भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಧೂಪೋದ್ಧಾರ

[ನಾ] ಧೂಪ ಸಮರ್ಪಣೆ (ಮೂಱುಂ ಪೊತ್ತುಂ ಅರ್ಚನಾಪುರಸ್ಸರಂ ಧೂಪೋದ್ಧಾರಂಗೆಯ್ಯೆ: ಆದಿಪು, ೫. ೨೩)

ಧೂಮ

[ನಾ] ಹೊಗೆ (ಕರಂಗಳಡಂಗಿ ಕಿಲುಂಬುಗೊಂಡ ಕನ್ನಡಿಗೆಣೆಯಾಯ್ತು ಭಾನುವಳಯಂ ದಿವಿಜಾಪಗೆ ನೋಡೆ ನೋಡೆ ಕರ್ಪಡರ್ದೆಣೆಯಾದುದು ಆ ಯಮುನೆಗೆ ಅಗ್ಗದ ಯಾಗದ ಧೂಮದ ಏೞ್ಗೆಯೊಳ್: ಪಂಪಭಾ, ೬. ೩೬)

ಧೂಮವೇಣಿ

[ನಾ] ಹೊಗೆಯ ಎಳೆ (ಎತ್ತಮಗ್ಗಳಿಸಿದುದು ಆ ಭುಜಬಲಿಯ ಭುಜದ್ವಯದೊಳ್ ಭುಜಂಗನಿಶ್ವಾಸ ಧೂಮವೇಣೀನಿಕರಂ: ಆದಿಪು, ೧೪. ೧೪೧)

ಧೂಮವೇಣಿಕಾ

[ನಾ] ಧೂಮವೇಣಿ (ಮಿಳಿರ್ದುವು ಮುನಿಪಧ್ಯಾನಾನಳನಿರ್ಯತ್ ಧೂಮವೇಣಿಕಾನಿಕರದವೋಲ್; ಆದಿಪು, ೧೪. ೧೪೨)

ಧೂಸರ

[ನಾ] ದೂಳು (ಸರಯೂತರಂಗಶೀಕರ ಪರಿಚಿತಂ ಏಳಾಲವಂಗಕುಸುಮರಜೋಧೂಸರಂ: ಆದಿಪು, ೬. ೧೦೧)

ಧೂಸರಿತ

[ಗು] ಧೂಳಿನ ಬಣ್ಣದಿಂದ ಕೂಡಿದ (ಅವಿರಳ ನವಧೂಮಧೂಸರಿತ ನಭೋವಿವರಂ ವಿವಿಧಮಣಿಪ್ರಕರ ವಿರಾಜಿತ ಧೂಪಧೂಮಘಟಂ ಎಸೆದಿರ್ಕುಂ: ಆದಿಪು, ೧೦. ೩೦)

ಧೂಳೀಶಾಲ

[ನಾ] [ಜೈನ] ಸಮವಸರಣ ಮಂಟಪದ ಮೊದಲನೆಯ ಪ್ರಾಕಾರ (ಕೈಳಾಸಾಚಲಮನೇಱಿ ಧೂಳೀಶಾಲದಿಂ ತಗುಳ್ದು ಪೂರ್ವೋಕ್ತವರ್ಣನ ಉಪೇತಮಪ್ಪ ವೃಷಭಾಸ್ಥಾನ ಮಂಟಪಮಂ ನೋಡುತ್ತುಂ: ಆದಿಪು, ೧೩. ೮೨ ವ)

ಧೂಳೀಶಾಳ

[ನಾ] [ಜೈನ] ಧೂಳೀಶಾಲ (ಬೆಳಗಿಂದಂ ಬೆಳಪುದಲ್ಲಿ ಧೂಳೀಶಾಳಂ: ಆದಿಪು, ೧೦. ೨೩)

ಧೃತ

[ಗು] ತಾಳಿದ (ವಸನಾಳಂಕಾರ ಮಂದಾರಶೇಖರರಮ್ಯಂ ಧೃತಯೌವನಂ: ಆದಿಪು, ೮. ೫); ತಳೆದ, ಎತ್ತಿ ಹಿಡಿದ (ಚರ್ಚಿತಚಂದನಂ ಅತಿವಿಳಾಸವಿಧೃತದುಕೂಲಂ ಧೃತರತ್ನಾರ್ಘ್ಯಂ ಬಂದಂ: ಆದಿಪು, ೧೩. ೧೨)

ಧೃತಧವಳವಸನ

[ನಾ] ಧರಿಸಿದ ಬಿಳಿ ಬಟ್ಟೆಯುಳ್ಳ[ವನು], ಬಿಳಿ ಬಟ್ಟೆ ತೊಟ್ಟವನು (ಧೃತಧವಳವಸನರ್ ಆರಾಧಿತಶಿವರ್ ಅರ್ಚಿತಸಮಸ್ತಶಸ್ತ್ರರ್ ನೀರಾಜಿತತುರಗರ್ ಒಪ್ಪಿದರ್ ಕೆಲರ್ ಅತಿರಥ ಸಮರಥ ಮಹಾರಥ ಅರ್ಧರಥರ್ಕಳ್: ಪಂಪಭಾ, ೧೦. ೩೭)

