೋ: ಆದಿಪು, ೧೧. ೯೪)

ಚೂತಲತೆ

[ನಾ] ಮಾವಿನ [ಬಳ್ಳಿ] ಎಳೆಗೊಂಬೆ (ಎಲ್ಲಿಯುಂ ಮೆಯ್ಯನಾಱಿಸಲಾಱದೆ ಪೂತ ಚೂತಲತೆಗಳೊಳ್ ತಳ್ಪೊಯ್ದು ಪೊಸಮುತ್ತಿನ ಬಾಸಣಿಗೆಯೊಳ್ ಬಾಸಣಿಸಿದ ಬಿರಿಮಗುಳ್ಗಳೊಳ್ ತುಱುಗಿದ: ಪಂಪಭಾ, ೫. ೫ ವ)

ಚೂರ್ಣನೀಯ

[ಗು] ಪುಡಿಯಾಗುವ (ಅನಿಷ್ಠುರೋಷ್ಠಪುಟಮಧ್ಯ ಸಂಧಾರಣಮಾತ್ರ ಚೂರ್ಣನೀಯ ಶಾಕವರ್ತಿಕಮುಮಂ: ಆದಿಪು, ೧೧. ೨೬ ವ)

Search Dictionaries

Loading Results

Follow Us :   
  Download Bharatavani App
  Bharatavani Windows App