भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಪದೆ

[ಕ್ರಿ] ಕೂಡು, ಸೇರು (ನಿಜಸ್ವರ್ಗಾವತರಣೋತ್ಸವಕ್ಕೆ ಅಮರಾವಳಿ ಪದೆವಿನೆಗಂ ಇೞಿದನಿಳೆಗೆ ಮಹಾತ್ಮಂ: ಆದಿಪು, ೩. ೭೯); [ಕ್ರಿ] ಸಂತೋಷಪಡು (ಪದೆವ ಮನಂಬೆರಸೆಱಗಿದ ಪದದೊಳದೇಂ ಚೆಲ್ವುವಡೆದುವೋ .. .. ಕುಸುಮಂಗಳ್: ಆದಿಪು, ೭. ೪); [ಕ್ರಿ] ಆಸೆಪಡು (ಪದೆದು ಉತ್ತಂಸ ಅವತಂಸಶೋಭೆಗೆ ಭವದ್ಬಾಳಪ್ರವಾಳೋಲ್ಲಸತ್ ಮೃದುಪುಷ್ಪಸ್ತಬಕಂಗಳಂ ಪಱಿದೆವು: ಆದಿಪು, ೧೧. ೧೩೪); [ಕ್ರಿ] ಪ್ರೀತಿಸು (ಬೇಟವೆಂಬೆಳಲತೆ ಕೂಟದೊಳ್ ಪದೆದು ಪಣ್ತೆರ್ದೆಗಿಂಪಿನಲಂಪನೀಯದೇ: ಆದಿಪು, ೧೨. ೨೦)

ಪದೆಪು

[ನಾ] ಪ್ರೀತಿ (ಪದ್ಮವಿಷ್ಟರಮಂ ಕುಂದೇಂದು ಧವಳಾತಪತ್ರಮನಂದು ಕೃತೇಚ್ಛಂಗೆ ಪಡೆದು ಪದೆಪಂ ಮೆಱೆದಳ್: ಆದಿಪು, ೯. ೮೫); ಇಷ್ಟಾರ್ಥ (ಬೋನದೊಳಂ ನಾನಾವಿಧ ಪದೆಪಿನೊಳ್ ಹರಿಗಾಗಂ ಆಱಿದುದು ಪಥಪರಿಶ್ರಮಮೆಲ್ಲಂ: ಪಂಪಭಾ, ೯. ೨೮)

ಪಂದೆಯಂ ಪಾವಡರ್

ಪುಕ್ಕಲನ ಮೇಲೆ ಹಾವು ಬೀಳು, ಮತ್ತಷ್ಟು ಗಾಬರಿಗೊಳಿಸು (ಸಭಾಸದರೆಲ್ಲಂ ಎಲೆಮಿಡುಕದೆ ಪಂದೆಯಂ ಪಾವಡರ್ದವೊಲ್ ಉಸಿರದಿರೆ: ಪಂಪಭಾ, ೬. ೫೯ ವ)

ಪದೋಚ್ಚಾರಣ

[ನಾ] ಮಂಗಳಪದಗಳ ಹೇಳುವಿಕೆ (ಪೂರ್ವರಂಗ ಪ್ರಸಂಗದೊಳ್ ಚರ್ಚರಪೂಜಾಮಂಗಳ ಪದೋಚ್ಚಾರಣ ಪುಷ್ಪಾಂಜಲಿವಿಕ್ಷೇಪಣಾದಿ ನಾಂದಿವಿಧಿಯಂ ನಿರ್ವರ್ತಿಸಿ: ಆದಿಪು, ೭. ೧೧೫ ವ)

ಪದ್ಮಜ

[ನಾ] ಕಮಲದಲ್ಲಿ ಹುಟ್ಟಿದವನು, ಬ್ರಹ್ಮ (ನನೆಯಂಬಂ ತೆಗೆದೆಚ್ಚಂ ಅಂಗಜನ ತಪ್ಪು ಏನಾನುಮಂ ತೋಱೆ: ಪಂಪಭಾ, ೪. ೬೯)

