भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಕ್ರಿಚಕ್ರ

[ನಾ] ಚಕ್ರವರ್ತಿಯ ಚಕ್ರರತ್ನ (ಪ್ರಭಾಪ್ರಜ್ವಳಿತದಶದಿಶಾಚಕ್ರಂ ಉಗ್ರಪ್ರತಾಪೋರ್ಜಿತ ತೇಜಶ್ಚಕ್ರಂ ಇರ್ದತ್ತೊಳಪುಗದೆ ಪುರೋಪಾಂತದೊಳ್ ಚಕ್ರಿಚಕ್ರಂ: ಆದಿಪು, ೧೪. ೩)

ಚಕ್ರೇಶತ್ವ

[ನಾ] ಚಕ್ರವರ್ತಿ ಪದವಿ (ನಿಜಕೂಟಾಗ್ರದೊಳ್ ಪಾಯ್ವ ಗಂಗಾಜಲದಿಂ ಮೂರ್ಧಾಭಿಷೇಕೋನ್ನತಿ ನಿಲೆ .. .. ಚಕ್ರೇಶತ್ವಮಂ ತಾಳ್ದಿದಂ ಅಖಿಳಧರಾರಮ್ಯ ಹೈಮಾಚಳೇಂದ್ರಂ: ಪಂಪಭಾ, ೪. ೧೪)

ಚಕ್ರೇಶ್ವರ

[ನಾ] [ಜೈನ] ಚಕ್ರರತ್ನದ ಒಡೆಯ (ಚಕ್ರಂ ಪುಟ್ಟಿದೊಡೀಗಳ್ ಚಕ್ರೇಶ್ವರನೆಂಬ ಪೆಸರುಮಾಯ್ತು: ಆದಿಪು, ೧೪. ೭೯)

ಚಕ್ರೇಶ್ವರಿ

[ನಾ] [ಜೈನ] ಒಬ್ಬ ಯಕ್ಷಿ (ಗರುಡಂ ವಾಹನಮಾಗಿರ್ಪ ಚಕ್ರೇಶ್ವರಿ ಭಾಸ್ವದ್ಧರ್ಮಚಕ್ರಾಕ್ರಮಿಗಳಂ ಅಲೆದಾಟಿಕ್ಕೆ ವಿಕ್ರಾಂತದಿಂದಂ: ಆದಿಪು, ೧. ೭)

ಚಕ್ರೋದ್ಭವ

[ನಾ] [ಜೈನ] ಚಕ್ರವರ್ತಿಯ ಆಯುಧಾಗಾರದಲ್ಲಿ ಚಕ್ರರತ್ನದ ಉದಯ (ಪುರುದೇವಂಗಾದ ಕೈವಲ್ಯದ ಮಹಿಮೆಯಂ ಉಗ್ರಾಯುಧಾಗಾರದೊಳ್ ಭಾಸ್ಕರ ಚಕ್ರೋದ್ಭಾಸಿ ಚಕ್ರೋದ್ಭವದ ಪಿರಿದುಮಾಶ್ಚರ್ಯಮಂ: ಆದಿಪು, ೧೦. ೪೯)

ಚಕ್ಷಸಿ

[ನಾ] [ಬೇಕಾದುದನ್ನು ಕಾಣಬಲ್ಲ] ಒಂದು ವಿದ್ಯೆ (ಹಿಮವಂತದಲ್ಲಿ ರಾಕ್ಷಸಿ ಕೊಟ್ಟ ಚಕ್ಷಸಿಯೆಂಬ ವಿದ್ಯೆಯಿಂ ಕಣ್ಣನಭಿಮಂತ್ರಿಸಿಕೊಂಡು: ಪಂಪಭಾ, ೭. ೩೭ ವ)

ಚಂಚತ್

[ಗು] ಚಲಿಸುವ (ನಡೆಯೆ ತುರಗಂ ಪೊನ್ನ ಆಯೋಗಂಗಳಿಂ ಅಮರ್ದು ಅೞ್ತಿಯಿಂ ಪಡೆಯೆ ನೆಳೞಂ ಚಂಚತ್ ಪಿಂಛಾತಪತ್ರಮೆ ಕೂಡೆ ತಮ್ಮೊಡನೆ ಬರೆ: ಪಂಪಭಾ, ೯. ೧೦೨)

ಚಚ್ಚರಂ

[ಅ] ಬೇಗನೆ (ಚಚ್ಚರಂ ಒಳಪೊಯ್ದು ನೀಂ ನಿನಗೆ ಮಾಡುವುದೆಂದು ಅಮರೇಂದ್ರಪುತ್ರನಂ ಕರೆವವೊಲಾದುವು ಆ ಪುರದ ವಾತವಿಧೂತವಿನೂತನಕೇತುಗಳ್: ಪಂಪಭಾ, ೪. ೩೪)

ಚಚ್ಚರಿಕೆ

[ನಾ] ಚಟುವಟಿಕೆ, ತೀವ್ರತೆ (ಚಯ್‌ಚಯ್ಯೆಂಬಾಗಳ್ ಮೆಯ್ ಮೆಯ್ ಚಲದಿಂ ಮುಟ್ಟಿ ಪೊಣರ್ದು ತಳ್ತಿಱಿವ ಉರ್ಕಿಂ ಕೆಯ್ ಚೆಚ್ಚರಿಕೆಯ ಚಲದಿಂ ಕೆಯ್ ಚಳಿವಿನೆಗಂ ಇಱಿದರ್ ಎರಡು ಬಲದೊಳಂ ಅದಟರ್: ಪಂಪಭಾ, ೧೩. ೩೪)

