Pampana Nudigani (Kannada)
Kamadhenu Pustaka Bhavana
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ದಕ್ಕು
[ನಾ] ದಸಿ, ಮುಳ್ಳಿನಂಥ ಕತ್ತಿ (ಪುಸಿ ನಸುವಂಚನೆ ನೋರ್ಪು ಅಸಿದು ಅಗಲಿತು ತಕ್ಕು ದಕ್ಕು ಪಗೆ ಕೆಯ್ಬಗೆ ಕೆಯ್ ಕುಸುರಿ ನುಸುಳೆಂಬ ಕೇಣದ ಕುಸುರಿಯಂ ಅಱಿದು ಇಱಿದು ಮೆಱೆದು ಉಱೆದೆ ಅರೆಬರ್: ಪಂಪಭಾ, ೧೦. ೮೧)
ದಕ್ಷಾಧ್ವರಧ್ವಂಸಕ
[ನಾ] ದಕ್ಷನ ಯಜ್ಞವನ್ನು ಹಾಳುಮಾಡಿದವನು, ಶಿವ (ಇದು ಕೈಲಾಸಂ ಭವಾನೀಧವನ ನೆಲೆ ಮನೋಜಾತನಂ ಬೂದಿಮಾಡಿತ್ತಿದಱೊಳ್ ದಕ್ಷಾಧ್ವರಧ್ವಂಸಕನ ನೊಸಲ ಕಣ್: ಪಂಪಭಾ, ೭. ೭೪)
ದಕ್ಷಿಣ
[ಗು] ಬಲಭಾಗದ (ದಕ್ಷಿಣಚರಣದೊಳ್ ನೆಲನಂ ಪರಡಿ ಗಂಭೀರನಿನಾದದಿಂ ಹೇಷಿತಂಗೆಯ್ವ ವಿಜಯಹಯಮುಮಂ: ಪಂಪಭಾ, ೯. ೯೫ ವ)
ದಕ್ಷಿಣದಿಕ್ಪಾಲ
[ನಾ] ದಕ್ಷಿಣದ ಅಧಿಪತಿ, ಯಮ (ಅನ್ಯದುರ್ಧರ ನಿಜಧನುರ್ದಂಡಮಂ ತದ್ಧ್ವಜಿನಿಗೆ ಕೋಪಕುಟಿಲ ದಕ್ಷಿಣದಿಕ್ಪಾಲ ಭ್ರುಕುಟೀವಿಭ್ರಮಮಂ ಮಾಡಲ್ಪಡದೆಯುಂ: ಆದಿಪು, ೧೪. ೧೦೩ ವ)
ದಕ್ಷಿಣವಿಷಾಣ
[ನಾ] ಬಲಭಾಗದ ದಂತ (ನಿಜಭುಜವಿಜಯಲಕ್ಷ್ಮೀ ಪರಿರಂಭಣಪ್ರಕಟನದಕ್ಷದಕ್ಷಿಣ ವಿಷಾಣವಿನ್ಯಸ್ತಹಸ್ತನುಂ: ಆದಿಪು, ೧೪. ೯೦ ವ)
ದಕ್ಷಿಣಹಸ್ತ
[ನಾ] ಬಲಗೈ (ಅಂತಕಾರಾದಿ ಹಕಾರಾಂತ ಸ್ವರವ್ಯಂಜನ ಭೇದಭಿನ್ನ ಶುದ್ಧಾಕ್ಷರಂಗಳುಮಂ ಆಯೋಗವಾಹಕ ಚತುಷ್ಕಮುಮಂ ಸಂಯೋಗಾಕ್ಷರಂಗಳುಮಂ ಬ್ರಹ್ಮಿಗೆ ದಕ್ಷಿಣಹಸ್ತದೊಳ್ ಉಪದೇಶಂಗೆಯ್ದು: ಆದಿಪು, ೮. ೫೯ ವ)
ದಕ್ಷಿಣಾಕಾಲ
