भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಳಿವಿನಂ

ದಣಿಯುವವರೆಗೂ (ಚಯ್‌ಚಯ್ಯೆಂಬಾಗಳ್ ಮೆಯ್ ಮೆಯ್ ಚಲದಿಂ ಮುಟ್ಟಿ ಪೊಣರ್ದು ತಳ್ತಿಱಿವ ಉರ್ಕಿಂ ಕೆಯ್ ಚೆಚ್ಚರಿಕೆಯ ಚಲದಿಂ ಕೆಯ್ ಚಳಿವಿನೆಗಂ ಇಱಿದರ್ ಎರಡು ಬಲದೊಳಂ ಅದಟರ್: ಪಂಪಭಾ, ೧೩. ೩೪)

ಚಾಗ

[ನಾ] [ತ್ಯಾಗ] ದಾನ (ನಿರಂತರಂ ಕಡಿಕಡಿದಿತ್ತ ಪೊನ್ನೆ ಬುಧಮಾಗಧವಂದಿಜನಕ್ಕೆ ಕೊಟ್ಟ ಕೋಡೆ ಎಡಱದೆ ಬೇಡಿಂ ಓಡಿಂ ಇದು ಚಾಗದ ಬೀರದ ಮಾತು ಕರ್ಣನಾ: ಪಂಪಭಾ, ೧. ೯೯)

ಚಾಗಂಗೆಯ್

[ಕ್ರಿ] ದಾನಮಾಡು (ನಿಜರಥತುರಗ ದಿವ್ಯಾಸ್ತ್ರಂಗಳುೞಿಯೆ ಪಸುರ್ಮಣಿಯನಪ್ಪೊಡಂ ಉೞಿಯದಂತು ಚಾಗಂಗೆಯ್ದು: ಪಂಪಭಾ, ೧೨. ೧೦೮ ವ)

ಚಾಗದ ಕಂಬ

[ನಾ] ದಾನದ ಶಿಲಾಸ್ತಂಭ (ಚಾಗದ ಕಂಬಮಂ ನಿಱಿಸಿ ಬೀರದ ಶಾಸನಮಂ ನೆಗೞ್ಚಿ ಕೋಳ್ಪೋಗದ ಮಂಡಲಂಗಳನೆ ಕೊಂಡು ಜಗತ್ತ್ರಿತಯಂಗಳೊಳ್ ಜಸಕ್ಕೆ ಆಗರಮಾದ ಬದ್ದೆಗನಿಂ ಆ ನರಸಿಂಹನಿಂ ಅತ್ತಲ್ನಾಲ್ವೆರಲ್ ಮೇಗು ಪೊದಳ್ದ ಚಾಗದೊಳಂ ಒಂದಿದ ಬೀರದೊಳಂ ಗುಣಾರ್ಣವಂ: ಪಂಪಭಾ, ೧. ೫೦)

ಚಾಣೂರಾರಿ

[ನಾ] ಚಾಣೂರ ಎಂಬ ರಾಕ್ಷಸನ ಶತ್ರು, ಶ್ರೀಕೃಷ್ಣ (ಚಾಣೂರಾರಿಯಂ ಸುಭದ್ರೆಯುಮನಭಿಮನ್ಯುವುಮಂ ಒಡಗೊಂಡು ಬರ್ಪುದೆಂದು ಬೞಿಯನಟ್ಟಿ: ಪಂಪಭಾ, ೯. ೭ ವ)

ಚಾತುರಂಗ

[ನಾ] ಚತುರಂಗ ಸೈನ್ಯ (ಅದಿರದಿದಿರ್ಚಿ ತಳ್ತಿಱಿಯಲ್ ಈ ಮಲೆದೊಡ್ಡಿದ ಚಾತುರಂಗ ಬಲಮೆಂಬುದು ನಿನಗೊಡ್ಡಿ ನಿಂದುದು: ಪಂಪಭಾ, ೧೦. ೬೪)

