Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಡಕ್ಕೆ
[ನಾ] ಒಂದು ವಾದ್ಯ (ತನ್ನ ತೊಡಂಕದು ಎಯ್ದೆ ನೂರ್ಮಡಿ ಮನದೊಳ್ ಪಳಂಚಲೆಯೆ ಡಕ್ಕೆಯೊಳ್ ಅೞ್ಜಜವಾಗೆ ಆಡಿದಳ್: ಪಂಪಭಾ, ೪. ೯೦)
ಡಂಗ
[ನಾ] ಸುಂಕವಸೂಲಿಗಾಗಿರುವ ಕಾವಲು ಕಟ್ಟೆ (ಪೊಂಗುವ ಮಲೆಪರ ಮಲೆಗಳ ಡಂಗಂಗಳ್ ಮಲೆವ ಮಂಡಲಂಗಳ್ ಪ್ರತ್ಯಂತಗಳ್ ಎನಲ್ ಒಳವೆ ಪಾಂಡವರಂ ಗೆಡೆಗೊಳೆ ನಿನಗೆ ಕುರುಕುಳಾಂಬರಭಾನೂ: ಪಂಪಭಾ, ೯. ೩೯)
ಡಂಬ
[ನಾ] ತೋರಿಕೆ, ಮೋಸ (ಸತ್ತನೆ ಮತ್ತೆ ಪುಟ್ಟುವಂ ಗಡ ಪುಸಿ ಕಾಣ ಡಂಬವಿದು ಖೇಚರ ನೀನಿದನೆಂತು ನಂಬಿದೋ: ಆದಿಪು, ೨. ೮); ಕಪಟ, ಮರೆಮಾಚುವಿಕೆ (ಹಿಡಿಂಬೆ ಡಂಬಮಿಲ್ಲದೆ ಭೀಮಸೇನನೊಳಪ್ಪ ಒಡಂಬಡಂ ನುಡಿಯೆ: ಪಂಪಭಾ, ೩. ೧೮ ವ)
ಡವಕೆ
[ನಾ] ಪೀಕದಾನಿ (ಚಾಮರದ ಅಡಪದ ಡವಕೆಯ ಕನ್ನಡಿಯ ಪರಿಚಾರಿಕೆಯುರುಂ ಒಡನಾಡಿ ಬೆಳೆದ ಕೆಳದಿಯರುಂ: ಆದಿಪು, ೩. ೨೩ ವ)
ಡವಕೆಯ ಪರಿಚಾರಿಕೆ
[ನಾ] ಪೀಕದಾನಿ ಅಥವಾ ಕಾಳಾಂಜಿ ನೀಡುವ ಸೇವಕಿ (ನೂಱೆಂಟುಂ ಕರಣಮುಮಂ ಅವಳ ಡವಕೆಯ ಪರಿಚಾರಿಕೆಯಱಿಗುಂ ಆಕೆಗವು ತೊಡರ್ವೆಡೆಯೇ: ಆದಿಪು, ೯. ೨೯)
ಡವಕೆವಿಡಿ
[ಕ್ರಿ] ಪೀಕದಾನಿಯನ್ನು ಒಡ್ಡು (ಲೋಕಂ ಪೊಗೞ್ವುದು ಕನಕಾಬ್ಜಾಕಾರದ ಡವಕೆವಿಡಿದ ಸುರಸೌಂದರಿಯಂ : ಆದಿಪು, ೭. ೭)
ಡಾಕಿನೀ
[ನಾ] ಪಿಶಾಚಿ (ಆಮಂತ್ರಿತ ಡಾಕಿನೀ ದಶನಘಟ್ಟನಜಾತವಿಭೀಷಣಂ ಮದೇಭ ಅಂತ್ರನಿಯಂತ್ರಿತ ಅಶ್ವಶವಮಾಂಸರಸಾಸವಮತ್ತಯೋಗಿನೀತಂತ್ರಂ: ಪಂಪಭಾ, ೧೨. ೧೨೦)
ಡಾಮರ
[ನಾ] ಹಿಂಸೆ, ದಾಳಿ (ಆ ಮಾಧವೀಮಂಟಪಮಂ ಕಾಮನ ಡಾಮರಕ್ಕೆ ಅಳ್ಕಿ ವನದುರ್ಗಂಬುಗುವಂತೆ ಪೊಕ್ಕು: ಪಂಪಭಾ, ೫. ೬ ವ)
ಡಾವರ
