भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚೇತೋಜವಹರಿ

[ಗು] ಮನೋವೇಗದಲ್ಲಿ ಸಾಗುವ (ಪ್ರವೀರಪುರುಷ ಪ್ರತಿಷ್ಠಿತಂಗಳ್ ಚೇತೋಜವಹರಿ ಯೋಗ್ಯಂಗಳ್ ತಳರ್ದುವಾಗಳ್ ಎಂಬತ್ತುನಾಲ್ಕು ಲಕ್ಕೆ ರಥಂಗಳ್: ಆದಿಪು, ೧೧. ೩೨)

ಚೇಷ್ಟಿತ

[ನಾ] ಚೇಷ್ಟೆ, ಕಾರ್ಯ (ನಿಮ್ಮನಾಸವಮಧುವಿಂದೆ ಪೂೞ್ದುದೊ ಕೃತಮಾವುದಿಂ ಮಱೆವುದೆಮ್ಮ ಮದೋತ್ಕಟಚೇಷ್ಟಿತಂಗಳಂ: ಆದಿಪು, ೧೧. ೧೩೧)

ಚೇಳಾಂಚಳ

[ನಾ] ವಸ್ತ್ರದ ಸೆರಗು, ತುದಿ (ಮಹೀತಳಾಶ್ಲಿಷ್ಟ ಜಾನುಲಲಾಟಪಟ್ಟರ್ ಪ್ರಣಾಮಾರ್ಪಣಪುರಸ್ಸರಂ ಶಿರೋವೇಷ್ಟನ ಪ್ರಲಂಬ ಚೇಳಾಂಚಳ ಪಿಹಿತವದನರಾಗಿ: ಆದಿಪು, ೧೦. ೪೮ ವ)

ಚೈತನ್ಯ

[ನಾ] ಜೀವ (ಕಾಯಾಕಾರ ಪರಿಣತಭೂತ ಚೈತನ್ಯಂಗಳ್ ಬಹಿರಂತರ್ಮುಖಭಾಸಿಗಳ್: ಆದಿಪು, ೨. ೧೦ ವ)

ಚೈತಾಗ್ನಿ

[ನಾ] ಚಿತೆಯ ಬೆಂಕಿ (ಸೂರ್ಯತನಯಂ ತೇಜೋಗ್ನಿಯಿಂದಂ ದ್ವಿಷದ್ಬಲಮಂ ಸುಟ್ಟ್ಟಂ ಉದಾತ್ತಪುಣ್ಯನವಂ ಚೈತಾಗ್ನಿಯಿಂ ಸುಟ್ಟೆನಿಲ್ಲ: ಪಂಪಭಾ, ೧೩. ೬೦)

ಚೈತ್ಯ

[ನಾ] ಬಸದಿ (ದಿವಿಜೇಂದ್ರರುಂದ್ರಲೋಕದೊಳಮಿದೊಂದೆ ಸಾರಮಿದು ಜೈನಪದಾಬ್ಜವರಪ್ರಸಾದದಾದುದು ನಿನಗಪ್ಪ ಕಾರಣದಿನೀಗಳೆ ಪೂಜಿಸು ಚೈತ್ಯರಾಜಿಯಂ: ಆದಿಪು, ೨. ೬೯)

ಚೈತ್ಯದ್ರುಮ

[ನಾ] ಅರಳಿಮರ, ಅಶ್ವತ್ಥವೃಕ್ಷ (ತ್ರಿಶಾಲ ತ್ರಿಪೀಠೋಪಸ್ಥಿತ ಅರ್ಹತ್ಪ್ರತಿಮೋಪೇತ ಚೈತ್ಯದ್ರುಮೋಪೇತ ಮಧ್ಯಪ್ರದೇಶ ಅಶೋಕ ಸಪ್ತಚ್ಛದಚಂಪಕ : ಆದಿಪು, ೧೦. ೩೧ ವ)

ಚೈತ್ಯಾಲಯ

[ನಾ] ಜಿನಾಲಯ (ಅಂತು ಹರ್ಮ್ಯಚೈತ್ಯಾಲಯಾವನಿಯೆಂಬುದು ಅದಱ ವಿಸ್ತಾರಂ ಅರ್ಧಯೋಜನಂ: ಆದಿಪು, ೧೦. ೨೫ ವ)

ಚೊಚ್ಚಿಲ ಮಗ

[ನಾ] ಮೊದಲ ಮಗ (ನೀಮುಂ ನಿಮ್ಮ ಚೊಚ್ಚಿಲ ಮಗನಪ್ಪ ಸೂರ್ಯಸೂನುವಂ ಸೂರ್ಯದಿನದಂದು ಕಂಡು ಕಾರ್ಯಸಿದ್ಧಿಯಂ ಮಾಡಿಬನ್ನಿಂ: ಪಂಪಭಾ, ೯. ೬೩ ವ)

