Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಟಂಕ
[ನಾ] ಕಲ್ಲು ಕೆತ್ತುವ ಚಾಣ, ಉಳಿ (ಆಕರ್ಣಾಕೃಷ್ಟ ಉತ್ಸೃಷ್ಟ ನಿಜ ವಿಕೀರ್ಣಟಂಕಂಗಳಿಂದಂ ತತ್ಪತಾಕಿನೀಕುಂಜರ ಶಿರಶ್ಶಿಳಾ ಪಟ್ಟಕಂಗಳಂ ಇರ್ಬಗಿಮಾಡಲ್ಪಡದೆಯುಂ: ಆದಿಪು, ೧೪. ೧೦೩ ವ); [ನಾ] ಬೆಟ್ಟದ ಇಳಿಜಾರು (ಮಾದ್ಯತ್ ಗಜಗಂಡಕಷಣಪ್ರೋದ್ಭೇದದಿಂ ಸಾರ್ದು ಬಂದು ಇದಿರೊಳ್ ಕೂಡುವುದಿಲ್ಲಿ ಚಂದನರಸಂ ಕೆಂಬೊನ್ನ ಟಂಕಂಗಳೊಳ್: ಪಂಪಭಾ, ೪. ೨೨); [ನಾ] ಲಾಳ (ಸುಭಟಾರೂಢತುರಂಗಮ ವೇಗಬಲಪತಿತ ಖರಖುರಟಂಕ ಪರಿಸ್ಖಲನಕಳಿತ ವಿಷಮಸಮರಭೇರೀನಿಸ್ವನಮುಂ: ಪಂಪಭಾ, ೧೩. ೫೧ ವ)
ಟಂಕಾರ
[ನಾ] ಬಿಲ್ಲಿನ ಠೇಂಕಾರ (ಆತೋದ್ಯಪ್ರಗೀತಧ್ವನಿಗಳಿರೆ ಧನುರ್ದಂಡಟಂಕಾರಮಂ ಕೇಳಲುಂ: ಆದಿಪು, ೮. ೩೩)
ಟಂಕೋತ್ಕೀರ್ಣ
[ನಾ] ಚಾಣದಿಂದ ಕೆತ್ತಿದುದು (ಅಪ್ರತಿಹತ ದಿಗ್ವಿಜಯಪ್ರಶಸ್ತಿಯಂ ಟಂಕೋತ್ಕೀರ್ಣಂ ಮಾಡಿ ಗಂಗಾದೇವಿಯೋಲಗಿಸಿದ ಅನರ್ಘ್ಯರತ್ನಂಗಳಂ ಕೈಗೆ ಮಾಡಿ: ಆದಿಪು, ೧೪. ೫೯ ವ)
ಟಕ್ಕುವಗೆ
[ನಾ] [ಟಕ್ಕು+ಬಗೆ] ಮೋಸದ ಬುದ್ಧಿ (ಆ ಲಾಕ್ಷಾಗೃಹದಾಹಮೊಂದೆ ವಿಷಸಂಯುಕ್ತಾನ್ನಂ ಅಂತೊಂದೆ ಪಾಂಚಾಲೀನಿಗ್ರಹಂ ಒಂದೆ ಟಕ್ಕುವಗೆಯಿಂ ಗೆಲ್ದಿರ್ದ ಜೂದೊಂದೆ: ಪಂಪಭಾ, ೯. ೨೨)
ಟಮಾಳ
[ನಾ] ಮೋಸ (ದುರ್ವಿಮಂತ್ರಮಂ ಪರೆಪ ಟಮಾಳಮಂ ಪಿರಿದಂ ಓದಿದೊಡೆ ಅಪ್ಪ ಪದಾರ್ಥಮಾವುದೋ: ಪಂಪಭಾ, ೧೩. ೬೬)
ಟಾಠಡಾಢಣ
ಟವರ್ಗದ ಅಕ್ಷರಗಳು; ಅವುಗಳಂತೆ ನಿಶ್ಚಿತ, ನಿಷ್ಠುರ (ಮೇಣ್ ಎನ್ನ ನುಡಿ ಟಾಠಡಾಢಣಂ ಎನ್ನಂ ಬೆಸಸುವುದು ರಾಜಸೂಯಂ ಬೇಳಲ್: ಪಂಪಭಾ, ೬. ೨೬)
ಟೀಕು