भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567893536Next >

ತಕ್ಕ

[ನಾ] ಉಳ್ಳವನು (ಇಳೇಯಂ ಘಾತಿಸಿ ತಕ್ಕರಂ ಕವರ್ದುಕೊಂಡು ಅರ್ಥಮಂ ಪೂೞ್ದು ನೋಡುತ್ತುಂ ಉಗ್ರಲೋಭವಶದಿಂ: ಆದಿಪು, ೨. ೧೫); [ನಾ] ತಕ್ಕದ್ದು, ಶ್ರೇಷ್ಠ [√ತಗು] (ಕ್ಷೀರಾಬ್ಧಿಯ ನೀರಲ್ಲದೆ ಧೀರನ ಮಜ್ಜನಕೆ ಪೆಱವು ನೀರ್ ತಗವು ಎಂದು ವಾರಾಶಿವರಂ ಸುರಜನದಾರಿ ಮನೋಹಾರಿ ನೀಳ್ದುವೆರಡುಂ ಕೆಲದೊಳ್: ಆದಿಪು, ೭. ೮೨); [ನಾ] ದಾನಾರ್ಹ (ಜಿನಪೂಜೋತ್ಸವಮಂ ಮಹಾಮಹಮುಮಂ ತಾಂ ಮಾಡಿ ಸಲ್ವನ್ನೆಗಂ ಧನಮಂ ತಕ್ಕವರ್ಗೀಯವೇೞ್ಪುದು: ಆದಿಪು, ೧೫. ೬); [ನಾ] ಗುಣಶಾಲಿ (ಕಲಿಯನೆ ಪಂದೆ ಮಾೞ್ಪ ಒಳ್ಗಲಿಯಂ ಕಡುವಂದೆ ಮಾೞ್ಪ ತಕ್ಕನಂ ಪೊಲೆಯನೆ ಮಾೞ್ಪ ಮುಂ ಪೊಲೆಯನಂ ನೆಱೆ ತಕ್ಕನೆ ಮಾೞ್ಪ: ಪಂಪಭಾ, ೧೨. ೯೨)

ತಕ್ಕು

[ನಾ] ಆತ್ಮವಿಶ್ವಾಸ, ಸ್ವಾಭಿಮಾನ (ದರ್ಪಿತದುರಿತಮಲ್ಲನುಮಂ ಉಡಿವ ತಕ್ಕಿನಿಂ ಸಭೆಗೆ ನಡೆದಂ ಇಂದ್ರಾರ್ಚಿತನಾ: ಆದಿಪು, ೧೪. ೧೩೪); [ನಾ] ಶ್ರೇಷ್ಠ (ಮದಮಂ ಮುಕ್ಕುಳಿಸಿರ್ದ ಇಭಂಗಳಂ ಉದಗ್ರಾಶ್ವಂಗಳಂ ತಕ್ಕಿನಗ್ಗದ ಬಾಡಂಗಳಂ ಆಯ್ದು ಕೊಟ್ಟು: ಪಂಪಭಾ, ೨. ೫೩); [ನಾ] ಆಧಿಕ್ಯ, ಹೆಚ್ಚಿಕೆ (ಎರಡುಂ ಬಲಂ ಎನ್ನೆ ನೋಡೆ ತಕ್ಕಿನ ಎನ್ನ ಅದಟುಮಂ ಎನ್ನ ವೀರಮುಮಂ ಆಜಿಯೊಳ್ ಎನ್ನರಸಂಗೆ ತೋಱುವೆಂ: ಪಂಪಭಾ ಪರಿಷತ್ತು, ೧೦. ೪೧)

ತಕ್ಕುದೆ

[ನಾ] ಯೋಗ್ಯವಾದುದೇ (ಮಧ್ಯಸ್ಥಂಗಳಾಗಿರ್ದುವರ್ಕಲೆಯಲ್ ತಕ್ಕುದೆ ಕೆನ್ನಂ ಆ ತ್ರಿವಳಿಗಳ್ಗೆನ್ನಂ ಸರೋಜಾಕ್ಷಿಯಾ: ಪಂಪಭಾ, ೪. ೭೪)