[ನಾ] ದಾನ ಕೊಡುವ ವೇಳೆ (ಮೂವತ್ತೆರಡು ದಿವಸದೊಳ್ ಕ್ರತುವಂ ನಿರ್ವರ್ತಿಸಿ ಮಹಾದಾನಂಗೆಯ್ದು ದಕ್ಷಿಣಾಕಾಲದೊಳ್: ಪಂಪಭಾ, ೬. ೩೮ ವ)
ದಕ್ಷಿಣಾಕ್ಷಿಸ್ಪಂದ
[ನಾ] ಬಲಗಣ್ಣ ಅದುರುವಿಕೆ (ಅರಿಮಕುಟರತ್ನಮಂ ನಿಜಚರಣಕ್ಕರ್ಘ್ಯ ಪ್ರದೀಪಮಾಗಿರ್ಪುದನಾ ಭರತೇಶ್ವರಂಗೆ ಸೂಚಿಸಿದತ್ತು ದಕ್ಷಿಣಾಕ್ಷಿಸ್ಪಂದಂ: ಆದಿಪು, ೧೧. ೧೨)
ದಕ್ಷಿಣಾಕ್ಷಿಸ್ಪಂದನ
[ನಾ] ಬಲಗಣ್ಣ ಅದುರುವಿಕೆ (ಅಂತು ದಕ್ಷಿಣಾಕ್ಷಿಸ್ಪಂದನದೊಳಂ ಸೂಚಿಸುವ ಶುಭಸೂಚನೆಯೊಳಂ ನಾರಾಯಣಂ ಉದಾತ್ತನಾರಾಯಣನ ಬರವನಱಿದು: ಪಂಪಭಾ, ೩. ೩೩ ವ)
ದಕ್ಷಿಣಾಗ್ನಿ
[ನಾ] [ಜೈನ] ಜೈನ ಬ್ರಾಹ್ಮಣರ ಮನೆಗಳಲ್ಲಿ ಅರ್ಹಂತನ ಪೂಜೆಗಾಗಿ ಸ್ಥಾಪಿಸುವ ಮೂರು ಬಗೆಯ ಅಗ್ನಿಗಳಲ್ಲಿ ಒಣದು (ತೀರ್ಥಕರಗಣಧರಾನಗಾರ ಕೇವಳಿಗಳ್ ಪರಿನಿರ್ವಾಣಕ್ಷೇತ್ರದೊಳ್ ಶರೀರಸಂಸ್ಕಾರಾದಿ ಗಾರ್ಹಪತ್ಯ ದಕ್ಷಿಣಾಗ್ನಿ ಆಹವನೀಯಮೆಂಬ ಪೆಸರಂ ಪಡದಂ: ಆದಿಪು, ೧೫. ೧೬ ವ)
ದಕ್ಷಿಣಾಭಿಮುಖ
[ನಾ] [ದಕ್ಷಿಣ+ಅಭಿಮುಖ] ದಕ್ಷಿಣಕ್ಕೆ ಎದುರಾದ (ದಕ್ಷಿಣಾಭಿಮುಖನಾಗಿ ನಿತ್ಯಪ್ರಯಾಣಂಗಳಿಂ ಬಂದು: ಆದಿಪು, ೧೩. ೭೭ ವ)
ದಕ್ಷಿಣಾವರ್ತ
[ನಾ] [ದಕ್ಷಿಣ+ಆವರ್ತ] ಬಲಗಡೆ ಸುತ್ತುವ (ವಿಜಯಗಜಮನೇಱಿ ವಿದ್ಯೋತಮಾಗಿ ದಕ್ಷಿಣಾವರ್ತಮಪ್ಪ ಹೋಮಾಗ್ನಿಯಂ ಬಲಂಗೊಂಡು: ಪಂಪಭಾ, ೯. ೯೫ ವ)
ದಕ್ಷಿಣಾಶಾಲೆ
[ನಾ] ಬಲಗಡೆಯ ಹಜಾರ (ಯಜ್ಞದ್ರವ್ಯಂಗಳೆಲ್ಲಮಂ ನೆರಪಿ ಮಹಾವಿಭವದೊಳ್ ಶಮೀಪಾರ್ಶ್ವತಳ ದಕ್ಷಿಣಾಶಾಲೆಯೊಳ್ ಹಿರಣ್ಯದಾನಂ ಮಾಡಿ: ಪಂಪಭಾ, ೬. ೩೩ ವ)
ದಕ್ಷಿಣೋಪಾಂತ
[ನಾ] [ದಕ್ಷಿಣ+ಉಪಾಂತ] ಬಲಮಗ್ಗುಲು (ಗಾಂಗೇಯನ ದಕ್ಷಿಣೋಪಾಂತದೊಳ್ ಕರ್ಗನೆ ಕನಿತ ಸಮದಗಜಘಟಾಟೋಪದ ನಡುವೆ: ಪಂಪಭಾ, ೧೦. ೫೫ ವ)
