Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಚರ್ಮರತ್ನ
[ನಾ] [ಜೈನ] ಶ್ರೀಗೃಹದಲ್ಲಿ ಹುಟ್ಟಿದ ಚಕ್ರವರ್ತಿಯ ರತ್ನಗಳಲ್ಲಿ ಒಂದು (ಶ್ರೀಗೃಹದೊಳ್ ಪುಟ್ಟಿದ ನಿಧಿ ಮಣಿ ಚರ್ಮ ಕಾಕಿಣೀರತ್ನಂಗಳುಂ: ಆದಿಪು, ೧೫. ೩ ವ)
ಚರ್ಯಾಪರ್ಯಟನ
[ನಾ] [ಜೈನ] ಚರ್ಯೆಗಾಗಿ ಮಾಡುವ ತಿರುಗಾಟ (ಆ ಮುನೀಶ್ವರಂಗೆ ನಿಖಿಳಜಗಜ್ಜನಾಶ್ಚರ್ಯ ಚರ್ಯಾಪರ್ಯಟನದೊಳ್ ಮತ್ತಮಱುದಿಂಗಳ್ ಪೋಗೆ: ಆದಿಪು, ೯. ೧೨೯ ವ)
ಚರ್ಯಾಮಾರ್ಗ
[ನಾ] [ಜೈನ] ಚರಿಗೆಗಾಗಿ ಹೋಗುವ ಉದ್ದೇಶ (ಚರ್ಯಾಮಾರ್ಗದೊಂದಂದಮಂ ಧರೆಯೊಳ್ ಮಾರ್ಗವಿಬೋಧನಾರ್ಥಂ ಅಱಿಯಲ್ಕೆಂದೆತ್ತಿ ಕೆಯ್ಯಂ: ಆದಿಪು, ೯. ೧೨೪)
ಚರ್ವಿತ
[ಗು] ಅಗಿಯಲ್ಪಟ್ಟ (ಕರಾಳನಕ್ರಚರ್ವಿತ ನಿಕೀರ್ಣ ನಿರಯಜನಿಕುರುಂಬ ಶಲ್ಯಶಕಲಪರಿಪೂರಿತ ಧವಳಪ್ಲವ ದುರ್ನಿರೀಕ್ಷಣವಿಷಮೆಯುಂ: ಆದಿಪು, ೫. ೮೭ ವ)
ಚರ್ವಿತಚರ್ವಣ
[ನಾ] ಅಗಿದದ್ದನ್ನೇ ಅಗಿಯುವುದು, ಪುನರುಕ್ತಿ (ನಿಚ್ಚಂ ನಿಚ್ಚಮೀ ಪಿಷ್ಟಪೇಷಣ ಚರ್ವಿತಚರ್ವಣಂ ಸುಖಮಿದೇಂ ನಿನ್ನಂ ಮರುಳ್ಮಾಡಿತೋ: ಆದಿಪು, ೩. ೬೯)
ಚಲ
[ನಾ] ಅಂತಸ್ತು (ಒಡೆಯಂ ಕೂಸಿಂಗದೊಂದು ಕುಲದ ಚಲದ ಪೆಂಪೊಂದೆ ಚೆಲ್ವೊಂದೆ ಸಂದೊಳ್ನುಡಿಯೊಂದೇ: ಆದಿಪು, ೪. ೨೭); [ನಾ] ಹಟ (ಚಲಚಲದಿಂ ಉಱದೆ ಪಗೆವರ ತಲೆಗಳಂ ಅಱಿದಂದು ಬಂದು ಪಾಂಡುತನೂಜರ್ ತಲೆದೋಱೆರೆ: ಪಂಪಭಾ, ೯. ೪); [ನಾ] [ರಾಜನ] ಸ್ವಾಭಿಮಾನಸ್ಥಿರತೆ (ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನತನಯಂ ಗಂಡಿನೊಳ್ ಭೀಮಸೇನಂ ಬಲದೊಳ್ ಮದ್ರೇಶಂ: ಪಂಪಭಾ, ೧೪. ೬೪)
