भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚೂಷಿತಕ

[ನಾ] ಚೀಪಿ ಚಪ್ಪರಿಸುವುದು (ಮಧುರ ಸೀತ್ಕೃತನಾದದೊಳುಣ್ಮಿ ಪೊಣ್ಮಿ ಚೂಷಿತಕಮಂ ಔಪರಿಷ್ಟಕರತಂಗಳ ಭೇದದೊಳ್: ಆದಿಪು, ೧೧. ೯೯)

ಚೂಳಿಕಾ

[ನಾ] ಕೇಶ, ತಲೆ (ಚೂಳಿಕಾಭಾಗದಾದಿಯೊಳ್ ನಿಂದಪುದು ಊರ್ಧ್ವಲೋಕಂ ಎನೆ ಮೂಲೋಕಕ್ಕೆ ಪೆಂಪಿಂದಂ ಅಗುಂದಲೆಯಾಗಿರ್ದುದು: ಆದಿಪು, ೧. ೫೦); ಆನೆಯ ಕಿವಿಯ ತಳ (ಉತ್ಕೃಷ್ಟಾವಿಪುಳ ಚೂಳಿಕಾ ದುಂದುಭಿನಿರ್ಘೋಷ ಕರ್ಣನುಂ: ಆದಿಪು, ೧೨. ೫೬ ವ)

ಚೂಳಿಕಾಭಾಗ

[ನಾ] ತುದಿ, ಮೇಲ್ಭಾಗ (ಚೂಳಿಕಾಭಾಗದೊಳ್ ನಿಂದಪುದು ಊರ್ಧ್ವಲೋಕಮೆನೆ ಮೂಲೋಕಕ್ಕೆ ಪೆಂಪಿಂದಗುಂದಲೆಯಾಗಿರ್ದುದು: ಆದಿಪು, ೧. ೫೦)

ಚೂಳಿಕಾವರ್ಧನ

[ನಾ] ಸೀಮಂತ (ಚೂಳಿಕಾವರ್ಧನ ಮಾಂಗಲ್ಯಂ ಬಳಾಕಕ್ಕೆಸೆಯೆ .. .. ಘೂರ್ಣಿಸಿದುದು ಅಭಿನವಾಂಭೋದ ಗಂಭೀರನಾದಂ: ಪಂಪರಾ, ೭. ೧೫೦)

ಚೂಳಿಕೆ

[ನಾ] [ಜೈನ] ಜಲಗತ, ಸ್ಥಲಗತ, ಮಾಯಾಗತ, ರೂಪಗತ ಮತ್ತು ಗಗನಗತ ಎಂಬ ಐದು ಸೂತ್ರಗಳು (ಪದಿನಾಲ್ಕು ಪೂರ್ವಂಗಳುಮಂ ಅಯ್ದು ಚೂಳಿಕೆಯುಮಂ ಆಱವಧಿಯುಮಂ ಪೆಸರ್ಗೊಂಡು: ಆದಿಪು, ೩. ೪೦ ವ)

ಚೆಚ್ಚರಂ

[ಅ] ಥಟ್ಟನೆ (ಪೊಲಸುನಾಱುವ ಮೆಯ್ಯನೆ ಕರ್ಚಲೆಂದು ಚೆಚ್ಚರಂ ಅಪರಾಂಬುರಾಶಿಗೆ ಇೞಿವಂತೆ ಇೞಿದಂ ಕಮಳೈಕಬಾಂಧವಂ: ಪಂಪಭಾ, ೧೧. ೫೧)

ಚೆಚ್ಚರಿಕೆ

[ನಾ] ಳಕ, ಚಟುವಟಿಕೆ (ಚಯ್‌ಚಯ್ಯೆಂಬಾಗಳ್ ಮೆಯ್ ಮೆಯ್ ಚಲದಿಂ ಮುಟ್ಟಿ ಪೊಣರ್ದು ತಳ್ತಿಱಿವ ಉರ್ಕಿಂ ಕೆಯ್ ಚೆಚ್ಚರಿಕೆಯ ಚಲದಿಂ ಕೆಯ್ ಚಳಿವಿನೆಗಂ ಇಱಿದರ್ ಎರಡು ಬಲದೊಳಂ ಅದಟರ್: ಪಂಪಭಾ, ೧೩. ೩೪)

