भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚತುರ್ಭುಜ

[ನಾ] ನಾಲ್ಕು ತೋಳುಗಳುಳ್ಳವನು, ವೃಷಭಯಕ್ಷ (ಪರಶು ಫಳ ಅಕ್ಷ ಸೂತ್ರ ವರದೋಚಿತಚಿಹ್ನಚತುರ್ಭುಜಂ ಮನೋಹರ ವೃಷಲಾಂಛನಂ: ಆದಿಪು, ೧. ೮); [ನಾ] ಶ್ರೀಕೃಷ್ಣ (ಬೞಿಯನಟ್ಟಿ ಬರಿಸಿ ಪೇೞ್ದೊಡೆ ನಿಶಾಟರಾಜಕೋಟಿತಾಟಿತ ಭುಜಂ ಚತುರ್ಭುಜಂ ಇಂತೆಂದಂ: ಪಂಪಭಾ, ೧೩. ೩೦ ವ)

ಚತುರ್ಮುಖ

[ನಾ] [ಜೈನ] ಮಹಾಸಾಮಂತರು ಮಾಡುವ ಜಿನಪೂಜೆ (ಮಹಾಮಂಂಡಳಿಕ ಪ್ರಮುಖ ಮಕುಟಬದ್ಧರ್ ಮಾೞ್ಪ ಚತುರ್ಮುಖಮುಂ ಅರ್ಧಮಂಡಳಕರ್ ಮಾೞ್ಪ ಸರ್ವತೋಭದ್ರಮೆಂಬ ಪೆಸರನೊಡೆಯ ಮಹಾಮಹಮಂ: ಆದಿಪು, ೧೫. ೧೩ ವ)

ಚತುರ್ವಲ

[ನಾ] ಚತುರಂಗಬಲ (ನೆರೆದು ಚತುರ್ವಲಂಬೆರಸು ಬಂದುಱದೊಡ್ಡಿದ ಗಂಡರಾರುಂ ಎನ್ನಱಿಯದ ಗಂಡರೇ: ಪಂಪಭಾ, ೧೧. ೮೯)

ಚತುರ್ವಾರ್ಧಿ

[ನಾ] ನಾಲ್ಕು ಸಾಗರ (ದಾಂಟೆ ಕೀರ್ತಿ ಚತುರ್ವಾರ್ಧಿಯನಿರ್ದನಂದು ಸುಖದಿಂ ವಿದ್ವಿಷ್ಟವಿದ್ರಾವಣಂ: ಪಂಪಭಾ, ೩. ೮೫)

ಚತುರ್ವಿಧ

[ನಾ] [ಜೈನ] [ದಾನದ] ನಾಲ್ಕು ಬಗೆ: ಆಹಾರ, ಅಭಯ, ಔಷಧ ಮತ್ತು ಶಾಸ್ತ್ರ (ಕುಡುವುದುಂ ಆಹಾರ ಅಭಯ ಭೈಷಜ್ಯ ಶಾಸ್ತ್ರದಾನದಿಂ ಚತುರ್ವಿಧಮಕ್ಕುಂ: ಆದಿಪು, ೧೦. ೯ ವ)

ಚತುರ್ವಿಧದೇವನಿಕಾಯ

[ನಾ] [ಜೈನ] ಭವನವಾಸಿ, ವ್ಯಂತರ, ಜ್ಯೋತಿಷ್ಯ ಮತ್ತು ಕಲ್ಪವಾಸಿಗಳೆಂಬ ನಾಲ್ಕು ಪ್ರಕಾರದ ದೇವತೆಗಳ ಸಮೂಹ (ಮೂಱುಲಕ್ಕೆ ದೃಢಬ್ರತಾದಿ ಶ್ರಾವಕರುಂ ಅಯ್ದುಲಕ್ಕೆ ಸುವ್ರತೆ ಮೊದಲಾಗೆ ಪರಮಶ್ರಾವಕಿಯರುಂ: ಆದಿಪು, ೧೬. ೪೦ ವ)

