Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಚಯ
[ನಾ] ಸಮೂಹ (ದಿಗಂಬರ ತಟಂಬರಂ ಕೀರ್ತಿವಲ್ಲೀಚಯಂ ದಿಗಂಬರವಿಳಾಸಮಂ ಬಯಕೆ ತೀರ್ವಿನಂ ತಾಳ್ದಿದೆಂ: ಆದಿಪು, ೩. ೫೭); ರಾಶಿ (ಶರಶಾಳಿಯೆಂ ಎಂಬುದಂ ಈ ಶರದಿಂದೆಮಗಱಿಪಲೆಚ್ಚು ಕುಲಧನಚಯಮಂ ತರಿಸಿ ಕೊಳಲ್ಬಗೆದ ಅದಟನ: ಆದಿಪು, ೧೨. ೯೯)
ಚಯ್ ಚಯ್
[ಅ] ಅನುಕರಣ ಶಬ್ದ, ಹೀಗೆ ಘರ್ಷಿಸುವುದು (ಚಯ್ ಚಯ್ಯೆಂಬಾಗಳ್ ಮೆಯ್ ಮೆಯ್ ಚಲದಿಂ ಮುಟ್ಟಿ ಪೊಣರ್ದು ತಳ್ತಿಱಿವ ಉರ್ಕಿಂ ಕೆಯ್ ಚೆಚ್ಚರಿಕೆಯ ಚಲದಿಂ ಕೆಯ್ ಚಳಿವಿನಂ ಇಱಿದರ್: ಪಂಪಭಾ, ೧೩. ೩೪)
ಚರ
[ನಾ] ಜನ್ಮ, ರೂಪ (ಆ ವಿಷಯದೊಳ್ ಶಾರ್ದೂಲಚರನಪ್ಪ ಚಿತ್ರಾಂಗದೇವಂ ದೇವಲೋಕದಿಂದವತರಿಸೆ:ಬಂದು ಸಮಾನ ಪುಣ್ಯತ್ವಂ ಕಾರಣಮಾಗಿ .. .. ವರದತ್ತನೆಂಬೊಂ ಮಗನಾದಂ: ಆದಿಪು, ೬. ೩ ವ)
ಚರಣ
[ನಾ] ಮಾಡುವಿಕೆ (ಅವರೊಳಗೆ ದೇವಾಪಿ ನವಯೌವನಪ್ರಾರಂಭದೊಳೆ ತಪಃ ಚರಣ ಪರಾಯಣನಾದಂ; ಪಂಪಭಾ, ೧. ೬೫ ವ)
ಚರಣಪ್ರಹರಣ
[ನಾ] ಪಾದಗಳ ಒದೆತ (ವೃಕೋದರ ಗದಾಸಂಚೂರ್ಣಿತ ಊರುಯುಗಳನುಂ ಭೀಮಸೇನಚರಣ ಪ್ರಹರಣಗಳಿತ ಶೋಣಿತಾರ್ದ್ರ ಮೌಳಿಯುಂ ಆಗಿ: ಪಂಪಭಾ, ೧೩. ೧೦೨ ವ)
ಚರಣಾಘಾತ
[ನಾ] ಕಾಲ ಒದೆತ (ಘಾತಿಸೆ ಚಪೇಟ ಚರಣಾಘಾತದೊಳೞಿದಿಲ್ಲಿ ಬಂದತಿಕ್ರೋಧನನಿಂತೀ ಪುಲಿಯಾದಂ: ಆದಿಪು, ೫. ೧೬)
ಚರಮತನು
[ನಾ] [ಜೈನ] ಮೋಕ್ಷಕ್ಕ್ಕೆ ಹೋಗುವವನು (ಅಮೂರ್ತರ್ ಚರಮತನುಸಮಾಕಾರರ್ ಉದ್ಧೂತಲೇಪರ್ ಪ್ರಣುತರ್ .. .. ಸ್ವಕೀಯಪ್ರಭುತೆಯನೆಮಗಂ ಮಾೞ್ಕೆ ಅತಿಪ್ರೀತಿಯಿಂದಂ: ಆದಿಪು, ೧. ೨)
ಚರಮದೇಹಧಾರಿ
[ನಾ] [ಜೈನ] ಚರಮತನು (ಇವರಿರ್ವರ್ ಅರಸುಗಳಪ್ಪೊಡೆ ಚರಮದೇಹಧಾರಿಗಳ್: ಆದಿಪು, ೧೪. ೧೦೦ ವ)
ಚರಮಾಂಗ
[ನಾ] ಕೊನೆಯ ಜನ್ಮದವನು (ಪುರುಪರಮೇಶ್ವರಪುತ್ರಂ ಚರಮಾಂಗಂ ಚಕ್ರವರ್ತಿಯೆಂದೊಡೆ ಪೇೞಲ್ ದೊರೆ ಪೆಱರಾರ್ ಭರತನೊಳ್: ಆದಿಪು, ೧೨. ೧೦೯)
