भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪದವಿಲ್

[ನಾ] ಹದವಾದ ಬಿಲ್ಲು (ಮುನಿದೆರಡು ಅಂಬಿನೊಳ್ ರಥಮುಮಂ ಪದವಿಲ್ಲುಮಂ ಎಯ್ದೆ ಪಾರ್ದು ನೆಕ್ಕೆನೆ ಕಡಿದು: ಪಂಪಭಾ, ೧೧. ೧೯)

ಪದವೆಂಕೆ

[ನಾ] [ಪದ+ಬೆಂಕೆ] ಹದವಾದ ಉರಿ (ಮೆಯ್ಯ ಸಯ್ಯ ಪದವೆಂಕೆಗಳಂ ಬಿಗಿಯಪ್ಪಿದಪ್ಪುಗಳ್ ಕಳೆದುವು ನಾಣುಮಂ: ಪಂಪಭಾ, ೫. ೨೭)

ಪದಸರೋಜ

[ನಾ] ಪಾದಕಮಲ (ಭವತ್ ಪದಸರೋಜಮನಾಂ ಬಲಗೊಂಡು ಮತ್ತಮಾಜಿಗೆ ನಡೆಯಲ್ಕೆ ಬಂದೆಂ: ಪಂಪಭಾ, ೧೩. ೬೫)

ಪದಸ್ಥೆ

[ನಾ] ಸ್ಥಾಪಿತಗೊಂಡವಳು (ಬೆಸಕಯ್ ನಿಜವಲ್ಲಭಂ ಏನನೆಂದೊಡಂ ಕಿನಿಸದಿರ್ ಒಂದಿದ ಅಗ್ರಮಹಿಷೀ ಪದದಲ್ಲಿ ಪದಸ್ಥೆಯಾಗು: ಆದಿಪು, ೪. ೫೬)

ಪಂದಳಿರ್

[ನಾ] [ಪಚ್ಚನೆಯ ತಳಿರ್] ಹಸಿರಾದ ಚಿಗುರು (ಕೆೞಗಣ ಕೆಂದಳಿರ್ ಪುದಿದ ಮೇಗಣ ಪಂದಳಿರ್ ಒಂದಿದೊಂದು ಕೆಯ್ಗೞಿದ ಪಸುರ್ಪುಮಂ ಪೊಳೆವ ಕೆಂಪುಮಂ ಆಳ್ದಿರೆ: ಪಂಪಭಾ, ೫. ೩೨)

ಪದಾತಿ

[ನಾ] ಕಾಲಾಳು, ಕಾಲಾಳು ಸೈನ್ಯ (ಗದಾದಿ ವಿವಿಧಾಯುಧಂಗಳುಮಂ ಗಜ ರಥ ತುರಗ ಪದಾತಿ ಯುದ್ಧಂಗಳುಮಂ ಉಪದೇಶಂಗೆಯ್ಯುತ್ತುಮಿರೆ: ಪಂಪಭಾ, ೨. ೫೫ ವ)

ಪದಾಂಬುರುಹ

[ನಾ] ಪಾದಕಮಲ (ಪೋ ಬಿಡು ಕಟಿಸೂತ್ರಮಂ ತೊಡೆಯ ಬಿಣ್ಪು ಪದಾಂಬುರುಹಕ್ಕೆ ತಿಣ್ಣಂ ಎಂತು ಉಡಿಸುವುದಕ್ಕ ನೂಪುರಮಂ ಈ ತೊಡವುದೋ ರೂಪೆ ಸಾಲದೇ: ಪಂಪಭಾ, ೩. ೪೬)