ಧೃತಶಸ್ತ್ರ

[ನಾ] ಹಿಡಿಯಲ್ಪಟ್ಟ ಶಸ್ತ್ರವುಳ್ಳವನು, ಶಸ್ತ್ರ ಹಿಡಿದವನು (ಕೃತಶಾಸ್ತ್ರರ್ ಧೃತಶಸ್ತ್ರರ್ ಅಪ್ರತಿಹತಪ್ರಾಗಲ್ಭ್ಯರ್ ಈಗಳ್ ಪೃಥಾಸುತರ್ ಉದ್ಯೋಗಮಂ ಎತ್ತಿಕೊಳ್ವ ದೆವಸಂ ಸಾರ್ಚಿತ್ತು: ಪಂಪಭಾ, ೮. ೮೭)

ಧೃತಿ

[ನಾ] [ಜೈನ] ಒಂದು ಗರ್ಭಾನ್ವಯಕ್ರಿಯೆ [ಜೈನ] ಒಂದು ಗರ್ಭಾನ್ವಯಕ್ರಿಯೆ (ಧೃತಿ ಮೋದ .. .. ಆಗ್ರನಿರ್ವೃತಿಯೆಂಬಯ್ವತ್ಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ); [ನಾ] ಧೈರ್ಯ (ಇದಱೊಳ್ ತನ್ನಿಷ್ಟವಪ್ಪನ್ನಂ ಉತ್ತರಂ ಅಕ್ಕುಂ ಧೃತಿ ತುಷ್ಟಿ ಪುಷ್ಟಿ ವಿಭವಂ ಸೌಭಾಗ್ಯಂ ಇಷ್ಟಂಗನಾಸುರತಂ ಕಾಂತಿ ಅಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ: ಪಂಪಭಾ, ೧೪. ೬೫)

ಧೃಷ್ಟ

[ನಾ] ಉದ್ಧತ (ಈ ಕಥೆ ಗುಣ್ಪುವೆತ್ತುದು ಅವರುಂ ಜ್ಞಾನರ್ಧಿಸಂಪನ್ನರ್ ಎಂದಿರದೆ ಆಂ ಧೃಷ್ಟನೆಂ ಈ ಕಥಾಬ್ಧಿಯುಮಂ ಏನೀಸಲ್ ಮನಂದಂದೆನೋ: ಆದಿಪು, ೧. ೩೫)

ಧೈರ್ಯಕ್ಷರಣೆ

[ನಾ] ಮನಸ್ಸಿನ ಅಸ್ಥಿರತೆ (ಅಂತು ಕಂತುಶರ ಪರವಶನಾಗಿ ಧೈರ್ಯಕ್ಷರಣೆಯುಂ ಇಂದ್ರಿಯಕ್ಷರಣೆಯುಂ ಒಡನೊಡನಾಗೆ: ಪಂಪಭಾ, ೨. ೪೨ ವ)

ಧೋಧೂಯಮಾನ

ಗು] ಬೀಸುತ್ತಿರುವ (ಧೋಧೂಯಮಾನ ಧವಳಚಾಮರಸಹಸ್ರಸಂಛಾದಿತ ಸಹಸ್ರಕರಪ್ರಭಾಪ್ರಸರ ರಥಮನೇಱಿ: ಆದಿಪು, ೧೧. ೧೪ ವ)

ಧೌತ

[ಗು] ಪರಿಶುದ್ಧವಾದ (ಮತ್ತಂ ಅತ್ಯಂತ ಧೌತಕಲಧೌತಸ್ಥಾಸಕಾಳಂಕೃತ ನಕ್ಷತ್ರಮಾಳಾ ಪರಿಕಲಿತ ಕರೀಂದ್ರಂಗಳೆ: ಆದಿಪು, ೧೩. ೬ ವ)

ಧೌತಾಸಿನಿಭ

[ನಾ] ತೊಳೆದ ಕತ್ತಿಯಂತಿರುವ (ಧೌತಾಸಿನಿಭ ನಭೋಮಂಡಳನುಂ ಜನಿತಜಗಜ್ಜನ ಆನಂದನುಂ: ಆದಿಪು, ೧೦. ೬೭ ವ)

ಧ್ಯಾನ

[ನಾ] ಚಿಂತನೆ (ಧ್ಯಾನದೊಳಭವಂ ನೆಱೆದಿನಿಸಾನುಮನರೆಮುಚ್ಚಿ ಕಣ್ಗಳಂ: ಪಂಪಭಾ, ೮. ೧೩)

ಧ್ಯಾನಚಕ್ರ

[ನಾ] [ಜೈನ] ಚಿಂತನೆಯಿಂದ ಹುಟ್ಟುವ ಚಕ್ರ (ಆ ಮುನಿಯ ಮನೋಗಾರದೊಳ್ ಧ್ಯಾನಚಕ್ರಂಂ ಪುಟ್ಟತ್ತು ಆ ರಾಜ್ಯಾಶ್ರಮಮುನಿಯ ಆಯುಧಾಗಾರದೊಳ್ ಚಕ್ರರತ್ನಂ ಪುಟ್ಟಿತ್ತು: ಆದಿಪು, ೬. ೨೪ ವ)

ಧ್ರುವಂ

[ನಾ] ಸದಾ ಕಾಲ (ಅವನೋದುವನಿತು ಬುದ್ಧಿಯೆ ತವುತಂದೊಡೆ ಪಂಚಪದದ ನಾಮಾಕ್ಷರಮಂ ಧ್ರುವಂ ಓದುವುದವು ತೊಡರ್ವುದುಮವಶ್ಯಂ ಓದಲಸದವಱ ಮೊದಲಕ್ಕರಮಂ: ಆದಿಪು, ೨. ೫೫)

Search Dictionaries

Loading Results

Follow Us :   
  Download Bharatavani App
  Bharatavani Windows App