ತಕ್ಕೂರ್ಮೆ

[ನಾ] (ತಕ್ಕು+ಊರ್ಮೆ] ಯೋಗ್ಯತೆ (ಈ ನುಡಿಯೆ ನಿನ್ನ ಕೂರ್ಮೆಗಂ ತಕ್ಕೂರ್ಮೆಗಂ ದೊರೆಯಪ್ಪುದಾದೊಡಂ ಅರಾತಿಸೈನ್ಯಮಂ ತವೆ ಕೊಂದಲ್ಲದೆ ನಿನ್ನ ಮೊಗಮಂ ನೋಡೆಂ: ಪಂಪಭಾ, ೧೩. ೨೮ ವ)

ತಕ್ಷಕಪತಿ

[ನಾ] ಮಹಾ ಶಿಲ್ಪಿ (ಭದ್ರಮುಖನೆಂಬ ತಕ್ಷಕಪತಿಯುಂ .. .. ಆತ್ಮೀಯ ಸಾಮ್ರಾಜ್ಯಪರಿಚ್ಛೇದಮಾಗೆ: ಆದಿಪು, ೧೫. ೩ ವ)

ತಕ್ಷಕರತ್ನ

[ನಾ] [ಜೈನ] ಜೀವರತ್ನಗಳಲ್ಲಿ ಒಂದಾದ ಸ್ಥಪತಿ, ವಾಸ್ತುಶಿಲ್ಪಿ (ಪ್ರಾಸಾದಪ್ರಕರಣನುಮಪ್ಪ ಭದ್ರಮುಖನೆಂಬ ತಕ್ಷಕರತ್ನಮುಂ: ಆದಿಪು, ೧೧. ೩ ವ)

ತಗರ್

[ಕ್ರಿ] ಅಡ್ಡಗಟ್ಟು (ರಥಮಂ ಬಂದೇಱಿ ಪೋ ಪೋಗಲೆಂದೊದಱುತ್ತುಂ ಪರಿತಂದು ತಾಗಿ ತಗರ್ದಂ ಗಂಗಾಸುತಂ ಭೀಮನಂ: ಪಂಪಭಾ, ೧೧. ೧೦)

ತಗರ್ತಲೆಯ

[ನಾ] ಒಂದು ಬಾಣ (ನೆಱೆದು ನಿರ್ವಾಯಂ ನರುವಾಯಂ ಮುಂಮೊನೆ ನೆರಕೆ ನಾರಾಚಂ ತಗರ್ತಲೆಯಂ: ಪಂಪಭಾ, ೧೩. ೩೯)

ತಗವು

ಯೋಗ್ಯವಾಗವು (ಕ್ಷೀರಾಬ್ಧಿಯ ನೀರಲ್ಲದೆ ಧೀರನ ಮಜ್ಜನಕೆ ಪೆಱವು ನೀರ್ ತಗವು ಎಂದು ಆ ವಾರಾಶಿವರಂ: ಆದಿಪು, ೭. ೮೨)

ತಗುಳೆವರ್

[ನಾ] ಅಟ್ಟಿಸಿಕೊಂಡು ಹೋಗು, ಎಂದರೆ ಸೋಲಿಸು (ಈತನುದಾತ್ತ ಪೂರ್ವ ಭೂಮಿಪರನೊಳ್ಪಿನೊಳ್ ತಗುಳೆವಂದೊಡೆ ಈ ಕಥೆಯೊಳ್ ತಗುಳ್ಚಿ ಪೋಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್: ಪಂಪಭಾ, ೧. ೧೪)