ಪದಾರ್ಥ

[ನಾ] [ಜೈನ] ಆಗಮದ ಅರ್ಥ (ಮನಂ ಬಸಮಾಡಿ ದೋಷವಿರಹಿತಂ ಆಪ್ತಂ ಕ್ರಮದೆ ಆಪ್ತನೆ ಪೇೞ್ದುದದು ಆಗಮಂ ಆಗಮದ ಅರ್ಥಮಾವುದು ಅದುವೆ ಪದಾರ್ಥಂ: ಆದಿಪು, ೫. ೫೪); [ನಾ] ಲಾಭ, ಪ್ರಯೋಜನ (ದುರ್ವಿಮಂತ್ರಮಂ ಪರೆಪ ಟಮಾಳಮಂ ಪಿರಿದಂ ಓದಿದೊಡೆ ಅಪ್ಪ ಪದಾರ್ಥಮಾವುದೋ: ಪಂಪಭಾ, ೧೩. ೬೬)

ಪಂದಿ

[ನಾ] ಹಂದಿ, [ವಿಷ್ಣುವಿನ] ವರಾಹಾವತಾರ (ಮೀನ್ ಆವೆ ಪಂದಿ ಎಂದು ಎನಿತಾನುಂ ತೆಱನಾಗಿ ಡೊಂಬವಿದ್ಯೆಯನಾಡಲ್ ನೀನಱಿವೆ: ಪಂಪಭಾ, ೭. ೫೭)

ಪದಿನಾಱನೆಯ ನೆಲೆ

[ನಾ] [ಜೈನ] ಹದಿನಾರನೆಯ ಸ್ವರ್ಗ, ಅಚ್ಯುತಸ್ವರ್ಗ (ಎನಗಿದು ಚೋದ್ಯಂ ಪನ್ನೊಂದನೆಯದು ನೆಲೆ ತನ್ನ ನೆಗೞ್ದುದಂತದು ಪದಿನಾಱನೆಯ ನೆಲೆಗುಯ್ದುದು: ಆದಿಪು, ೬. ೧೨)

ಪದಿನಾಲ್

[ನಾ] ಹದಿನಾಲ್ಕು (ಪದಿನಾಲ್ಸಾಸಿರ ಮದದಾನೆಯುಮಂ ಕಳಿಂಗನಾಯಕಂ ಭಾನುದತ್ತಂ ಮೊದಲಾಗೆ ನೂರ್ವರ್ ಅರಸುಮಕ್ಕಳುಮಂ ಕೊಂದೊಡೆ: ಪಂಪಭಾ, ೧೧. ೬೮ ವ)

ಪದಿನಾಲ್ಕು ರತ್ನಂಗಳ್

[ನಾ] [ಜೈನ] ಚಕ್ರವರ್ತಿಯ ಚಕ್ರ, ಛತ್ರ, ಖಡ್ಗ, ದಂಡ, ಧರ್ಮ, ಮಣಿ, ಕಾಕಿಣಿ, ಗೃಹಪತಿ, ಸೇನಾಪತಿ, ತಕ್ಷಕ, ಪುರೋಹಿತರತ್ನ, ಹಸ್ತಿರತ್ನ, ತುರಗರತ್ನ, ಸ್ತ್ರೀ ಎಂಬ ಹದಿನಾಲ್ಕು ರತ್ನಗಳು (ಆ ಮುನಿಚಕ್ರವರ್ತಿಯ ಮನದೊಳ್ ಮೂಱುರತ್ನಂಗಳ್ ಬೆಳಗಿದುವು ಈ ಸಕಳಚಕ್ರವರ್ತಿಯ ಮನೆಯೊಳ್ ಪದಿನಾಲ್ಕು ರತ್ನಂಗಳ್ ಬೆಳಗಿದುವು: ಆದಿಪು, ೬. ೨೪ ವ)

ಪದಿನೆಣ್ಛಾಸಿರ

[ನಾ] ಹದಿನೆಂಟು ಸಾವಿರ (ಎೞ್ಪತ್ತಿರ್ಛಾಸಿರ ದುರ್ಗಾಟವಿಗಳುಂ ಪದಿನೆಣ್ಛಾಸಿರ ಮ್ಲೇಚ್ಛರಾಜರುಂ: ಆದಿಪು, ೧೫. ೩ ವ)