ಪದ್ಮನಿಧಿ

[ನಾ] ಚಕ್ರವರ್ತಿಯ ನವನಿಧಿಗಳಲ್ಲಿ ಒಂದು (ದಾನಸನ್ಮಾನಯೋಗ್ಯರಪ್ಪರೆಂದು ಪದ್ಮನಿಧಿಯಂ ತರಿಸಿ ತಪನೀಯಸೂತ್ರದೊಳ್ ಏಕಾದ್ಯೇಕೋತ್ತರದಶಾಂತಂಬರಂ ಅವರವರ ನೆಲೆಗಳೊಳ್ ಬ್ರಹ್ಮಸೂತ್ರಾಭಿಧಾನ ಯಜ್ಞೋಪವೀತದಿಂ ಪವಿತ್ರಗಾತ್ರರ್ಮಾಡಿ: ಆದಿಪು, ೧೫. ೧೧ ವ)

ಪದ್ಮಪತ್ರ

[ನಾ] ತಾವರೆಯ ಎಲೆ (ಸರೋವರಜಲಂಗಳಂ ಪದ್ಮಪತ್ರಪುಟಂಗಳಿಂ ತಂದು ಪದಪದ್ಮಂಗಳಂ ಕರ್ಚಿ ತತ್ಪಾದಪವಿತ್ರೋದಕಂಗಳಂ ಅನಿಬರುಂ ಉತ್ತಮಾಂಗದೊಳ್ ತಳಿದುಕೊಂಡಿರ್ದಾಗಳ್: ಪಂಪಭಾ, ೭. ೫೯ ವ)

ಪದ್ಮರಾಗ

[ನಾ] ಕೆಂಪು ರತ್ನ, ಮಾಣಿಕ್ಯ (ಪೊನ್ನ ಬೆಳ್ಳಿಯ ಪದ್ಮರಾಗದ ಪಚ್ಚೆಯ ಗಿಳಿಯ ಕೋಗಿಲೆಯ ಕೊಂಚೆಯ ಅಂಚೆಯ ಕುಂತಳಿಕೆಯ ಮಾೞ್ಕೆಯ ಸಿಪ್ಪುಗಳೊಳ್ ತೀವಿ: ಪಂಪಭಾ, ೪. ೮೭ ವ)

ಪದ್ಮವಿಷ್ಟರ

[ನಾ] ಕಮಲಾಸನ (ಅಂಬುಜನಿಳಯೆ ಪದ್ಮವಿಷ್ಟರಮಂ ಕುಂದೇಂದುಧವಳಾತಪತ್ರಮನಂದು ಕೃತೇಚ್ಛಂಗೆ ಪಡೆದು ಪದೆಪಂ ಮೆಱೆದಳ್: ಆದಿಪು, ೯. ೮೫)

ಪದ್ಮಷಂಡ

[ನಾ] ತಾವರೆಗಳ ಸಮೂಹ [ಇರುವ] ಸರೋವರ (ಧ್ವನದಳಿಕುಳಾಕುಳೀಕೃತ ವನಂಗಳಿಂದೆಸೆವ ಪದ್ಮಷಂಡಂಗಳ ಚೆಲ್ವಿನೊಳಂ ಕಣ್ಣ ಮನಮಂ ಅನುವಿಸುವ ವಿರಾಟಪುರಮನೆಯ್ದಿದರ್ ಅವರ್ಗಳ್: ಪಂಪಭಾ, ೮. ೫೨)

ಪದ್ಮಾಕರ

[ನಾ] [ಪದ್ಮ+ಆಕರ} ತಾವರೆಗಳ ನೆಲೆ, ಸರೋವರ (ಪದ್ಮಾಕರಾಳಿಯೊಳ್ ತಣ್ಪುಗಳುಂಟು ಹೇಮಲತಿಕಾ ಕುಂಜಂಗಳೊಳ್ ನಮ್ಮ ನನ್ನಿಗೆ ಬನ್ನಂ ಬರಲೀಯದು: ಪಂಪಭಾ, ೭. ೩೦)

ಪದ್ಮಾಸನ

[ನಾ] ಬ್ರಹ್ಮ (ಪದ್ಮಾಸನಂ ತಾನೆ ನೇರ್ಪಡಿಸಲ್ ಕೂಡಿದಂ ಇರ್ಪುದಲ್ತು ನಯಂ ಇನ್ನೀ ಪೊೞ್ತೆ ಪೊೞ್ತಾಗೆ: ಪಂಪಭಾ, ೫. ೨೦)