ಚೋದನ ಕ್ರಮ

[ನಾ] [ರಥ] ನಡೆಸುವ ರೀತಿ (ಪಿಂದೆ ಕಡಂಗಿ ತೇರಂ ಎಸಗು ಎಂಬವಂ ಅಂಬಿಗಂ ಆಜಿರಂಗದೊಳ್ ಮುಂದೆ ಸಮಾನನಾಗಿ ಬೆಸದೆ ಇರ್ಪವನುಂ ತುಱುಕಾಱನಾಗೆ ಮತ್ ಸ್ಯಂದನಚೋದನಕ್ರಮಮದುಂ ಪೊಲೆಯಂಗೆ ಅಮರ್ದು ಇರ್ಕುಂ: ಪಂಪಭಾ, ೧೨. ೯೪)

ಚೋದಿಸು

[ನಾ] ರಥ ಮುಂತಾದವನ್ನು ನಡೆಸು (ಪುಸಿಯೆನೆ ರಥಮಂ ಹರಿ ಚೋದಿಸುವಂತೆವೊಲಿರ್ದು ಅದೆಂತು ನರನಂ ಗೆಲಿಪಂ ವಿಸಸನದೊಳ್ ಅಂತೆ ನೀಮುಂ ಪೆಸರಂ ಕರ್ಣಂಗೆ ಮಾಡಿ ಗೆಲ್ಲಂಗೊಳ್ಳಿಂ: ಪಂಪಭಾ, ೧೨. ೯೧)

ಚೋದ್ಯ

[ನಾ] ಅಚ್ಚರಿ (ಕಮ್ಮನಪ್ಪ ತುಪ್ಪದ ಕೊಡದೊಳ್ ಸಮಂತು ಮಡಗಿಟ್ಟೊ ಸೃಷ್ಟಿಗೆ ಚೋದ್ಯಮಪ್ಪಿನಂ: ಪಂಪಭಾ, ೧. ೧೩೧)

ಚೋದ್ಯಂಬಡು

೩ ಸೋಜಿಗಗೊಳ್ಳು (ಮುನಿಗಣೇಶ್ವರರೊಡನೆ ದಾಳಿವೂಗೊಯ್ವೊಡನೆ ವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರ ತಪಃಪ್ರಭಾವಕ್ಕೆ ಚೋದ್ಯಂಬಟ್ಟು: ಪಂಪಭಾ, ೧. ೧೧೫ ವ)

ಚೋದ್ಯಾವಹ

[ನಾ] ಆಶ್ಚರ್ಯಕರವಾದ (ಜಗಕ್ಕತಿ ಚೋದ್ಯಾವಹಮಾಗೆ ಪೆಂಪುವಡೆದತ್ತಂತಾತ್ಮಜನ್ಮೋತ್ಸವಂ: ಆದಿಪು, ೭. ೩೭)

ಚೋರ

[ನಾ] ಕಳ್ಳ (ಕುಪಿತ ಅನೇಕಪ ದಂದಶೂಕ ದವ ದೈತ್ಯ ಅರಾತಿ ಚೋರ ಅಂಧಕಾರ ಪತದ್ವಜ ವಿಷ ಅಭಿಚಾರಿಕ ಜರಾತಂಕಾದಿ ಭೇದಂಗಳಪ್ಪ: ಆದಿಪು. ೧೬. ೯)

ಚೌತ

[ನಾ] ಚತುರಸ] ನಿಶ್ಚಿತ (ಮಧುಪಂಗಳ್ ತಮ್ಮೞ್ಕಮೆಯೆ ಚೌತಮಾಗಿರೆ ನೀೞ್ಕರಿಸಿದುವು ಉಂತೆ ಚಂಪಕಕ್ಕೆಱಗದುವೇ: ಆದಿಪು, ೧೧. ೧೧೯) [ಎಲ್. ಬಸವರಾಜು ಈ ಶಬ್ದಕ್ಕೆ ‘ಉಪವಾಸವ್ರತ ?’ ಎಂದು ಅರ್ಥ ಕೊಡುತ್ತಾರೆ]

ಚೌಪಳಿಗೆ

[ನಾ] ಹಜಾರ (ಗಟ್ಟಿಸಿ ಸೆಂದುರದೊಳ್ ನೆಲಗಟ್ಟಿಸಿ ಚೆಂಬೊನ್ನ ನೆಲೆಯ ಚೌಪಳಿಗೆಗಳೊಳ್ ಕಟ್ಟಿಸಿ ಪೞಯಿಗೆಗಳಂ ಅಳವಟ್ಟಿರೆ ಬಿಯಂ ಅಲ್ಲಿ ಮೊೞಗೆ ಪಲವುಂ ಪಱೆಗಳ್: ಪಂಪಭಾ, ೨. ೬೬)

ಚೌಲ

[ನಾ] ಮಗುವಿನ ಕೂದಲು ಬಿಡಿಸುವುದು (ಅಂತವರ್ಗೆ ಜಾತಕರ್ಮ ನಾಮಕರಣಾನ್ನಪ್ರಾಶನಚೌಲೋಪನಯನಾದಿ ಷೋಡಶಕ್ರಿಯೆಗಳಂ ಗಾಂಗೇಯಂ ತಾಂ ಮುಂತಿಟ್ಟು ಮಾಡಿ: ಪಂಪಭಾ, ೧, ೮೭, ವ)

Search Dictionaries

Loading Results

Follow Us :   
  Download Bharatavani App
  Bharatavani Windows App