ಚಲತ್
[ಗು] ಬೀಳುವ (ಸದ್ಯಃ ಸಂತಾಪಿತ ಲೋಹಪುತ್ರಿಕಾ ಪರಿರಂಭಸಂಭೃತ ಪ್ಲೋಷಚಲಜ್ಜಾಂಗಳ ಗಳತ್ ರುಧಿರ: ಆದಿಪು, ೫. ೮೭ ವ)
ಚಲಲ್ಲುಳಿತ
[ಗು] [ಚಲತ್+ಲುಳಿತ] ಹರಡಿಕೊಂಡು ಅಲುಗಾಡುವ (ಈ ಬರೆದ ಕಲ್ಪಂ ಈಶಾನಂ ಈ ಚಲಲ್ಲುಳಿತಕೇತನಂ ಸುರವಿಮಾನಂ ಆ ಶ್ರೀಪ್ರಭಂ: ಆದಿಪು, ೪. ೬)
ಚಲಾಚಲ
[ನಾ] ಮಿಂಚಿನಂತೆ ಚಂಚಲ (ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಮೀ ಭಟಖಡ್ಗಮಂಡಲೋತ್ಪಲವನ ವಿಭ್ರಮ ಭ್ರಮರಿಯಪ್ಪ ಚಲಾಚಲ ರಾಜ್ಯಲಕ್ಷ್ಮಿ: ಆದಿಪು, ೧೪. ೧೩೦) [ಈ ಪದದ ಸ್ಥಾನದಲ್ಲಿ ಟಿವಿವೆಂ ಆವೃತ್ತಿಯಲ್ಲಿರುವುದು ‘ಮನೋಹರಿ’ ಎಂಬ ಶಬ್ದ]
ಚಲ್ಲಣ
[ನಾ] ಚೆಡ್ಡಿ, ಅರ್ಧೋರುಕ (ಪಾಲ್ಗಡಲ ತೆರೆಯ ನೊರೆಯ ದೊರೆಯ ದುಕೂಲಾಂಬರದೊಳ್ ಇಂಬಾಗಿ ಚಲ್ಲಣಮನುಟ್ಟು ಪುಡಿಗತ್ತುರಿಯಂ ತಲೆಯೊಳ್ ತೀವೆ ಪೊಯ್ದು: ಪಂಪಭಾ, ೧೨. ೧೦೮ ವ)
ಚಲ್ಲವಾಡು
[ಕ್ರಿ] ಸರಸವಾಡು (ಚಲ್ಲವಾಡಿ ಪೂವೆತ್ತುವ ಮಾಲೆಗಾರ್ತಿಯರಂ ಅಂದು ಅರಿಕೇಸರಿ ನಿಂದು ನೋಡಿದಂ: ಪಂಪಭಾ, ೪. ೮೧)
ಚಲ್ಲವೊತ್ತ
[ನಾ] ಒಳ್ಳೆಯ ಮಾತಾಡಿ ನಂಬಿಸಿ ಹೊಟ್ಟೆ ಹೊರೆಯುವವನು (ನಾಡ ಚಲ್ಲವೊತ್ತರ ನುಡಿಗೊಳ್ಳದಿರ್ ನಿನಗೆ ಪಾಂಡವರಪ್ಪುದಂ ಆರುಂ ಅಪ್ಪರೇ: ಪಂಪಭಾ, ೯. ೪೨)
ಚಲ್ಲಿ
[ನಾ] ಚಲನೆ, ನೃತ್ಯದ ಒಂದು ಗತಿ (ಚರಣದ ಚಾರಿಯ ಚಲ್ಲಿಯ ಪರಿಕ್ರಮಕ್ರಮದ ಚಿತ್ತಮುಮಂ ನೆಗೞ್ವೆಡೆಯೊಳ್ ರಂಜಿಸಿದುದು: ಆದಿಪು, ೯. ೩೯)
