Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಚತುಸ್ಸಹಸ್ರ
[ನಾ] ನಾಲ್ಕು ಸಾವಿರ (ಮೂರ್ಧಾಭಿಷಿಕ್ತ ಮಂಡಳಿಕರಂ ಚತುಸ್ಸಹಸ್ರ ಮಕುಟಬದ್ಧಪರಿವೃತರಂ ಸೋಮಪ್ರಭ ಹರಿ ಅಕಂಪನ ಕಾಶ್ಯಪರಂ ಬರಿಸಿ: ಆದಿಪು, ೮. ೭೪ ವ)
ಚತ್ವಾರಿಂಶತ್
[ನಾ] ನಲವತ್ತು (ಪೂವೋಕ್ತ ಉಪನಯನಾದಿ ಚತ್ವಾರಿಂಶತ್ ಕ್ರಿಯೆಗಳೊಡನೆ ನಾಲ್ವತ್ತೆಂಟು ದೀಕ್ಷಾನ್ವಯಕ್ರಿಯೆಗಳುಮಂ: ಆದಿಪು, ೧೫. ೧೬ ವ)
ಚತ್ವಾರ್ಯೇವ ತತ್ವಾನಿ
[ನಾ] ಪೃಥ್ವಿ, ಅಪ್ ತೇಜಸ್ಸು ಮತ್ತು ವಾಯು ಎಂಬ ನಾಲ್ಕು ತತ್ವ [ಭೂತ]ಗಳು (ಶರೀರರೂಪಪರಿಣತ ಅವನಿ ಪವನಸಖ ಪವನಂಗಳ್ಗೆ ಭೇದಮಿಲ್ಲ ಅವರ್ಕಂ ಏಕತ್ವಮಾಗಿ ‘ಚತ್ವಾಯೇವಂ ತತ್ವಾನಿ’ ಎಂಬ ನಿನ್ನ ಮಾತು ವಿಘಟಿಸುಗುಂ: ಆದಿಪು, ೨. ೧೦ ವ)
ಚಂದನಗಂಧವಾರಿ
[ನಾ] ಶ್ರೀಗಂಧದ ಪರಿಮಳದ ನೀರು (ಚಂದನ ಗಂಧವಾರಿಯೊಳ್ ಸುತ್ತಲುಂ ಅೞ್ಕಱಂ ಪಡೆವ ಗೇಯದ ಪೆಂಪಿನ ಅಲಂಪಂ ಆರ್ಗಂ ಆರ್ತಿತ್ತುದು ಪಟ್ಟಬಂಧ ಮಹೋತ್ಸವಂ ಆ ಪಡೆಮೆಚ್ಚೆ ಗಂಡನಾ: ಪಂಪಭಾ, ೧೪. ೨೦)
ಚಂದನರಸ
[ನಾ] ಶ್ರೀಗಂಧದ ಮರದ ರಸ (ಅಂಗಲತಾಲಾಲಿತ ಸಾಂದ್ರಚಂದನರಸಂ ಬೆಳ್ದಿಂಗಳ್ ಎಂಬೊಂದು ಪಂಬಲ ಬಂಬಲ್ಗೆಡೆಯಾಗೆ ಬೆಳ್ಪಸದನಂ ಕಣ್ಗೊಪ್ಪಿತಾ ಕಾಂತೆಯಾ: ಪಂಪಭಾ, ೧. ೧೩೭); ಪರಿಮಳದ್ರವ (ಮಾದ್ಯತ್ ಗಜಗಂಡಭಿತ್ತಿ ಕಷಣ ಪ್ರೋದ್ಭೇದದಿಂ ಸಾರ್ದು ಬಂದು ಇದಿರೊಳ್ ಕೂಡುವುದಿಲ್ಲಿ ಚಂದನರಸಂ ಕೆಂಬೊನ್ನ ಟಂಕಂಗಳೊಳ್: ಪಂಪಭಾ, ೪. ೨೨)
ಚಂದನಸಾರ
ಶ್ರೀಗಂಧದ ರಸ (ಘನಸಾರ ಚಂದನಸಾರ ಪ್ರಮೃಷ್ಟಕರತಳನುಂ: ಆದಿಪು, ೧೧. ೨೭ ವ)
ಚದುರ