ಚಾತುರ್ದಂತ

[ನಾ] ಚತುರಂಗಬಲ (ಅಂತು ಚಾತುರ್ದಂತಂ ಒಂದೊಂದಱೊಳ್ ಓರಂತೆ ನಡುವಗಲ್ವರಂ ಕಾದುವುದುಂ: ಪಂಪಭಾ, ೧೧. ೩೬ ವ)

ಚಾತುರ್ಯಾಮ

[ನಾ] ನಾಲ್ಕು ಜಾವಗಳು (ಆಗಳ್ ಉಭಯಬಲಂಗಳೊಳಂ ಚಾತುರ್ಯಾಮಾವಸಾನ ಘಟಿತ ಘಂಟಿಕಾಧ್ವನಿಗಳುಂ .. .. ನೆಗೞ್ದುವು: ಪಂಪಭಾ, ೧೦. ೩೫ ವ)

ಚಾತುರ್ವರ್ಣ

[ನಾ] ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು (ಸಮಯಿಗಳುಂ ಚಾತುರ್ವರ್ಣಮುಂ ಉಚಿತಚರಿತ್ರಮುಂ ಬಿಸುಟ್ಟು ಆದಂ ಪೊಲ್ಲಮೆಯೊಳ್ ಸಲೆ ನಡೆವರ್: ಆದಿಪು, ೧೫. ೩೩)

ಚಾತುರ್ವಲ

[ನಾ] ಚತುರಂಗಬಲ (ಚಾತುರ್ವಲಂಗಳ್ ಮೊದಲ ಸಮಕಟ್ಟುಗೆಟ್ಟು ತಡವರಿಸಿ ತಟ್ಟುಪೊಟ್ಟೆಂದು ಎಚ್ಚು ಮಿಟ್ಟುಂ ಇಱಿದು ತಱಿದು ಘಟ್ಟಿಸೆಯುಂ: ಪಂಪಭಾ, ೧೦. ೭೦ ವ)

ಚಾದಗೆ

[ನಾ] ಚಾತಕ ಪಕ್ಷಿ (ಕಾರ್ಗಾಲದ ಬರವಂ ಚಾದಗೆ ಪಾರ್ವಂತೆ ಧರ್ಮಪುತ್ರನ ಮರುತ್ಸುತನ ಪಾದಕಮಲಂಗಳಂ .. .. ಅರ್ಚಿಸಿ: ಪಂಪಭಾ, ೮. ೩೬ ವ)

ಚಾದಗೆವಕ್ಕಿ

[ನಾ] ಚಾದಗೆ (ಕಾರ್ಗಾಲಮಂ ಸೋಗೆ ಮುಂಬನಿಯಂ ಚಾದಗೆವಕ್ಕಿ ಹಂಸೆ ಕೊಳನಂ ಪದ್ಮಂಗಳಾದಿತ್ಯಮಂ ನೆನವಂತೆ: ಆದಿಪು, ೧೨. ೩೧)

ಚಾಪ

[ನಾ] ಬಿಲ್ಲು (ಅನೇಕಾಕ್ಷರಸ್ವರೂಪಂಗಳೊಳಂ ಚಾಪ ಚಕ್ರ ಪರಶು ಕೃಪಾಣ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳಂ: ಪಂಪಭಾ, ೨. ೩೪ ವ)

ಚಾಪದಂಡ

[ನಾ] ಹೆದೆಯೇರಿಸದ ಬಿಲ್ಲು (ದವದಹನಧೂಮಾಧಿಕ ಶ್ಯಾಮಳಿತೋತ್ತಾಳತಾಳಕಾಯಂ ಅತಿವಿಚಿತ್ರತ್ರಪುಮಯ ಪತ್ರಖಚಿತೋಚ್ಚಂಡತಾಳ ಚಾಪದಂಡಂ: ಆದಿಪು, ೧೩. ೪೫ ವ)

