भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪದಂಗಾಸು

[ಕ್ರಿ] ಹದವಾಗಿ ಕಾಸು (ಉದಯಾದ್ರಿಯೊಳ್ ಪದಂಗಾಸಿದ ಪೊನ್ನ ಪುಂಜಿಯವೊಲಿರ್ದುದು ಕಣ್ಗೆ ಹಿಮಾಂಶುಮಂಡಲಂ: ಪಂಪಭಾ, ೩. ೮೧)

ಪದನ

[ನಾ] ಹದವಾಗಿ (ಪದನಂ ಕಾಣಿಸಿಕೊಳ್ವುವಲ್ಲಿ ಮೞೆಗಳ್ ಷಡ್ಭಾಗಮಂ ಕೊಂಡು ತಪ್ಪದೆ ಭೂಪರ್ ಪ್ರತಿಪಾಳಿಪರ್ ಪ್ರಜೆಗಳಂ: ಆದಿಪು, ೧. ೫೧

ಪದನಖ

[ನಾ] ಕಾಲುಗುರು (ಮತ್ತ ಮಾತಂಗ ಪದನಖ ಖರ್ವಿತ ಉರ್ವೀತಳಮುಂ ಪ್ರಚಂಡ ಮಾರ್ತಂಡ ಮರೀಚಿ ತೀವ್ರ ಜ್ವಳನ ಆಸ್ಫಾರ ಕರಾಳ ಕರವಾಳ ಭಾಮಂಡಳ ಪರೀತ ಉದ್ಯತ ದೋರ್ದಂಡ ಚಂಡಪ್ರಚಂಡ ಸುಭಟ: ಪಂಪಭಾ, ೧೩. ೫೧)

ಪದನಱಿ

[ಕ್ರಿ] ಕ್ರಮವನ್ನು ಅರಿ (ಧಾನ್ಯಂಗಳಂ ಪದನಱಿದುಡುಗುವ ಕಳಂ ಮಾಡುವ ಒಕ್ಕುವ ಅಡಕುವ: ಆದಿಪು, ೬. ೭೭)

ಪದನ್ಯಾಸ

[ನಾ] ಹೆಜ್ಜೆಯಿಡುವಿಕೆ (ಚತುರಂತಕ್ಷಿತಿ ಗರ್ಭಸ್ಥಿತನದು ಗಡಿಮೆಂದು ಮುದ್ರಿಪಂತಾಯ್ತು ಯಶಸ್ವತಿಯ ಪದನ್ಯಾಸಂ: ಆದಿಪು, ೮. ೩೨)

ಪದಪಂ ಕೈಕೊಳ್

[ಕ್ರಿ] ಚಲಿಸ ತೊಡಗು (ಮೊದಲೊಳ್ ನೀಳ್ದು ಪೊದಳ್ದು ಪರ್ಬಿ ಪದಪಂ ಕೈಕೊಂಡು ಮಂದೈಸಿ: ಆದಿಪು, ೫. ೨೩)

ಪದಪರಿಕ್ರಮ

[ನಾ] ವ್ಯವಸ್ಥಿತ ನಡಿಗೆ (ಕರಣಾಂಗಹಾರ ಮೃದುಪದ ಪರಿಕ್ರಮಂಗಳ ಬೆಡಂಗುಗಳ ಜತಿಯೊಳ್ ಅಳಂಕರಿಸಿದುದು: ಆದಿಪು, ೭. ೧೮)

ಪದಪಾಂಸು

[ನಾ] ಪಾದಧೂಳಿ (ನೀಂ ಬರೆ ಪೆಱತೇಂ ಕಂಸಾರೀ ಯುಷ್ಮತ್ ಪದಪಾಂಸುಗಳಿಂದೆ ಆಂ ಪವಿತ್ರಗಾತ್ರನೆಂ ಆದೆಂ: ಪಂಪಭಾ, ೯. ೩೨)

ಪದಪು

[ನಾ] ಉತ್ಕಂಠತೆ, ಔತ್ಸುಕ್ಯ (ಪದಪು ಮನಕ್ಕೆ ಸೊರ್ಕು ನಯನಕ್ಕೆಸೆಯುತ್ತಿರೆ ಚುಂಬನಾಭಿಲಾಷದ ತನಿಗೆತ್ತು ಬಾಯ್ಗೆ: ಆದಿಪು, ೪. ೧೫); [ನಾ] ಭಕ್ತಿ, ಗೌರವ (ಪದಪು ಜಿನೇಂದ್ರಪಾದಕಮಳಂಗಳೊಳ್ ಆವಗಮಾಗೆ ಕರ್ಮಬಂಧದ ಬಿಗಿಪು ಒಯ್ಯನೆ ಸಡಿಲ್ದಿರೆ: ಆದಿಪು, ೬. ೭); [ನಾ] ಸಂಭ್ರಮ (ಸಂಭ್ರಮದಿಂ ಪದಪೊದವೆ ಸನತ್ಕುಮಾರ ಮಾಹೇಂದ್ರರಿಕ್ಕಿದರ್ ಚಾಮರಮಂ: ಆದಿಪು, ೭. ೫೦)

ಪಂದರಿಕ್ಕು

[ಕ್ರಿ] ಚಪ್ಪರವನ್ನು ಹಾಕು (ಎರಡು ಬಲದ ಕಡುವಿಲ್ಲರ್ ಭೋರ್ಗರೆದಿಸೆ ಕೂರ್ಗಣೆಯೊಳ್ ಪಂದರಿಕ್ಕಿದಂತಾಯ್ತು ಗಗನಮಂಡಳಮೆಲ್ಲಂ: ಪಂಪಭಾ, ೧೦. ೭೨)