ಚೆಂದೆಂಗು

[ನಾ] ಕೆಂಪು ಕಾಯಿಗಳ ತೆಂಗು (ತೂಗಿ ಪಣ್ಗೊಲೆಯಿಂ ಬಳ್ಕುವ ಕೌಂಗು ಕಾಯ್ದುಱುಗಲಂ ಪೇಱಿರ್ದ ಚೆಂದೆಂಗು: ಆದಿಪು, ೧. ೬೭)

ಚೆನ್ನ

[ನಾ] ಊರ (ಬಿರುದರಂ ಒತ್ತಿ ಬೀರರಂ ಅಡಂಗಿಸಿ ಕೊಂಕಿಗರಂ ಕೞಲ್ಚಿ ಚೆನ್ನರಂ ಅಡಿಗೊತ್ತಿ ಮಂಡಳಿಕರಂ ಬೆಸಕಯ್ಸಿ .. .. ಮಾಡಿರೆ ರಾಜಸೂಯಮಂ: ಪಂಪಭಾ, ೭. ೧೮); [ನಾ] ಚೆಲುವ (ಬೆರಲೊಳ್ ಬೀಣೆಯ ತಂತಿಗಳ್ ಒರಸಿದ ಕೆಂಗಲೆಗಳ್ ಅಕ್ಷಮಾಲೆಯೊಳ್ ಎಸೆದಂತಿರೆ ಪೊಸೆಯೆ ಮುತ್ತು ಪವಳಂ ಬೆರಸಿದವೊಲಾಯ್ತು ಚೆನ್ನ ತಪಸಿಯ ಕೆಯ್ಯೊಳ್: ಪಂಪಭಾ, ೬. ೧೦)

ಚೆನ್ನಗನ್ನಡಿ

[ನಾ] ಚೆಲುವಾದ ಕನ್ನಡಿ (ಚೇಟಿಕೆ ಬೀಸುವ ಕುಂಚಮೆಯ್ದೆ ಮೆಯ್ದೋಱುವ ಗಾಡಿ ಕಾಂಚನದ ದಂಡದ ಸೀಗುರಿ ನೋೞ್ಪೊಡೆ ಆರುಮಂ ಮಾಱೆ: ಪಂಪಭಾ, ೯. ೧೦೦)

ಚೆನ್ನಪೂ

[ನಾ] ಸುಂದರವಾದ ಹೂ (ದೇಸಿಯನಾವಗಮೀವ ಚೆನ್ನಪೂಗಳನೆ ಅವನೊಯ್ಯನೋಸರಿಸುತುಂ: ಪಂಪಭಾ, ೨. ೧೭)

ಚೆನ್ನಪೊಂಗ

[ನಾ] ವೀರ (ಅದಟರ ಚೆನ್ನಪೊಂಗರ ಸಬಂಗಳ ತೊೞ್ತುೞಿಯೊಳ್ ತೊಡಂಕಿ ನಿಲ್ಲದೆ ಪೊಱಮಟ್ಟ ತಮ್ಮ ಮನದೊಳ್ ಮಿಗೆ ಬೆಚ್ಚಿಸಿದಂತೆ ತೋಱುವ: ಪಂಪಭಾ, ೮. ೧೦೪)

ಚೆನ್ನಿಗ

[ನಾ] ಚೆಲುವ (ಬಂದ ಚೆನ್ನಿಗರುಮಂ ಆಸೆಕಾಱರುಮಂ ಒಲ್ಲದೆ ಚೆಲ್ವಿಡಿದಿರ್ದ ರೂಪು ದೃಷ್ಟಿಗೆ ವರೆ ಪಾಂಡುರಾಜನನೆ ಕುಂತಿ ಮನಂಬುಗೆ ಮಾಲೆಸೂಡಿದಳ್: ಪಂಪಭಾ, ೧. ೧೦೬)

ಚೆನ್ನೆಯ್ದಿಲ್

[ನಾ] ಕೆಂಪು ನೈದಿಲೆ (ಉಳ್ಳಲರ್ದ ಚೆನ್ನೆಯ್ದಿಲ್ಗೊಳಂ ತೂಗಿ ಪಣ್ಗೊಲೆಯಿಂ ಬಳ್ಕುವ ಕೌಂಗು: ಆದಿಪು, ೧. ೬೭)