ಚಚ್ಚಾರವ

[ನಾ] ಪುಂಗಿಯ ನಾದ (ಮಾಗಧಾಮರಂ ವಿನಮಿತಸರ್ವಾಂಗಂ ಚಚ್ಚಾರವಕೆ ಭುಜಂಗನ ಕೊರಲಂತೆ ಬಾಗಿದಂ ಮೂಱೆಡೆಯೊಳ್: ಆದಿಪು, ೧೨. ೧೧೧)

ಚಟಾಚ್ಛಾಟನ

[ನಾ] ಜುಟ್ಟಿನ ಮಿಡಿತ (ನಿಶಿತ ಅಸಿಪತ್ರಪತಿತ ಪ್ರಚಂಡ ಸುಭಟ ಮಸ್ತಕೋಚ್ಚಳಿತ ಚಟಾಚ್ಛಾಟನ ದುರ್ನಿರೀಕ್ಷ್ಯ: ಪಂಪಭಾ, ೧೩. ೫೧ ವ)

ಚಟುಳ

[ಗು] ತ್ವರಿತವಾದ (ಪ್ರಕುಪಿತ ಸೂತಹೂಂಕಾರ ಕಾತರಿತ ತರಳತರ ತುರಂಗ ದ್ರುತವೇಗಾಕೃಷ್ಟ ಧನಂಜಯರಥ ಚಟುಳಚಕ್ರ ನೇಮಿಧಾರಾಪರಿವೃತ: ಪಂಪಭಾ, ೧೩. ೫೧ ವ)

ಚಟುಳಿತ

[ಗು] ಚಲಿಸುವ (ಲಯಘನಘಟೆಗಳ ಮೊೞಗೆನಿಸೆ ಪೊಟ್ಟಗೆ ಒಡೆದತ್ತು ರಟತ್ ಪಟು ಪಟಹ ಶಂಖ ಭೇರಿಯ ಚಟುಳಿತದಿಂದ ಅತಳಪಟಂ ಅಂಬರಪಟಳಂ: ಪಂಪಭಾ, ೧೦. ೬೭)

ಚಟ್ಟ

[ನಾ] [ಛಾತ್ರ] ಶಿಷ್ಯ (ನಿನ್ನಂ ಅನಾಕುಳಂ ಎನ್ನ ಚಟ್ಟರಿಂ ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆವೊತ್ತೆನೇ: ಪಂಪಭಾ, ೨. ೫೦)

ಚಂಡ

[ಗು] ವೇಗವಾದ, ಬಿರುಸಾದ (ವಾತ್ಯಾದುರ್ಧರ ಗಂಧಸಿಂಧುರ ಕಟಸ್ರೋತಃ ಸಮುದ್ಯತ್ ಮದವ್ರಾತ ಇಂದಿಂದಿರ ಚಂಡ ತಾಂಡವ ಕಲ ಸ್ವಾಭಾವಿಕಶ್ರೇಯಸಃ: ಪಂಪಭಾ, ೯. ೯೭)

ಚಂಡಮರೀಚಿ

[ನಾ] ಸೂರ್ಯ (ಚಂಡಮರೀಚಿಗೆ ಅಸ್ತಮಯಮಿಲ್ಲದುದು ಒಂದೆಡೆ ನಿಮ್ಮ ಕೇಳ್ದುದುಂ ಕಂಡುದುಂ ಉಳ್ಳೊಡೆ ಇಂ ಬೆಸಸಿಂ ಆಂ ಇರದೆ ಅಲ್ಲಿಗೆ ಪೋಪೆವು: ಪಂಪಭಾ, ೪. ೪೮)

ಚಂಡರೋಚಿ

[ನಾ] ಪ್ರಖರ ಕಿರಣಗಳುಳ್ಳವನು, ಸೂರ್ಯ (ಪತ್ತಿ ಶಸ್ತ್ರ ದ್ಯುತಿಪರಿಕg ಸಾಂದ್ರೀಭವಚ್ಚಂಡರೋಚಿಃಕಿರಣೌಘಂ: ಆದಿಪು, ೪. ೨೪)

ಚಂಡವೇಗ

[ನಾ] [ಜೈನ] ಭರತ ಚಕ್ರವರ್ತಿಯ ಏಳು ಅಜೀವರತ್ನಗಳಲ್ಲೊಂದಾದ ದಂಡರತ್ನದ ಹೆಸರು (ವಿಜಯಾರ್ಧಾಚಳ ಮಹಾಗುಹಾಗಹ್ವರಮುಖ ವಜ್ರಕವಾಟಪುಟ ವಿಘಟಪಟುವಪ್ಪ ಚಂಡವೇಗಮೆಂಬ ದಂಡರತ್ನಮುಂ: ಆದಿಪು, ೧೧. ೩. ವ)

ಚಂಡಾಂಶು

[ನಾ] ಚಂಡರುಚಿ, ಸೂರ್ಯ (ದೀಪ್ಯಮಾನ ಪ್ರತಾಪಸ್ಥಗಿತಾಶಾಚಕ್ರಚಂಡಾಂಶುವಂ ಅಮರಮನೋಹಾರಿ ಹೇಮಾದ್ರಿಯಂ: ಆದಿಪು, ೮. ೨೬)

ಚಣಕ

[ನಾ] ಕಡಲೆ (ರಾಜಮಾಷ ಆಢಕೀ ನಿಷ್ಪಾವ ಚಣಕ ಕುಸುಂಭ ಕಾರ್ಪಾಸ ಸರ್ಷಪ ಜೀರಕ ಧಾನ್ಯಕಾದಿ ವಿವಿಧ ಧಾನ್ಯಭೇಧಂಗಳುಂ: ಆದಿಪು, ೬. ೭೨ ವ)

Search Dictionaries

Loading Results

Follow Us :   
  Download Bharatavani App
  Bharatavani Windows App