[ನಾ] [ಚತುರ] ಬುದ್ಧಿವಂತ, ಜಾಣ (ಅಕ್ಕರಗೊಟ್ಟಿಯುಂ ಚದುರರ ಒಳ್ವಾತುಂ ಕುಳಿರ್ ಕೋೞ್ಪ ಜೊಂಪಮುಂ ಏವೇೞ್ಪುದನುಳ್ಳ ಮೆಯ್ಸುಕಮುಂ: ಪಂಪಭಾ, ೪. ೩೧)
ಚದುರಂಗದ ಮಣೆ
[ನಾ] ಚದುರಂಗದಾಟದ ಹಾಸುಮಣೆ (ಚತುರಂಗಮುಂ ಒರ್ಮೊದಲೆ ನಡುಗಿದುದು ಕೂಡಿದ ಚದುರಂಗದ ಮಣೆಯಂ ಅಲ್ಗಿದಂತಪ್ಪಿನೆಗಂ: ಪಂಪಭಾ, ೧೧. ೭೦)
ಚದುರ್
[ನಾ] ಚಾತುರ್ಯ (ಧರ್ಮಮಂ ಘೞಿಯಿಸಿಕೊಳ್ವುದೊಂದೆ ಚದುರ್ ಇಂತುಟು ಸಂಸೃತಿಧರ್ಮಮೇಕೆ ಬಾಯೞಿವುದಿದೇಕೆ: ಆದಿಪು, ೩. ೫೩); [ನಾ] ವಿವೇಕ, ಬುದ್ಧಿವಂತಿಕೆ (ತಮಗಂ ಬರ್ದುಕಿಲ್ಲ ಧರ್ಮಮಂ ಗೞಿಯಿಸಿಕೊಳ್ವುದೊಂದೆ ಚದುರ್: ಪಂಪಭಾ, ೨. ೨೭); [ನಾ] ಜಾಣತನ (ಇಱಿಯದ ಬೀರಂ ಇಲ್ಲದ ಕುಲಂ ತಮಗಲ್ಲದ ಚಾಗಂ ಓದದ ಓದು ಅಱಿಯದ ವಿದ್ದೆ ಸಲ್ಲದ ಚದುರ್ ನೆಱೆ ಕಲ್ಲದ ಕಲ್ಪಿ: ಪಂಪಭಾ, ೪. ೯೫); [ನಾ] ವಿವೇಕ (ಕೆಲರ್ ಕುದುಕುಳಿರಕ್ಕಸರ್ ಬಿಸುಗೆಗಳ್ವೆರಸು ಉಗ್ರಮಹಾಗಜಂಗಳಂ ಚದುರ್ಗಿಡೆ ನುಂಗಿ ಬಿಕ್ಕಿ ಕುಡಿದರ್ ಬಿಸುನೆತ್ತರ ಕಾೞ್ಪುರಂಗಳಂ: ಪಂಪಭಾ, ೧೨. ೮); [ನಾ] ಕೌಶಲ (ಉದಾರಗುಣಂ ಸಕಳಾವನೀಶ್ವರರ್ಗೆ ಅದಟಿನಳುರ್ಕೆ ಭೃತ್ಯನಿವಹಕ್ಕೆ ಚದುರ್ ಗಣಿಕಾಜನಕ್ಕೆ ಕುಂದದೆ ನೆಲಸಿರ್ಕೆ ಮದೀಯ ಕೃತಿಬಂಧದಿಂ: ಪಂಪಭಾ, ೧೪. ೬೩)
ಚಂದ್ರಕ
[ನಾ] ನವಿಲುಗರಿ (ಪಲವುಂ ರಾಜಚಿಹ್ನಂಗಳಂ ಬೆಳ್ಗೊಡೆಗಳ್ ತಳ್ಪೊಯ್ದು ಅದೇಂ ಕಣ್ಗೊಳಿಸಿದುದೊ ಚಳತ್ ಚಂದ್ರಕಚ್ಛತ್ರಪಿಂಡಂ: ಪಂಪಭಾ, ೧೩. ೩೮)
ಚಂದ್ರಕಚ್ಛತ್ರ
[ನಾ] ನವಿಲುಗರಿಯ ಕೊಡೆ (ನಿರಂತರೋಚ್ಛ್ರಿತ ಚಂದ್ರಕಚ್ಛತ್ರಚ್ಛಾಯಾನಿರಾಕೃತಾತಪನುಂ: ಆದಿಪು, ೩. ೯೦ ವ)
ಚಂದ್ರಕಬಳ
