भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಧರಣೀಶ

[ನಾ] ಮಹಾರಾಜ (ನರರ ಐಶ್ವರ್ಯದ ಪೊದಳ್ಕೆಗಳ್ ಕರಗುವವೋಲ್ ಶರದಂಬುಧರಂ ಭೋಂಕೆನೆ ಕರಗಿದೊಡೆ ಎರ್ದೆ ಕರಗಿ ಕೊರಗಿದಂ ಧರಣೀಶಂ: ಆದಿಪು, ೪. ೬೪)

ಧರಣೀಸುತ

[ನಾ] ಭಗದತ್ತ (ಧರಣೀಸುತನೞಿದಂ ದಿಕ್ಕರಿ ಕೆಡೆದುದು ನರಶರಂಗಳಿಂ: ಪಂಪಭಾ, ೧೧. ೮೨)

ಧರಣೇಂದ್ರ

[ನಾ] [ಧರಣ+ಇಂದ್ರ] ನಾಗರಾಜ (ಅಂಬರಭೂಷಣ ಮಾಲಾಡಂಬರದ ಬೆಡಂಗನಮರನರ್ತಕಿ ಗಡಂ ಏನೆಂಬುದೊ ಧರಣೇಂದ್ರಂಗಂ ಅಳುಂಬಳಂ ಪೊಗೞಲ್ಕೆ ರೂಪು ನೀಳಾಂಜನೆಯಾ: ಆದಿಪು, ೯. ೧೭) [‘ಧರಣೇಂದ್ರ’ ಎಂಬುದು ನರಸಿಂಹಶಾಸ್ತ್ರಿಗಳು ಒಪ್ಪಿದ ರೂಪ]

ಧರಾಚಕ್ರ

[ನಾ] ಭೂಮಂಡಲ (ಬೆಸಕೆಯ್ದತ್ತು ಸಮುದ್ರಮುದ್ರಿತ ಧರಾಚಕ್ರಂ .. .. ಸಮಂತೆಂಬಿನಂ ಜಸಮಾಪಾಂಡುರಮಾದುದು ನೃಪರೊಳಾರಾ ಪಾಂಡುರಾಜಂಬರಂ: ಪಂಪಭಾ, ೧. ೧೧೦)

ಧರಾತಳ

[ನಾ] ಭೂಮಿ (ಆಕೆಯ ಬಗೆದ ಬಗೆಯೊಳೊಡಂಬಡುವಂತೆ ಕುಲಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮಂ .. .. ಇಂದ್ರಂ ಸಂಕ್ರಮಿಸಿ ನಿಜನಿವಾಸಕ್ಕೆ ಪೋದಂ: ಪಂಪಭಾ, ೧. ೧೩೯ ವ)

ಧರಾತಳನಿಷ್ಠಲಲಾಟಪಟ್ಟ

[ನಾ] ಭೂಮಿಗೆ ತಾಕಿದ ಹಣೆಯ ಪ್ರದೇಶವುಳ್ಳವನು, ಸಾಷ್ಟಾಂಗವೆರಗಿದವನು (ನಿಜಾನುಜಸಹಿತಂ ಇದಿರ್ವಂದು ಧರಾತಳನಿಷ್ಠಲಲಾಟಪಟ್ಟಂ ಸಾಷ್ಟಾಂಗವೆಱಗಿ ಪೊಡಮಟ್ಟು: ಪಂಪಭಾ, ೭. ೫೯ ವ)

ಧರಾಭಾರ

[ನಾ] ರಾಜ್ಯಭಾರ (ನೀನೆ ಜೆಟ್ಟಿಗನೈ ಮುನ್ನಿನ ಒಱಂಟು ವೇಡ ಮಗನೇ ಕೈಕೊಳ್ ಧರಾಭಾರಮಂ: ಪಂಪಭಾ, ೧. ೮೧)

ಧರಾಮರ

[ನಾ] [ಧರಾ+ಅಮರ] ಭೂಸುರ, ಬ್ರಾಹ್ಮಣ (ಧರಾಮರವೇಷದೊಳ್ ಒಂದು ವರುಷಮಿರ್ಪನ್ನೆಗಂ ಒಂದು ದಿವಸಂ: ಪಂಪಭಾ, ೩. ೨೨ ವ)

ಧರಾಯುವತೀಶ

[ನಾ] [ಧರಾಯುವತಿ+ಈಶ] ಭೂಮಿ ಎಂಬ ಹೆಣ್ಣಿನ ಒಡೆಯ (ಅವಿಕಳನಿಯಮಶ್ರೀಯನಳವಡಿಸಿ ನಿಂದ ಧರಾಯುವತೀಶನಂ ಉದಾತ್ತನಾರಾಯಣನಂ ಕಂಡು: ಪಂಪಭಾ, ೮. ೧)