ಚತುರ್ವಿಧಶುಕ್ಲಧ್ಯಾನ

[ನಾ] [ಜೈನ] ಪೃಥಕ್ತ್ವವಿತರ್ಕವಿಚಾರ, ಏಕತ್ವವಿತರ್ಕವಿಚಾರ, ಸೂಕ್ಷ್ಮಕ್ರಿಯಾ ಪ್ರತಿಪಾತಿ, ವ್ಯುಪರತ ಕ್ರಿಯಾನಿವೃತ್ತಿ ಎಂಬ ನಾಲ್ಕು ಬಗೆಯ ಶುಕ್ಲಧ್ಯಾನಗಳು (ಚತುರ್ವಿಧಶುಕ್ಲಧ್ಯಾನದೊಳ್ ಪೂರ್ವಾಪರವಿಷಯ ವಿವಿಕ್ತಾರ್ಥವ್ಯಂಜನವೀರ್ಯ ವಿಧಿವ್ಯಂಜನಯೋಗ ಸಂಕ್ರಮಣಲಕ್ಷಣಲಕ್ಷಿತಮಪ್ಪ ಪೃಥಕ್ತ್ವವಿತರ್ಕವಿಚಾರಮೆಂಬ ಮೊದಲ ಶುಕ್ಲಧ್ಯಾನದೊಳ್: ಆದಿಪು, ೬. ೩೪ ವ)

ಚತುರ್ವಿಧಾಹಾರ

[ನಾ] [ಜೈನ] ಲೇಪ್ಯ, ಓಜ, ಕಬಳ, ಮಾನಸ ಎಂಬ ಆಹಾರಗಳು (ಮಹಾಬಳನಂ ಜಾತರೂಪಧರನಂ ಮಾಡಿ ಚತುರ್ವಿಧಾಹಾರ ಶರೀರಪ್ರತ್ಯಾಖ್ಯಾನಮಂ ಕೊಟ್ಟು: ಆದಿಪು, ೨. ೫೧ ವ)

ಚತುರ್ವಿಧಾಹಾರಶರೀರಪ್ರತ್ಯಾಖ್ಯಾನ

[ನಾ] ನಾಲ್ಕು ಬಗೆಯ ಆಹಾರಗಳನ್ನೂ ಶರೀರದ ಅಭಿಮಾನವನ್ನೂ ತೊರೆಯುವುದು (ಮಹಾಬಳನಂ ಜಾತರೂಪಧರನಂ ಮಾಡಿ ಚತುರ್ವಿಧಾಹಾರಶರೀರಪ್ರತ್ಯಾಖ್ಯಾನಮಂ ಕೊಟ್ಟು: ಆದಿಪು, ೨. ೫೧ ವ)

ಚತುರ್ವಿಂಶತ್

[ನಾ] ಇಪ್ಪತ್ತನಾಲ್ಕು (ಚತುರ್ವಿಂಶತಿ ಅರ್ಹತ್ ಪ್ರತಿಮಾವಿರಾಜಮಾನ: ಆದಿಪು, ೧೬. ೩೭ ವ)

ಚತುರ್ವೇದಪಾರಗ

[ನಾ] ಋಕ್, ಯಜುರ್, ಸಾಮ, ಅಥರ್ವಣ ಎಂಬ ನಾಲ್ಕು ವೇದಗಳಲ್ಲಿ ಪರಿಣತ (ಚತುರ್ವೇದಪಾರಗರ ಮನೆಯ ಮುಂದಣ ಚತುಶ್ಶಾಲೆಯೊಳ್ ಬೀಡಂ ಬಿಟ್ಟು: ಪಂಪಭಾ, ೩. ೨೨ ವ)

ಚತುಶ್ಶಾಲೆ

[ನಾ] ನಾಲ್ಕು ಕಡೆ ಕೈಸಾಲೆಯಿರುವ ಅಂಗಳ (ಚತುರ್ವೇದಪಾರಗರ ಮನೆಯ ಮುಂದಣ ಚತುಶ್ಶಾಲೆಯೊಳ್ ಬೀಡಂ ಬಿಟ್ಟು: ಪಂಪಭಾ, ೩. ೨೨ ವ)

