भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಧರ್ಮಪತ್ನಿ

[ನಾ] ಧಾರ್ಮಿಕವಾಗಿ ಮದುವೆಯಾದ ಹೆಂಡತಿ (ನಾಳಿನ ಬಾರಿಯೆಮ್ಮ ಮೇಲೆ ಬಂದುದೆಮ್ಮ ಮನೆಯೊಳ್ ಆನುಂ ಎಮ್ಮ ಧರ್ಮಪತ್ನಿಯುಂ ಮಗನುಂ ಮಗಳುಂ ಇಂತೀ ನಾಲ್ವರೆ ಮಾನಸರ್: ಪಂಪಭಾ, ೩. ೨೫ ವ)

ಧರ್ಮಪುತ್ರ

[ನಾ] ಧರ್ಮನಂದನ (ಧರ್ಮಪುತ್ರನುಂ ಕುಲಧನಸಂಕುಲಗಳನೆ ತಂದಿಡೆ ಇಟ್ಟವಂ ಆಡಿ ಸೋಲ್ತಂ: ಪಂಪಭಾ, ೬. ೭೨)

ಧರ್ಮಪೋತ

[ನಾ] ಧರ್ಮವೆಂಬ ಹಡಗು (ವಿಷಯಭೋಗಾಸವ ಅತ್ಯಂತಸೇವಾಮದದಿಂದಂ ಧರ್ಮಪೋತಚ್ಯುತರ್: ಆದಿಪು, ೯. ೫೮)

ಧರ್ಮಭಂಡಾರ

[ನಾ] ದಾನಕಾರ್ಯಗಳಿಗೆ ಮೀಸಲಾದ ಕೋಶ (ಹರಿಗನ ಧರ್ಮಭಂಡಾರದಂತೆ ಸಾರಮಾದುದು ಬಿಟ್ಟಗ್ರಹಾರಂ ಆ ಸಬ್ಬಿಸಾಸಿರದೊಳಂ ಧರ್ಮವುರಂ: ಪಂಪಭಾ, ೧೪. ೫೬)

ಧರ್ಮಶಾಸ್ತ್ರ

[ನಾ] ಮನು, ಬೃಹಸ್ಪತಿ, ದಕ್ಷ, ಗೌತಮ, ಯಮ, ಅಂಗೀರಸ, ಯೋಗೀಶ್ವರ, ಪ್ರಚೇತಾ, ಶಾತಾತಪ, ಪರಾಶರ, ಸಂವರ್ತ, ಉಶನಸ, ಶಂಖ, ಲಿಖಿತ, ಅತ್ರಿ, ವಿಷ್ಣು, ಆಪಸ್ತಂಬ, ಹಾರೀತ ಎಂಬುವವರ ಹದಿನೆಂಟು ಸ್ಮೃತಿಗಳು (ಪದಿನೆಂಟು ಧರ್ಮಶಾಸ್ತ್ರಂಗಳೊಳಂ, ನಾಲ್ಕುವೇದಂಗಳೊಳಂ ಆಱಂಗದೊಳಂ: ಪಂಪಭಾ, ೨. ೩೪ ವ)

ಧರ್ಮಶ್ರವಣ

[ನಾ] ಧರ್ಮದ ಪ್ರವಚನ (ಪಱಿವಿಡಲಣಮೀಯದವರಂ ಅವರ್ಗಳ ಬಾೞೊಳ್ ನಿಱಿಸಲ್ ಬಗೆದೈ ಕರಮೆನೆ ಉಱದೆ ಇರ್ಕುಮೆ ನಿನ್ನ ಪೇೞ್ದ ಧರ್ಮಶ್ರವಣಂ: ಪಂಪಭಾ, ೯. ೪೫)

ಧರ್ಮಸಂತತಿ

[ನಾ] ಧರ್ಮದ ಮುಂದುವರಿಕೆ (ಗೃಹಸ್ಥಧರ್ಮದಿಂದಂ ನೀನೆಂತಂತೆ ಸಲೆ ನೆಗೞೆ ಜಗತೀಸಂತತಿ ನಿಲೆ ನಿನ್ನ ಧರ್ಮಸಂತತಿ ನಿಲ್ಕುಂ: ಆದಿಪು, ೮. ೧೩)

ಧರ್ಮಸುತ

[ನಾ] ಯುಧಿಷ್ಠಿರ (ಪುಟ್ಟುವುದುಂ ಧರ್ಮಂ ಒಡವುಟ್ಟಿದುದು ಈತನೊಳೆ ಧರ್ಮನಂಶದೊಳ್ ಈತಂ ಪುಟ್ಟಿದನೆಂದಾ ಶಿಶುಗೊಸೆದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಪೆಸರಂ: ಪಂಪಭಾ, ೧. ೧೨೨)

ಧರ್ಮಾತ್ಮಜ

[ನಾ] ಧರ್ಮರಾಯ, ಯುಧಿಷ್ಠಿರ (ಧರ್ಮಾತ್ಮಜಂ ಕೇಳ್ದು ಆ ಹರಿ ಪೇೞ್ದುದೊಂದು ನಯದಿಂದಾ ರಾತ್ರಿಯೊಳ್ ಪೋಗಿ ಕುಂಭಜನಂ ಕಂಡು: ಪಂಪಭಾ, ೧೧. ೧೨೬)

ಧವಳಂ

[ಗು] ಬಿಳಿಯ (ಧವಳಹಯಂ ಧವಳರಥಂ ಧವಳ ಉಷ್ಣೀಷಂ ಶಶಾಂಕಸಂಕಾಶ ಯಶೋಧವಳಿತ ಭುವನಂ ತಾಗಿದಂ ಅವಯವದಿಂ ಬಂದು ಧರ್ಮತನಯನ ಬಲದೊಳ್: ಪಂಪಭಾ, ೧೧. ೩೯)