ಧರಾಲಲನಾಧೀಶ

[ನಾ] ಭೂಮಿ ಎಂಬ ಹೆಣ್ಣಿನ ಒಡೆಯ, ರಾಜ (ಭೂತಲಪತಿ ಬೞಿಯಟ್ಟಿ ಬರಿಸೆ ಪೆಱತೊಂದೆಡೆಯೊಳ್ ಮಲರಹಿತರ್ ಬಂದು ಧರಾಲಲನಾಧೀಶಂಗೆ ವಿನತಮಸ್ತಕರಾದರ್: ಆದಿಪು, ೧೫. ೧೦)

ಧರಾವಿಭಾಗ

[ನಾ] ಭೂಭಾಗ (ಪನ್ನಗಕೇತಂಗೆ ಧರಾವಿಭಾಗಮನಿತ್ತು ಸಂಪನ್ನಯೋಗನಿಯೋಗದಿಂದಂ ಅರಣ್ಯದೊಳ್ ನೆಲೆಸಿರ್ದು: ಪಂಪಭಾ, ೯. ೧೭)

ಧರಿತ್ರಿ

[ನಾ] ಲೋಕ (ಮಗನೆಂಬಂತು ಧರಿತ್ರಿ ನಿನ್ನನುಜರಂ ಕೈಕೊಂಡು ಮುಂ ಪೂಣ್ದ ನನ್ನಿಗೆ ಬನ್ನಂ ಬರಲೀಯದೆ: ಪಂಪಭಾ, ೧. ೮೧); [ನಾ] ಭೂಮಿ (ಕವಿದುವು ಕಾಳ ನೀಳ ಜಳದಾವಳಿ ವಾರಿಧಿಗಳ್ ಧರಿತ್ರಿಯಂ ಕವಿದುವು ಗಾಳಿಗಳ್ ಪ್ರಳಯಕಾಲಮನಾಗಿಸಲೆಂದೆ ಲೋಕಮಂ ಕವಿದುವು: ಪಂಪಭಾ, ೨. ೭೭)

ಧರೆ

[ನಾ] ಭೂಮಿ (ಏಂ ಗಾವಿಲನಯೊ ನಿನ್ನಂ ನುಂಗುವುದರ್ಕೆ ಇವರಂ ಎತ್ತವೇೞ್ಕುಮೇ ನೆರಮಂ ಸಂಗಳಿಸಲ್ವೇೞ್ಕುಮೇ ಮಾತಂಗವಿರೋಧಿಗೆ ಕುರಂಗಸಂಗರ ಧರೆಯೊಳ್: ಪಂಪಭಾ, ೩. ೧೭); [ನಾ] ನೆಲ (ಆ ಕಮಳಾಕರಮಂ ಪೊಕ್ಕು ಆಕಾಶಧ್ವನಿಯಂ ಉಱದೆ ಕುಡಿದು ಅರಿಭೂಪಾನೀಕ ಭಯಂಕರನುಂ ಗಡಂ ಏಕೆಂದಱಿಯೆಂ ಬೞಲ್ದು ಜೋಲ್ದಂ ಧರೆಯೊಳ್: ಪಂಪಭಾ, ೮. ೪೧)

ಧರೆಗಿಳಿ

[ಕ್ರಿ] ಭೂಮಿಗೆ ಅವತರಿಸು (ಸುರನದಿಯ ನೀರೊಳ್ ಮಿಂದು ಇನನಂ ನೋಡಿ ನಿನ್ನ ದೊರೆಯನೆ ಮಗನಕ್ಕೆ ಎಂದಾಹ್ವಾನಂಗೆಯ್ಯಲೊಡಂ ದಲ್ ಧರೆಗಿೞಿದನಂದು ದಶಶತಕಿರಣಂ: ಪಂಪಭಾ, ೧. ೯೧)