ಪದಿಮೂಱುಂ ಪ್ರಕೃತಿ

[ನಾ] [ಜೈನ] ಅನ್ಯತರವೇದನೀಯ, ಮನುಷ್ಯಾಯುಷ್ಯ, ಮನುಷ್ಯಗತಿ, ಮನುಷ್ಯಗತಿ ಪ್ರಯೋಗ್ಯಾನುಪೂರ್ವ್ಯ, ಪಂಚೇಂದ್ರಿಯಜಾತಿ, ತ್ರಸನಾಮ, ಸುಭಗ, ಆದೇಯ, ಪರ್ಯಾಪ್ತ, ಬಾದರ, ಯಶಸ್ಕೀರ್ತಿ, ಉಚ್ಚೈರ್ಗೋತ್ರ, ತೀರ್ಥಂಕರನಾಮ ಎಂಬ ಹದಿಮೂರು ಪ್ರಕೃತಿಗಳು (ಎಂಬ ಪದಿಮೂಱುಂ ಪ್ರಕೃತಿಗಳುಮಂ ನಿರ್ಮೂಲಂ ಕಿಡಿಸಿ ಬೞಿಯಂ: ಆದಿಪು, ೧೬. ೪೯ ವ)

ಪದಿರಪಱೆ

[ನಾ] ಸಂಕೇತಸೂಚಕ ಹರೆ, ವಾದ್ಯ (ಮಹಾಸಾಮಂತರ ಪದಿರಪಱೆಗಳಿಂದಂ ಅಗುರ್ವಾಗೆ ನಡೆದ ಬೀಡಿಂಗೆ ಬೀಡುವಿಡಲ್ ನೆಲನುಂ: ಪಂಪಭಾ, ೯. ೧೦೪ ವ)

ಪಂದಿವೇಂಟೆ

[ನಾ] ಹಂದಿಯ ಬೇಟೆ (ಮತ್ತಂ ಪಂದಿವೇಂಟೆಯ ಮಾತಂ ಬಿನ್ನಪಂಗೆಯ್ವೆಂ: ಪಂಪಭಾ, ೫. ೪೫ ವ)

ಪದುಮರಾಗ

[ನಾ] ಪದ್ಮರಾಗ, ಮಾಣಿಕ್ಯ (ಮುನಿಕುಮಾರರೋದುವ ವೇದವೇದಾಂಗಂಗಳಂ ತಪ್ಪುವಿಡಿದು ಜಡಿದು ಬಗ್ಗಿಸುವ ಪದುಮರಾಗದ ಬಣ್ಣದರಳಗಿಳಿಗಳುಮಂ: ಪಂಪಭಾ, ೧. ೧೧೫ ವ)

ಪದುಳಂ

[ಅ] ಕ್ಷೇಮದಿಂದ, ನೆಮ್ಮದಿಯಿಂದ (ಪೆಱವೇೞು ದಿವಸದೊಳ್ ಪದುಳಂ ನಡೆದುಂ ಪೆಱವೇೞು ದಿವಸಕ್ಕೆ ತಳರ್ನಡೆನಡೆದುಂ: ಆದಿಪು, ೫. ೪೧ ವ)

ಪದುಳಮಾಗು

[ಕ್ರಿ] ಅನುಕೂಲಕರವಾಗು (ಶಕ್ರನೃತ್ಯದೊಳೊಡಂಬಡೆ ನರ್ತಿಸುವಲ್ಲಿ ಜತ್ತವಟ್ಟದ ಮಣಿಯಂತದೇಂ ಪದುಳಮಾದುದೊ ದಿವ್ವಧೂಕದಂಬಕಂ: ಆದಿಪು, ೭. ೧೨೫)

ಪಂದೆ

[ನಾ] ಹೇಡಿ (ರೌದ್ರಘೋಷಮ್ ಏರ್ವೆಸನಮಂ ಉಂಟುಮಾಡಿದುದು ಪಂದೆಗಮಂದಿನ ವೀರಗೋಷ್ಠಿಯೊಳ್: ಆದಿಪು, ೧೪. ೯೦)

Search Dictionaries

Loading Results

Follow Us :   
  Download Bharatavani App
  Bharatavani Windows App