ಚಾಪವಿದ್ಯಾಬಲ

[ನಾ] ಧನುರ್ವಿದ್ಯಾ ಕೌಶಲ (ಚಾಪವಿದ್ಯಾಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿರ್ಮಲಚಿತ್ತಂ ಧರ್ಮಪುತ್ರಂ ಮಿಗಿಲ್: ಪಂಪಭಾ, ೧೪. ೬೪)

ಚಾಪಾಗಮ

[ನಾ] [ಚಾಪ+ಆಗಮ] ಬಿಲ್ವಿದ್ಯೆ (ನಿಮ್ಮಂ ಅದಿರ್ಪುವಲ್ಲಿ ಚಾಪಾಗಮಂ ಏವುದು ಅಂತೆನಗೆ ಬಿಲ್ವರಂ ಆಜಿಯೊಳಾಂಪ ಗಂಡರಾರ್: ಪಂಪಭಾ, ೧೦. ೧೨೩)

ಚಾಮರ

[ನಾ] ಚಮರೀಮೃಗ (ಸಿಂಹಾಸನಶ್ರೀಸಮುಚಿತಂ ಅಮೃತಾಂಭೋಧಿಕಲ್ಲೋಲಮಾಳಾನಿಭ ಲೀಲಾಸಂಚಳತ್ ಚಾಮರರುಚಿರಂ: ಆದಿಪು, ೧೩. ೪೬); [ನಾ] ಚಮರೀಮೃಗದ ಕೂದಲಿಂದ ಮಾಡಿದ ಬೀಸುವ ಕುಚ್ಚು (ಗಂಗಾತರಂಗೋಪಮಾನ ಚಳಚ್ಚಾಮರವಾತಪೀತ ನಿಜಘರ್ಮಾಂಭಃಕಣಂ ದ್ರೌಪದೀಕಚಕುಂಭಾರ್ಪಿತ ಕುಂಕುಮದ್ರವವಿಲಿಪ್ತೋರಸ್ಸ್ಥಳಂ: ಪಂಪಭಾ, ೩. ೮೫)

ಚಾರಚಕ್ಷ

[ನಾ] ಸಂಚರಿಸುವ ಕಣ್ಣು, ಅಂದರೆ ಗೂಢಚಾರ (ಅನ್ನೆಗಮಿತ್ತ ಸಂಚಳಿತ ಚಾರಚಕ್ಷಗಳಿಂದಂ ಧರ್ಮಪುತ್ರಂ ಅಱಿದು: ಪಂಪಭಾ, ೧೩. ೩೦ ವ)

ಚಾರಣಗಣ

[ನಾ] [ಜೈನ] ಗಗನಗಾಮಿ ಸಂಚಾರಿಯಾಗಿ ಧರ್ಮೋಪದೇಶ ಮಾಡುವ ಅವಧಿಜ್ಞಾನವುಳ್ಳ ಮುನಿಗಳ ಸಮೂಹ (ದಾನಪ್ರಮೋದ ವಾಚಾಳಷಟ್ಚರಣ ಚಾರಣ ಗಣೋಚ್ಚಾರ ಝಂಕಾರಜಯಾಶೀರ್ಘೋಷಮುಮಪ್ಪ ವಿಜಯಗಜದ ಬೆಂಗೆ ವಂದು: ಆದಿಪು, ೧೪. ೯೦ ವ)

ಚಾರಣಯುಗಳ

[ನಾ] [ಜೈನ] ಗಗನಗಾಮಿ ಮುನಿಗಳ ಜೋಡಿ (ಚಾರಣಯುಗಳಚರಣಯುಗಳಕ್ಕೆ ಕರಕಮಳಯುಗಳಮಂ ಮುಗಿದು ಬೀೞ್ಕೊಂಡು ತ್ವರಿತಗತಿಯಿಂ ಬರುತ್ತುಂ: ಆದಿಪು, ೨. ೪೪ ವ)

Search Dictionaries

Loading Results

Follow Us :   
  Download Bharatavani App
  Bharatavani Windows App