भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಂದ್ರಬಿಂಬ

[ನಾ] ಚಂದ್ರನ ಆಕೃತಿ (ಇತ್ತೆನೆಂದು ವಿಯತ್ತಳಕ್ಕೊಗೆದೊಡೆ ಆತನಂಶಮಾಕೆಯ ಗರ್ಭಸರೋವರದೊಳಗೆ ಚಂದ್ರಬಿಂಬದಂತೆ ಸೊಗಯಿಸೆ: ಪಂಪಭಾ, ೧. ೧೨೪ ವ)

ಚಂದ್ರಾತಪ

[ನಾ] [ಚಂದ್ರ+ಆತಪ] ಬೆಳುದಿಂಗಳು (ಚಂದ್ರಾತಪ ಪಾಂಡುರ ಹರಿಚಂದನಾನುಲಿಪ್ತಗಾತ್ರನುಂ ಅಭಿನವ ವಿಳಸಿತ ಮಾಳತೀಮಾಳಾಪರಿಷ್ಕೃತಮಕುಟನುಂ: ಆದಿಪು, ೧೧. ೧೦)

ಚಂದ್ರಾಂಶು

[ನಾ] ಚಂದ್ರನ ಕಿರಣ, ಬೆಳುದಿಂಗಳು (ವಾರಿಜ ಮಳಯಜ ಮಳಯಸಮೀರಣ ಚಂದ್ರಾಂಶು ಚಂದ್ರಕಾಂತದ್ರವ ಕರ್ಪೂರ ಮೃಣಾಳಾದಿಗಳುಂ: ಆದಿಪು, ೨. ೧೩)

ಚಂದ್ರಿಕಾಪ್ರಭೆ

[ನಾ] ಬೆಳುದಿಂಗಳ ಕಾಂತಿ (ತುಂಬಿಯ ಗಾವರಂಗಳಂ ಗೆಡೆಗೊಳೆ ಚಂದ್ರಿಕಾಪ್ರಭೆ ಮೊದಲ್ಗಿಡೆ ನಾಡೆ ವಿತರ್ಕದಿಂ ಬೆರಲ್ಮಿಡಿದು ಗುಣಾರ್ಣವಂ ನೆಱೆಯೆ ನಿಟ್ಟಿಸಿದಂ ಬೆಳಗಪ್ಪ ಜಾವಮಂ ಪಂಪಭಾ, ೪. ೧೧೦)

ಚಂದ್ರಿಕೆ

[ನಾ] ಬೆಳುದಿಂಗಳು (ಮದೀಯ ಮನೋಗತ ಕಾಮಸಾಗರದ ಒದವಿಂಗೆ ನಲ್ಲಳ ವಿಲೋಚನ ಚಂದ್ರಿಕೆಯೊಂದೆ ಸಾಲದೇ: ಪಂಪಭಾ, ೫. ೧೧)

ಚಂಪಕ

[ನಾ] ಸಂಪಿಗೆ (ಕೞ್ತಲೆಯನಲೆವ ಸೊಡರ್ಗುಡಿಗಳನೀ ಅಳ್ಳಿಱಿದಲೆವುವು ಬನದೊಳಗುಳ್ಳಲರ್ದುಜ್ಜ್ವಳಿಪ ಚಂಪಕ ಪ್ರಸವಂಗಳ್: ಆದಿಪು, ೧. ೬೭)

ಚಂಪಕಮಾಲೆ

[ನಾ] ಕೊರಳ ಆಭರಣ (ಪಿರಿದೊಂದುತ್ಸುಕ ಭಾವದಿಂ ಸರಿಗೆಯಂ ಕಾಲೊಳ್ ಕಟೀಸೂತ್ರಮಂ ಕೊರಲೊಳ್ ಚಂಪಕಮಾಲೆಯಂ: ಆದಿಪು, ೧೧. ೨೨)

ಚಪಳಕಪಿ

[ನಾ] ಚಟುವಟಿಕೆಯ ಕೋಡಗ (ಮುತ್ತ ತವಸಿಗಳ ಕೈಯಂ ಪಿಡಿದುಯ್ದು ಅವರ ಗುಹೆಗಳಂ ಪುಗಿಪ ಪೊಱಮಡಿಪ ಚಪಳಕಪಿಗಳುಮಂ: ಪಂಪಭಾ, ೧. ೧೧೫ ವ)

ಚಪಳಂಗಳಾಗು

[ಕ್ರಿ] ಚಂಚಲವಾಗು (ಅಲರ್ಗಣ್ಗಳ್ ಚಪಳಂಗಳಾಗಿ ಜಘನಂ ಕಾಂಚೀಕಲಾಪಪ್ರಭೋಜ್ಜ್ವಲಂ ಉದ್ವೃತ್ತಮುಂ ಆಗಿ ತಾಂ ಅಲೆಗೆ: ಪಂಪಭಾ, ೪. ೭೪)

ಚಪೇಟಚರಣಾಘಾತ

[ನಾ] ಅಂಗೇಯ ಏಟು ಮತ್ತು ಕಾಲಿನ ಒದೆತ (ಘಾತಿಸೆ ಚಪೇಟಚರಣಾಘಾತದೊಳೞಿದಿಲ್ಲಿ ಬಂದು ಅತಿಕ್ರೋಧನನಿಂತೀ ಪುಲಿಯಾದಂ: ಆದಿಪು, ೫. ೧೬)