ಪದ್ಮಿನಿ

[ನಾ] ತಾವರೆಗೊಳ (ದೇವೇಂದ್ರಕರಸರೋಜಾಕರದೊಳ್ ಸಮುತ್ಫುಲ್ಲಮುಖಪದ್ಮಂಗಳಿಂ ಪದ್ಮಿನಿಗಳೆನಿಸಿ: ಆದಿಪು, ೭. ೧೨೬ ವ)

ಪದ್ಮಿನೀಚಕ್ರವಾಳ

[ನಾ] ತಾವರೆಗಳ ಸಮೂಹ (ಪ್ರಭಾಚಕ್ರಮೆಸೆಯೆ ಚೆಲ್ವುವೆತ್ತುದುದಯಮಂದು ಪದ್ಮಿನೀಚಕ್ರವಾಳ ಚಕ್ರವಾಕ ಚಕ್ರವರ್ತಿಯಾ: ಆದಿಪು, ೧೨. ೫೫)

ಪದ್ಮಿನೀಷಂಡ

[ನಾ] ತಾವರೆಗಳ ಸಮೂಹ ಹಾಗೂ ಪದ್ಮಿನೀ ಜಾತಿಯ ಸ್ತ್ರೀಯರ ಸಮೂಹ (ಚಂಡವಿರೋಧಿಸಾಧನ ತಮಸ್ತಮಮೋಡೆ ವಿಶಿಷ್ಟ ಪದ್ಮಿನೀಷಂಡಮರಲ್ದು ರಾಗದಿನೊಱಲ್ದಿರೆ: ಪಂಪಭಾ, ೧. ೩)

ಪದ್ಮೋದರ

[ನಾ] [ಪದ್ಮ+ಉದರ] ಹೊಕ್ಕಳಲ್ಲಿ ಹೂವುಳ್ಳವನು, ಶ್ರೀಕೃಷ್ಣ (ಇದರ್ಕೆ ಪದ್ಮೋದರ ನೀನೆ ಪೇೞ್ ಬಗೆದು ಕಜ್ಜಮಂ ಈಗಳೆ ದಿವ್ಯಚಿತ್ತದಿಂ: ಪಂಪಭಾ, ೯. ೧೮)

ಪನಪನ ಪನಿ

[ಕ್ರಿ] ಪನಪನ ಎಂದು ತೊಟ್ಟಿಕ್ಕು (ಸಹಜಕವಚ ರತ್ನಕುಂಡಲಂಗಳಂ ನೆತ್ತರ್ ಪನಪನ ಪನಿಯೆ ತಿದಿಯುಗಿವಂತೆ ಉಗಿದುಕೊಟ್ಟುದರ್ಕೆ ಮೆಚ್ಚಿ ದೇವೇಂದ್ರಂ ಆತಂಗೆ ಅಮೋಘಶಕ್ತಿಯನಿತ್ತಂ: ಪಂಪಭಾ, ೯. ೬೩ ವ)

ಪನಪನ ಪರಿ

[ಕ್ರಿ] ಪನಪನ ಎಂದು ಹರಿದುಹೋಗು (ತನ್ನ ಸಹಜಕವಚಮಂ ನೆತ್ತರ್ ಪನಪನ ಪರಿಯೆ ತಿದಿಯುಗಿವಂತುಗಿದು ಕೊಟ್ಟೊಡೆ ಇಂದ್ರನಾತನ ಕಲಿತನಕೆ ಮೆಚ್ಚಿ: ಪಂಪಭಾ, ೧. ೧೦೨ ವ)

ಪನಸ

[ನಾ] ಹಲಸು (ಚಂದನ ಪನಸ ನಾಳಿಕೇರ ತಾಂಬೂಲವಲ್ಲೀ ಪ್ರಚುರಪ್ರದೇಶಂಗಳೊಳ್ ನಿಜವಿಜಯ ಕುಂಜರಂಗಳಂ ವಿಹಾರಿಸಿ ಬಂದು: ಆದಿಪು, ೧೩. ೩ ವ)

ಪನಿ

[ನಾ] ತೊಟ್ಟು ಮತ್ತು [ಕ್ರಿ] ತೊಟ್ಟಿಕ್ಕು (ಕಿವಿಯೊಳಮರ್ದಿನ ಪನಿ ಪನಿವಿನಂ ಎಸೆದರರೆಬರಳಿಕುಳರುತಿಯಿಂ: ಆದಿಪು, ೧೧. ೮೧)

Search Dictionaries

Loading Results

Follow Us :   
  Download Bharatavani App
  Bharatavani Windows App