[ನಾ] ಕೆಂಪು ಬಣ್ಣದ ಒಂದು ಬಗೆಯ ಪರಿಮಳದ್ರವ್ಯ (ಚಿನ್ನ ಪೂಗಳಂ ಮೆಱೆವಂತೆ ಚಂದ್ರಕಬಳಮಂ ತೊಡೆವಂತೆ ಮಹೀಕಾಂತೆ ಸೊಗಯಿಸೆ: ಆದಿಪ, ೭. ೩೬ ವ)
ಚಂದ್ರಕವಳ
[ನಾ] ಪರಿಮಳದ್ರವ್ಯ (ಮನ್ಮಥೋತ್ಸವ ಅಭಿಮುಖ ಚಂದ್ರನುಂ ಚಂದ್ರಕವಳದಿಂ ತೊಡೆದು ಓರೊಂದೆ ವಜ್ರದ ಪಂಚಲೋಹಮುಮಂ: ಆದಿಪು, ೪. ೪೧ ವ)
ಚಂದ್ರಕಾಂತ
[ನಾ] ಬೆಳುದಿಂಗಳಿನಿಂದ ಆರ್ದ್ರಗೊಳ್ಳುವ ಬಿಳಿಯ ಕಲ್ಲು (ಆ ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮಜ್ಜನಕೆ ಎಂದೆತ್ತಿದ ಚಂದ್ರಕಾಂತ ಘಟದೊಳ್ ತಂದು: ಪಂಪಭಾ ಪರಿಷತ್ತು, ೪. ೫೧)
ಚಂದ್ರಕಾಂತಘಟ
[ನಾ] ಬಿಳಿಗಲ್ಲಿನ ಕೊಡ (ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮಜ್ಜನಕ್ಕೆಂದೆತ್ತಿದ ಚಂದ್ರಕಾಂತಘಟದೊಳ್: ಪಂಪಭಾ, ೪. ೫೧)
ಚಂದ್ರಕಿ
[ನಾ] ನವಿಲು (ಸಮದಾರಾತಿಮರಾಳನೀರದರವಂ ಸಂಕ್ರುದ್ಧವೈವಸ್ವತೋಪಮವಿದ್ವಿಷ್ಟ ಫಣೀಂದ್ರ ಚಂದ್ರಕಿರವಂ: ಆದಿಪು, ೧೧. ೧೦)
ಚಂದ್ರಕಿರವ
[ನಾ] ನವಿಲಿನ ಕೇಗು (ಸಮದಾರಾತಿ ಮರಾಳನೀರದರವಂ ಸಂಕ್ರುದ್ಧವೈವಸ್ವತೋಪಮ ವಿದ್ವಿಷ್ಟ ಚಂದ್ರಕಿರವಂ: ಆದಿಪು, ೧೧. ೧೦)
ಚಂದ್ರಗತಿ
[ನಾ] ಎಲ್ಲ ನಕ್ಷತ್ರಗಳನ್ನೂ ಪ್ರವೇಶಿಸಿ ಚಂದ್ರನು ಮೆಲ್ಲಗೆ ಹೋಗುವುದು (ನಗರಾರಣ್ಯನಿರ್ವಿಶೇಷಂ ಉತ್ತಮ ಮಧ್ಯಮ ಜಘನ್ಯಾಗಾರಂಗಳೊಳ್ ಚಂದ್ರಗತಿಯಿಂ ಸಲುತ್ತುಂ: ಆದಿಪು, ೯. ೧೩೦ ವ)
ಚಂದ್ರಚರಿತ
[ನಾ] ಚಂದ್ರಗತಿ, ಚಂದ್ರನ ನಡವಳಿಕೆ [ಕುಮುದಗಳನ್ನು ಅರಳಿಸುವ ಕಾರ್ಯ] (ಶರದದ ಚಂದ್ರಮನೊಳ್ ಮಚ್ಚರಿಪಂತಿರೆ ಚಂದ್ರಚರಿತಮಂ ಕೈಕೊಂಡಂ: ಆದಿಪು, ೧೨. ೪೬)
ಚಂದ್ರಧವಳ