ತಗುಳ್

[ಕ್ರಿ] ಸೇರು (ಬಗೆಯೊಳ್ಪೊಣ್ಮೆ ದಯಾರಸಂ ಚರಿತದೊಳ್ಕೈಗಣ್ಮೆ ಚಾರಿತ್ರಂ ಆವಗಮಾವಶ್ಯಕದೊಳ್ ತಗುಳ್ದು ಪಲವುಂ ಶೀಲಂಗಳಂ ತಾಳ್ದಿ: ಆದಿಪು, ೧. ೫); [ಕ್ರಿ] ಆರಂಭಿಸು, ತೊಡಗು (ಆ ಮಹಾಬಳಂ ಬಾಲಕಾಲದಿಂ ತಗುಳ್ದು ಅಭ್ಯಸ್ತಸಮಸ್ತವಿದ್ಯಾಧರವಿದ್ಯಾಪಾರಗನುಂ: .. .. ಆಗಿ: ಆದಿಪು, ೧. ೭೩ ವ); [ಕ್ರಿ] ಆಚರಿಸು (ಭೋಗಿಪೆನೆನ್ನ ಜವ್ವನಮುಂ ಈ ಧನಮುಂ ತವುವನ್ನೆಗಂ ಕುಚಾಗ್ರಭರಾನತಾಂಗಿಯರೊಳ್ ಅನ್ನೆಗಂ ಅತ್ತ ಅಱನಂ ತಗುಳ್ವೆಂ: ಆದಿಪು, ೩. ೬೩); [ಕ್ರಿ] ಅಂಟು, ಹಿಡಿ (ವನದಹನಂ ವನಾಂತರಮನೊರ್ಬಳಸಾಗಿರೆ ಮುತ್ತಿ ಸುತ್ತಿನ ನಡುವಿರ್ದುಂ ಆ ಮರನಂ ಅೞ್ವಿದುದು ಈ ಮರನಂ ತಗುಳ್ದುದು: ಆದಿಪು, ೯. ೫೯); [ಕ್ರಿ] ತಡೆ, ಅಡ್ಡಿಪಡಿಸು (ಶುಭಾಶುಭಪರಿಣಾಮ ಪ್ರಣಾಳಿಕೆಯಿಂ ಬರ್ಪ ಕರ್ಮಮಂ ಬರಲೀಯದೆ ಗುಪ್ತ್ಯಾದಿಗಳಿಂ ತಗುಳ್ವುದು ಸಂವರೆಯೆಂಬುದು: ಆದಿಪು, ೧೦. ೬೩ ವ); [ಕ್ರಿ] ಉಂಟಾಗು (ಕಾಲಾನುಭಾವದಿಂ ಯುಗಾರಂಭದ ವರ್ಷಾರಂಭದೊಳಂ ತಗುಳ್ದೀ ದ್ವೀಪದೊಳಗಣ ನದೀನದಂಗಳ ಜಲಂಗಳನೊಳಗೊಂಡ ಅಲಂಘ್ಯತ್ವದೊಳಂ: ಆದಿಪು, ೧೨. ೬೮ ವ); [ಕ್ರಿವಿ] ಮೇಲಿಂದ ಮೇಲೆ, ಒಂದೇ ಸಮನೆ (ವರ್ಣಕಂ ಕತೆಯೊಳಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಮೆಂದು ಪಂಡಿತರೆ ತಗುಳ್ದು ಬಿಚ್ಚಳಿಸೆ ಪೇೞಲೊಡರ್ಚಿದೆನೀ ಪ್ರಬಂಧಮಂ: ಪಂಪಭಾ, ೧. ೧೧); [ಕ್ರಿ] ಆರಂಭಗೊಳ್ಳು (ಹಿರಣ್ಯಗರ್ಭಬ್ರಹ್ಮರಿಂ ತಗುಳ್ದು ಅವ್ಯವಚ್ಛಿನ್ನಮಾಗಿ ಬಂದ ಸೋಮವಂಶಂ ಈಗಳ್ ಎಮ್ಮ ಕುಲಸಂತತಿಗಂ ಆರುಮಿಲ್ಲದೆ ಎಡವಱಿದು ಕಿಡುವಂತಾಗಿರ್ದುದು: ಪಂಪಭಾ, ೧. ೮೪ ವ); [ಕ್ರಿ] ಬೆನ್ನ ಹಿಂದೆಯೇ ಹೋಗು (ಗೆಡೆವಚ್ಚಿರ್ವರ್ ಮನಗೊಂಡು ಒಡನೊಡನೆ ಓರಂತು ತಗುಳ್ದು ಝೇಂಕರಿಸಿದೊಡೆ ಎಲ್ವಡಗಾಗೆ ಮೋದಲೆಂದಿರ್ದ ಎಡೆಯೊಳ್ ಗುರು ತನ್ನ ಮಗನಂ ಎಡೆವುಗವೇೞ್ದಂ: ಪಂಪಭಾ, ೨. ೭೩); [ಕ್ರಿ] ಅನುಸರಿಸು, ಮಾಡು (ಏಂ ತಗುಳ್ದೆ ಇನ್ನುಸಿರದಿರ್ ಈವ ಮಾತಂ ಇವನುಣ್ಬುದು ಖಾಂಡವಂ ಈತಂ ಅಗ್ನಿ: ಪಂಪಭಾ, ೫. ೭೨)