ಚಪ್ಪರಿಸು

[ಕ್ರಿ] ತಿಂದು ನಾಲಿಗೆಯಾಡಿಸು (ಮದಾಕೃತಿಯಂ ಮಾಸಿಸಿ ಮುಪ್ಪು ಚಪ್ಪರಿಸೆಯುಂ: ಆದಿಪು, ೧. ೮೧); [ಕ್ರಿ] ಗರ್ವಿಸು (ಕಂಡು ಕಪ್ಪಮೀಯದೆ ಚಪ್ಪರಿಸುವ ಮಂಡಳಿಕರುಮಂ ಅಡಂಗದಾಟವಿಕರುಮಂ: ಆದಿಪು, ೪. ೮೨ ವ)

ಚಮರಜ

[ನಾ] ಚಾಮರ (ವಾಜಿರಾಜಿಶ್ರವಣ ಚಮರಜಶ್ರೇಣಿ ಸಂವೀಜಿತ ಆಶಾಂಬರಭಾಗಂ: ಆದಿಪು, ೪. ೨೪)

ಚಮರೀ

[ನಾ] ಚಾಮರ (ಸುರವಧೂಲೀಲಾವಧೂತ ಪ್ರತಿಕ್ಷಣ ಚಂಚಚ್ಚಮರೀರುಹಂ ಪಟುನಟಪ್ರಾರಬ್ಧಸಂಗೀತಕಂ ತಣಿದಂ ಸಂತತಂ: ಆದಿಪು, ೨. ೭೯); [ನಾ] ಚಮರೀ ಮೃಗ (ಚಮರೀ ಲೋಲ ಲಾಂಗೂಲ ಮಾಲಾವಲಿ ವಿಕ್ಷೇಪಂಗಳಿಂ ತತ್ ಚಮರರುಹ ಮಹಾಶೋಭೆ ಕೈಗಣ್ಮೆ: ಪಂಪಭಾ, ೪. ೧೪)

ಚಮರೀಜ

[ನಾ] ಚಾಮರ (ಮದಕಳಹಂಸೆಯಂ ಪಿಂಡಿದೆ ಪೊದಳ್ದ ಚಮರೀಜಮಾಗೆ ಜಳದೇವತೆಗೆತ್ತಿದ ಪಚ್ಚೆಯ ಸತ್ತಿಗೆಗಳ ಪುದುವೆನಿಪುದು; ಆದಿಪು, ೧೧. ೬೫)

ಚಮರೀಜಾತ

[ನಾ] ಚಾಮರ (ಇವು ಚಮರೀಜಾತಂ ದುಗ್ಧವಾರ್ಧಿ ಫೇನೋಪಮಾನಮಿವು ನಿನಗೆಯೆ ತಕ್ಕುವು: ಆದಿಪು, ೧೩. ೧೮)

ಚಮರೀರುಹ

[ನಾ] ಚಾಮರ (ಸುರವಧೂಲೀಲಾವತಿಧೂತ ಪ್ರತಿಕ್ಷಣ ಚಂಚಚ್ಚಮರೀರುಹಂ ಪಟುನಟಪ್ರಾರಬ್ಧ ಸಂಗೀತಕಂ ತಣಿದಂ: ಆದಿಪು, ೨. ೭೯)

ಚಮೂ

[ನಾ] ಸೇನೆ (ಪ್ರಿಯಗಳ್ಳಭೂಪತಿ ಚಮೂಪ್ರಸ್ಥಾನಮಾಚಕ್ಷತೇ: ಪಂಪಭಾ, ೯. ೯೭)

ಚಮೂಪತಿ

[ನಾ] ದಂಡಾಧಿಪತಿ (ತಮಿಸ್ರಗುಹೆಯ ವಜ್ರದ ಪಡಿ ತತ್ಕ್ಷಿತಿಧರದೆರ್ದೆಯಂತೆ ಚಮೂಪತಿಯಿಂ ತೆಱೆದತ್ತು: ಆದಿಪು, ೧೪. ೫೭)

ಚಮೂರು

[ನಾ] ಜಿಂಕೆ (ಮತ್ಸ್ಯ ಮಕರ ಕುಲಿಶ ಕಲಶ ಕುಳೀರ ವರಾಹ ವಾನರ ಕಂಠೀರವ ಚಮೂರು ಮಯೂರ ಗರುಡ ಫಣಿರಾಜಚಿಹ್ನಂಗಳಪ್ಪ: ಆದಿಪು, ೧೧. ೨೮ ವ)

ಚಮ್ಮಟಿಗೆ

[ನಾ] [ಚರ್ಮಪಟ್ಟಿಕಾ] ಚಾವಟಿ, ಚಾಟಿ (ಅನ್ನೆಗಂ ನಕುಳನುಂ ಅಂಕವಣೆಯುಂ ಬಾಳುಂ ಬಾರುಂ ಚಮ್ಮಟಿಗೆಯುಮಂ ಒರ್ವ ಕೀೞಾಳಿಂ ಪಿಡಿಯಿಸಿಕೊಂಡು ಬಂದು: ಪಂಪಭಾ, ೮. ೫೪ ವ)

Search Dictionaries

Loading Results

Follow Us :   
  Download Bharatavani App
  Bharatavani Windows App