ಚತುಷ್ಕ

[ನಾ] ನಾಲ್ಕರ ಗುಂಪು (ಶುದ್ಧಾಕ್ಷರಂಗಳುಮಂ ಯೋಗವಾಹಚಯುಷ್ಕಮುಂ ಸಂಯೋಗಾಕ್ಷರಂಗಳುಮಂ ಬ್ರಹ್ಮಿಗೆ ದಕ್ಷಿಣಹಸ್ತದೊಳ್ ಉಪದೇಶಂಗೆಯ್ದು: ಆದಿಪು, ೮. ೫೯ ವ)

ಚತುಷ್ಕಶೃಂಗಾಟವೇದಿಕೆ

[ನಾ] ಶೃಂಗಾಟಕ ಮರದಿಂದ ಮಾಡಿದ ಚೌಕಾಕಾರದ ವೇದಿಕೆ (ನಾನಾಮಣಿಮಯ ಪ್ರಾಸಾದಂಗಳೊಳಂ ವಿವಿಧ ವೀಥೀಸನಾಥ ಚತುಷ್ಕಶೃಂಗಾಟವೇದಿಕೆಗಳೊಳಂ: ಆದಿಪು, ೬. ೧೦೬)

ಚತುಷ್ಟಯ

[ನಾ] ನಾಲ್ವರ ಗುಂಪು (ಲೋಕಪಾಲಚತುಷ್ಟಯ ಆಧಿಷ್ಠಿತನುಂ: ಆದಿಪು, ೬. ೧೩ ವ)

ಚತುಷ್ಪದ

[ನಾ] ನಾಲ್ಕು ಕಾಲುಗಳುಳ್ಳ ಪ್ರಾಣಿ (ಪಕ್ಷಿ ಚತುಷ್ಪದ ಸರೀಸೃಪಾದಿ ತಿರ್ಯಗ್ಜಾತಿಗಳುಂ ಬೆರಸು: ಆದಿಪು, ೧೬. ೪೦ ವ)

ಚತುಷ್ಷಷ್ಟಿ

[ನಾ] ಅರವತ್ತನಾಲ್ಕು (ಯಕ್ಷಕುಮಾರರ್ ನೆರೆದಿಕ್ಕೆ ಚತುಷ್ಷಷ್ಟಿ ಚಮರರುಹದ ಪೊದಳ್ದ ಪೊಳೆಪು ದೆಸೆದೆಸೆಗೆಸೆದಿರ್ಕುಂ: ಆದಿಪು, ೧೦. ೪೨)

ಚತುಷ್ಷಷ್ಟಿಲಕ್ಷಣ

[ನಾ] [ಜೈನ] ಪುರುಷನ ಅರುವತ್ತನಾಲ್ಕು ಶುಭಚಿಹ್ನಗಳು (ಸ್ವಸ್ತಿಕ ನಂದ್ಯಾವರ್ತಾದಿ ಚತುಷ್ಷಷ್ಟಿಲಕ್ಷಣ ಧರನುಂ ತಿಳಮಸೂರಿಕಾದ್ಯನೇಕ ವ್ಯಂಜನನಿಧಿಯುಂ ಅಪಾರವೀರ್ಯನುಂ: ಆದಿಪು, ೧೫. ೩ ವ)