ತಗುಳ್ಚು

[ಕ್ರಿ] ತಗುಲಿಸು, ಸೇರಿಸು (ಚಿನ್ನಪೂಗಳಂ ಅವಱೊಳ್ ತಗುಳ್ಚದೆ ಮೃಗೋದ್ಭವಪಂಕದೆ ಪತ್ರಭಂಗಮಂ ತೊಳಪ: ಆದಿಪು, ೪. ೧೨); [ಕ್ರಿ] ಕೂಡಿಸು, ಸಮೀಕರಿಸು (ಈ ಕಥೆಯೊಳ್ ತಗುಳ್ಚಿ ಪೋಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್: ಪಂಪಭಾ, ೧. ೧೪); [ಕ್ರಿ] ಮುಡಿದುಕೊ (ಪೂತಚೂತಮಂ ನೆರ್ಮಿದ ಅಶೋಕವಲ್ಲರಿಯ ಪಲ್ಲವಮೊಂದನೆ ಕೊಯ್ದು ರಾಗದಿಂ ಸೋರ್ಮುಡಿಯೊಳ್ ತಗುಳ್ಚಿದೊಡೆ: ಪಂಪಭಾ, ೫. ೮೨)

ತಗುಳ್ಪು

[ನಾ] ಜೋಡಣೆ, ಬೆಸುಗೆ (ವಜ್ರಲೇಪದ ತಗುಳ್ಪಂ ಪೋಲ್ವಿನಂ ವಜ್ರನಾಭಿಗತಿಪ್ರೀತಿಯನುಂಟುಮಾಡಿದರ್ ಅವರ್ ಜನ್ಮಾಂತರಸ್ನೇಹದಿಂ: ಆದಿಪು, ೬. ೨೨); [ಕ್ರಿವಿ] ಅನುಸರಿಸಿ (ಕುಡಿವುದಂ ಏೞುಮಂಬುಧಿಯುಮಂ ಕುಲಶೈಲಕುಳಂಗಳುಂ ತಗುಳ್ದಡರ್ವುದನೊಂದಿ ಬಾಳರವಿ ತನ್ನಯ ಸೋಗಿಲ ಮೇಗೆ ರಾಗದಿಂ ಪೊಡರ್ವುದಂ: ಪಂಪಭಾ, ೧. ೧೪೦)

ತಗೆ

[ಕ್ರಿ] ನಿಲ್ಲಿಸು, ಅಡ್ಡಿಪಡಿಸು (ಪೋಗದಿರು ಈಶ್ವರನಾಣೆ ಎಂದು ಪುಲ್ಮರುಳ್ ಇನಿಸಾನುಮಂ ತಗೆದು ಕಾಡಿದುದಲ್ಲಿ ಫಣೀಂದ್ರಕೇತುವಂ: ಪಂಪಭಾ, ೧೩. ೫೫)