ದಗುಂತಿ
[ನಾ] ಆಧಿಕ್ಯ (ದಿಶಾಕಾಂತೆಯ ಬೆಳ್ಪಸದನದ ದಗುಂತಿಯನೇಂ ತನಗೆ ನಾಡೆಯುಂ ಮಾಡಿದುದೋ: ಆದಿಪು, ೧೧. ೯)
ದಗ್ಧ
ಗು] ಸುಟ್ಟ (ವಿದುರಂ .. .. ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೋಗಿ ತದರ್ಧ ದಗ್ಧ ಕಳೇವರಂಗಳಂ ಸಂಸ್ಕರಿಸಿ ಜಳದಾನಾದಿ ಕ್ರಿಯೆಗಳಂ ಮಾಡಿ ಮಗುೞೆ ವಂದಂ: ಪಂಪಭಾ, ೩. ೮ ವ)
ದಂಟು
[ನಾ] ತಾವರೆ ಮುಂತಾದುದರ ನಾಳ (ಕಟ್ಟಿದ ಪಟ್ಟಮೆ ಸರವಿಗೆ ನೆಟ್ಟನೆದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕಣ್ಗೆಟ್ಟ ಮುದುಪಂಗೆ: ಪಂಪಭಾ, ೧೦. ೧೭)
ದಂಡ
[ನಾ] ಒಂದು ಉದ್ದಳತೆ (ಅದು ಭೂಭಾಗದಿಂದಂ ಐಸಾಸಿರದಂಡಂ ಮೇಗೆ ನೆಗೆದಲ್ಲಿ ಪನ್ನೆರಡು ಯೋಜನ ಸಮವೃತ್ತಮುಂ: ಆದಿಪು, ೧೦. ೨೨ ವ); ಜುಲ್ಮಾನೆ (ಪಾರ್ವನೆಂದೆನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ ನಿನಗಾನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರಮವಸಾನಕಾಲದೊಳ್ ಬೆಸಕೆಯ್ಯದಿರ್ಕೆ: ಪಂಪಭಾ, ೧. ೧೦೫ ವ); [ನಾ] ಹಿಡಿಕೆ (ಚೇಟಿಕೆ ಬೀಸುವ ಕುಂಚಮೆಯ್ದೆ ಮೆಯ್ದೋಱುವ ಗಾಡಿ ಕಾಂಚನದ ದಂಡದ ಸೀಗುರಿ ನೋೞ್ಪೊಡೆ ಆರುಮಂ ಮಾಱೆ: ಪಂಪಭಾ, ೯. ೧೦೦)
ದಂಡಕಪಾಳಹಸ್ತ
[ನಾ] ಕೈಯಲ್ಲಿ ಯೋಗದಂಡ ಮತ್ತು ಭಿಕ್ಷಾಪತ್ರೆಯುಳ್ಳವನು (ಅಂತು ನೀಲಾಂಬುದಶ್ಯಾಮನುಂ ಕನಕಪಿಂಗಳ ಜಟಾಬಂಧಕಳಾಪನುಂ ದಂಡಕಪಾಳಹಸ್ತನುಂ ಕೃಷ್ಣ ಮೃಗತ್ವಕ್ಪರಿಧಾನನುಮಾಗಿ: ಪಂಪಭಾ, ೧. ೬೯ ವ)
ದಂಡಕಾಷ್ಠ