ಚಳಣ
[ನಾ] ಕಾಲು, ಪಾದ (ಬಳಮೆರಡುಂ ತನ್ನನೆ ಮಿಳಮಿಳ ನೋಡೆ ನರೇಂದ್ರಂ ಒಂದೆ ರಥಧಿಂದ ಅಸುಹೃದ್ಬಳಮಂ ಇರದೆಯ್ದಿ ಭೀಷ್ಮರ ಚಳಣಯುಗಕ್ಕೆಱಗೆ ನಿನಗೆ ಜಯಮಕ್ಕೆ ಎಂದಂ: ಪಂಪಭಾ, ೧೦. ೬೦)
ಚಳತ್
[ಗು] ಚಲಿಸುತ್ತಿರುವ (ಪಲವುಂ ರಾಜಚಿಹ್ನಂಗಳಂ ಬೆಳ್ಗೊಡೆಗಳ್ ತಳ್ಪೊಯ್ದು ಅದೇಂ ಕಣ್ಗೊಳಿಸಿದುದೊ ಚಳತ್ ಚಂದ್ರಕಚ್ಛತ್ರಪಿಂಡಂ: ಪಂಪಭಾ, ೧೩. ೩೮)
ಚಳದಳಕೆ
[ನಾ] [ಚಲತ್+ಅಲಕೆ] ಅಲುಗುವ ಮುಂಗುರುಳುಳ್ಳವಳು (ಪುಳಿನದ ಲೋಹಾಸನಂಗಳೊಳ್ ನೆಮ್ಮಿರ್ದುಂ ಚಳದಳಕೆಯರರೆಬರ್ ಅದೇಂ ಕಳೆದರೊ ಶರದಾತಪಪ್ರಭೂತಶ್ರಮಮಂ: ಆದಿಪು, ೧೧. ೭೬)
ಚಳಮತಿ
[ನಾ] ಚಂಚಲ (ಫಳದಿಂ ಕಲ್ಪದ್ರುಮಮಂ ಜಳದಿಂ ಜಳನಿಧಿಯಂ ಉಕ್ತಿಯಿಂ ಸುರಗುರುವಂ ಬೆಳಗಿಂ ದಿನಪನಂ ಅರ್ಚಿಪ ಚಳಮತಿಗಳ ತೆಱನನಾಮುಮನುಕರಿಸಿರೆವೇ: ಆದಿಪು, ೧೪. ೧೧)
ಚಳಿತು
[ಕ್ರಿ] [√ಚಳಿ] ದಣಿದು (ಕಾದಿ ಚಳಿತು ಎಯ್ದಿ ಬೞಲ್ದು ಅಪರಾಂಬುರಾಶಿಯೊಳ್ ಮುೞುಗುವ ತೀವ್ರದೀಧಿತಿವೊಲ್ ಆ ಕೊಳದೊಳ್ ಫಣಿರಾಜಕೇತನಂ ಮುೞುಗಿದಂ: ಪಂಪಭಾ, ೧೩. ೭೪)
ಚಳಿಯಿಸು
[ಕ್ರಿ] [√ಚಳಿ] ಚಲ್ಲಾಪಿಲ್ಲಿಮಾಡು (ಕಳೆದುದು ಪತ್ರಭಂಗದ ಬೆಡಂಗುಗಳಂ ಕುಟಿಲಾಲಕಂಗಳಂ ಬಳೆಯಿಸಿದತ್ತು ಕಣ್ಗೆಸೆವ ರಾಗಮನೆಯ್ದಿದಿಸಿ ಕೇಶಹಸ್ತಮಂ ಚಳಿಯಿಸಿದತ್ತು: ಆದಿಪು, ೧೧. ೧೫೦); [ಕ್ರಿ] ದಣಿಸು, ಆಯಾಸಗೊಳಿಸು (ಈ ಮದದಂತಿಯ ಎೞ್ತರವುಂ ಈತನ ಶೌರ್ಯಮಿಂ ಈ ಮಹೋಗ್ರಸಂಗ್ರಾಮದೊಳ್ ಎನ್ನುಮಂ ಚಳಿಯಿಸಲ್ ಬಗೆದಪುದು: ಪಂಪಭಾ, ೧೨. ೮೪)
ಚಳಿಲ್