ಧವಳಚ್ಛತ್ರಚ್ಛನ್ನ

[ಗು] [ಧವಳಚ್ಛತ್ರತ್+ಛನ್ನ] ಬೆಳ್ಗೊಡೆಯಿಂದ ಮುಚ್ಚಿದ (ಉನ್ನತ ಧವಳಚ್ಛತ್ರಚ್ಛನ್ನ ವಿಯತ್ತಳನಂ ಇಂದುಕುಳತಿಳಕನಂ ಇಂತು ಅನ್ನೆಯದಿಂದ ಈ ಪೞುವಿನೊಳ್ ಎನ್ನರಸನಂ ಇಂತು ಬಿದಿಯೆ ತಂದಿಕ್ಕುವುದೇ: ಪಂಪಭಾ, ೨. ೨೨)

ಧವಳಯಶಂ

[ನಾ] ನಿರ್ಮಲ ಕೀರ್ತಿಯುಳ್ಳವನು (ನರಸಿಂಗಂಗತಿ ಧವಳಯಶಂ ಯುದ್ಧಮಲ್ಲನಗ್ರಸುತಂ ತದ್ಭುವನ ಪ್ರದೀಪನಾಗಿರ್ದವಾರ್ಯ ವೀರ್ಯಂಗೆ ಬದ್ದೆಗಂ ಪಿರಿಯ ಮಗಂ: ಪಂಪಭಾ, ೧. ೨೩)

ಧವಳವಟ್ಟ

[ನಾ] ಬಿಳಿಯ ಬಟ್ಟೆ (ಸಾಹಿಯಾಣದ ಚೀನದ ಧವಳವಟ್ಟದ ಜೊಂಗದ ದೇವಾಂಗದ ಸಕಳವಟ್ಟೆಗಳುಮಂ: ಆದಿಪು, ೪. ೩೪ ವ)

ಧವಳಾಕ್ಷತ

[ನಾ] ಬಿಳಿಯ ಅಕ್ಷತೆಕಾಳು (ಪರಸುವ ಪೌರವೃದ್ಧರ ಕುಲಾಂಗನೆಯರ್ಕಳ ಸಾಧುವಾದದೊಳ್ ಬೆರಸಿ ಸಮಂತು ಸೂಸುವ ಜಲಾರ್ದ್ರಲಸದ್ಧವಳಾಕ್ಷತಂಗಳೊಳ್: ಪಂಪಭಾ, ೨. ೯೫)

ಧವಳಾಕ್ಷಿ

[ನಾ] ಬೆಳ್ಳಗೆ ಹೊಳೆಯುವ ಕಣ್ಣುಳ್ಳವಳು (ಕಣ್ಣಱಿಯದ ಬೆಳ್ಳಂ ಅಲ್ಲೆಂ ಅಱಿದೆಂ ಧವಳಾಕ್ಷಿಯ ನೋಟದಂದಮಂ: ಪಂಪಭಾ, ೪. ೭೬)

ಧವಳಾತಪತ್ರೇಶ್ವರ

[ನಾ] ಬೆಳ್ಗೊಡೆಯ ಒಡೆಯ, ಮಹಾರಾಜ (ನಿಮಗೆ ಮಗನುಚಿತ ಧವಳಾತಪತ್ರೇಶ್ವರಂ ದಿವದಿನವತರಿಪಂ ಅಮಿತಪುಣ್ಯೋದಯಂ: ಆದಿಪು, ೭. ೨೭ ರಗಳೆ)

ಧವಳಾತಪವಾರಣ

[ನಾ] ಬೆಳ್ಗೊಡೆ (ಧವಳಾತಪವಾರಣ ವಿಭೂತಿಯನುೞಿದು ನೆUೞ್ದುಪಾಸಕನಾದಂ: ಆದಿಪು, ೬. ೬)

ಧವಳಿಸು

[ಕ್ರಿ] ಬೆಳ್ಳಗಾಗು, ಕಾಂತಿಯುಕ್ತವಾಗು (ತಱತಱಾಗಿರ್ದ ಕುಂಕುಮದ ನಿಜವದನಮಂ ತೆಱೆದ ಕಣ್ಗಳೊಳೆ ಧವಳಿಸಿದ ನಿಜವದನಮಂ: ಆದಿಪು, ೭. ೨೭ ರಗಳೆ)

ಧಾತಕೀ

[ನಾ] ಅರೆಹೂ, ಮರಾಟಿಮೊಗ್ಗು (ಪಿಷ್ಟೋದಕ ಧಾತಕೀ ಗುಡ ಸಮಯೋಗದಿಂದಂ ಎಂತು ಮದವಿಕಾರಮೆಸೆದಪ್ಪುದು ಅಂತೆ: ಆದಿಪು, ೨. ೯ ವ)

ಧಾತಕೀಷಂಡ

[ನಾ] ಪುಷ್ಕರದ್ವೀಪದ ಒಂದುಭಾಗ; ಧಾತಕೀವೃಕ್ಷವು ಹೇರಳವಾಗಿರುವ ಪ್ರದೇಶ: (ಈ ಧಾತಕೀಷಂಡದ ಮೂಡಣ ಮಂದರದಪರವಿದೇಹದ ಸೀತಾನದಿಯ ಬಡಗಣ ತಡಿಯ ಗಂಧಿಳವಿಷಯದ ಪಾಟಳಿಗ್ರಾಮದೊಳ್: ಆದಿಪು, ೩. ೩೩ ವ)

Search Dictionaries

Loading Results

Follow Us :   
  Download Bharatavani App
  Bharatavani Windows App