ಚತುಸ್ತ್ರಿಂಶದತಿಶಯ

[ನಾ] [ಜೈನ] ಅರ್ಹಂತನಿಗೆ ಒದಗುವ ಮೂವತ್ತನಾಲ್ಕು ಅತಿಶಯಗಳು ಅಥವಾ ವಿಶೇಷಗಳು: ನಿಸ್ವೇದತೆ, ನಿರ್ಮಲ ಶರೀರ, ಹಾಲಿನಂತೆ ಬಿಳಿರಕ್ತ, ವಜ್ರವೃಷಭ ನಾರಾಚನಸಂಹನನ, ಸಮಚತುರಸ್ರ ಶರೀರಸಂಸ್ಥಾನ, ಅನುಪಮರೂಪ, ಸುಗಂಧದ ಉಸಿರು, ಸಾವಿರದೆಂಟು ಉತ್ತಮ ಲಕ್ಷಣಗಳು, ಅನಂತಬಲ ಹಾಗೂ ಹಿತಮಿತಮಧುರಭಾಷಣ ಎಂಬ ಹುಟ್ಟಿನ ಹತ್ತು ವಿಶೇಷಗಳು; ಸುತ್ತ ನೂರು ಯೋಜನ ಸುಭಿಕ್ಷೆ, ಹಿಂಸೆಯ ಅಭಾವ, ಆಕಾಶಗಮನ, ಭೋಜನರಾಹಿತ್ಯ, ಉಪಸರ್ಗರಾಹಿತ್ಯ, ಚತುರ್ದಿಕ್ಕುಗಳಲ್ಲಿ ಅಭಿಮುಖತೆ, ನೆರಳಿಲ್ಲದ ದೇಹ, ರೆಪ್ಪೆ ಮಿಟುಕಿಸದ ಕಣ್ಣು, ಸರ್ವವಿದ್ಯಾ ಪ್ರಭುತ್ವ, ನಖರೋಮಗಳ ಸಮಾನತೆ ಹಾಗೂ ಸರ್ವಭಾಷಾಮಯವಾದ ದಿವ್ಯಧ್ವನಿ ಎಂಬ ಕೇವಲಜ್ಞಾನದಿಂದ ಬರುವ ಹನ್ನೊಂದು ವಿಶೇಷಗಳು; ಸುತ್ತಲೂ ಹೂಹಣ್ಣು ಸಮೃದ್ಧಿ, ಸುಖದಾಯಕವಾದ ಗಾಳಿ, ಪ್ರಾಣಿಗಳ ಮೈತ್ರಿ, ಸ್ವಚ್ಛವಾದ ಕನ್ನಡಿಯಂತಹ ಭೂಮಿ, ಸುಗಂಧಜಲವೃಷ್ಟಿ, ಸಮೃದ್ಧ ಸಸ್ಯಗಳ ಸೃಷ್ಟಿ, ಸಕಲಜೀವರ ನಿತ್ಯ ಆನಂದ, ತಂಗಾಳಿ, ಜಲಸಮೃದ್ಧಿ, ನಿರ್ಮಲ ಆಕಾಶ, ಸಮಸ್ತಜೀವರ ರೋಗಮುಕ್ತಿ, ಸಮಸ್ತಜೀವ ರೋಗರಾಹಿತ್ಯ ಮತ್ತು ಯಕ್ಷೇಂದ್ರನ ಧರ್ಮಚಕ್ರಗಳು ಎಲ್ಲರಿಗೂ ಕಾಣುವುದು ಎಂಬ ಹದಿಮೂರು ದೇವಕೃತ ವಿಶೇಷಗಳು (ಪರಮಜಿನಪತಿ ಪರಿಭಾಷಿತಮಪ್ಪ ಸಕಳಶ್ರಾವಕವ್ರತಂಗಳಂ ಷೋಡಶ ತೀರ್ಥಕರಭಾವನೆಗಳಂ ಚತುಸ್ತ್ರಿಂಶದತಿಶಯಂಗಳುಮಂ ಅಷ್ಟಮಹಾಪ್ರಾತಿಹಾರ್ಯಂಗಳುಮಂ: ಆದಿಪು, ೩. ೪೦ ವ)

ಚತುಸ್ಸಂಜ್ವಲನ

[ನಾ] [ಜೈನ] (ಕ್ರೋಧ, ಮಾನ, ಮಾಯಾ, ಲೋಭಗಳೆಂಬ ನಾಲ್ಕು ಕಷಾಯಗಳಿರುವ ಸ್ಥಿತಿ (ಮತ್ತಂ ಕಿಱಿಕಿಱಿದು ಬೇಗದಿಂ ತನ್ನ ಪರಿಣಾಮವಿಶೇಷದಿಂ ಚತುಸ್ಸಂಜ್ವಲನ ನವನೋಕಷಾಯಂಗಳೆಂಬ ಪದಿಮೂಱು ಪ್ರಕೃತಿಗಳುಮಂ ಅಂತರಕರಣಂ ಮಾಡಿ: ಆದಿಪು, ೧೦. ೧೪ ವ)

Search Dictionaries

Loading Results

Follow Us :   
  Download Bharatavani App
  Bharatavani Windows App