ಚೆಂಬೊನ್

[ನಾ] ಚಿನ್ನ (ಗಟ್ಟಿಸಿ ಸೆಂದುರದೊಳ್ ನೆಲಗಟ್ಟಿಸಿ ಚೆಂಬೊನ್ನ ನೆಲೆಯ ಚೌಪಳಿಗೆಗಳೊಳ್ ಕಟ್ಟಿಸಿ ಪೞಯಿಗೆಗಳಂ ಅಳವಟ್ಟಿರೆ ಬಿಯಂ ಅಲ್ಲಿ ಮೊೞಗೆ ಪಲವುಂ ಪಱೆಗಳ್: ಪಂಪಭಾ, ೨. ೬೬)

ಚೆಲ್ಲಂಬೆರಸು

[ಕ್ರಿ] ಚೆಲ್ಲಾಟದಿಂದ ಕೂಡು (ಅಂತು ನೋಡಿ ಕಡೆಗಣ್ಣ ಚೆಲ್ಲಂಬೆರಸು ಸೂಸುವ ವಾಸವಸ್ತ್ರೀಯರ ಮುಖಾಬ್ಜಾಸವ ಸಂಬಂಧಿಗಳಪ್ಪ ಶೇಷಾಕ್ಷತಂಗಳಂ ಈಶ್ವರನಂ ಗೆಲ್ದ ಗೆಲ್ಲಕ್ಕೆ ಸೇಸೆಗೊಳ್ವಂತೆ ಸೇಸೆಗೊಳ್ಳುತ್ತುಂ: ಪಂಪಭಾ, ೮. ೨೭ ವ)

ಚೆಲ್ವನಾಗು

[ಕ್ರಿ] ಚೆಲುವಾಗು (ಬಿಯಂ ಆರೆರ್ದೆಗಂ ಬರೆ ಬರ್ಪ ಪಾಂಗು ಅಗುರ್ವಾಗಿರೆ ಚೆಲ್ವನಾಯ್ತು ಅರಬೊಜಂಗರ ಲೀಲೆ ಸುರೇಂದ್ರಲೀಲೆಯಿಂ; ಪಂಪಭಾ, ೪. ೮೭)

ಚೆಲ್ವಿಡಿದಿರ್

[ಕ್ರಿ] ಸೊಗಸು ತುಂಬಿಕೊಳ್ಳು (ಬಂದ ಚೆನ್ನಿಗರುಮಂ ಆಸೆಕಾಱರುಮನೊಲ್ಲದೆ ಚೆಲ್ವಿಡಿದಿರ್ದ ರೂಪು ದೃಷ್ಟಿಗೆ ವರೆ ಪಾಂಡುರಾಜನನೆ ಕುಂತಿ ಮನಂಬುಗೆ ಮಾಲೆಸೂಡಿದಳ್: ಪಂಪಭಾ, ೧. ೧೦೬)

ಚೆಲ್ವೋಡು

[ಕ್ರಿ] ಸುಕ್ಕಾಗು, ಅಂದಗೆಡು (ಬಾಡದ ಬಾಸಿಗಂ ಉಡೆ ಚೆಲ್ವೋಡದ ದಿವ್ಯಾಂಬರಮಂ ಮನಂಗೊಳೆ: ಆದಿಪು, ೬. ೪೦)

ಚೇಟಿಕೆ

[ನಾ] ದಾಸಿ (ಚೇಟಿಕೆ ಬೀಸುವ ಕುಂಚಂ ಎಯ್ದೆ ಮೆಯ್ದೋಱುವ ಗಾಡಿ ಕಾಂಚನದ ದಂಡದ ಸೀಗುರಿ ನೋೞ್ಪೊಡೆ ಆರುಮಂ ಮಾಱೆ ಮನೋಜನ ಒಡ್ಡು ಎನಿಸಿದರ್: ಪಂಪಭಾ, ೯. ೧೦೦)

Search Dictionaries

Loading Results

Follow Us :   
  Download Bharatavani App
  Bharatavani Windows App