ಚರಿಗೆ
[ನಾ] [ಜೈನ] ಮುನಿಗಳ ಭಿಕ್ಷೆ (ಮಿಂದುಂಡೀಗಳೆ ಬಿಜಯಂಗೆಯ್ಯೆಂದಿರೆ ಕುಳಾದ್ರಿಧೈರ್ಯಂಗೆ ಚರಿಗೆ ಮಾಣ್ದತ್ತಿನಿಸುಂ: ಆದಿಪು, ೯. ೧೨೯)
ಚರಿಗೆವರ್
[ಕ್ರಿ] [ಜೈನ] ಮುನಿಗಳು ಭಿಕ್ಷೆಗೆ ಬರುವುದು (ಅನುರಾಗದಿಂ ಆ ಪ್ರೀತಿವರ್ಧನಂ ಮುನಿವರರೆಂತೀ ಗಿರಿಗೆ ಚರಿಗೆವರ್ಪರನಾಗತಮತಿ ಬಗೆಯ ನೀನುಪಾಯಾಂತರಮಂ: ಆದಿಪು, ೫. ೭)
ಚರಿಗೆವೊಗು
[ಕ್ರಿ] [ಜೈನ] ಮುನಿಗಳು ಭಿಕ್ಷೆಗಾಗಿ ಮನೆಯನ್ನು ಹೊಗು (ನಿಯಮದಿಂ ನಿರ್ಮಳಚರಿತಂ ಚರಿಗೆವೊಕ್ಕಂ ಅರಸನ ಬೀಡಂ: ಆದಿಪು, ೫. ೧೦)
ಚರಿತ
[ನಾ] ಆಚಾರ (ಬಗೆಯೊಳ್ಪೊಣ್ಮೆ ದಯಾರಸಂ ಚರಿತದೊಳ್ಕೈಗಣ್ಮೆ ಚಾರಿತ್ರಂ: ಆದಿಪು, ೧. ೫)
ಚರಿತಂ
[ಅ] ತ್ವರಿತವಾಗಿ (ಚರಿತಂ ಬಂದರ್ ಕಣ್ಗೊಪ್ಪಿರಲ್ ವರಭೋಗಿಯರ್: ಪಂಪಭಾ, ೯. ೧೦೨)
ಚರಿತಾರ್ಥ
[ನಾ] ಧನ್ಯ, ಸಾರ್ಥಕಜೀವಿ (ಸಂಸರಣಾಂಭೋರಾಶಿಯಂ ದಾಂಟುವ ಬಗೆಯನೆ ಕಯ್ಕೊಂಡಂ ಎಂದಂದೆ ಮಾವಂ ಚರಿತಾರ್ಥಂ: ಆದಿಪು, ೪. ೮೯)
ಚರು
[ನಾ] ಹವಿಸ್ಸು, ದೇವತೆಗಳಿಗೆ ಅರ್ಪಿಸುವ ನೈವೇದ್ಯ (ಜಳಗಂಧಾಕ್ಷತೆ ಪುಷ್ಪಾವಳಿ ಚರು ದೀಪಪ್ರದೀಪ ಧೂಪಫಲಂಗಳ್ ಕುಳಿಶಾಯುಧನರ್ಚಿಸೆ ತೊಳತೊಳಗಿದವು: ಆದಿಪು, ೭. ೧೦೫)
ಚರುಕ
[ನಾ] ಅನ್ನ (ಅನೇಕ ಭಕ್ಷೋಪದಂಶ ರಸಪ್ರಚುರ ಚಾರುಚರುಕಂಗಳಿಂದಂ: ಆದಿಪು, ೨. ೩೨ ವ)
ಚರ್ಚನ
[ನಾ] ಗಂಧ ಬಳಿಯುವುದು (ವಿಜಯಾಂಗನಾ ಚರ್ಚನೋಚಿತ ಮೃಗಮದಮುಂ ನಿಜಭುಜವಿಜಯಲಕ್ಷ್ಮೀ ಪರಿರಂಭಪ್ರಕಟನ ದಕ್ಷದಕ್ಷಿಣವಿಷಾಣವಿನ್ಯಸ್ತ ಹಸ್ತಮುಂ: ಆದಿಪು, ೧೪. ೯೦ ವ)
ಚರ್ಚರಪೂಜಾ
[ನಾ] ನೃತ್ಯ ಸಂಗೀತಸಹಿತ ಮಾಡುವ ಪೂಜೆ (ಪೂರ್ವರಂಗಪ್ರಸಂಗದೊಳ್ ಚರ್ಚರಪೂಜಾಮಂಗಳ ಪದೋಚ್ಚಾರಣ ಪುಷ್ಪಾಂಜಲಿವಿಕ್ಷೇಪಣಾದಿ ನಾಂದಿವಿಧಿಯಂ ನಿರ್ವರ್ತಿಸಿ: ಆದಿಪು, ೭. ೧೧೫ ವ)
ಚರ್ಚಿತ