ತಟ

[ನಾ] ದಡ (ಬೇಂಟೆಯನಾಡಿ ಬೞಲ್ದು ಬೇಸಗೆಯ ನಡುವಗಲೊಳ್ ವನಕ್ರೀಡೆಗಂ ಜಲಕ್ರೀಡೆಗಂ ಆಸಕ್ತರಾಗಿ ಯಮುನಾನದೀತಟನಿಕಟವರ್ತಿಗಳಾದರ್: ಪಂಪಭಾ, ೫. ೫೧ ವ); [ನಾ] ಬೆಟ್ಟದ ತಪ್ಪಲು (ಸಮುದ್ಯತ್ ರಜತಗಿರಿ ತಟ ಸ್ಪಷ್ಟ ಸಂಶ್ಲಿಷ್ಟ ಮೌರ್ವೀನಿನದಂ ಪರ್ವಿತ್ತು ಅಕಾಂಡಪ್ರಳಯ ಘನಘಟಾಟೋಪ ಗಂಭೀರನಾದಂ: ಪಂಪಭಾ, ೧೨. ೧೩೭)

ತಟಾಕ

[ನಾ] ಕೆರೆ (ಗಗನತಳಮೆ ಪಱಿದು ಬಿೞ್ದುದೆನಿಪ ಬಹುತಟಾಕದಿಂ ಕುಕಿಲ್ವ ನಲಿವ ಕೋಕದಿಂ: ಪಂಪಭಾ, ೧. ೫೮)

ತಟಾಂತರ

[ನಾ] ದಡದ ಪ್ರದೇಶ (ಎರೆದನ ಪೆಂಪುವೇೞ್ವೊಡೆ ಅನಲಂ ಪೊಣರ್ವಾತನ ಪೆಂಪುವೇೞ್ವೊಡೆ ಆ ಸುರಪತಿ ಕೊಟ್ಟ ತಾಣದೆಡೆವೇೞ್ವೊಡೆ ಯಮುನಾನದೀತಟಾಂತರಂ: ಪಂಪಭಾ, ೫. ೭೩)

ತಟಿದ್ದ್ಯುತಿ

[ನಾ] (ತಟಿತ್+ದ್ಯುತಿ) ಮಿಂಚಿನ ಕಾಂತಿ (ತಟಿದ್ದ್ಯುತಿಚಂಚಲೆಯೆಬುದೊಂದು ಭಾವನೆಯೊಳೆ ರಾಜ್ಯಲಕ್ಷ್ಮಿಯೊಳ್ ಅನಾದರಮಾಯ್ತು ಮನಂ ಚಿದಾತ್ಮನಾ: ಆದಿಪು, ೮. ೬)

ತಟಿದ್ವಳಯ

[ನಾ] ವಿದ್ಯುದ್ವಲಯ, ಮಿಂಚಿನ ಪ್ರದೇಶ (ತಟಿದ್ವಳಯವಿಳಸಿತಂಗಳಾಗಿ ನಿಜಪ್ರಕೋಷ್ಠನಿಷ್ಠಿತಂಗಳಪ್ಪ ವೀರಾಂಗದಂಗಳೆಂಬ ಕಟಕಗಳುಂ: ಆದಿಪು, ೧೫. ೩ ವ)

ತಟ್ಟಿ

[ನಾ] ದಡ್ಡಿ, ತಡಿಕೆ (ದಿವ್ಯಾಸ್ತ್ರಂಗಳಿಂ ನೂಱುಯೋಜನದಳವಿಯ ಖಾಂಡವವನಮೆಲ್ಲಮಂ ತಟ್ಟಿ ಮೆಡಱಿ ಮಶಕಮಾತ್ರಮಪ್ಪೊಡಂ ಮಿಸುಕಲ್ ಛಿದ್ರಮಿಲ್ಲದಂತಾಗೆ: ಪಂಪಭಾ, ೫. ೯೬ ವ)
< previous1234567893536Next >

Search Dictionaries

Loading Results

Follow Us :   
  Download Bharatavani App
  Bharatavani Windows App