[ನಾ] ಕ್ಷೋಭೆ (ಇಂಚೆಯ ಪಸವಿನ ಬಱದ ಕಳಂಚಿನ ಡಾವರದ ಬಾಧೆಯಿಲ್ಲದ ಪದದೊಳ್ ಮುಂಚದೆ ಪಿಂಚದೆ ಬಳೆದು ವಿರಿಂಚಿಯ ಕೆಯ್ಪಿಡಿವೊಲಾದುವಾ ನಾಡೂರ್ಗಳ್: ಪಂಪಭಾ, ೮. ೫೧)
ಡೊಕ್ಕನೆ
[ಅ] ಡೊಕ್ ಎಂದು (ಡೊಕ್ಕನೆ ಸುರಿಗೆಯೊಳ್ ಉರಮಂ ಬಿಕ್ಕನೆ ಬಿರಿಯಿಱಿದು ಬರಿಯಗಲನೊತ್ತಿ ಮನಂ ಕೊಕ್ಕರಿಸದೆ ಬೆಲಗಸೆಯಿಂ ಅಳುರ್ಕೆಯೆ ಮೊಗೆಮೊಗೆದು ನೆತ್ತರಂ: ಪಂಪಭಾ, ೧೨. ೧೫೩)
ಡೊಕ್ಕರಂಗೊಳ್
[ಕ್ರಿ] ಮಲ್ಲಯುದ್ಧದಲ್ಲಿ ಡೊಕ್ಕರವೆಂಬ ಪಟ್ಟು ಹಾಕು (ಅಂತು ಎಱಗಿದೊಡೆ ಕೋಡ ಕೆಯ್ದ ಕಾಲೆಡೆಗಳೊಳ್ ಬಿಣ್ಪುಮಂ ಪೊಳೆವಂದದಿಂದೇರ್ದು ಡೊಕ್ಕರಂಗೊಂಡು ಕುರುಕ್ಷೇತ್ರದಿಂದ ಅತ್ತ ಪನ್ನೆರಡು ಯೋಜನಂಬರಂ ಒತ್ತುವುದುಂ: ಪಂಪಭಾ, ೧೧. ೭೪ ವ) [“ಕೊರಳ ಹಿಂಭಾಗವನ್ನು ಒಂದು ಭುಜದ ಕಂಕುಳಲ್ಲಿ ಇರಿಕಿಸಿಕೊಂಡು, ಗಲ್ಲವನ್ನು ಅಂಗೈಯಲ್ಲಿ ಪೀಡಿಸುತ್ತ ಇನ್ನೊಂದು ಕೈಯಿಂದ ಕೀಲುಗಳನ್ನು ಹಿಡಿದುಕೊಂಡು, ಎರಡು ತೊಡೆಗಳಿಂದ ಹೊಟ್ಟೆಯನ್ನು ಬಲವಾಗಿ ಪೀಡಿಸುತ್ತ ಇರುವುದಕ್ಕೆ ಡೊಕ್ಕರವೆಂದು ಹೆಸರು” ‘ದೀಪಿಕೆ’]
ಡೊಣೆವು
[ನಾ] ಗಾಯದ ಡೊಗರು (ಅಂಬಿನ ಬಂಬಲೊಳಂ ಜೋಡಾಗಿ ಕೋಡನೂಱಿ ಕೆಡೆದ ಗಜವ್ರಜಂಗಳ ಡೊಣೆವುಗಳಿಂದ ಒಱೆತು ಪರಿವ ನೆತ್ತರ ಕಡಲ್ಗಳೊಳ್ ಮಿಳಿರ್ವ: ಪಂಪಭಾ, ೧೦. ೧೧೬ ವ)
ಡೊಂಬರ ಕೋಡಗ
[ನಾ] ಕೊಲ್ಲಟಿಗರು ಆಟಕ್ಕಾಗಿ ಬಳಸುವ ಕೋತಿ, ಇತರರು ಹೇಳಿದಂತೆ ಕೇಳುವವನು (ಡೊಂಬರ ಕೋಡಗದಂತಾಡಿ ಗೆಲ್ದಾಗಳ್ ತಮ್ಮಣ್ಣನ ಸೋಲಮಂ ಕಂಡಾಗಳ್ ಭೀಮಸೇನನಿಂತೆಂದಂ: ಪಂಪಭಾ, ೬. ೭೨ ವ)
ಡೊಂಬವಿದ್ದೆ
[ನಾ] ದೊಂಬರ ವಿದ್ಯೆ, ಯಕ್ಷಿಣಿ, ವಂಚನೆ (ಮೀಂ ಆವೆ ಪಂದಿ ಎಂದು ಎನಿತಾನುಂ ತೆಱನಾಗಿ ಡೊಂಬವಿದ್ಯೆಯನಾಡಲ್ ನೀನಱಿವೆ: ಪಂಪಭಾ, ೭. ೫೭)
ಡೊಳ್ಳು