ಪಂದರ್

[ನಾ] ಚಪ್ಪರ (ಬಾಣಸಿನ ಮಜ್ಜನದ ರಾಣಿವಾಸದ ಮನೆಗಳುಮಂ ನನೆಯ ಪಂದರುಮಂ ತಳಿರ ಕಾವಣಂಗಳುಮಂ: ಪಂಪಭಾ, ೫. ೪೭ ವ)

ಪಂದಲೆ

[ನಾ] [ಆಗತಾನೆ ಕತ್ತರಿಸಿದ] ಹಸಿಯ ತಲೆ (ಕರವಾಳಘಾತದೊಳ್ ಅರಾತಿಯ ಪಂದಲೆ ಪಂಚರಾಯುಧಂ ಬೆರಸು ಎಸೆವ ಅಟ್ಟೆ ತೊಟ್ಟ ಕವಚಂಬೆರಸು ಏಱಿದ ವಾಜಿ: ಪಂಪಭಾ, ೧೦. ೭೮); [ನಾ] ಒದ್ದೆಯಾದ ತಲೆ (ಪಸರಿಸಿ ಪಂದಲೆಯಂ ಮೆಟ್ಟಿಸಿ ವೈರಿಯ ಪಣಿಗೆಯಿಂ ಬಾರ್ಚಿ ಪೊದಳ್ದೊಸಗೆಯಿನವನ ಕರುಳ್ಗಳೆ ಪೊಸವಾಸಿಗಮಾಗೆ ಕೃಷ್ಣೆಯಂ ಮುಡಿಯಿಸಿದಂ: ಪಂಪಭಾ, ೧೨. ೧೫೫)

ಪದವಡಿಸು

[ಕ್ರಿ] ಹದಕ್ಕೆ ತರು (ಸಾಮದೊಳಂ ಪದವಡದೊಡೆ ಬೞಿಕಿರ್ದಪ್ಪುದಲ್ತೆ ಪದವಡಿಸಲೆನ್ನ ಬಯಕೆಯ ದಂಡಂ: ಆದಿಪು, ೧೪. ೪೩)

ಪದವಡು

[ಕ್ರಿ] ಹದಗೊಳ್ಳು (ಆತನಂ ಸಾಮದಿಂದಮಳವಡಿಸಿ ನೋಡುವೆಂ ಸಾಮದೊಳಂ ಪದವಡದೊಡೆ ಬೞಿಕಿರ್ದಪುದಲ್ತೆ ಪದವಡಿಸಲೆನ್ನ ಬಯಕೆಯ ದಂಡಂ: ಆದಿಪು, ೧೪. ೪೩)

ಪದವಡೆ

[ಕ್ರಿ] ಹಿತಕರವಾಗು (ಮದೀಯಸಿಂಹಾಸನಾರ್ಧೈಕ ದೇಶಮನಳಂಕರಿಸಿ ಪದವಡೆದು ಸೋಂಕಿ ಕುಳ್ಳಿರ್ದ ರೂಪುಮಂ: ಆದಿಪು, ೪. ೯ ವ)

ಪದವಣ್

[ನಾ] ಹದವಾದ ಹಣ್ಣು (ಸೆಳ್ಳುಗುರ್ಗಳ್ ಕುಡಿ ತೋಳ್‌ನಯಂ ನಯಂ ನಯಂ ನೆಲೆ ನೆಲೆ ಭಂಗಿ ಭಂಗಿ ಪದವ್ ಬೆಳರ್ವಾಯ್: ಪಂಪಭಾ, ೫. ೧೨)

ಪದವೞೆ

[ನಾ] ಹದವಾದ ಮಳೆ (ಅಂತು ಕೊಂಡ ಪದವೞೆಗಳೊಳ್ ಕಳಮಷಷ್ಟಿಕಾವ್ರೀಹಿ ಯವ ಯಾವನಾಳ .. .. ಜೀರಕಧಾನ್ಯಕಾದಿ ವಿವಿಧಧಾನ್ಯಭೇದಂಗಳಂ: ಆದಿಪು, ೬. ೭೨ ವ)

ಪದವಿಚಾರ

[ನಾ] ವ್ಯಾಕರಣ (ಛಂದೋವಿದ್ಯಾಳಂಕಾರ ಪದವಿಚಾರ ಕಾವ್ಯ ಗೀತ ನೃತ್ಯ ಆತೋದ್ಯಾದಿ ಗೋಷ್ಠಿಗಳೊಳಂ: ಆದಿಪು, ೮. ೩ ವ)

ಪದವಿದ್ಯಾ

[ನಾ] ವ್ಯಾಕರಣ (ಮತ್ತಂ ಸ್ವಯಂಭುವ ಅಭಿಧಾನ ಪದವಿದ್ಯಾ ಛಂದೋವಿಚಿತಿ ಅಲಂಕಾರಂಗಳೆಂಬ ಮೂಱಱಿಂ ಪೆಸರ್ವಡೆದ ವಾಙ್ಮಯಮುಮಂ: ಆದಿಪು, ೮. ೬೦ ವ)

ಪದವಿನ್ಯಾಸ

[ನಾ] ಹೆಜ್ಜೆಯಿಡುವ ರೀತಿ (ಪದವಿನ್ಯಾಸದ ತುಱುಗಲ್ ಪೊದಳೆ ಲಯಂಬೆರಸು ರಂಗಮಂ ಬಳಸಿದಂ ಆ ತ್ರಿದಾಧೀನಾಥಂ: ಆದಿಪು, ೭. ೧೧೯)

Search Dictionaries

Loading Results

Follow Us :   
  Download Bharatavani App
  Bharatavani Windows App