ಧರ್ಮ

[ನಾ] ವೈಯಕ್ತಿಕ ಬದುಕಿನ ಸಾರ್ಥಕ್ಯದ ನೆಲೆ (ನೆಗೞ್ದ ಆದಿಪುರಾಣದೊಳ್ ಅಱಿವುದು ಕಾವ್ಯಧರ್ಮಮಂ ಧರ್ಮಮುಮಂ: ಆದಿಪು, ೧. ೩೮); [ನಾ] ನಂಬಿಕೆ ಆಚರಣೆಗಳ ಕಟ್ಟಳೆ (ಈ ಸಂಸೃತಿಯೊಳ್ ಧರ್ಮಾಧರ್ಮಸ್ಥಿತಿಯೆ ವಲಂ ಸ್ವರ್ಗನರಕಸುಖದುಃಖಕರಂ: ಆದಿಪು, ೭. ೭೭); [ನಾ] ಯಮ (ಪುಟ್ಟುವುದುಂ ಧರ್ಮಮೊಡವುಟ್ಟಿದುದು ಈತನೊಳೆ ಧರ್ಮನಂಶದೊಳ್ ಈತಂ ಪುಟ್ಟಿದನೆಂದಾ ಶಿಶುಗೊಸೆದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಪೆಸರಂ: ಪಂಪಭಾ, ೧. ೧೨೨); [ನಾ] ಕರುಣೆ, ಕೃಪೆ (ನಿಮ್ಮಯ ಧರ್ಮದ ಮಕ್ಕಳೆವು ಎಮ್ಮಂ ಕಡೆಗಣಿಸಿ ನಿಮಗೆ ನೆಗೞ್ವುದು ದೊರೆಯೇ: ಪಂಪಭಾ, ೧೧. ೧೨೮)

ಧರ್ಮಗಳ್

[ನಾ] {ಧರ್ಮ+ಕಳ್] ಬಿಟ್ಟಿ ಹೆಂಡ (ಕಿಱಿಯರ್ ಪಿಱಿಯರಱಿದು ಪೊಡೆವಟ್ಟು ಧರ್ಮಗಳ್ಗುಡಿವರ್ಗೆಲ್ಲಂ ಮೀಸಲ್ಗಳ್ಳನೆಱೆದು: ಪಂಪಭಾ, ೪. ೮೭ ವ)

ಧರ್ಮಜ

[ನಾ] ಯಮನ ಮಗ, ಯುಧಿಷ್ಠಿರ (ಶ್ರೀದಿವ್ಯಕಾಂತಾಜನಂ ತೊಡವು ಎಂಬೊಂದುಮಂ ಆ ಸುರಾಸುರರಿಂ ಆ ಗೋವಿಂದನಿಂ ಮುನ್ನೆ ಕೋಳ್ಪಡೆದು ಅಂಭೋನಿಧಿಯಂತೆ ಬಂದು ನೆಗೞ್ದು ಇಂದ್ರಪ್ರಸ್ಥಮಂ ಧರ್ಮಜಂ: ಪಂಪಭಾ, ೪. ೯)

ಧರ್ಮತನಯ

[ನಾ] ಧರ್ಮಜ (ಧವಳಹಯಂ ಧವಳರಥಂ ಧವಳ ಉಷ್ಣೀಷಂ ಶಶಾಂಕಸಂಕಾಶ ಯಶೋಧವಳಿತ ಭುವನಂ ತಾಗಿದಂ ಅವಯವದಿಂ ಬಂದು ಧರ್ಮತನಯನ ಬಲದೊಳ್: ಪಂಪಭಾ, ೧೧. ೩೯)

ಧರ್ಮತನೂಜ

[ನಾ] [ಯಮ]ಧರ್ಮನ ಮಗ, ಯುಧಿಷ್ಠಿರ (ಧರ್ಮತನೂಜಂಗೆ ವಿರಾಟಂ ಅವನತಮಣಿಮಕುಟಂ ಇಂತೆಂದು ಬಿನ್ನಪಂಗೆಯ್ದಂ: ಪಂಪಭಾ, ೯. ೬ ವ)

ಧರ್ಮಧ್ಯಾನ

[ನಾ] [ಜೈನ] ಧರ್ಮದ ವಿಷಯಗಳನ್ನು ಕುರಿತು ಸದಾ ಚಿಂತಿಸುವುದು; ಧ್ಯಾನಚತುಷ್ಟಯಗಳಲ್ಲಿ ಒಂದು, (ಆಜ್ಞಾವಿಚಯಂ ಅಪಾಯವಿಚಯ ವಿಪಾಕವಿಚಯ ಸಂಸ್ಥಾನವಿಚಯಮೆಂಬ ನಾಲ್ಕುಂ ಧರ್ಮಧ್ಯಾನಮಂ ಧ್ಯಾನಿಸುತ್ತುಂ: ಆದಿಪು, ೧೦. ೧೪ ವ)

Search Dictionaries

Loading Results

Follow Us :   
  Download Bharatavani App
  Bharatavani Windows App